ಮದೀನಾ ಮಹತ್ವ ಇತಿಹಾಸ ಅಧ್ಯಾಯ 30

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 30*🍃
         💜💜💜💜💜💜💜

 ❤️ *ಮದೀನಾ ಸಂದರ್ಶಕರ ಗಮನಕ್ಕೆ . . . '*

🌹🌹🌹🌹🌹🌹🌹🌹🌹🌹🌹  
             ಮದೀನಾ ' ಒಂದಲ್ಲ ಒಂದು ದಿನ ಅಲ್ಲಿಗೆ ತಲುಪಬೇಕು. ಪಾವನ ಮಣ್ಣನ್ನು ತುಟಿಗಳಿಂದ ಚುಂಬಿಸಬೇಕು. ಅಲ್ಲಿನ ವಾಯುವನ್ನು ಒಮ್ಮೆಯಾದರೂ ಉಚ್ಚಾಸ ಮಾಡಬೇಕು. ಹೀಗೆ ಬಯಕೆಗಳಿಲ್ಲದ ವಿಶ್ವಾಸಿ ಇರಲಾರ. ಅಲ್ಲಾಹನು ನಮಗೆ ಇಂತಹ ಸೌಭಾಗ್ಯ ಕರುಣಿಸಿದರೆ ಇಹ - ಪರ ವಿಜಯದ ಹಾದಿ ಖಂಡಿತ ಸುಗಮವಾಗುತ್ತದೆ. ಮದೀನಾ ಸಂದರ್ಶಿಸುವಾಗ ಹಲವಾರು ಶಿಷ್ಟಾಚಾರಗಳನ್ನು ಇಮಾಮರು ಕಲಿಸಿಕೊಟ್ಟಿದ್ದಾರೆ . 

1= ಈ ನಿಯ್ಯತ್ತು ಮರೆಯದಿರಿ:-     .
           ಪ್ರವಾದಿವರ್ಯರನ್ನು ಝಿಯಾರತ್ ಮಾಡಲು ಹೋಗುವಾಗ ಮಸ್ಜಿದುನ್ನಬವಿಯನ್ನು ಸಂದರ್ಶನ ಮಾಡುವ ಬಗ್ಗೆ ನಿಯ್ಯತ್ ಮಾಡಬೇಕು. ಯಾಕೆಂದರೆ ನಮಾಝ್ಗಾಗಿ ಯಾತ್ರೆ ಹೊರಡಲು ಪ್ರತ್ಯೇಕ ಪ್ರೇರಣೆ ನೀಡಲ್ಪಟ್ಟ ಮಸೀದಿಗಳಲ್ಲಿ ಒಂದಾಗಿದೆ ಇದು. ಈ ಯಾತ್ರೆಯಲ್ಲಿ ಅಲ್ಲಾಹನ ಸಾಮೀಪ್ಯಗಳಿಸುವ ಸಲುವಾಗಿ ಎಂಬ ಉದ್ದೇಶ ಕೂಡಾ ಇರಬೇಕು. 

2= ಮದೀನಾ ಹಾದಿಯಲ್ಲಿ ಸ್ವಲಾತ್ ಹೆಚ್ಚಿಸುವುದು:-                             .        ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಝಿಯಾರತ್ ಮಾಡಲು ಮದೀನಾಗೆ ಯಾತ್ರೆ ಹೊರಟರೆ ದಾರಿಯಲ್ಲಿ ಧಾರಾಳ ಸ್ವಲಾತ್ಸಲಾಮ್‌ಗಳು ಹೇಳಬೇಕು . ಮದೀನಾದ ಮರ ಮತ್ತು ಪರ್ವತಗಳನ್ನು ಹಾಗೂ ಹರವಿನ ವ್ಯಾಪ್ತಿಯನ್ನು ಕಂಡರೆ ಸ್ವಲಾತ್ ಹೇಳುವುದನ್ನು ಹೆಚ್ಚಿಸಬೇಕು. ಈ ಝಿಯಾರತ್ ಸ್ವೀಕೃತಿಗೊಳ್ಳಲು ಹಾಗೂ ಇಹ - ಪರ ಯಶಸ್ಸಿನ ಮಾರ್ಗ ಸುಗಮವಾಗಲು ಅಲ್ಲಾಹನಲ್ಲಿ ಪ್ರಾರ್ಥಿಸಬೇಕು. 

3= ಮದೀನಾ ಮಹತ್ವ ಮನ ತುಂಬಿರಲಿ :-
              ಮದೀನಾಗೆ ಯಾತ್ರೆ ಹೋಗುವಾಗ ಅಲ್ಲಿನ ಮಹತ್ವವನ್ನು ಆಗಾಗ ನೆನಪಿಸಬೇಕು . ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠತೆಯಿರುವ ಸ್ಥಳ , ಪುಣ್ಯ ಪ್ರವಾದಿವರ್ಯರನ್ನು ಜೀವನದಲ್ಲಿ ಕಾಣುವಾಗ ಯಾವ ರೀತಿ ಗಾಂಭೀರ್ಯತೆ ಇರುತ್ತದೆ ಅದೇ ರೀತಿ ಪಯಣ ಬೆಳೆಸಬೇಕು. - ಪವಿತ್ರ ಕುರ್‌ಆನ್ ಅವತೀರ್ಣಗೊಂಡ ಊರು , ಜಿಬೀಲ್ (ಅ) ಮುಂತಾದ ಪ್ರಮುಖ ಮಲಕುಗಳು ಓಡಾಡಿದ ಪ್ರದೇಶ , ಸ್ವಾಲಿಹ್ಗಳ ಆತ್ಮಗಳು ಸಂಗಮಿಸುವ ತಾಣ, ಪವಿತ್ರ ಇಸ್ಲಾಮ್ ಹಾಗೂ ಪ್ರವಾದಿವರ್ಯರ ಸುನ್ನತ್ ಜಗತ್ತಿನೆಲ್ಲೆಡೆ ಪಸರಿಸಿದ ಊರು ಹೀಗೆ ಹಲವಾರು ಮದೀನಾ ಮಹತ್ವಗಳ ಸರಮಾಲೆ ಮನದಲ್ಲಿ ಸದಾ ಗುಣುಗುಟ್ಟುತ್ತಿರಬೇಕು. 

4= ಮಸ್ಜಿದುನ್ನಬವಿಯ ಒಳಗೆ ಹೋಗುವಾಗ :- 
            ಮದೀನಾ ತಲುಪಿದ ನಂತರ ಮಸೀದಿಯ ಒಳಗೆ ಹೋಗುವ ಮೊದಲು ಹಲವಾರು ಶಿಷ್ಟಾಚಾರಗಳನ್ನು ಪಾಲಿಸಬೇಕು . ದಂತ ಮಜ್ಜನ ಮಾಡಿ ಬಾಯಿ ಶುಚೀಕರಣ ಮಾಡಬೇಕು .ಶರೀರದಲ್ಲಿರುವ ಮ್ಲೇಚ ವಸ್ತುಗಳನ್ನು ನೀಗಿಸಿ ಸ್ನಾನ ಮಾಡಿ ಒಳ್ಳೆಯ ಬಟ್ಟೆ ಧರಿಸಬೇಕು . ಅದೇ ರೀತಿ ಸುಗಂಧ ಹಚ್ಚುವುದು , ಬಿಳಿ ಬಟ್ಟೆ ಧರಿಸುವುದು ಸುನ್ನತ್ತಾಗಿದೆ .

 5= ದುರ್ವಾಸನೆಯುಕ್ತ ವಸ್ತುಗಳಿಂದ ದೂರವಿರಿ:-
            ಮದೀನಾ ಮಸೀದಿ ಯಾವಾಗಲು ಪರಿಮಳಯುಕ್ತವಾಗಿರಬೇಕು . ಯಾಕೆಂದರೆ ಅದು ಪ್ರವಾದಿವರ್ಯರ ಪಾವನ ಶರೀರದ ಪುಣ್ಯ ಸನ್ನಿಧಿಯದು. ಮಸೀದಿಯಲ್ಲಿ ಸುಗಂಧ ಮೂಲಕ ಪರಿಮಳ ಹೆಚ್ಚಿಸಲು ಪ್ರವಾದಿವರ್ಯರು ಪ್ರೇರೇಪಿಸಿದ್ದರು. ಅದರಿಂದ ಮದೀನಾ ಮಸೀದಿ ಯನ್ನು ಪ್ರವೇಶಿಸುವಾಗ ಬಾಯಿಯಲ್ಲಿ ದುರ್ವಾಸನೆ ಉಂಟು ಮಾಡುವ ನೀರುಳ್ಳಿಯಂತಹ ವಸ್ತುಗಳನ್ನು ತಿನ್ನಬಾರದು . 

6= ಮಸೀದಿಯೊಳಗೆ ಅವಸರ ಬೇಡ:-
             ಮದೀನಾ ಮಸೀದಿಯೊಳಗೆ ಬಹಳಷ್ಟು ಸಮಾಧಾನದಿಂದ ನಡೆಯಬೇಕು. ಅವಸರ ಮಾಡುವ ಮೂಲಕ ಗೌಜಿ - ಗದ್ದಲಕ್ಕೆ ಅವಕಾಶ ನೀಡಬಾರದ . ನಮಾಝಿನ ವೇಳೆ ಮೊದಲು ಸ್ವಪ್ಪ್ ಸಿಗಲಿ ಅಂತ ಓಡಾಡುವುದು ಕೂಡಾ ಸಲ್ಲದು . ಯಾಕೆಂದರೆ ಇಂತಹ ಪ್ರಕೃತಿ ಮದೀನಾ ಮಸೀದಿಯ ಮಹತ್ವಕ್ಕೆ ಧಕ್ಕೆ ತರುತ್ತದೆ. ಪುಣ್ಯ ಸನ್ನಿಧಿಯ ಗೌರವಕ್ಕೆ ಚ್ಯುತಿ ಉಂಟಾಗುತ್ತದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ “ ನಮಾಝ್ಗೆ ಇಖಾಮತ್ ಕೊಟ್ಟರೆ ನೀವು ನಮಾಝಿಗೆ ಸಮಾಧಾನದಿಂದ ನಡೆದುಕೊಂಡು ಹೋಗಿರಿ . ಅವಸರ ಪಡಬೇಡಿರಿ ” 7 . ಬೆಳಿಗ್ಗೆ ಬೇಗ ಹೋಗಿ ಮದೀನಾ ಝಿಯಾರತ್ ಮಾಡುವವರಿಗೆ ಬೆಳಗ್ಗೆ ಬೇಗ ಮಸ್ಜಿದುನ್ನಬವಿಯನ್ನು ಪ್ರವೇಶಿಸುವುದು ಸುನ್ನತಾಗಿದೆ . ಇದರಿಂದ ಹೆಚ್ಚು ಶ್ರೇಷ್ಟತೆಯಿರುವ ಒಂದನೇ ಸ್ವಪ್ಪ್ ಅಥವಾ ಮಿಂಬರ್ ಮತ್ತು ಹುಜ್ರತುಶ್ಶರೀಫ್‌ನ ನಡುವೆಯಿರುವ ರೌಳಾ ಶರೀಫ್‌ನಲ್ಲಿ ನಮಾಝ್ ಮಾಡಲು ಅವಕಾಶ ಸಿಗಬಹುದು . ಬರುವಾಗ ತಡವಾದರೆ ಹತ್ತಿರದಲ್ಲಿ ಸಿಕ್ಕಿದ ಸ್ಥಳದಲ್ಲಿ ಕೂರಬೇಕು. ಜನರ ಹೆಗಲನ್ನು ದಾಟಿ ಹೋಗಬಾರದು . ಒಳಗೆ ಬರುವ ಜನರಿಗೆ ತೊಂದರೆಯಾಗುವಂತೆ ಮಸೀದಿಯ ದ್ವಾರಗಳಲ್ಲಿ ಕೂರಬಾರದು . 

8= ಈ ಕಾಣಿಕೆ ಮರೆಯದಿರಿ :-
           ಮದೀನಾದ ಮಸ್ಜಿದುನ್ನಬವಿಯನ್ನು ಪ್ರವೇಶಿಸಿದರೆ ಎರಡು ರಕ್ಅತ್ ತಹಿಯ್ಯತ್ ನಮಾಜ್ ನಿರ್ವಹಿಸಬೇಕು. ರೌಳಾ ಶರೀಫಿನಲ್ಲಿ ಇದು ಸಾಧ್ಯವಾಗುವುದಾದರೆ ಅದಕ್ಕೆ ಶ್ರಮಿಸಬೇಕು . ಅಬೂ ಖತಾದತಿಸ್ಸಲ್ಮಾ ( ರ ) ರವರಿಂದ ವರದಿ ; ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ “ ನಮ್ಮಲ್ಲಿ ಯಾರಾದರೂ ಒಬ್ಬರು ಮಸೀದಿಗೆ ಪ್ರವೇಶಿಸಿದರೆ ಕೂರುವುದಕ್ಕಿಂತ ಮುಂಚೆ ಎರಡು ರಕ್ಅತ್ ನಮಾಜ್ ಮಾಡಲಿ ” ( ಬುಖಾರಿ ಮುಸ್ಲಿಂ )

    *ಮುಂದುವರಿಯುವುದು*