ಮದೀನಾ ಮಹತ್ವ ಇತಿಹಾಸ ಅಧ್ಯಾಯ 3
🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
*ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
*ಸಂಗ್ರಹ: ಯಾಸೀನ್ ನಾವೂರ್*
🍃 *ಅಧ್ಯಾಯ 3*🍃
💜💜💜💜💜💜💜
❤️ *ಮದೀನಾದ ನಾಮಗಳು*
❤️ *ಈ ಪದ ಬಳಕೆ ಬೇಡ . . !*
🌹🌹🌹🌹🌹🌹🌹🌹🌹🌹🌹
ಮದೀನಾದ ಮಹತ್ವ ಹಾಗೂ ಪ್ರತಿಷ್ಠೆಯನ್ನು ಎತ್ತಿ ಹೇಳುವ ಹಲವಾರು ನಾಮಗಳು ಮದೀನಾಗೆ ಇದೆ. ಇಮಾಮ್ ಸುಂಹೂದಿ(ರ.ಅ)ರವರು ತನ್ನ ವಫಾವುಲ್ ವಫಾ ಎಂಬ ಗ್ರಂಥದಲ್ಲಿ 99 ನಾಮಗಳನ್ನು ಬಹಳ ವಿಸೃತವಾಗಿ ವಿವರಿಸಿದ್ದಾರೆ. ಅದೇ ರೀತಿ ಮುಹಮ್ಮದ್ ಬಿನ್ ಯೂಸುಫ್ ಸ್ವಾಲಿಹೀರವರ ಸುಬಲುಲ್ ಹುದಾ ವರ್ರಶಾದ್ ಎಂಬ ಗ್ರಂಥದಲ್ಲಿ ಕೂಡಾ ನಾಮಗಳನ್ನು ಕಾಣಬಹುದು.
"ಒಂದು ವಸ್ತುವಿಗೆ ಹಲವಾರು ನಾಮಗಳಿರುವುದು ಅದರ ಮಹತ್ವದ ಸೂಚನೆಯಾಗಿದೆ. ಎಂದು ವಿದ್ವಾಂಸರು ಹೇಳಿದ್ದಾರೆ. ಮದೀನಾ ಊರಿಗೆ ಇರುವಷ್ಟು ನಾಮಗಳು ಜಗತ್ತಿನ ಯಾವುದೇ ಪ್ರದೇಶಗಳಿಗೆ ಇಲ್ಲ ಎನ್ನುವುದು ಇಲ್ಲಿ ಸ್ಮರಣೀಯ.
ಈ ನಾಮಗಳಲ್ಲಿ ಅತ್ಯಂತ ಪ್ರಸಿದ್ಧ ನಾಮಗಳು ನಾಲ್ಕು ಮಾತ್ರ ಅವುಗಳೆಂದರೆ ಮದೀನಾ, ತೈಬಾ, ತ್ವಾಬ, ಹಾಗೂ ಯಸ್ರಿಬ್ ಎಂಬುವುದು ಪ್ರವಾದಿಯವರು ಮದೀನಾಗೆ ಆಗಮಿಸುವ ಮೊದಲು ಸುಪ್ರಸಿದ್ಧ ನಾಮವಾಗಿತ್ತು. ಆದರೆ ಇಂದು ಮದೀನಾಗೆ ಈ ಹೆಸರು ಕರೆಯುವುದು ಸಲ್ಲದು. 1-ಅಲ್ ಈಮಾನ್
2-ಅಲ್ ಬಲದ್
3-ಬಲದು ರಸೂಲಿಲ್ಲಾಹಿ :
5-ಅಲ್ ಹರಮ್
6-ಹಸನಃ
7-ಅಲ್ ಖಿಯರಃ
8-ಅದ್ದಾರ್
9 -ಅಕಾಲತುಲ್ ಖುರಾ
10-ಆಸ್ರಿಬ್
11-ಆರ್‌ಳುಲ್ಲಾಹಿ
12-ಅರ್‌ಳುಲ್ ಹಿಜ್ರ
13-ಅಕಾಲತುಲ್ ಬುಲ್ದಾನ್
14-ಅಲ್ ಬಾರ್ರಃ
15-ಅಲ್ ಬರ್ರಃ
16-ಯನ್ ದರ್
17- ಅಲ್ ಬಹ್ರಃ
18-ಅಲ್ ಬುಹೈರಃ
19-ಅಲ್ ಬಹೀರಃ
20-ಅಲ್ ಬಲಾತ್ವ್
21-ಮಂಬವುಲ್ ಹಲಾಲಿ ವಲ್ ಹರಾಮ್
22-ತಂದರ್
23- ಅಲ್ ಜಾಬಿರಃ
24-ಜುಬಾರ್
25-ಅಲ್ ಜಬ್ಬಾರಃ
26-ಜಝೀರತುಲ್ ಅರಬ್
27-ಅಲ್ ಜನ್ನಃ
28-ಅಲ್ ಹಬೀಬಃ
29-ಹರಮು ರಸೂಲಿಲ್ಲಾಹಿ 30-ಅಲ್ ಖೈರಃ
31-ದಾರುಲ್ ಅಬ್ರಾರ್
32-ದಾರುಲ್ ಮುಖ್ತಾರ್
33-ದಾರುಲ್ ಈಮಾನ್
34-ದಾರುಸ್ಸುನ್ನಃ
35-ದಾರುಸ್ಸಲಾಂ
36-ದಾರುಲ್ ಹಿಜ್ರಃ
37-ಅದ್ದರ್‌ವುಲ್ ಹಸೀನಃ
38-ದ್ಸಾತುನ್ನಖ್ಲ್
39-ದ್ಸಾತುಲ್ ಹಿರಾರ್
40-ದ್ಸಾತುಲ್ ಹಜರ್
41-ಅಸ್ತಲಿಖಃ
42-ಅಶ್ಶಾಫಿಯಃ
43-ತ್ವಾಬಃ
44-ತೈಬಃ
45-ಖಲ್ ಬುಲ್ ಈಮಾನ್
46-ತ್ವಾಇಬ್
47-ಅಲ್ ಖಾಸ್ವಿಮಃ
48-ಆಲ್ ಆಸ್ವಿಮಃ
49-ಅಲ್ ಅದ್ಸ್ರಾಅ್
50-ಅಲ್ ಖರ್‌ಯಃ
51-ಅಲ್ ಗುರ್ರಾಅ್
52-ಗಲಬತ್
53-ಮುಬೀನುಲ್ ಹಲಾಲಿ ವಲ್ ಹರಾಮಿ
54-ಆಲ್ ಅರ್ರಾಅ್
55-ತ್ವಿಬಾಬ್
56-ಖುಬ್ಬತುಲ್ ಇಸ್ಲಾಂ
57-ಅಲ್ ಅರೂಳ್
58-ಖರ್ ಯತುಲ್ ಅನ್ಸಾರ್
59-ಖರ್‌ಯತು ರಸೂಲಿಲ್ಲಾಹಿ
60-ತ್ವಯ್ಯಿಬಃ
61-ಅಲ್ ಮಅ ಮಿನಃ
62-ಅಲ್ ಮುಬಾರಕಃ
63-ಅಲ್ ಮುಹಿಬ್ಬಃ
64-ಅಲ್ ಫಾಳಿಹಃ
65-ಅಲ್ ಮಜ್ಬೂರಃ
66-ತನ್‌ದದ್
67-ಅಲ್ ಮಹಬ್ಬತ್
68-ಅಲ್ ಮಹ್ ಬೂಬಃ
69-ಅಲ್ ಮಹ್ಬೂರಃ
70-ಅಲ್ ಮುಹರ್ರಮಃ
71-ಅಲ್ ಮದೀನಾ
72-ಅಲ್ ಮಹ್ಫೂಫಃ
73-ಅಲ್ ಮಹ್ಫೂಳಃ
74-ಅಲ್ ಮುಖ್ತಾರಃ
75-ಮುದ್ಖಲು ಸ್ವಿದ್ಖ್
76-ಅಲ್ ಮಹ್ರೂಸಃ
77-ಮದೀನತುರ್ರಸೂಲ್
78-ಅಲ್ ಮರ್‌ಹೂಮಃ 79-ಅಲ್ ಮರ್‌ಝಖಃ
80-ಮದುಲ್ ಅಕ್ಸಾ
81-ಅಲ್ ವಿಕ್ಕೀನಃ
82-ಅಲ್ ಮುಸ್ಲಿಮಃ
83-ಅಲ್ ಮುಖದ್ಧಸಃ
84-ಅಲ್ ಮುತಯ್ಯಬಃ
85-ಮಲ್‌ಜವುರ್ರಸೂಲ್
86-ಅಲ್ ಮಕರ್ರ್
87-ಅಲ್ ಮಕತಾನ್
88-ಅಲ್ ಮಹೀನಃ
89-ಮುಹಾಜರುರ್ರಸೂಲ್
90-ಅನ್ನಹ್ರ್
91-ಅನ್ನಾಜಿಯಃ
92-ನಬ್ಲಾಅ್
93-ಅಲ್ ಮುವಫ್ಫಿಯ
94-ಹಲ್ ಅದ್ಸ್ರಾಅ್
95-ಯಸ್ರಿಬ್
96-ಯನ್ದದ್
ಈ ನಾಮಗಳಲ್ಲಿ ಅತ್ಯಂತ ಪ್ರಸಿದ್ಧ ನಾಮಗಳು ನಾಲ್ಕು ಮಾತ್ರ ಅವುಗಳೆಂದರೆ ಮದೀನಾ,ತೈಬ,ತ್ವಾಬ ಹಾಗೂ ಯಸ್‌ರಿಬ್.ಇದರಲ್ಲಿ ಯಸ್ ರಿಬ್ ಎಂಬುವುದು ಪ್ರವಾದಿವರ್ಯರು ಮದೀನಾಗೆ ಆಗಮಿಸುವ ಮೊದಲು ಸುಪ್ರಸಿದ್ದ ನಾಮವಾಗಿತ್ತು . ಆದರೆ ಇಂದು ಮದೀನಾಗೆ ಈ ಹೆಸರು ಕರೆಯುವುದು ಸಲ್ಲದು.
*ಈ ಪದ ಬಳಕೆ ಬೇಡ . . !*
.........................................
ಪ್ರವಾದಿವರ್ಯರ ಮದೀನಾ ಅತ್ಯಂತ ಪವಿತ್ರ ಊರು.ಇದರ ಗೌರವಕ್ಕೆ ಧಕ್ಕೆ ತರುವ ಯಾವುದೇ ಪದ ಬಳಕೆ ಸಲ್ಲದು.ಅಂದಹಾಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮದೀನಾಗೆ ಬರುವ ಮೊದಲು ಅದರ ಹೆಸರು ಯಸ್ರಿಬ್ ಎಂದಾಗಿತ್ತು,ಯಸ್‌ರಿಬ್ ಎಂಬುವುದಕ್ಕೆ 'ಕೇಡ' 'ಕಲಹ' ಎಂಬ ಅರ್ಥವಿರುವುದರಿಂದ ಅದನ್ನು ಬದಲಾಯಿಸಿ ಪ್ರವಾದಿ ವರ್ಯರು ' ಮದೀನಾ ' ಎಂದು ನಾಮಕರಣ ಮಾಡಿದರು . ಅಂದಿನಿಂದ ಇದು ಪ್ರವಾದಿ ವರ್ಯರ ಮದೀನಾವಾಗಿ ಖ್ಯಾತಿ ಪಡೆಯಿತು.
ಮಾತ್ರವಲ್ಲ ಈ ಪವಿತ್ರ ಮದೀನಾಗೆ 'ಯಸ್‌ರಿಬ್ ' ಎಂಬ ಪದಬಳಕೆ ಮಾಡುವುದನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಕಠಿಣವಾಗಿ ವಿರೋಧಿಸಿದ್ದಾರೆ.ಒಂದು ಹದೀಸ್ ಈ ರೀತಿಯಿದೆ . ಇಮಾಂ ಅಹ್ಮದ್ ( ರ ) ರವರಿಂದ ವರದಿ “ಯಾರಾದರು ಮದೀನಾವನ್ನು “ ಯಸ್ರಿಬ್ ' ಎಂದು ಕರೆದರೆ ಆತನು ಅಲ್ಲಾಹನಲ್ಲಿ ಪಾಪಮೋಚನೆ ಬೇಡಲಿ,ಅದು ತ್ವಾಬಾ , ಅದು ತ್ವಾಬಾ , ಅದು ತ್ವಾಬಾ ” ( ಮಸ್‌ನದ್ ).
ಮತ್ತೊಂದು ಹದೀಸ್ ಈ ರೀತಿಯಿದೆ “ ಮದೀನಾಗೆ ' ಯಸ್‌ರಿಬ್ ' ಎಂದು ಯಾರಾದರು ನಾಮಕರಣ ಮಾಡಿದರೆ ಆತನಿಗೆ ಒಂದು ಪಾಪವನ್ನು ದಾಖಲಿಸಲ್ಪಡುತ್ತದೆ.” ಮದೀನಾಗೆ ಒಳ್ಳೆಯ ಹೆಸರು ಕರೆಯುವುದನ್ನು ಪ್ರವಾದಿವರ್ಯರು ಇಷ್ಟ ಪಡುತ್ತಿದ್ದರು.ಇಲ್ಲಿ ಎಲ್ಲರು ಒಂದು ವಿಚಾರ ಮನದಟ್ಟು ಮಾಡಬೇಕಿದೆ .ಅದೇನೆಂದರೆ . . . ಪ್ರವಾದಿವರ್ಯ ರ ಊರು ಪವಿತ್ರ ಮದೀನಾಗೆ ಅದರ ಗೌರವಕ್ಕೆ ಚ್ಯುತಿ ತರುವ ' ಯಸ್‌ರಿಬ್ ” ಎಂಬ ಪೂರ್ವ ನಾಮ ಕರೆಯುವುದು ಪಾಪವಾದರೆ ಪ್ರವಾದಿವರ್ಯರನ್ನು ಆಕ್ಷೇಪಿಸುವವರು,ಅವರ ಹೆಸ ರನ್ನು ವಿಕೃತಗೊಳಿಸುವವರು, ಜನ್ಮ ತಿಂಗಳಿಗೆ ಅಗೌರವ ತೋರುವವರು,ಆ ಪುಣ್ಯ ಕೇಶ ದ ಬಗ್ಗೆ ಬಹಿರಂಗವಾಗಿ ಅವಹೇಳಿಸುವವರ ಪಾಪ ಎಷ್ಟು ದೊಡ್ಡವಾಗಿರಬಹುದು . . ? ಅವರ ಅಂತ್ಯ ಏನಾಗಿರಬಹುದು..?
ಮುಂದುವರಿಯುವುದು
Post a Comment