ಇದಲ್ಲವೇ ನಿಜವಾದ ಪ್ರೀತಿ ❤️❤️😍

*ಇದಲ್ಲವೇ ನಿಜವಾದ ಪ್ರೀತಿ*...♥👇🏻

ಒಂದು ದಿನ ಹಬೀಬ್ ﷺ ತಂಙಳ್ ರವರಲ್ಲಿ ಓರ್ವ ಸ್ವಹಾಬಿ ಕೇಳಿದರು "ಯಾ ರಸೂಲಲ್ಲಾಹ್ ﷺ, ಗಂಡಸರಲ್ಲಿ ತಮಗೆ ﷺಅತ್ಯಂತ ಪ್ರಿಯರಾದವರು ಯಾರು?" ಆಗ ಹಬೀಬ್ﷺತಂಙಳ್ ರವರು ಹೇಳಿದರು"ಅಬೂಬಕ್ಕರ್ ಸ್ವಿದ್ದೀಕ್(ರ.ಅ)".ಸ್ವಹಾಬಿಯವರು ಮತ್ತೆ ಕೇಳಿದರು ಹೆಂಗಸರಲ್ಲಿ ಯಾರು ನೆಬಿಯೇ ﷺ,ಆಗ ಹಬೀಬ್ﷺ ತಂಙಳ್ ರವರು ಹೇಳಿದರು,"ಆಯಿಷಾ ಬೀವಿ (ರ.ಅ)".ಈ ವಿಷಯವು ಆಯಿಷಾ ಬೀವಿ(ರ.ಅ) ತಿಳಿಯಿತು.ನಂತರ ಹಬೀಬ್ﷺ ತಂಙಳ್ ರವರು ಆಯಿಷಾ ಬೀವಿ (ರ.ಅ)ರವರ ಮನೆಗೆ ಹೋದರು.ಆಯಿಷಾ ಬೀವಿ(ರ.ಅ) ರವರು ಹಬೀಬ್ﷺತಂಙಳ್ ರವರನ್ನು ಸ್ವಾಗತಿಸಿದರು.ನಂತರ ಹಬೀಬ್ ﷺತಂಙಳ್ ರವರ ಮಡಿಲಲ್ಲಿ ತಲೆಯಿಟ್ಟು ಮಲಗಿ ಹೇಳಿದರು "ಯಾ ರಸೂಲಲ್ಲಾಹ್ ﷺ ನನಗಾಗಿ ತಾವುﷺ ಅಲ್ಲಾಹನಲ್ಲಿ ಪ್ರಾರ್ಥನೆ ಮಾಡಿ" ಆಗ ಹಬೀಬ್ﷺ ತಂಙಳ್ ರವರು, ನಿನಗಾಗಿ ನಾನು ದಿನಾಲೂ ಪ್ರಾರ್ಥಿಸುತ್ತೇನೆ ಎಂದು ಹೇಳಿದಾಗ ಆಯಿಷಾ ಬೀವಿ(ರ.ಅ) ನನ್ನ ಮುಂದೆಯೇ ಪ್ರಾರ್ಥಿಸುವಂತೆ ಹೇಳಿದರು. ಆಗ ಹಬೀಬ್ﷺ ತಂಙಳ್ ರವರು ತನ್ನ ಎರಡು ಕೈಗಳನ್ನು ಎತ್ತಿ ಈ ರೀತಿ ಪ್ರಾರ್ಥಿಸಿದರು" ಯಾ ಅಲ್ಲಾಹ್, ನನ್ನ ಆಯಿಷಾ ಅರಿತು ಅರಿಯದೆ, ರಹಸ್ಯವಾಗಿ ಹಾಗೂ ಪರಸ್ಯವಾಗಿ ಮಾಡಿದ ಎಲ್ಲಾ ಪಾಪಗಳನ್ನು ಕ್ಷಮಿಸು" ಇದನ್ನು ಕೇಳಿದ ಆಯಿಷಾ ಬೀವಿ(ರ.ಅ)ರವರಿಗೆ ತುಂಬಾನೆ ಸಂತೋಷವಾಯಿತು.ಆಗ ಹಬೀಬ್ﷺ ತಂಙಳ್ ರವರು ಕೇಳಿದರು "ಆಯಿಷಾ ನಿನಗೆ ಸಂತೋಷವಾಯಿತೆ..?" ಅದಕ್ಕೆ ಆಯಿಷಾ ಬೀವಿ(ರ.ಅ)ರವರು ಹೇಳಿದರು " ಹಾ ಅಲ್ಲಾಹನ ರಸೂಲರೇﷺ ತಾವುﷺ ಇವತ್ತು ಪ್ರತ್ಯೇಕ ನನಗಾಗಿಯೆ ಪ್ರಾರ್ಥನೆ ಮಾಡಿದ್ದೀರಲ್ಲಾ, ತುಂಬಾನೆ ಸಂತೋಷವಾಯಿತು" ಎಂದರು. ಆಗ ಹಬೀಬ್ ﷺ ತಂಙಳ್ ರವರು ಹೇಳಿದರು," *ಈ ಪ್ರಾರ್ಥನೆ ಬರೀ ನಿನಗೆ ಮಾತ್ರವಲ್ಲ ಇನ್ನು ಮುಂದೆ ಬರುವ ನನ್ನ ಉಮ್ಮತಿಗಳಿಗೂ ನನ್ನ ಎಲ್ಲಾ ನಮಾಜ್ ನಲ್ಲೂ ಇದೇ ರೀತಿ ಪ್ರಾರ್ಥಿಸುತ್ತೇನೆ*" ಎಂದರು.. 
   *سبحان الله*
 *ಇದಲ್ಲವೆ ನಿಜವಾದ ಪ್ರೀತಿ❣ ನಮ್ಮನ್ನು ಕಾಣದೆ ನಮಗಾಗಿ ನಮ್ಮ ಪಾಪ ಮೋಚನೆಗಾಗಿ ಹಗಲು ರಾತ್ರಿ ಕಣ್ಣೀರು ಸುರಿಸುತ್ತಿದ್ದರು ನಮ್ಮ ಹಬೀಬ್ ﷺತಂಙಳ್ ರವರು😪*.

*ಇಂತಹ ನೆಬಿﷺತಂಙಳ್ ರವರ ಉಮ್ಮತಿ ಆದ ನಾವು ಅದೆಷ್ಟೋಂದು ಭಾಗ್ಯವಂತರು ಅಲ್ಲವೇ*...

ಮರಣದವರೆಗೂ ಆ ಮುತ್ತು ಹಬೀಬ್ ﷺತಂಙಳ್ ರವರ ಉಮ್ಮತಿಯಾಗಿ ಜೀವಿಸಲು ತೌಫೀಕ್ ನೀಡು ಅಲ್ಲಾಹ್🤲🏻😭
                     
                                     ✒ ವಸೀಮ
                                 ಅಲಿಫ್ ಅಕಾಡೆಮಿ 
                                       ಕುಳೂರು
➖➖➖➖➖➖➖➖➖➖