ಮದೀನಾ ಮಹತ್ವ ಇತಿಹಾಸ ಅಧ್ಯಾಯ 4
🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
*ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
*ಸಂಗ್ರಹ: ಯಾಸೀನ್ ನಾವೂರ್*
🍃 *ಅಧ್ಯಾಯ 4*🍃
💜💜💜💜💜💜💜
❤️ *ಮದೀನಾ ಮಹತ್ವಗಳು*
❤️ *ಪ್ರವಾದಿವರ್ಯರ ವಫಾತ್ ಮದೀನಾದಲ್ಲಿ*
❤️ *ಮಹಾಮಾರಿ ಇಲ್ಲವಾಯಿತು !*
🌹🌹🌹🌹🌹🌹🌹🌹
ಪವಿತ್ರ ಮದೀನಾಗೆ ಹಲವಾರು ಮಹತ್ವಗಳಿದೆ.ಅವುಗಳನ್ನು ಮನದಟ್ಟು ಮಾಡುವುದು ವಿಶ್ವಾಸಿ ಪಾಲಿಗೆ ಕಡ್ಡಾಯ ಎಂದರೆ ತಪ್ಪಾಗಲಾರದು . ಯಾಕೆಂದರೆ ಇದು ಮದೀನಾದೊಂದಿಗಿನ ಪ್ರೇಮದ ಹೆಚ್ಚಳಕ್ಕೆ ಇದು ಸಹಕಾರಿಯಾಗುತ್ತದೆ . ಮದೀನಾ ಮಹತ್ವಗಳಲ್ಲಿ ಕೆಲವೊಂದನ್ನು ಇಲ್ಲಿ ವಿವರಿಸಲಾಗಿದೆ .
*ಪ್ರವಾದಿವರ್ಯರ ವಫಾತ್ ಮದೀನಾದಲ್ಲಿ*
........................................................
ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ವಫಾತ್ ಆದದ್ದು ಹಾಗೂ ಆ ಪಾವನ ಶರೀರವನ್ನು ದಫನ ಮಾಡಿದ್ದು ಪವಿತ್ರ ಮದೀನಾದಲ್ಲಾಗಿದೆ ಎನ್ನುವುದು ಎಲ್ಲ ರಿಗೂ ಸುಸ್ಪಷ್ಟ .ಆ ಪಾವನ ಶರೀರವನ್ನು ತನ್ನ ಮಡಿಲಲ್ಲಿರಿಸುವ ಭಾಗ್ಯ ಲಭಿಸಿದ ಮದೀನಾಗೆ ಇದು ಅತೀ ದೊಡ್ಡ ಮಹತ್ವ , ಆದ್ದರಿಂದ ಮದೀನಾ ಮಣ್ಣಿಗಿರುವಷ್ಟು ಪಾವಿತ್ರ್ಯತೆ ಜಗತ್ತಿನ ಯಾವುದೇ ಮಣ್ಣಿಗಿಲ್ಲ . ಪ್ರವಾದಿವರ್ಯರ ಪವಿತ್ರ ಖಬ್ರ್ ಇರುವ ಸ್ಥಳಕ್ಕೆ ಜಗತ್ತಿನಲ್ಲಿರುವ ಎಲ್ಲಾ ಸ್ಥಳಗಳಿಗಿಂತ ಮಹತ್ವವಿದೆ. ಪವಿತ್ರ ಕಅಬಾ ಶರೀಫಿಗಿಂತ ಕೂಡಾ ಅತ್ಯಂತ ಮಹತ್ವವಿರುವ ಸ್ಥಳವಾಗಿದೆ ಇದು.( ಅಲ್ ಬಿದಾಯ ವನ್ನಿಹಾಯ-3/203 )- ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ವಫಾತ್ ಪ್ರಿಯ ಪತ್ನಿ ಆಯಿಷಾ ಬೀಬಿ( ರ )ರವರ ಮನೆಯಲ್ಲಾಗಿದೆ . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮರಣ ಶಯ್ಯೆಯಲ್ಲಿರುವಾಗ ಪತ್ನಿಯರಲ್ಲಿ ಕೇಳುತಿದ್ದರು ನಾಳೆ ಎಲ್ಲಿ . . ? ಯಾರ ಮನೆಯಲ್ಲಿ . . ? ಆಯಿಶಾ ( ರ ) ಮನೆಯಲ್ಲಿ ಇರಲು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮನಸು ಹಾತೊರೆಯುತಿತ್ತು.ಆಗ ಪ್ರವಾದಿ ಪತ್ನಿಯರು ಇಷ್ಟವಿದ್ದಲ್ಲಿ ಇರಲು ಸಮ್ಮತಿಸಿದರು.ನಂತರದ ದಿನಗಳಲ್ಲಿ ಪ್ರವಾದಿ ವರ್ಯರು ಆಯಿಶಾ( ರ )ರವರ ಮನೆಯಲ್ಲಿ ತಂಗಿದರು.ಅಲ್ಲೇ ವಫಾತ್ ಹಾಗೂ ಧಪನ. ಮರಣಾ ನಂತರ ಪ್ರವಾದಿವರ್ಯರನ್ನು ಎಲ್ಲಿ ಧಪನು ಮಾಡುವುದು ಎಂದು ಅಬೂಬಕರ್ ಸಿದ್ದೀಕ್ ( ರ ) ರವರಲ್ಲಿ ಕೇಳಿದಾಗ “ ಅಲ್ಲಾಹನು ಪ್ರವಾದಿವರ್ಯರ ರೂಹನ್ನು ಹಿಡಿದ ಸ್ಥಳದಲ್ಲಾಗಿದೆ . ಕಾರಣ ಉತ್ತಮ ಸ್ಥಳಗಳಲ್ಲಿಯಲ್ಲದೆ ಪ್ರವಾದಿವರ್ಯರ ರೂಹನ್ನು ಅಲ್ಲಾಹನು ಹಿಡಿಯುವುದಿಲ್ಲ ” ಎಂದಾಗಿದೆ ಅವರು ನೀಡಿದ ಉತ್ತರ . ಆಗ ಎಲ್ಲರೂ ಈ ವಾದವನ್ನು ಅಂಗೀಕರಿಸಿದರು .
*ಮಹಾಮಾರಿ ಇಲ್ಲವಾಯಿತು !*
..........................................................
ಮದೀನಾ ಜಗತ್ತಿನಲ್ಲಿರುವ ಅತ್ಯಂತ ಪವಿತ್ರ ಸ್ಥಳ . ಇದಕ್ಕೆ ಪಾವಿತ್ರ್ಯತೆ ಲಭಿಸಿದ್ದು ಪ್ರವಾದಿ ವರ್ಯರ ಆಗಮನದ ನಂತರವಾಗಿದೆ . ಪ್ರವಾದಿವರ್ಯರು ಹಾಗೂ ಸ್ವಹಾಬಿಗಳು ಮದೀನಾಗೆ ಹಿಜ್ರಾ ಹೋಗುವುದಕ್ಕಿಂತ ಮುಂಚೆ ಅಲ್ಲಿನ ಅವಸ್ಥೆ ಬಹಳ ಶೋಚನೀಯವಾಗಿತ್ತು . ಆಪತ್ತು - ವಿಪತ್ತುಗಳ ರಾಜಧಾನಿಯಾಗಿತ್ತು . ಮದೀನಾಗೆ ಯಾರಾದರೂ ಹೋದರೆ ಮಾರಕ ರೋಗಗಳಿಗೆ ಬಲಿಯಾಗುವುದಂತೂ ಖಡಾ ಖಂಡಿತ . ಆದರೆ ಏನು ಮಾಡುವುದು ? ಮಕ್ಕಾ ಮುಶ್ರಿಕರ ಉಪಟಳ ತಾಳಲಾರದೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹಾಗೂ ಅನುಯಾಯಿಗಳು ಮದೀನಾಗೆ ಪಯಣ ಬೆಳೆಸ ಬೇಕಾಗಿಬಂತು . ಅಲ್ಲಿನ ನಿವಾಸಿಗಳು ಆಮಂತ್ರಣ ನೀಡಿದ್ದರೂ ಕೂಡಾ,ಸಕಲ ಸಂರಕ್ಷಣೆಯ ವಾಗ್ದಾನವಿತ್ತಿದ್ದರು . ಜೊತೆಗೆ ಅಲ್ಲಾಹನ ಆಜ್ಞೆ ಕೂಡಾ ಹಾಗಿತ್ತು . ದುರ್ಗಮ ಹಾದಿಯ ಈ ಪಯಣ ಮುಗಿಸಿ ಮದೀನಾ ತಲುಪಿದ ಪ್ರವಾದಿಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹಾಗೂ ಅನುಯಾಯಿಗಳಿಗೆ ನೆಮ್ಮದಿಯ ಬದುಕು ಬರೀ ಮರೀಚಿಕೆಯಾಗಿತ್ತು . ಹಲವಾರು ರೋಗಗಳಿಗೆ ಬಲಿಯಾಗಿ ಪಡಬಾರದ ಪಾಡು ಪಟ್ಟರು . ಅಲ್ಲಿನ ರೋಗದ ತೀವ್ರತೆ ಎಷ್ಟಿತ್ತೆಂದರೆ “ ನನ್ನ ಚಪ್ಪಲಿಯ ದಾರಕ್ಕಿಂತ ಹತ್ತಿರ ನನ್ನ ಮರಣವಿದೆ ” ಎಂದು ಅಬೂಬಕರ್ ಸಿದ್ದೀಕ್ ( ರ ) ರವರು ಹೇಳಿದ್ದರು . ತೀವ್ರ ಜ್ವರದಿಂದ ಬಳಲಿದ ಬಿಲಾಲ್ ( ರ ) ಬಿಕ್ಕಿ ಬಿಕ್ಕಿ ಅಳುತಿದ್ದರು . ಹೆಚ್ಚಿನ ಸ್ವಹಾಬಿಗಳು ಸುನ್ನತ್ ನಮಾಜ್‌ಗಳನ್ನು ಕುಳಿತು ಕೊಂಡು ನಿರ್ವಹಿಸುತ್ತಿದ್ದರು . ಪ್ರವಾದಿವರ್ಯರು ಮದೀನಾಗೆ ಬೇಕಾಗಿ ಪ್ರಾರ್ಥನೆ ಮಾಡಿದಾಗ ಈ ವಿಪತ್ತುಗಳೆಲ್ಲವೂ ಮಾಯವಾಯಿತು . ಈ ಪ್ರಾರ್ಥನೆಯನ್ನು ಇಮಾಂ ಬುಖಾರಿ ( ರ ) ರವರು ಉಲ್ಲೇಖಿಸಿದ್ದಾರೆ “ ಓ ಅಲ್ಲಾಹ್ . . . ಮದೀನಾವನ್ನು ನಮಗೆ ಅತ್ಯಂತ ಪ್ರೀತಿಯಿರುವಂತದ್ದನ್ನಾಗಿ ಮಾಡು . ಮಕ್ಕಾವನ್ನು ಪ್ರೀತಿಸಿದ ಹಾಗೆ ಅದಕ್ಕಿಂತಲೂ ಹೆಚ್ಚು , ಓ ಅಲ್ಲಾಹ್ . . ನಮ್ಮ ಸ್ವಾಲ್ ಹಾಗೂ ಮುದ್ದಿನಲ್ಲಿ ಬರಕತ್ತನ್ನು ಕರುಣಿಸು . ಮದೀನಾವನ್ನು ನಮ್ಮ ಪಾಲಿಗೆ ಆರೋಗ್ಯ ಪೂರ್ಣವಾಗಿಸು . ಮದೀನಾದ ಮಹಾ ಮಾರಿ ಜ್ವರವನ್ನು ಝುಹ್ಫ ಎಂಬ ಊರಿಗೆ ವರ್ಗಾವಣೆ ಮಾಡು ” ( ಸ್ವಾಅ್ ಮತ್ತು ಮುದ್ದು ಎನ್ನುವುದು ಅಳತೆ ಪಾತ್ರೆ ) ಪ್ರವಾದಿವರ್ಯರು ಮಹಾಮಾರಿ ಜ್ವರವನ್ನು ಮದೀನಾದಿಂದ ಝುಹ್ಫಾಗೆ ವರ್ಗಾವಣೆ ಮಾಡುವುದಕ್ಕೆ ಪ್ರಾರ್ಥನೆ ಮಾಡಲು ಕಾರಣ ಅದು ಇಸ್ಲಾಮಿನ ಕಠಿಣ ವಿರೋಧಿಗಳಾದ ಯಹೂದಿಗಳ ಊರಾಗಿತ್ತು . ಅಲ್ಲಿ ಯಾವೊಬ್ಬ ಮುಸ್ಲಿಮನು ಇರಲಿಲ್ಲ . - ಇಮಾಂ ನವವೀ ( ರ ) ರವರು ಹೇಳುತ್ತಾರೆ “ ಈ ಹದೀಸಿನಲ್ಲಿ ಪ್ರವಾದಿವರ್ಯರ ಪ್ರವಾದಿತ್ವ ವನ್ನು ದೃಢಪಡಿಸುವ ಪುರಾವೆ ಕೂಡಾ ಇದೆ . ಅಂದಿನಿಂದ ಝುಹ್ಫ ಬರಿದಾಯಿತು . ಯಾರಾ ದರೂ ಅಲ್ಲಿನ ನೀರನ್ನು ಕುಡಿದರೆ ಜ್ವರ ಭಾದಿಸುತ್ತಿತ್ತು ” ( ಶರಅ್ ಮುಸ್ಲಿಂ )
*ಮುಂದುವರಿಯುವುದು*
Post a Comment