ಸಂಗ್ರಹ: ಯಾಸೀನ್ ನಾವೂರ್. / ಅಧ್ಯಾಯ 6

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 6*🍃
         💜💜💜💜💜💜💜

 ❤️ *ಮದೀನಾದ ಖರ್ಜೂರ.. ಅಜ್ವಾ*
 ❤️ *ಮದೀನಾ: ಈಮಾನಿಗೆ ಸುರಕ್ಷಿತ ತಾಣ*
 ❤ *ಮರಣ ಮದೀನಾದಲ್ಲಾಗಲಿ . .*
🌹🌹🌹🌹🌹🌹🌹🌹🌹🌹
            ಮದೀನಾದ ಪ್ರತಿಯೊಂದಕ್ಕೂ ವಿಶೇಷ ಮಹತ್ವವಿದೆ. ಅಂತೆಯೇ ಮದೀನಾದಲ್ಲಿ ಬೆಳೆ ಯುವ ಖರ್ಜೂರದ ಮಹತ್ವ ಹದೀಸಿನಲ್ಲಿ ಕಾಣಸಿಗುತ್ತದೆ. ಮದೀನಾದ ಖರ್ಜೂರದ ಒಂದು ವಿಭಾಗವಾಗಿದೆ ಅಜ್ವಾ ಎನ್ನುವುದನ್ನು ಹದೀಸಿನ ಕಠಿಣ ಶಬ್ದಗಳನ್ನು ವಿವರಿಸುವ ಗ್ರಂಥವಾದ ಇಬ್ನ್ ಆಸೀರ್ (ರ) ರವರು ತನ್ನ ಅನ್ನಿಯಾ ಎಂಬ ಗ್ರಂಥದಲ್ಲಿ ಸ್ಪಷ್ಟಪಡಿಸಿದ್ದಾರೆ . ಈ ಅಜ್ವಾ ಖರ್ಜೂರಕ್ಕೆ ವಿಶೇಷ ಶಕ್ತಿಯನ್ನು ಅಲ್ಲಾಹನು ಕರುಣಿಸಿದ್ದಾನೆ.ಅದು ಮಾಟ ಮತ್ತು ವಿಷವನ್ನು ತಡೆಯುತ್ತದೆ. ಭೀಕರ ರೋಗಗಳಿಂದ ಮುಕ್ತಿ ಈ ಖರ್ಜೂರವನ್ನು ತಿನ್ನುವವರಿಗೆ ಲಭಿಸುತ್ತದೆ. ಸಅದ್ ಬಿನ್ ಅಬೀವಕಾಸ್ (ರ) ರವರಿಂದ ವರದಿ; “ಪ್ರತಿದಿನ ಬೆಳಿಗ್ಗೆ ಏಳು ಅಜ್ವಾ ಖರ್ಜೂರ ತಿಂದರೆ ಅಂದು ಆತನಿಗೆ ಮಾಟ ಹಾಗೂ ವಿಷ ಫಲಿಸದು”( ಬುಖಾರಿ, ಮುಸ್ಲಿಂ) 

*ಮದೀನಾ: ಈಮಾನಿಗೆ ಸುರಕ್ಷಿತ ತಾಣ*
..................................................
        ಓರ್ವ ಮುಸ್ಲಿಂ ಅತಿ ಜಾಗರೂಕತೆಯಿಂದ ಕಾಪಾಡಬೇಕಾದದ್ದು ಆತನ ಈಮಾನ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಓರ್ವ ವಿಶ್ವಾಸಿಯ ಮಟ್ಟಿಗೆ ಈಮಾನ್ ಎಂಬುವುದು ಆತನ ಜೀವಕ್ಕಿಂತ ಅತ್ಯಮೂಲ್ಯ. ಕಾರಣ ಆತನ ಪಾರಲೌಕಿಕ ಯಶಸ್ಸು ಈಮಾನಿನಿಂದಾಗಿದೆ. ಈಮಾನಿನ ಸುರಕ್ಷಿತ ತಾಣ ಪವಿತ್ರ ಮದೀನಾ. ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದಾರೆ “ಖಂಡಿತವಾಗಿಯು ವಿಶ್ವಾಸವೆಂಬುವುದು ಮದೀನಾದತ್ತ ಹಿಂದಿರುಗಲು ತವಕಿಸುತ್ತಿರುತ್ತದೆ. ಹಾವು ತನ್ನ ಬಿಲಕ್ಕೆ ಹಿಂದಿರುಗಲು ಹವಣಿಸುತ್ತಿರುವಂತೆ ಇಲ್ಲಿ ಈಮಾನ್ ಮದೀನಾಕ್ಕಾಗಿ ತವಕಿಸುತ್ತಿರುತ್ತದೆ ಎಂದರೆ ಹೃದಯದಲ್ಲಿ ಈಮಾನಿರುವ ಜನರು ಸದಾ ಮದೀನಾದೆಡೆಗೆ ಹಾತೊರೆಯುತ್ತಿರುತ್ತಾರೆ ಎಂದಾಗಿದೆ ಇಮಾಮರ ಅಭಿಮತ.
            ಹಾವು ಬಿಲದೆಡೆಗೆ ಮರಳಲು ಹವಣಿಸುತ್ತಿರುತ್ತದೆ ಎಂದರೆ ಆ ಹಾವು ಆಹಾರಕ್ಕಾಗಿ ಬಿಲದಿಂದ ಹೊರಬರುತ್ತದೆ. ಅಗತ್ಯ ಪೂರೈಕೆಯ ನಂತರ ಆದಷ್ಟು ಬೇಗ ಬಿಲದೆಡೆಗೆ ಮರ ಳುತ್ತದೆ. ಇಲ್ಲದಿದ್ದರೆ ಹೊರಗಡೆ ಜನರು ಹೊಡೆದು ಸಾಯಿಸಬಹುದು. ಮುಂಗುಸಿಗಳ ಆಹಾರವಾಗಬಹುದು. ಅಂದರೆ ಹಾವಿನ ಸುರಕ್ಷಿತ ತಾಣ ಅದರ ಬಿಲ. ಅಂದಹಾಗೆ ಈಮಾನಿನ ಸುರಕ್ಷಿತ ತಾಣ ಮದೀನಾ , ಮದೀನಾದ ಸದಾ ನೆನಪು, ಪ್ರವಾದಿವರ್ಯರ ಮೇಲೆ ಸ್ವಲಾತ್, ಮದೀನಾದಲ್ಲಿರುವ ಪ್ರವಾದಿವರ್ಯರ ಖಬ್‌ರ್ ಸಂದರ್ಶನ ಮುಂತಾದ ಮದೀನಾ ಸಂಬಂಧಿತ ಕಾರ್ಯಗಳು ಈಮಾನಿಗೆ ನವಚೈತನ್ಯವನ್ನು ನೀಡುತ್ತದೆ. ಪ್ರವಾದಿಗಳ ಕಾಲದಲ್ಲಿ ಮದೀನಾಕ್ಕೆ ಹೋದವರು ಪುಣ್ಯ ಪ್ರವಾದಿಯನ್ನು ಕಂಡು 
'ಸ್ವಹಾಬಿ' ಎಂಬ ಅತ್ಯುನ್ನತ ಪದವಿಯನ್ನು ಪಡೆದಿದ್ದಾರೆ. ಅನಂತರ ಮದೀನಾದಲ್ಲಿರುವ ಪ್ರವಾದಿವರ್ಯರ ಖಬ್ರನ್ನು ಸಂದರ್ಶಿಸಿದವರು ನವ ಅನುಭೂತಿಯನ್ನು ಪಡೆಯುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಈಮಾನಿಗೆ ಎಲ್ಲಾ ವಿಧದ ಸುರಕ್ಷಿತತೆ ಮದೀನಾದಲ್ಲಿ ಲಭ್ಯವಿದೆ. ಈಮಾನಿನೊಂದಿಗೆ ಚೆಲ್ಲಾಟವಾಡುವ ದಜ್ಜಾಲ್ ಮದೀನಾದ ವ್ಯಾಪ್ತಿಯೊಳಗಿರುವವರ ಈಮಾನನ್ನು ಕಿಂಚಿತ್ ಕದಲಿಸಲು ಸಾಧ್ಯವಿಲ್ಲ . 

*ಮರಣ ಮದೀನಾದಲ್ಲಾಗಲಿ . .*
.................................................. 
  
         ಮದೀನಾ ಸೌಭಾಗ್ಯದ ಊರು. ಇಹಪರ ವಿಜಯಕ್ಕೆ ಸುಗಮ ಹಾದಿ ಮದೀನಾ. ಮದೀನಾ ನಿವಾಸಿಗಳು ಭಾಗ್ಯವಂತರು. ಪುಣ್ಯ ಭೂಮಿಯಲ್ಲಿ ಜೀವಿಸಲು ಅವಕಾಶ ಲಭಿಸಿದ ಅನುಗ್ರಹೀತರು. ಮದೀನಾದಲ್ಲಿ ಮರಣ ಹೊಂದಿದರೆ ಪರಲೋಕದ ಹಾದಿ ಸುಗಮಗೊಳ್ಳುತ್ತದೆ. ಮದೀನಾದಲ್ಲಿ ಮರಣ ಹೊಂದಲು ಹದೀಸಿನಲ್ಲಿ ಪ್ರತ್ಯೇಕ ಪ್ರೇರಣೆ ಕೂಡಾ ಇದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ “ಯಾರಿಗಾದರು ಮದೀನಾದಲ್ಲಿ ಮರಣ ಹೊಂದಲು ಸಾಧ್ಯವಾದರೆ ಹಾಗೆ ಮಾಡಲಿ. ಮದೀನಾದಲ್ಲಿ ಮರಣ ಹೊಂದಿದವರಿಗೆ ನಾನು ಪ್ರತ್ಯೇಕ ಶಿಫಾರಸ್ಸು ಮಾಡುವೆನು ”ಆದ್ದರಿಂದ ವಿದ್ವಾಂಸರು ಹೇಳಿದ್ದಾರೆ“ ಅತ್ಯುತ್ತಮ ಮರಣ ಮದೀನಾದಲ್ಲಿ ಮರಣ ಹೊಂದುವುದು" ಎರಡನೇ ಖಲೀಫಾ ಉಮರುಲ್ ಫಾರೂಖ್ (ರ) ರವರು ಮರಣ ಮದೀನಾದಲ್ಲಾಗಲು ಪ್ರಾರ್ಥಿಸುತ್ತಿದ್ದರು“ ಅಲ್ಲಾಹನೇ ನಿನ್ನ ಮಾರ್ಗದಲ್ಲಿ ನನ್ನನ್ನು ಹುತಾತ್ಮನಾಗಿಸು. ನನ್ನ ಮರಣ ನಿನ್ನ ರಸೂಲರ ಊರಿನಲ್ಲಿ ಮಾಡು” ಉಮರ್ (ರ) ರವರ ಪುತ್ರಿ ಹಫ್ಸಾ (ರ) ರವರಿಂದ ವರದಿ; ಉಮರ್ (ರ) ರವರು ಹೇಳುವುದಾಗಿ ನಾನು ಕೇಳಿದ್ದೇನೆ “ಅಲ್ಲಾಹನೆ ನಿನ್ನ ಮಾರ್ಗದಲ್ಲಿ ನನ್ನನ್ನು ಹುತಾತ್ಮನಾಗಿಸು. ಪ್ರವಾದಿವರ್ಯರ ಊರಲ್ಲಿ ಮರಣವನ್ನು ಕರುಣಿಸು” ಆಗ ನಾನು ಕೇಳಿದೆ ಇವೆರಡು ಹೇಗೆ ಉಂಟಾಗುತ್ತದೆ. ? ಉಮರ್ ( ರ ) ರವರು ಹೇಳಿದರು “ಅಲ್ಲಾಹನು ಇಚ್ಚಿಸಿದರೆ ಇದು ನಡೆಯುತ್ತದೆ ” ಅಲ್ಲಾಹನು ಉಮರ್ (ರ) ರವರ ದುಆಗೆ ಉತ್ತರ ನೀಡಿದನು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮಿಹ್ರಾಬಿನಲ್ಲಿ ಶಹೀದಾದರು. ಸುಬಹ್ ನಮಾಜ್ ನಿರ್ವಹಿಸುತ್ತಿರುವಾಗ ಮುಗೀರತು ಬಿನ್ ಶುಲ್ಬ ( ರ ) ಎಂಬವರ ದಾಸ ಅಬೂ ಲುಅತ್(()))ಎಂಬ ಮಜೂಸಿ ವಿಷದಲ್ಲಿ ಮುಳುಗಿಸಿದ ಖಡ್ಡದಲ್ಲಿ ತಿವಿದ ಕಾರಣ ವಫಾತ್ ಆದರು. ಜೊತೆಗೆ ಮದೀನಾದಲ್ಲಿ ಮರಣವಾಗಬೇಕೆಂಬ ದೀರ್ಘ ಕಾಲದ ಬಯಕೆ ಸಾಕ್ಷಾತ್ಕಾರಗೊಂಡಿತು. ಅಲ್ಲಾಹನು ನಮಗೂ ಕೂಡಾ ಮದೀನಾದಲ್ಲಿ ಮರಣ ಕರುಣಿಸಲಿ. ಆಮೀನ್. 

    *ಮುಂದುವರಿಯುವುದು*


Follow this link to join my WhatsApp group: https://chat.whatsapp.com/DjCbCGNiyBW7StPEIOqUnO

ಇನ್ನು ಮುಂದೆ *"ಮದೀನಾ ಮಹತ್ವ ಇತಿಹಾಸ"* ಲೇಖನಗಳು ಈ ಗ್ರೂಪಿನಲ್ಲಿ..

💞صَلَّى اللَّهُ عَلٰى مُحَمَّدْ صَلَّى اللَّهُ عَلَيهِ وَسَلَّم🌹