ಮದೀನಾ ಮಹತ್ವ ಇತಿಹಾಸ ಅಧ್ಯಾಯ 2
🌟🌟🌟🌟🌟🌟🌟🌟
ಮದೀನಾ ಮಹತ್ವ ಇತಿಹಾಸ
💫💫💫💫💫💫💫💫
ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ
ಸಂಗ್ರಹ: ಯಾಸೀನ್ ನಾವೂರ್
🍃 ಅಧ್ಯಾಯ 2🍃
💜💜💜💜💜💜💜
❤️ ಮದೀನಾ ಪ್ರವಾದಿವರ್ಯರ ಹರಮ್
❤️ ಮದೀನಾ ಹರಮಿನ ವ್ಯಾಪ್ತಿ:
🌹🌹🌹🌹🌹🌹🌹🌹🌹🌹🌹
ಎಲ್ಲಾ ನೆಬಿಯವರಿಗೆ ಹರಮ್ ಇರುವಂತೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಹರಮ್ ಪವಿತ್ರ ಮದೀನಾ. ಅಲ್ಲಾಹನ ಆಜ್ಞೆಯ ಪ್ರಕಾರ ಮದೀನವನ್ನು ಹರಮಾಗಿ ಘೋಷಿಸಲಾಯಿತು. ಮಕ್ಕಾದಿಂದ ಮದೀನಾಗೆ ಹಿಜಿರಾ ಬಂದ ನಂತರ ಮದೀನಾ ಪ್ರವಾದಿವರ್ಯರ ಊರಾಯಿತು. ಆದ್ದರಿಂದ ಇದರ ಮಹತ್ವ ಹಾಗೂ ಪಾವಿತ್ರ್ಯತೆಯನ್ನು ಕಾಪಾಡಲು ಹರಮನ್ನಾಗಿ ಮಾಡಲಾಯಿತು.
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಹೇಳುತ್ತಾರೆ "ಇಬ್ರಾಹೀಮ್ ನೆಬಿಯವರು ಮಕ್ಕಾವನ್ನು ಹರಮನ್ನಾಗಿ ಮಾಡಿ ಅದಕ್ಕೆ ಪ್ರಾರ್ಥಿಸಿದರು. ಇಬ್ರಾಹೀಮ್ ನೆಬಿಯವರು ಮಕ್ಕವನ್ನು ಹರಮ್ ಮಾಡಿದ ಹಾಗೇ ನಾನು ಮದೀನವನ್ನು ಹರಮನ್ನಾಗಿ ಮಾಡುತ್ತೇನೆ. ಇಬ್ರಾಹೀಮ್ ನೆಬಿಯವರು ಮಕ್ಕಾಕ್ಕೆ ಪ್ರಾರ್ಥಿಸಿದ ದುಪ್ಪಟ್ಟು ಮದೀನಾದ ಮುದ್ದು ಮತ್ತು ಸ್ವಾ...ಗೆ ಪ್ರಾರ್ಥಿಸುತ್ತಿದ್ದೇನೆ (ಬುಖಾರಿ, ಮುಸ್ಲಿಂ)
ಮಕ್ಕಾ-ಮದೀನಾವನ್ನು ಹರಮ್ ಎಂದು ಕರೆಯಲು ಕಾರಣ ಎರಡು ಪ್ರದೇಶಗಳ ಹೊರಗಡೆ ಸಮ್ಮತಾರ್ಹವಾದ ಕಾರ್ಯಗಳು ಇಲ್ಲಿ ಹರಾಮ್ -ನಿಷಿದ್ಧವಾಗಿರುತ್ತದೆ. ಅಂತೆಯೇ ಈ ಎರಡು ಹರಮಿನಲ್ಲಿ ಮರಗಳನ್ನು ಕಡಿಯುವುದು, ಯುದ್ಧಕ್ಕೆ ಬೇಕಾಗಿ ಆಯುಧಗಳನ್ನು ತೆಗೆದುಕೊಂಡು ಹೋಗುವುದು, ಬೇಟೆಯಾಡುವುದು,ಅಲ್ಲಿನ ಕಲ್ಲು &ಮಣ್ಣುಗಳನ್ನು ಬೇರೆಡೆಗೆ ಸಾಗಿಸುವುದು ಮುಂತಾದ ಹಲವಾರು ಸಂಗತಿಗಳು ನಿಷಿದ್ಧವಾಗಿರುತ್ತದೆ.
ಅಲ್ಲಾಹನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಸಮುದಾಯವಾದ ನಮಗೆ ನಿಶ್ಚಯಿಸಿದ ಹರಮ್ ಗಳು ಎರಡು ಮಾತ್ರ. ಅದು ಮಕ್ಕ &ಮದೀನಾ. ಮಕ್ಕಾ ಹಾಗೂ ಮದೀನಾದ ಮಸೀದಿಗಳಿಗೆ ವಿಶೇಷ ಮಹತ್ವವಿರುವಂತೆ ಮಸ್ಜಿದುಲ್ ಅಕ್ಸಾ ಇದ್ದರೂ ಅದು ಹರಮ್ ಅಲ್ಲ ಎರಡು ಹರಮ್ ಗಳಲ್ಲಿ ನಿಷಿದ್ಧವಾದ ಕಾರ್ಯಗಳು ಅಲ್ಲಿ ಹರಾಮ್ ಅಲ್ಲ. ಆದರೆ ಅದರ ಮಹತ್ವಕ್ಕೆ ಯಾವುದೇ ಕಮ್ಮಿಯಿಲ್ಲ.
ಮದೀನಾ ಹರಮಿನ ವ್ಯಾಪ್ತಿ:
........................................
ಅಲ್ಲಾಹನು ನಮಗೆ ನಿಶ್ಚಯಿಸಿ ಕೊಟ್ಟ ಎರಡು ಹರಮ್ ಗಳು ಮಕ್ಕಾ ಮದೀನಾ ಮಾತ್ರ. ಎರಡು ಹರಮ್ ಗಳ ವ್ಯಾಪ್ತಿಯನ್ನು ನಾವು ಕಡ್ಡಾಯವಾಗಿ ಮನದಟ್ಟು ಮಾಡಬೇಕಿದೆ. ಯಾಕೆಂದರೆ ಈ ಎರಡು ಹರಮ್ ಗಳ ಹೊರಗಡೆ ಸಮ್ಮತಾರ್ಹವಾದ ಹಲವಾರು ಸಂಗತಿಗಳು ಹರಮಿನ ಒಳಗೆ ನಿಷಿದ್ಧವಾಗಿರುತ್ತದೆ. ಇದೇ ಕಾರಣದಿಂದ ಮಕ್ಕಾ -ಮದೀನಾಗೆ ಹರಮ್ ಎಂಬ ಹೆಸರು ಬಂದದ್ದು. ಆದ್ದರಿಂದ ಹರಮಿನ ವ್ಯಾಪ್ತಿಯನ್ನು ಮನದಟ್ಟು ಮಾಡುವುದರಿಂದ ಅದರ ಪಾವಿತ್ರ್ಯತೆಯನ್ನು ಕಾಪಾಡಲು ಸಹಾಯವಾಗುತ್ತದೆ.
ಮದೀನಾ ಮಸ್ಜಿದುನ್ನಬವಿಯ್ಯ ಪೂರ್ವ- ಪಶ್ಚಿಮ, ಉತ್ತರ -ದಕ್ಷಿಣ ಹೀಗೆ ನಾಲ್ಕು ಭಾಗಗಳಲ್ಲಿನ ವ್ಯಾಪ್ತಿಯನ್ನು ನಿರ್ಣಯಿಸುವ ಹದೀಸ್ ಗಳು ವರದಿಯಾಗಿದೆ. ಮಸ್ಜಿದುನ್ನಬವಿಯ ಪೂರ್ವ ಭಾಗದಲ್ಲಿ ಹರಮಿನ ಗಡಿಯನ್ನು ನಿರ್ಣಯಿಸುವುದು ಹರ್ರತು ವಾಖಿಮ್ ಎಂಬ ಪರ್ವತ. ಪಶ್ಚಿಮದಲ್ಲಿ ಹರ್ರತು ವಬರ ಎಂಬ ಪರ್ವತವಾಗಿದೆ. ಹರಮಿನ ಗಡಿಯಲ್ಲಿರುವ ಈ ಎರಡು ಪರ್ವತಕ್ಕೆ ಹರ್ರತುಶ್ಶರ್ರ್ಕಿಯ್ಯ ಮತ್ತು ಹರ್ರತುಲ್ ಗರ್ಬಿಯ್ಯ ಎಂದೂ ಕೂಡ ಕರೆಯುತ್ತಾರೆ.
ಮಸ್ಜಿದುನ್ನಬವಿಯ ಉತ್ತರ ಭಾಗದಲ್ಲಿ ಗಡಿಯನ್ನು ನಿರ್ಣಯಿಸುವುದು ಸೌರ್ ಪರ್ವತವಾಗಿದೆ. ದಕ್ಷಿಣದಲ್ಲಿ ಐರ್ ಎಂಬ ಪರ್ವತ ಗಡಿಯನ್ನು ನಿರ್ಣಯಿಸುತ್ತದೆ. ಉಹ್ದ್ ಪರ್ವತ ಬಿಟ್ಟರೆ ಮದೀನಾದಲ್ಲಿ ಅತ್ಯಂತ ಎತ್ತರವಿರುವ ಪರ್ವತವಾಗಿದೆ ಇದು. ಮದೀನವನ್ನು ಹರಮನ್ನಾಗಿ ನಿಶ್ಚಯಿಸಿರುವ ರಹಸ್ಯವನ್ನು ಇಮಾಮ್ ಸುಂಹೂದಿ (ರ.ಅ)ರವರು ತನ್ನ ವಫಾವುಲ್ ವಫಾ ಎಂಬ ಗ್ರಂಥದಲ್ಲಿ ವಿವರಿಸಿದ್ದಾರೆ.ಸ್ರಷ್ಟಿ ಶ್ರೇಷ್ಠ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮದೀನಾಗೆ ಆಗಮಿಸಿದ ಕಾರಣ ಅದನ್ನು ಹರಮನ್ನಾಗಿ ಮಾಡಿ ವಿಶೇಷ ಮಹತ್ವವನ್ನು ಕಲ್ಪಿಸಲಾಯಿತು.ಈ ಪ್ರದೇಶದಲ್ಲೆಲ್ಲಾ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪ್ರಭೆ ಹರಡಿ ನಿಂತಿದೆ.ಮಕ್ಕಾದಲ್ಲಿರುವ ಪವಿತ್ರ ಕಅಬಾಲಯದ ಮಹತ್ವವನ್ನು ಕಾಪಾಡುವ ಸಲುವಾಗಿ ಮಕ್ಕಾವನ್ನು ಹರಮ್ ಆಗಿ ಮಾಡಲಾಗಿದೆ. ಮದೀನಾದ ಈ ಪವಿತ್ರ ಹರಮಿನಲ್ಲಿ ಇಹಪರ ರಕ್ಷೆ, ವಿಶೇಷ ಬರಕತ್ತು ಹಾಗೂ ಒಳಿತುಗಳೆಲ್ಲವೂ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಬನೂ ಹಾರಿಸ್ ರವರು ಮದೀನಾ ಬಿಟ್ಟು ಹೊರ ಹೋದಾಗ ಹರಮಿನ ಒಳಗೆ ಬಂದು ಜೀವಿಸಲು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಪ್ರೇರಣೆ ನೀಡಿದ್ದರು.
ಮುಂದುವರಿಯುವುದು
Post a Comment