ಮದೀನಾ ಮಹತ್ವ ಇತಿಹಾಸ ಅಧ್ಯಾಯ 36

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 36*🍃
         💜💜💜💜💜💜💜

 ❤️ *ಮದೀನಾದ ಮಸೀದಿಗಳು*
🌹🌹🌹🌹🌹🌹🌹🌹🌹🌹
               ಮದೀನಾದಲ್ಲಿ ಹಲವಾರು ಇತಿಹಾಸ ಪ್ರಸಿದ್ಧ ಮಸೀದಿಗಳಿವೆ. ಇವುಗಳ ಕುರಿತು ಮನದಟ್ಟು ಮಾಡುವ ಅಗತ್ಯವಿದೆ . ಯಾಕೆಂದರೆ ಇವುಗಳು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹಾಗೂ ಸ್ವಹಾಬಿಗಳ ಜೀವನದ ಮಹತ್ತರವಾದ ಘಟನೆಗಳಿಗೆ ಸಾಕ್ಷಿಯಾದ ಸ್ಥಳಗಳಾಗಿವೆ. ಇವುಗಳಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಸ್ವತಃ ನಿರ್ಮಾಣ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಮಸೀದಿಗಳಿವೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ನಮಾಜ್ ಮಾಡಿದ ಸ್ಥಳಗಳನ್ನು ಸ್ವಹಾಬಿಗಳು ಮಸೀದಿಗಳನ್ನಾಗಿ ಮಾರ್ಪಡಿಸಿದರು . ಕೆಲವೊಂದು ಸ್ಥಳಗಳು ಹಾಗೆ ಬಾಕಿಯಿತ್ತು . ಮದೀನಾ ಆಡಳಿತವನ್ನು ವಹಿಸಿದ ಉಮರ್ ಬಿನ್ ಅಬ್ದುಲ್ ಅಝೀಝ್ ( ರ ) ರವರು ತನ್ನ ಕಾಲದಲ್ಲಿ ಪ್ರವಾದಿವರ್ಯರು ನಮಾಝ್ ಮಾಡಿದ ಸ್ಥಳಗಳಲ್ಲಿ ಮಸೀದಿ ಗಳನ್ನು ನಿರ್ಮಿಸಲಾಯಿತು . ಹಳೆಯ ಮಸೀದಿಗಳನ್ನು ನವೀಕರಿಸಲಾಯಿತು . ಇದು ಹಿಜ್ರ 87 ರಿಂದ 93 ರ ನಡುವೆಯಾಗಿದೆ . ಆದರೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮದೀನಾಗೆ ಹೋಗುವುದಕ್ಕಿಂತ ಮುಂಚೆ ಮದೀನಾದಲ್ಲಿ ಮಸೀದಿಗಳ ನಿರ್ಮಾಣವಾಗಿತ್ತು . ಒಂದನೇ ಮತ್ತು ಎರಡನೇ ಅಖಬ ದಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಬೈಅತ್ ಮಾಡಿದ ಸ್ವಹಾಬಿಗಳು ಇವುಗಳನ್ನು ನಿರ್ಮಿಸಿದ್ದರು . ಅವುಗಳೆಂದರೆ 
1. ಮಸ್ಜಿದು ಬನೀ ಅಮ್ರ್ 
2. ಮಸ್ಜಿದು ಬನೀ ಸಾಯಿದ 
3. ಮಸ್ಜಿದು ಬನೀ ಅಬೀದ್
4. ಮಸ್ಜಿದು ಬನೀ ಸಲ್ಮಾ 
5. ಮಸ್ಜಿದು ಬನೀ ರಾತಿಬ್ 
6. ಮಸ್ಜಿದು ಬನೀ ಝರೀಖ್ 
7. ಮಸ್ಜಿದು ಬನೀ ಗಿಫ್ಫಾರ್ 
8. ಮಸ್ಜಿದು ಬನೀ ಅನ್ಲಮ್ 
೨. ಮಸ್ಜಿದ್ ಬನೀ ಜುಹೈನ 

*ಮಸ್ಜಿದು ಖುಬಾಅ್*

        ಮಸ್ಜಿದುನ್ನಬವಿ ಬಿಟ್ಟರೆ ಮದೀನಾದಲ್ಲಿ ಅತ್ಯಂತ ಶ್ರೇಷ್ಠತೆಯಿರುವ ಮಸೀದಿಯಾಗಿದೆ ಮಸ್ಜಿದು ಖುಬಾಅ್ , ಮದೀನಾದ ಪಶ್ಚಿಮ ಭಾಗದಲ್ಲಾಗಿದೆ ಈ ಮಸೀದಿ ಇರುವುದು . ಮದೀನಾ ದಲ್ಲಿ ಪ್ರವಾದಿವರ್ಯರ ದಿವ್ಯ ಹಸ್ತದಿಂದ ಮೊಟ್ಟ ಮೊದಲು ಅಡಿಪಾಯ ಹಾಕಲ್ಪಟ್ಟ ಮಸೀದಿ . ಪ್ರವಾದಿವರ್ಯರು ಮದೀನಾದ ಹೃದಯ ಭಾಗಕ್ಕೆ ತಲುಪುದಕ್ಕಿಂತ ಮುಂಚೆ ಖುಬಾಅ ಎಂಬ ಸ್ಥಳದಲ್ಲಿ ನಾಲ್ಕು ದಿನಗಳ ಕಾಲ ತಂಗಿದರು . ಈ ಸಮಯದಲ್ಲಾಗಿದೆ ಈ ಮಸೀದಿಗೆ ಅಡಿಪಾಯ ಹಾಕಿದ್ದು , ನಂತರ ಈ ಮಸೀದಿಯ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿದ ವರು ಬನೂ ಅಮ್ರ್ ಬಿನ್ ಔಫ್ ( ರ ) ರವರಾಗಿದ್ದಾರೆ . ಈ ಮಸೀದಿಗೆ ಇಸ್ಲಾಮಿನ ಇತಿಹಾಸದಲ್ಲಿ ಹಲವಾರು ಮಹತ್ವವಿದೆ . ಮದೀನಾದಲ್ಲಿ ಪ್ರವಾದಿವರ್ಯರ ದಿವ್ಯ ಹಸ್ತದಲ್ಲಿ ಶಿಲಾನ್ಯಾಸ ಮಾಡಲ್ಪಟ್ಟ ಈ ಮಸೀದಿ ಖರ್‌ಆನಿನಲ್ಲಿ ಪ್ರಸ್ತಾಪಿಸಲ್ಪಟ್ಟ ತಕ್ವಾದ ಮೇಲೆ ಸ್ಥಾಪಿತವಾದ ಮಸೀದಿಯಾಗಿದೆ ಎಂದು ಹಲವಾರು ವಿದ್ವಾಂಸರು ಹೇಳಿದ್ದಾರೆ . ಈ ಮಸೀದಿಯಲ್ಲಿ ನಮಾಜ್ ಮಾಡಿದರೆ ಉಮ್ರಾ ಮಾಡಿದ ಪ್ರತಿಫಲ ಲಭಿಸುತ್ತದೆ . ಉನೈಸ್ ಬಿನ್ ಹುಳೈರ್ ( ರ ) ರವರಿಂದ ವರದಿ ; ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ “ ಮಸ್ಜಿದು  ಖುಬಾಅ್ ನಲ್ಲಿ ನಮಾಜ್ ಮಾಡುವುದು ಉಮ್ರಾ ಮಾಡುವುದಕ್ಕೆ ಸಮಾನವಾಗಿದೆ . ” ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಪ್ರತಿ ಶನಿವಾರ ಈ ಮಸೀದಿಗೆ ಹೋಗಿ ನಮಾಜ್ ಮಾಡುತ್ತಿದ್ದರು . ಕೆಲವೊಮ್ಮೆ ವಾಹನದಲ್ಲಿ ಹೋಗುತ್ತಿದ್ದರು . ಇಲ್ಲದಿದ್ದರೆ ನಡೆದು ಕೊಂಡು ಹೋಗುತ್ತಿದ್ದರು . ಇದು ಖುಬಾಅ್  ಎಂಬ ಸ್ಥಳದಲ್ಲಿರುವ ಕಾರಣ ಇದಕ್ಕೆ ಮಸ್ಜಿದುಲ್  ಖುಬಾಅ್ ಎಂಬ ಹೆಸರು ಬಂದಿದೆ.

     *ಮುಂದುವರಿಯುವುದು*