ಮದೀನಾ ಮಹತ್ವ ಇತಿಹಾಸ ಅಧ್ಯಾಯ 15

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 15*🍃
         💜💜💜💜💜💜💜

 ❤️ *ಪ್ರವಾದಿವರ್ಯರ ವಧೆಗೆ ಸಂಚು*
🌹🌹🌹🌹🌹🌹🌹🌹🌹🌹🌹
     ಮುಸ್ಲಿಮರು ವ್ಯಾಪಕವಾಗಿ ಮದೀನಾದೆಡೆಗೆ ಹಿಜ್ರಾ ಹೋಗುವುದನ್ನು ತಿಳಿದ ಮಕ್ಕಾ ಮುಶ್ರಿಕರು ಚಿಂತಿತರಾದರು . ಯಾಕೆಂದರೆ ವ್ಯಾಪಾರಿಗಳಾದ ಇವರು ತಮ್ಮ ಸರಕುಗಳನ್ನು ವ್ಯಾಪಾರ ನಡೆಸಲು ಶಾಮಿಗೆ ಹೋಗುತ್ತಿದ್ದರು. ಇಲ್ಲಿಗೆ ಹೋಗಲು ಸುಲಭದ ದಾರಿ ಮದೀನಾ ದ ಗಡಿಭಾಗದ ಹಾದಿಯಾಗಿ ಹೋಗುವುದು. ಮದೀನಾದಲ್ಲಿ ಮುಸ್ಲಿಮರು ಬಲಿಷ್ಠವಾದರೆ ತಮ್ಮ ವ್ಯಾಪಾರಕ್ಕೆ ಮಹಾ ತೊಡಕುಂಟಾಗಬಹುದು. ಮದೀನಾಗೆ ಈಗ ಬಹುತೇಕ ಮುಸ್ಲಿಮರು ಯಾತ್ರೆ ಹೋಗಿಯಾಗಿದೆ. ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಬಾಕಿಯಿದ್ದಾರೆ. ಈ ಗಂಭೀರ ವಿಷಯವನ್ನು ಚರ್ಚೆ ನಡೆಸಲು ದಾರುನ್ನದ್ವಾದಲ್ಲಿ ಸಭೆ ಸೇರಿದರು. ಮಕ್ಕಾದ ಘಟಾನುಘಟಿ ನಾಯಕರು ಅಲ್ಲಿ ಸೇರಿದ್ದಾರೆ. ಆ ಸಮಯದಲ್ಲಿ ಬಾಗಿಲ ಬಳಿ ಒಬ್ಬ ಮುದುಕ ನಿಂತಿದ್ದಾಗಿ ಕಂಡರು. ಅದು ಮುದುಕನ ರೂಪದಲ್ಲಿ ಬಂದವನು ಸಾಕ್ಷಾತ್ ಇಲ್ಲೀಸ್. ಯಾರು ಆ ಮುದುಕ ? ಎಂದು ಅವರು ಕೇಳಿದಾಗ ನಜ್‌ದ್ ನಿವಾಸಿಗಳ ಹಿರಿಯ ಎಂದು ಉತ್ತರಿಸಿದ. ಈತನಿಂದ ನಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಸಿಗಬಹುದೆಂದು ಆತನನ್ನು ಚರ್ಚೆಗೆ ಸೇರಿಸಿಕೊಂಡರು. ಅಬ್ದುಲ್ ಅಸ್ವದ್ ಎಂಬವನು ಅಭಿಪ್ರಾಯವೊಂದನ್ನು ಮಂಡಿಸಿದ “ ಮುಹಮ್ಮದನನ್ನು ನಮ್ಮ ಊರಿನಿಂದ ಗಡಿಪಾರು ಮಾಡಿದರಾಯಿತು. ನಂತರ ಆತ ಎಲ್ಲಿ ಹೋದರೂ ಎಲ್ಲಿ ಸತ್ತರೂ ನಾವು ಚಿಂತಿಸಬೇಕಾಗಿಲ್ಲ ” ನಜ್ದಿನ ಮುದುಕ ಇಬ್ಲಿಸ್ ಮಧ್ಯಪ್ರವೇಶ ಮಾಡಿದ ' ಇದು ಸ್ವೀಕಾರ್ಯವಲ್ಲ ' ಯಾಕೆಂದರೆ ಮುಹಮ್ಮದನ ವಾಕ್ಚಾತುರ್ಯ ಹಾಗೂ ಇಂಪಾದ ಧ್ವನಿ ಹಲವರನ್ನು ಆಕರ್ಷಿಸಬಹುದು. ಹಲವಾರು ಜನರನ್ನು ಸಂಘಟಿಸಿ ಇಲ್ಲಿಗೆ ಬಂದು ನಿಮ್ಮನ್ನು ಸರ್ವನಾಶ ಮಾಡಬಹುದು. ಮತ್ತೆ ನೀವು ಆತನ ಆಳುಗಳಾಗಿ ಜೀವಿಸಬೇಕಾಗುತ್ತದೆ. ಇದರೊಂದಿಗೆ ಆತನ ಅಭಿಪ್ರಾಯ ತಿರಸ್ಕರಿಸಲ್ಪಟ್ಟಿತ್ತು. ಮರಣ ತನಕ ' ಮುಹಮ್ಮದ್ ' ನನ್ನು ಬಂಧಿಸಿಡುವ ಎಂದು ಓರ್ವ ಹೇಳಿದಾಗ ಇಬ್ಲೀಸ್ ಹೇಳುತ್ತಾನೆ “ ನೀವು ಹೀಗೆ ಮಾಡಿದರೆ ಈ ಸುದ್ದಿ ಮುಹಮ್ಮದರ ಅನುಯಾಯಿಗಳಿಗೆ ಲಭಿಸುತ್ತದೆ. ಅವರು ನಿಮ್ಮ ಮೇಲೆ ಯುದ್ಧ ಮಾಡಬಹುದು ' ಇದು ಸೂಕ್ತವಲ್ಲ . ಬೇರೆ ಅಭಿಪ್ರಾಯಗಳನ್ನು ನೋಡಿರಿ. ಆಗ ಅಬೂಜಹಲ್ ನಿಂತು ಹೇಳುತ್ತಾನೆ “ ನನಗೊಂದು ಅಭಿಪ್ರಾಯವಿದೆ . ಆದರೆ ಅದನ್ನು ಅಂಗೀಕರಿಸುವಿರಿ ಎಂದು ವಿಶ್ವಾಸ ನನಗಿಲ್ಲ ” ಅವರು ವಿವರಿಸಲು ಕೇಳಿಕೊಂಡಾಗ ಈತ ಹೇಳತೊಡಗಿದ “ ನಮ್ಮಲ್ಲಿರುವ ಎಲ್ಲ ಗೋತ್ರದ ಒಬ್ಬ ತರುಣರನ್ನು ಆಯ್ಕೆ ಮಾಡಿ ಅವರಿಗೆ ಖಡ್ಗವನ್ನು ನೀಡಿದರಾಯ್ತು . ಅವರೆಲ್ಲರು ಸೇರಿ ಮುಹಮ್ಮದರನ್ನು ಕೊಲ್ಲಲಿ . ಆಗ ನಮ್ಮಲ್ಲಿ ಯಾರಿಗೆ ಕೂಡಾ ಸಮಸ್ಯೆ ಇರದು . ಯಾಕೆಂದರೆ ಈ ಕೊಲೆ ಆರೋಪ ಮಕ್ಕಾದ ಎಲ್ಲಾ ಗೋತ್ರಗಳ ಮೇಲೆ ಬೀಳುತ್ತದೆ. ಆಗ ಬನೂ ಅಬ್ದು ಮನಾಥ್‌ರವರಿಗೆ ಎಲ್ಲರೊಂದಿಗೆ ಯುದ್ದ ಮಾಡಲು ಸಾಧ್ಯವಾಗದು” ಇಲ್ಲೀಸ್ ಈ ಅಭಿಪ್ರಾಯಕ್ಕೆ 'ಜೈ' ಎಂದ. ಜೊತೆಗೆ ತನ್ನ ಉದ್ದೇಶ ಈಡೇರಿತು ' ಎಂಬ ಸಂತಸದಲ್ಲಿದ್ದ . ಸಭೆ ಮುಕ್ತಾಯಗೊಂಡಿತು. ಎಲ್ಲರು ತಮ್ಮ ಹಾದಿ ಹಿಡಿದರು. ಹಾಗೆ ಆಯುಧದಾರಿಗಳಾದ ತರುಣರು ರಾತ್ರಿಯಾದಾಗ ಪ್ರವಾದಿವರ್ಯರ ಮನೆಯನ್ನು ಸುತ್ತುವರಿಯಲು ಕಾಯುತ್ತಿದ್ದರು. ಜಿಬ್ರೀಲ್ (ಅ) ರವರು ಬಂದು ಶತ್ರುಗಳ ರಹಸ್ಯ ತೀರ್ಮಾನದ ಬಗ್ಗೆ ಮಾಹಿತಿ ನೀಡಿದರು. ಹಿಜ್ರಾ ಹೋಗಲಿಕ್ಕೆ ಅಲ್ಲಾಹನ ಸಮ್ಮತಿಯನ್ನು ತಿಳಿಸಿದರು. ಈ ಕುತಂತ್ರದಿಂದ ರಕ್ಷೆ ಹೊಂದಲಿರುವ ಉಪಾಯಗಳನ್ನು ವಿವರಿಸಿಕೊಟ್ಟರು. ನಂತರ ಪ್ರವಾದಿವರ್ಯರು ಅಬೂಬಕರ್ ಸಿದ್ದೀಕ್ (ರ) ರವರ ಮನೆಗೆ ಹೋಗಿ ವಿಷಯ ತಿಳಿಸಿದರು . ಹಿಜ್ರಾ ಹೋಗಲು ಸಿದ್ದತೆ ಮಾಡಬೇಕೆಂದು ಹೇಳಿ ಮನೆಗೆ ಮರಳಿದರು. ರಾತ್ರಿಯಾಯಿತು . ಆಯುಧದಾರಿಗಳಾದ ತರುಣರು ಪ್ರವಾದಿವರ್ಯರ ಮನೆಯನ್ನು ಸುತ್ತುವರಿದರು . ಪ್ರವಾದಿವರ್ಯರ ಹೊದಿಕೆಯಲ್ಲಿ ಅಲಿ ( ರ ) ರವರು ಮಲಗಿದರು . ಮಲಗಿದ್ದ ಅಲೀ( ರ ) ರವರನ್ನು ಪ್ರವಾದಿ ಎಂದು ಅವರು ಭಾವಿಸಿದ್ದರು . ಹೊರಗಿದ್ದ ತರುಣರು xಹೊರಬರುವುದನ್ನು ಕಾಯುತ್ತಿದ್ದರು . ಒಂದು ಹಿಡಿ ಮಣ್ಣನ್ನು ಹಿಡಿದು ಯಾಸೀನ್ ಅಧ್ಯಯದ ಕೆಲವೊಂದು ಸೂಕ್ತಗಳನ್ನು ಓದಿ ಅವರತ್ತ ಎಸೆದರು . ಅವರಿಗೆ ತಿಳಿಯದಂತೆ ಅಲ್ಲಿಂದ ಅಬೂಬಕರ್ ಸಿದ್ದೀಕ್ ( ರ ) ರವರ ಮನೆಗೆ ಆ ರಾತ್ರಿ ಹೋದರು .

    *ಮುಂದುವರಿಯುವುದು*