ಮದೀನಾ ಮಹತ್ವ ಇತಿಹಾಸ ಅಧ್ಯಾಯ 35








🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 35*🍃
         💜💜💜💜💜💜💜

 ❤️ *ನಾಲ್ಕನೇ ಶ್ರಮ*
🌹🌹🌹🌹🌹🌹🌹🌹🌹🌹
         ಮಹಾನರಾದ ಹಾರೂನ್ ಬಿನ್ ಉಮರ್ ( ರ ) ರವರು ತನ್ನ ತಂದೆಯಿಂದ ವರದಿ ಮಾಡುವ ಘಟನೆಯಾಗಿದೆ ಇದು . ಮದೀನಾದ ಹುಜ್ರತುಶ್ಶರೀಫಿನ ಸೇವಕರಾದ ಶಂಸುದ್ದೀನ್ ಮತ್ತು ಇವರು ಪರಸ್ವರ ಸಹಪಾಠಿಗಳಾಗಿದ್ದರು . ಸಜ್ಜನ ವ್ಯಕ್ತಿಯಾದ ಶಂಸುದ್ದೀನ್ ಸ್ವವಾಬು ಲುಮ್ತೀಯವರು ಮದೀನಾ ಮಸೀದಿಯ ಸೇವೆಯ ಜೊತೆಗೆ ಜನರಿಗೆ ಧಾರಾಳ ಒಳಿತುಗಳನ್ನು ಮಾಡುತಿದ್ದರು . ಮದೀನಾದ ಅಮೀರ್‌ನ ಆಸ್ಥಾನದಲ್ಲಿರುವ ಒಬ್ಬ ನನ್ನ ಆಪ್ತ ಸ್ನೇಹಿತನಾಗಿದ್ದ . ನನಗೇನು ಅಗತ್ಯ ಬಂದರೆ ರಾಜನಲ್ಲಿ ತಿಳಿಸಿ ಈಡೇರಿಸುತ್ತಿದ್ದ . ಹೀಗಿರಲು ಒಂದು ದಿನ ಸ್ನೇಹಿತ ಬಂದು ಈ ಮಹಾನುಭಾವರಲ್ಲಿ ಹೇಳಿದ . ಇಂದು ನೀವು ಗಂಭೀರ ಕಾರ್ಯವೊಂದು ಮಾಡಬೇಕಾಗುತ್ತದೆ . ಯಾವ ಕಾರ್ಯ ? ಮಹಾನುಭಾವರು ಆಶ್ಚರ್ಯದಿಂದ ಕೇಳಿದರು . ಆಗ ಆತ ಈ ವಿಷಯವನ್ನು ವಿವರಿಸತೊಡಗಿದ . ಕೆಲವರು ರಾಜನ ಬಳಿಗೆ ಬಂದು ಧಾರಾಳ ಕಪ್ಪ ಕಾಣಿಕೆಗಳನ್ನು ನೀಡಿ ರಾಜನ ಮನವೊಲಿಸಿದ್ದಾರೆ . ಅಬೂಬಕರ್ ಸಿದ್ದೀಕ್ ( ರ ) ಹಾಗೂ ಉಮರ್ ( ರ ) ರವರ ಪಾವನ ಶರೀರವನ್ನು ಹೊರತೆಗೆಯಲಿರುವ ಅವರ ಬೇಡಿಕೆಗೆ ರಾಜ ಸಮ್ಮತಿಸಿದ್ದಾನೆ . ರಾಜನ ಆಜ್ಞೆ ಕ್ಷಣ ಮಾತ್ರದಲ್ಲಿ ನಿಮ್ಮನ್ನು ತಲುಪಬಹುದು . ವಿಷಯ ತಿಳಿದಾಗ ಮಹಾನುಭಾವರು ಚಿಂತಾಕ್ರಾಂತರಾದರು . ರಾಜನ ದೂತ ಬಂದು ಈ ಮಹಾನುಭಾವರನ್ನು ಅರಮನೆಗೆ ಆಹ್ವಾನಿಸಿದನು . ಅರಮನೆಗೆ ಹೋದ ಇವರಲ್ಲಿ ರಾಜ ಹೇಳತೊಡಗಿದ “ ಇಂದು ರಾತ್ರಿ ಕೆಲವರು ಬಂದು ಮಸೀದಿಯ ಬಾಗಿಲು ಬಡಿಯಬಹುದು . ಅವರಿಗೆ ನೀನು ಬಾಗಿಲು ತೆರೆದು ಕೂಡಬೇಕು . ಅವರೇನು ಮಾಡಿದರೂ ನೀನು ವಿರೋಧಿಸಲು ಹೋಗಬೇಡ ” ರಾಜಾಜ್ಞೆಯಾದ ಕಾರಣ ಪಾಲಿಸದೆ ನಿರ್ವಾಹವಿಲ್ಲ . ತಲೆಯಾಡಿಸಿ ಮಸ್ಜಿದುನ್ನಬವಿಯ ಸೇವಕರಾದ ಇವರು ಹೊರಬಂದರು . ಅಂದು ದಿನವಿಡೀ ಹುಜ್ರತುಶ್ಶರೀಫಿನಲ್ಲಿ ಕೂತು ಅಳತೊಡಗಿದರು . ಏನು ಮಾಡುವುದು .. ? ಜನರಲ್ಲಿ ಯಾರಿಗೆ ಕೂಡಾ ಈ ವಿಷಯ ಗೊತ್ತಿಲ್ಲ . ಈ ಬಗ್ಗೆ ಚಿಂತಿಸುತ್ತಾ ಅವರ ಮನ ಗೊಂದಲದ ಗೂಡಾಗಿ ಮಾರ್ಪಾಡು ಹೊಂದಿತ್ತು . ಅಂದು ರಾತ್ರಿಯಾಯಿತು . ಇಶಾ ನಮಾಜಿನ ನಂತರ ಜನರು ತಮ್ಮ ಮನೆಗೆ ಹೊರಟು ಹೋದರು . ಮಸ್ಜಿದುನ್ನಬವಿಯ ಎಲ್ಲಾ ಬಾಗಿಲುಗಳನ್ನು ಮುಚ್ಚಲಾಯಿತು . ಮಧ್ಯರಾತ್ರಿ ಮಸೀದಿಯ ಬಾಬುಸ್ಸಲಾಮಿನ ಹತ್ತಿರ ಬಾಗಿಲು ಬಡಿಯುವ ಶಬ್ದ ಕೇಳಿತು . ಗತ್ಯಂತರವಿಲ್ಲದೆ ಮಹಾನುಭಾವರು ಬಾಗಿಲು ತೆರೆದರು . ಒಬ್ಬೊಬ್ಬರಾಗಿ ಒಳ ಬರತೊಡಗಿದರು ಮಹಾನುಭಾವರು ಎಣಿಸಿ ನೋಡಿದಾಗ ಬರೋಬ್ಬರಿ 40 ಮಂದಿ ಈ ಸಂಘದಲ್ಲಿದ್ದರು . ಅವರ ಕೈಯಲ್ಲಿ ಪಿಕ್ಕಾಸು - ಹಾರೆ ಮುಂತಾದ ಅಗೆಯಲು ಬೇಕಾದ ಆಯುಧಗಳಿತ್ತು . ಹಜ್ರತುಶ್ಶರೀಫನ್ನು ಲಕ್ಷ್ಮವಾಗಿಸಿ ನಡೆಯುತ್ತಿದ್ದಾರೆ . ಅವರು ಮಿಂಬರಿನ ಹತ್ತಿರ ತಲುಪಿದಾಗ ಅವರೆಲ್ಲರನ್ನು ಭೂಮಿ ನುಂಗಿ ಹಾಕಿತು . ಜೊತೆಗಿದ್ದ ಆಯುಧಗಳು ಕೂಡಾ ಭೂಮಿಯ ಗರ್ಭ ಸೇರಿತು . ಯಾವುದೇ ಕುರುಹುಗಳು ಅಲ್ಲಿ ಕಾಣಸಿಗಲಿಲ್ಲ . ಹಜ್ರತುಶ್ಶರೀಫನ್ನು ಅಗೆಯಲು ಹೋದವರ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ರಾಜನಿಗೆ ಆಶ್ಚರ್ಯವಾಯಿತು . ಮಹಾನುಭಾವರನ್ನು ಕರೆದ ರಾಜ ವಿಚಾರಿಸ ತೊಡಗಿದ ಓ ಸ್ವಹಾಬು ... ನಿನ್ನೆ ರಾತ್ರಿ ಮಸೀದಿಗೆ ಬಂದ ಜನರು ಎಲ್ಲಿಹೋದರು ? ನಡೆದ ಘಟನೆಯನ್ನು ವಿವರವಾಗಿ ವಿವರಿಸಿದಾಗ ರಾಜನ ನಾಲಗೆ ಅಲುಗಾಡುತ್ತಿಲ್ಲ .
  
     *ಮುಂದುವರಿಯುವುದು*