ಸಂಗ್ರಹ: ಯಾಸೀನ್ ನಾವೂರ್ 🍃ಅಧ್ಯಾಯ 7
🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
*ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
*ಸಂಗ್ರಹ: ಯಾಸೀನ್ ನಾವೂರ್*
🍃 *ಅಧ್ಯಾಯ 7*🍃
💜💜💜💜💜💜💜
❤️ *ಮದೀನಾ ಸಂಕಷ್ಟಗಳು ವರದಾನ*
❤️ *ಪ್ಲೇಗಿನಿಂದ ಸಂರಕ್ಷಣೆ*
🌹🌹🌹🌹🌹🌹🌹🌹🌹🌹
ಮದೀನಾದಲ್ಲಿ ಜೀವನ ನಡೆಸುವುದು ಇಹಪರ ವಿಜಯದ ಹಾದಿಯನ್ನು ಸುಗಮಗೊಳಿ ಸುತ್ತದೆ. ಇದು ಮದೀನಾ ನಿವಾಸಿಗಳಿಗೆ ಅಲ್ಲಾಹನು ಕರುಣಿಸಿದ ಸೌಭಾಗ್ಯ. ಮದೀನಾ ಸಮಶೀತೋಷ್ಣ ವಲಯದ ವ್ಯಾಪ್ತಿಯಲ್ಲಿ ಒಳಪಡುವ ಪ್ರದೇಶವಲ್ಲ. ಆದ್ದರಿಂದ ಒಂದೇ ರೀತಿಯ ತಾಪಮಾನ ಇರಬೇಕೆಂದಿಲ್ಲ. ಕೆಲವೊಮ್ಮೆ ತುಂಬಾ ಚಳಿ ಇರುತ್ತದೆ. ಸಹಿಸಲಾಗದ ತಾಪದಿಂದ ಜನರು ಕಂಗಾಲಾದ ಚರಿತ್ರೆ ಕೂಡಾ ಇದೆ. ಇಂತಹ ಸಂಕೀರ್ಣ ಪರಿಸ್ಥಿತಿಯನ್ನು ಸಹಿಸಿ ಮದೀನಾದಲ್ಲಿ ಜೀವಿಸಿದ ಜನರಿಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ಪ್ರತ್ಯೇಕ ಶಫಾಅತ್ ಲಭ್ಯವಿದೆ. ಅಲ್ಲದೇ ಇವರ ಪರವಾಗಿ ಪರಲೋಕದಲ್ಲಿ ಸಾಕ್ಷಿ ನಿಲ್ಲುತ್ತಾರೆ. ಬುಕನ್ನಸ್(ರ) ರವರಿಂದ ವರದಿ: ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ಜೀವನವನ್ನು ಸಂಪೂರ್ಣವಾಗಿ ಅನುಕರಣೆ ಮಾಡಿದ ಅಬ್ದುಲ್ಲಾಹಿ ಬಿನ್ ಉಮರ್ (ರ) ರವರು ಬಿಸಿಲ ಝಳಕ್ಕೆ ಸಹಿಸಲಾಗದೆ ಒಂದೆಡೆ ಕುಳಿತಿದ್ದರು. ಮಹಾನುಭಾವರ ದಾಸಿ ಬಂದು ಸಲಾಂ ಹೇಳುತ್ತಾ ಹೇಳುತ್ತಾಳೆ “ಓ ಅಬ್ದುರಹ್ಮಾನ್‌ರವರ ತಂದೆಯವರೆ...ಬಿಸಿಲ ಝಳಕ್ಕೆ ನನ್ನ ಸಹನೆ ಸೋತಿದೆ. ಆದ್ದರಿಂದ ನಾನು ಇಲ್ಲಿಂದ ಹೊರಟು ಹೋಗಲು ಇಚ್ಚಿಸುತ್ತಿದ್ದೇನೆ ”ಆಗ ಅವಳೊಂದಿಗೆ ಅಬ್ದುಲ್ಲಾಹಿ (ರ) ರವರು ಹೇಳಿದರು ಓ ದಾಸಿ . . . ನೀನು ಇಲ್ಲೇ ಜೀವನ ಮುಂದುವರಿಸು. ಯಾಕೆಂದರೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುವುದಾಗಿ ನಾನು ಕೇಳಿದ್ದೇನೆ “ಮದೀನಾದ ಸಂಕಷ್ಟ - ಬವಣೆಗಳನ್ನು ಸಹಿಸಿದವರಿಗೆ ಪರಲೋಕದಲ್ಲಿ ನಾನು ಪ್ರತ್ಯೇಕ ಶಫಾಅತ್ ಮಾಡುತ್ತೇನೆ. ಅವರ ಪರವಾಗಿ ನಾನು ಸಾಕ್ಷಿ ನಿಲ್ಲುತ್ತೇನೆ. ಈ ಪ್ರತ್ಯೇಕ ಶಫಾಅತ್ ಮದೀನಾದ ಸಂಕಷ್ಟ - ಬವಣೆಗಳನ್ನು ಸಹಿಸಿದವರಿಗೆ ಮಾತ್ರವಾ ? ಸಂಕಷ್ಟಗಳಿಲ್ಲದೆ ಆರಾಮ ಜೀವನ ನಡೆಸಿದವರಿಗೆ ಸಿಗುತ್ತದೆಯೇ . . . ? ಎಂಬುವುದರ ಬಗ್ಗೆ ಇಮಾಮರು ಚರ್ಚಿಸಿದ್ದಾರೆ . ಇಮಾಂ ಅಬೂ ಅಬ್ದುಲ್ಲಾಹಿ (ರ) ರವರು ಹೇಳುತ್ತಾರೆ “ ಮದೀನಾದಲ್ಲಿ ಜೀವಿಸಿ ಯಾವುದೇ ಸಂಕಷ್ಟ -ಬವಣೆ ಸಹಿಸಬೇಕಾಗಿ ಬರದಿದ್ದರೂ ಅವರಿಗೆ ಕೂಡಾ ಈ ಪ್ರತ್ಯೇಕ ಶಫಾಅತ್ ಲಭ್ಯವಿರುತ್ತದೆ” ಹೇಗೆಂದರೆ ಯಾತ್ರಿಕನಿಗೆ ನಾಲ್ಕು ರಕಅತ್ ಇರುವ ನಮಾಜನ್ನು ಎರಡು ರಕ್ಅತ್ತಾಗಿ ಕಸ್ರ್ ಮಾಡುವ ವಿನಾಯಿತಿ ನೀಡಿದ ಹಿಂದಿರುವ ಉದ್ದೇಶ ಯಾತ್ರೆಯಲ್ಲಿ ಸಂಕಷ್ಟಗಳನ್ನು ಎದುರಿಸುವ ಪರಿಸ್ಥಿತಿ ಬರುವುದಕ್ಕಾಗಿದೆ. ಆದರೆ ಓರ್ವ ಯಾವುದೇ ಸಂಕಷ್ಟಗಳನ್ನು ಎದುರಿಸದೆ ಯಾತ್ರೆ ಮಾಡಿದರೆ ಆತನಿಗೂ ಕಸ್ರ್ ಮಾಡಿ ನಮಾಝ್ ಮಾಡಬಹುದು.
*ಪ್ಲೇಗಿನಿಂದ ಸಂರಕ್ಷಣೆ*
................................................................
ಮದೀನಾ ಪವಿತ್ರ ಭೂಮಿ. ಈ ಪಾವಿತ್ರ್ಯತೆಗೆ ಧಕ್ಕೆ ತರುವ ಯಾವ ಸಂಗತಿ ಕೂಡಾ ಮದೀನಾದಲ್ಲಿ ಸಂಭವಿಸಬಾರದು. ಅಂತೆಯೇ ಸಾವಿರಾರು ಜೀವಗಳನ್ನು ಕ್ಷಣ ಮಾತ್ರದಲ್ಲೇ ಮುಗಿಸಿ ಬಿಡುವ ಪ್ಲೇಗ್ ಮುಂತಾದ ಸಾಂಕ್ರಾಮಿಕ ರೋಗಗಳು ಮದೀನಾಕ್ಕೆ ಬರುವುದೆಂದರೆ ಅದರ ಪಾವಿತ್ರ್ಯತೆಗೆ ಚ್ಯುತಿ ಉಂಟಾಗುವುದರಲ್ಲಿ ಸಂಶಯವಿಲ್ಲ. ಅಲ್ಲಾಹನು ಪ್ಲೇಗ್‌ನಂತಹ ರೋಗಗಳಿಂದ ಮದೀನಾಗೆ ಸಂಪೂರ್ಣ ಸುರಕ್ಷಿತತೆ ನೀಡಿದ್ದಾನೆ. ಇಂತಹ ಮಾರಕ ರೋಗಗಳು ಮದೀನಾದತ್ತ ಸುಳಿಯದು . ಅನಸ್(ರ) ರವರಿಂದ ವರದಿ : ಮದೀನಾವನ್ನು ಲಕ್ಷವಾಗಿಸಿಕೊಂಡು ದಜ್ಜಾಲ್ ಬರುತ್ತಾನೆ. ಆಗ ಮದೀನಾದ ಗಡಿಭಾಗಗಳಲ್ಲಿ ಕಾವಲುಗಳ ಮಲಕುಗಳು ಇರುತ್ತಾರೆ. ಆದ್ದರಿಂದ ದಜ್ಜಾಲ್ ಮತ್ತು ಪ್ಲೇಗ್ ಮದೀನಾದತ್ತ ಸುಳಿಯದು. ಪ್ಲೇಗ್ ಹಲವಾರು ಜೀವಗಳನ್ನು ಕ್ಷಣ ಮಾತ್ರದಲ್ಲಿ ಕೊಲ್ಲುತ್ತದೆ. ಇಸ್ಲಾಮೀ ಇತಿಹಾಸದಲ್ಲಿ ಸಂಭವಿಸಿದ ಇಂತಹ ಹಲವಾರು ಉದಾಹರಣೆಗಳನ್ನು ಇಮಾಂ ನವವಿ(ರ) ರವರು ತನ್ನ “ಅಲ್ ಅದ್ ಕಾರ್” ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಉಮರ್ ಬಿನ್ ಖತ್ತಾಬ್ ( ರ ) ರವರ ಕಾಲದಲ್ಲಿ ಶಾಮಿನಲ್ಲಿ ಉಂಟಾದ ಪ್ಲೇಗಿನಿಂದ 25 ಸಾವಿರ ಜನರು ಜೀವತೆತ್ತಿದ್ದರು . ಹಿಜ್ರ 69ನೇ ವರ್ಷ ಇಬ್ನ್ ಝುಬೈರ್(ರ) ರವರ ಕಾಲದಲ್ಲಿ ಪ್ರತಿದಿನ ಪ್ಲೇಗಿನಿಂದ 70 ಸಾವಿರದಷ್ಟು ಜನರು ಮರಣ ಹೊಂದುತ್ತಿದ್ದರು.ಇದೇ ಪ್ಲೇಗಿನಿಂದ ಅನಸ್ (ರ) ರವರ ಸಂತಾನ ಪರಂಪರೆಯ 83 ಮಕ್ಕಳು ಮರಣ ಹೊಂದಿದ್ದಾರೆ. ಸಾವಿರಾರು ಜೀವಗಳನ್ನು ಒಮ್ಮೆಲೆ ಮುಗಿಸಿ ಬಿಡುವ ಪ್ಲೇಗ್‌ನಿಂದ ಮದೀನಾ ನಿವಾಸಿಗಳು ಭಯಭೀತರಾಗಬೇಕಿಲ್ಲ . ಪ್ರವಾದಿವರ್ಯರ ಪಾವನ ಪಾದಸ್ಪರ್ಶದಿಂದ ಪುನೀತಗೊಂಡ ಮದೀನಾದಲ್ಲಿ ಪ್ಲೇಗ್ ರೋಗ ಉಂಟಾಗದು
*ಮುಂದುವರಿಯುವುದು*
Follow this link to join my WhatsApp group: https://chat.whatsapp.com/DjCbCGNiyBW7StPEIOqUnO
ಇನ್ನು ಮುಂದೆ *"ಮದೀನಾ ಮಹತ್ವ ಇತಿಹಾಸ"* ಲೇಖನಗಳು ಈ ಗ್ರೂಪಿನಲ್ಲಿ..
💞صَلَّى اللَّهُ عَلٰى مُحَمَّدْ صَلَّى اللَّهُ عَلَيهِ وَسَلَّم🌹
Post a Comment