ಸಂಗ್ರಹ: ಯಾಸೀನ್ ನಾವೂರ್ 🍃ಅಧ್ಯಾಯ 13

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 13*🍃
         💜💜💜💜💜💜💜

 ❤️ *ಮದೀನಾದಲ್ಲಿ ಇಸ್ಲಾಮಿನ ಪ್ರಾರಂಭ* 
 ❤️ *ಒಂದನೇ ಅಖಬ ಬೈಅತ್ !*
🌹🌹🌹🌹🌹🌹🌹🌹🌹🌹🌹
      ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು 40ನೇ ವರ್ಷದಲ್ಲಿ ಪ್ರವಾದಿತ್ವವನ್ನು ಪಡೆದರು. ಈ ಪ್ರವಾದಿತ್ವದ ಮೊದಲ ಮೂರು ವರ್ಷ ರಹಸ್ಯ ಪ್ರಭೋಧನೆಯಾಗಿದೆ ಪ್ರವಾದಿವರ್ಯರು ನಡೆಸಿದ್ದು. ಸಂಬಂಧಿಕರು ಹಾಗೂ ಪ್ರಮುಖ ವ್ಯಕ್ತಿಗಳನ್ನು ಖಾಸಗಿ ಭೇಟಿಯಾಗಿ ಇಸ್ಲಾಮಿನ ಬಗ್ಗೆ ತಿಳಿಸಿ ಕೊಡುತ್ತಿದ್ದರು. ಪ್ರವಾದಿತ್ವದ 4ನೇ ವರ್ಷ ಬಹಿರಂಗ ಧರ್ಮ ಪ್ರಭೋಧನೆಗಾಗಿ ರಂಗಕ್ಕಿಳಿದರು. ಜನಜಂಗುಳಿ ಇರುವ ಸ್ಥಳಗಳಲ್ಲಿ ಇಸ್ಲಾಮಿನ ಸಂದೇಶಗಳನ್ನು ಜನರಿಗೆ ತಿಳಿಸುತ್ತಿದ್ದರು. ಹಾಗೆ ಪ್ರವಾದಿತ್ವದ 11ನೇ ವರ್ಷದ ಹಜ್ ಸಂಭ್ರಮದಲ್ಲಿದ್ದಾರೆ ಮಕ್ಕಾದ ಜನತೆ. ಜನ ಸಾಗರ ಸೇರುವ ಕಾರಣ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಧರ್ಮ ಪ್ರಬೋಧನೆಗೆ ಆ ಕಡೆ ಬಂದಿದ್ದರು. ಮದೀನಾದಿಂದ ಬಂದ ಖಝ್ರಜ್ ಗೋತ್ರದ ಆರು ಜನರನ್ನು ಕಾಣಲು ಸಾಧ್ಯವಾಯಿತು. ಸುವರ್ಣವಕಾಶ ಎಂಬಂತೆ ಅವರನ್ನು ಇಸ್ಲಾಮಿನೆಡೆಗೆ ಆಹ್ವಾನಿಸಿದರು. ಪವಿತ್ರ ಖುರ್‌ಆನಿನ ಶ್ಲೋಕಗಳನ್ನು ಓದಿಕೊಟ್ಟರು. ಪ್ರವಾದಿವರ್ಯರ ಮಾತು ಕೇಳಿದಾಗ ಅವರ ಮನ ಇತಿಹಾಸದೆಡೆಗೆ ಓಡಿತು. ಹೌದು . . . ! ಯಹೂದಿಗಳೊಂದಿಗೆ ಸಂಘರ್ಷ ಉಂಟಾದಾಗ ಅವರು ಹೇಳುತ್ತಿದ್ದರು. “ಪ್ರವಾದಿಯೋ ರ್ವರು ಬರುತ್ತಾರೆ. ಅವರೊಂದಿಗೆ ನಮ್ಮನ್ನು ಸರ್ವನಾಶ ಮಾಡುತ್ತಾರೆ” ಪರಸ್ಪರ ಹೇಳಿಕೊಂಡರು. ಯಹೂದಿಗಳೊಂದಿಗಿಂತ ಮುಂಚೆ ಪ್ರವಾದಿಯನ್ನು ನಾವು ಭೇಟಿಯಾಗುವ ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ ಎಂದು ಇಸ್ಲಾಂ ಸ್ವೀಕರಿಸಿದರು. ಯಹೂದಿಗಳ ಈ ಬೆದರಿಕೆ ಇವರನ್ನು ಬೇಗ ಇಸ್ಲಾಂ ಸ್ವೀಕರಿಸುವಂತೆ ಮಾಡಿತು. ಇವರು ಮದೀನಾಗೆ ತೆರಳಿ ಇಸ್ಲಾಮಿನ ಪ್ರಭೋಧನೆಯಲ್ಲಿ ಸಕ್ರಿಯರಾದರು. ಹಾಗೆ ಮದೀನಾದಲ್ಲಿ ಪವಿತ್ರ ಇಸ್ಲಾಂ ಎಂಬ ಪುಟ್ಟ ಸಸಿ ಬೆಳೆಯ ತೊಡಗಿತು. ಪ್ರವಾದಿವರ್ಯರು ಭೇಟಿಯಾದ ಆರು ಜನರು ಪಟ್ಟಿ ಈ ರೀತಿ ಇದೆ.
1=ಅಸ್ಅದ್ ಬಿನ್ ಝರಾರ(ರ.ಅ) 2=ಔಫ್ ಬಿನಿಲ್ ಹಾರಿಸ್ (ರ.ಅ) 3=ಖುತೈಬತ್ ಬಿನ್ ಆಮಿರ್(ರ.ಅ) 4=ರಾಫಿಅ್ ಬಿನ್ ಮಾಲಿಕ್ (ರ.ಅ)
5=ಅಖಬತ್ ಬಿನ್ ಆಮಿರ್ (ರ.ಅ)
6=ಜಾಬಿರ್ ಬಿನ್ ಅಬ್ದಿಲ್ಲಾಹಿ(ರ.ಅ)

*ಒಂದನೇ ಅಖಬ ಬೈಅತ್ !*
......................................................
 ಮದೀನಾದ ಮೂಲೆ ಮೂಲೆಗೆ ಇಸ್ಲಾಂ ವ್ಯಾಪಿಸಿತು. ಅನ್ಸಾರಿ ಮನೆಗಳಲ್ಲಿ ನಿತ್ಯ ಚರ್ಚಾ ವಿಷಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು. ಪ್ರವಾದಿತ್ವದ 12ನೇ ವರ್ಷ ಮಕ್ಕಾದಲ್ಲಿ ಹಜ್ ಸಂಭ್ರಮಕ್ಕೆ ವೇದಿಕೆ ಸಜ್ಜಾಗುತ್ತಿದೆ. ಮದೀನಾದಿಂದ 12 ಜನರು ಬಂದರು. ಅವರಲ್ಲಿ 10 ಜನರು ಖಝ್ರಜ್ ಗೋತ್ರದವರು ಹಾಗೂ ಇಬ್ಬರು ಔಸ್ ಗೋತ್ರದವರು. ಅವರು ಪ್ರವಾದಿವರ್ಯರೊಂದಿಗೆ ಬೈಅತ್ ಮಾಡಿದರು. ಅಂದರೆ ಅಲ್ಲಾಹನಿಗೆ ಯಾರನ್ನೂ ಭಾಗಿದಾರರನ್ನಾಗಿ ಮಾಡುವುದಿಲ್ಲ .ಕಳ್ಳತನ ನಡೆಸುವುದಿಲ್ಲ. ವ್ಯಭಿಚಾರ ಮಾಡುವುದಿಲ್ಲ. ಮಕ್ಕಳನ್ನು ಕೊಲ್ಲುವುದಿಲ್ಲ. ಸುಳ್ಳು ಸಾಕ್ಷಿಯನ್ನು ತರುವುದಿಲ್ಲ. ಒಳಿತಿನ ವಿರುದ್ಧ ಚಳುವಳಿ ಇಲ್ಲ. ಈ ಕಾರ್ಯಗಳನ್ನು ಸಂಪೂರ್ಣವಾಗಿ ನೆರವೇರಿಸಿದರೆ ಸ್ವರ್ಗ ಖಚಿತ. ಇಲ್ಲದಿದ್ದರೆ ನಿಮ್ಮ ಕಾರ್ಯ ಅಲ್ಲಾಹನಿಗೆ ಬಿಟ್ಟದ್ದು ಎಂದಾಗಿತ್ತು ಬೈಅತಿನ ಸಾರಾಂಶ. ಇಸ್ಲಾಮಿನ ಸಂದೇಶ ತಿಳಿಸಲು , ಖರ್‌ಆನ್ ಕಲಿಸಲು ಪ್ರವಾದಿವರ್ಯರು ಮುಸ್ಅಬ್ ಬಿನ್ ಉಮೈರ್ (ರ.ಅ) ರವರನ್ನು ಅವರ ಜೊತೆ ಕಳುಹಿಸಿ ಕೊಟ್ಟರು. ಮದೀನಾದಲ್ಲಿ ಅಸ್ಅದ್ ಬಿನ್ ಝುರಾರ(ರ.ಅ) ರವರ ಮನೆಯಲ್ಲಿ ಮುಸ್ಅಬ್ (ರ.ಅ)ರವರ ವಾಸ. ಜನರನ್ನು ಇಸ್ಲಾಮಿನೆಡೆಗೆ ಆಹ್ವಾನಿಸುವ ಕಾರ್ಯವನ್ನು ಚುರುಕುಗೊಳಿಸಿದರು. ಇವರ ಮೂಲಕ ಹಲವಾರು ಜನರು ಇಸ್ಲಾಂ ಅಂಗೀಕರಿಸಿದರು. ಬನೂ ಅಬ್ದುಲ್ ಅಶ್ಹಲ್ ಗೋತ್ರದ ನೇತಾರರಾದ ಸಅದ್ ಬಿನ್ ಮುಆದ್ ಹಾಗೂ ಅಸ್ಯದ್ ಬಿನ್ ಹುಳ್ಯರ್‌ರವರು ಕೂಡಾ ಮುಸ್ಲಿಮರಾದರು. ಇಬ್ಬರು ಇಸ್ಲಾಂ ಸ್ವೀಕರಿಸಿದ್ದರಿಂದ ಆ ಗೋತ್ರದ ಸಿಂಹಪಾಲು ಜನರು ಇಸ್ಲಾಮಿಗೆ ಬಂದರು. ಹಾಗೆ ಮದೀನಾದ ಅನ್ಸಾರಿಗಳ ಮನೆಯಲ್ಲಿ ಕನಿಷ್ಠ ನಾಲ್ಕೈದು ಮುಸ್ಲಿಮರಾದರೂ ಇರುತ್ತಿದ್ದರು. ಪ್ರತಿ ಮನೆಯಲ್ಲೂ ಚರ್ಚಾ ವಿಷಯ ಇಸ್ಲಾಂ ಮಾತ್ರವಾಗಿತ್ತು.

     *ಮುಂದುವರಿಯುವುದು*

Follow this link to join my WhatsApp group: https://chat.whatsapp.com/DjCbCGNiyBW7StPEIOqUnO

ಇನ್ನು ಮುಂದೆ *"ಮದೀನಾ ಮಹತ್ವ ಇತಿಹಾಸ"* ಲೇಖನಗಳು ಈ ಗ್ರೂಪಿನಲ್ಲಿ..

💞صَلَّى اللَّهُ عَلٰى مُحَمَّدْ صَلَّى اللَّهُ عَلَيهِ وَسَلَّم🌹