ಮದೀನಾ ಮಹತ್ವ ಇತಿಹಾಸ ಅಧ್ಯಾಯ 21

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 21*🍃
         💜💜💜💜💜💜💜

 ❤️ *ಮುಹಮ್ಮದುಲ್ ಮಹ್ದಿಯವರ ಕಾಲದಲ್ಲಿ*
 ❤️ *ಖಲೀಫಾ ಮುಸ್ತಅ್ ಸ್ವಿಂ ಬಿಲ್ಲಾಹಿಯವರ ಕಾಲದಲ್ಲಿ !*
 ❤️ *ಅಲ್‌ಮಲಿಕುನ್ನಾಸ್ವೀರ್ ಮುಹಮ್ಮದ್* 
🌹🌹🌹🌹🌹🌹🌹🌹🌹🌹🌹
        ಅಬ್ಬಾಸೀ ಆಡಳಿತದಲ್ಲಿ ಪ್ರಮುಖರಾದ ಮಹ್ದಿಯವರು ಹಿಜ್ರಾ160ರಲ್ಲಿ ಹಜ್ ನಿರ್ವಹಿಸಲು ಬಂದಾಗ ಮಸ್ಜಿದುನ್ನಬವಿ ವಿಶಾಲಗೊಳಿಸುವುದು ಅನಿವಾರ್ಯ ಎಂದು ಮನಗಂಡ ಇವರು ಈ ಕಾರ್ಯವನ್ನು ಅಬ್ದುಲಾಹಿ ಬಿನ್ ಆಸ್ವಿಮ್(ರ) ರವರಿಗೆ ವಹಿಸಿ ಕೊಟ್ಟರು. ಈ ವಿಕಸನ ಪ್ರಕ್ರಿಯೆ ಮಸೀದಿಯ ಉತ್ತರ ಭಾಗಕ್ಕೆ ಮಾತ್ರ ಸೀಮಿತವಾಗಿತ್ತು. ಇತರ ಮೂರು ಭಾಗಗಳಲ್ಲಿ ವಿಶಾಲಗೊಳಿಸಲಾಗಿಲ್ಲ. ಮುಹಮ್ಮದ್ ಮಹ್ದಿಯವರು ಮಸೀದಿಯನ್ನು ವಿಶಾಲಗೊಳಿಸಿದ ನಂತರ ಹಿಜ್ರಾ 604ರ ತನಕ ಯಾವುದೇ ವಿಕಸನ ಪ್ರಕ್ರಿಯೆ ನಡೆದಿರಲಿಲ್ಲ. ಮಸ್ಜಿದುನ್ನಬವಿಯಲ್ಲಿ ಅಗ್ನಿ ದುರಂತ ಉಂಟಾಗುವ ತನಕ ಇದರ ಅಗತ್ಯ ಉಂಟಾಗಿರಲಿಲ್ಲ. 

*ಖಲೀಫಾ ಮುಸ್ತಅ್ ಸ್ವಿಂ ಬಿಲ್ಲಾಹಿಯವರ ಕಾಲದಲ್ಲಿ !*
......................................................
 ಹಿಜ್ರಾ 654ರ ರಮಳಾನಿನ ಪ್ರಾರಂಭದಲ್ಲಿ ಮಸ್ಜಿದುನ್ನಬವಿಯಲ್ಲಿ ನಡೆದ ಅಗ್ನಿ ದುರಂತದಿಂದಾಗಿ ಮಸೀದಿ ಸಂಪೂರ್ಣ ನಾಶವಾಗಿತ್ತು . ಮಸೀದಿಯ ಪ್ರತಿಯೊಂದು ಮೂಲೆಗೂ ಬೆಂಕಿ ತಗುಲಿತ್ತು . ಬೆಂಕಿ ತಗುಲಿದ ಒಂದೇ ಒಂದು ಮರದ ತುಂಡು ಕೂಡಾ ಕಾಣಲು ಸಾಧ್ಯವಾಗಿರಲಿಲ್ಲ . ಮಸ್ಜಿದುನ್ನಬವಿಯ ಸೇವಕರಲ್ಲಿ ಒಬ್ಬರಾದ ಅಬೂಬಕರ್ ಅಹದ್ ಎಂಬಾತನ ಅಚಾತುರ್ಯದಿಂದ ಈ ಅಗ್ನಿ ದುರಂತ ಸಂಬವಿಸಿತು. ಮಸೀದಿಯ ಪಶ್ಚಿಮ ಭಾಗದಲ್ಲಿ ಉಗ್ರಾಣದಲ್ಲಿ ಇವರು ಪ್ರವೇಶಿಸುವಾಗ ಕೈಯಲ್ಲಿದ್ದ ದೀಪವನ್ನು ಒಂದೆಡೆ ಇಟ್ಟಿದ್ದರು. ಇದರಿಂದ ಬೆಂಕಿ ಹಿಡಿದು ಅಲ್ಲೆಲ್ಲಾ ಹರಡಿತು. ಆ ಸೇವಕನಿಗೆ ಇದನ್ನು ಕೆಡಿಸಲು ಸಾಧ್ಯವಾಗಿಲ್ಲ. ಪರಿಣಾಮವಾಗಿ ಮಸೀದಿ ಮೇಲ್ಚಾವಣಿಗೂ ಬೆಂಕಿ ತಗುಲಿ ಇಡೀ ನಾಶವಾಯಿತು. ಮಸೀದಿ ಹೊತ್ತಿ ಉರಿಯುವಾಗ ಊರಿನ ಹಲವಾರು ಜನರು ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಮಸೀದಿಯ ಅಗ್ನಿ ದುರಂತದ ಬಗ್ಗೆ ರಾಜ ಮುಸ್ತಅ್ ಸ್ವಿಂ ಬಿಲ್ಲಾಹಿಯವರಿಗೆ ವಿಷಯ ತಿಳಿದಾಗ ಪುನರ್ ನಿರ್ಮಾಣಕ್ಕೆ ಬೇಕಾಗುವ ಅಗತ್ಯ ಸಾಮಾಗ್ರಿಗಳನ್ನು ಕಳಿಸಿಕೊಟ್ಟರು . ಹಲವಾರು ತೊಡಕುಗಳಿಂದ ಈ ನಿರ್ಮಾಣ ಪ್ರಕ್ರಿಯೆ ಪೂರ್ಣ ಗೊಂಡಿರಲಿಲ್ಲ . ನಂತರ ಬಂದ ಹಲವರು ಮುಸ್ಲಿಂ ರಾಜರು ಇದರ ಕೆಲಸ ಪೂರ್ತೀಕರಣಕ್ಕೆ ಸಹಾಯಸ್ತ ಚಾಚಿದರು . 

*ಅಲ್‌ಮಲಿಕುನ್ನಾಸ್ವೀರ್ ಮುಹಮ್ಮದ್* 
.........................................................
           ನಂತರ ಹಿಜ್ರಾ 729ರಲ್ಲಿ ಈ ಆಡಳಿತಧಿಕಾರಿಯ ನಿರ್ದೇಶನದಂತೆ ಮಸೀದಿಗೆ ತಾಗಿ ಕೊಂಡು ಎರಡು ಹಾಲುಗಳನ್ನು ನಿರ್ಮಿಸಲಾಯಿತು. ಇದರಿಂದ ಜನರಿಗೆ ವ್ಯಾಪಕ ಉಪಕಾರ ವಾಯಿತು . ಇದನ್ನು ಇಮಾಂ ಸುಂಹೂದಿ ( ರ ) ರವರು ವಫಾವುಲ್ ವಫಾದಲ್ಲಿ ವಿವರಿಸಿದ್ದಾರೆ .
  
     *ಮುಂದುವರಿಯುವುದು*