ಮದೀನಾ ಮಹತ್ವ ಇತಿಹಾಸ ಅಧ್ಯಾಯ 25

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 25*🍃
         💜💜💜💜💜💜💜

 ❤️ *ಮದೀನಾದ ಮಿಂಬರ್*
 ❤️ *ಇತಿಹಾಸ ಪುಟದಲ್ಲಿ ಮಿಂಬರ್*
🌹🌹🌹🌹🌹🌹🌹🌹🌹🌹🌹
        ಮದೀನಾದ ಮಸೀದಿಯ ಮತ್ತೊಂದು ಪ್ರಧಾನ ಕೇಂದ್ರವಾಗಿದೆ ಪ್ರವಾದಿವರ್ಯರ ಮಿಂಬರ್. ಪ್ರವಾದಿವರ್ಯರು ಖರ್ಜೂರದ ಮರದ ತುಂಡಿನ ಮೇಲೆ ಋತುಬ ಹಾಗೂ ಇತರ ಭಾಷಣಗಳನ್ನು ಮಾಡುತ್ತಿದ್ದರು . ಕಾಲ ಕ್ರಮೇಣ ಅದರ ಮೇಲೆ ನಿಲ್ಲುವುದು ತ್ರಾಸದಾಯಕವಾದಾಗ ಮಿಂಬರನ್ನು ನಿರ್ಮಿಸಲಾಯಿತು . ಪ್ರವಾದಿವರ್ಯರು ನಮಾಝ್ ಮಾಡುವ ಸ್ಥಳದ ಪಶ್ಚಿಮ ಭಾಗದಲ್ಲಿ ಇದನ್ನು ಸ್ಥಾಪಿಸಲಾಯಿತು. " ಮಿಂಬರ್ ನಿರ್ಮಾಣದ ಕುರಿತು ಇಮಾಂ ಬುಖಾರಿ (ರ) ರವರಿಂದ ವರದಿ ಮಾಡಲ್ಪಟ್ಟ ಹದೀಸ್ ಹೀಗಿದೆ “ ಪ್ರವಾದಿವರ್ಯರು ಜುಮುಅ ದಿನದಂದು ಮರದ ತುಂಡಿನ ಮೇಲೆ ನಿಂತಿದ್ದರು. ಅನ್ಸಾರಿಗಳಲ್ಲಿನ ಓರ್ವ ಮಹಿಳೆ ಬಂದು ಕೇಳಿದರು ” ಪ್ರವಾದಿವರ್ಯರೆ . . . ತಮಗೊಂದು ಮಿಂಬರನ್ನು ನಿರ್ಮಿಸಲೇ . . . ? ನನಗೊಬ್ಬ ಬಡಗಿಯಾದ ಮಗನಿದ್ದಾನೆ . “ ನೀವು ಇಚ್ಚಿಸುವುದಾದರೆ ಮಾಡಿ ” ಎಂದು ಪ್ರವಾದಿವರ್ಯರು ಸಮ್ಮತಿ ನೀಡಿದರು . ಹಾಗೆ ಅವರು ಮಿಂಬರನ್ನು ತಯಾರಿಸಿ ಕೊಟ್ಟರು . ಜುಮುಅ ದಿನದಂದು ಪ್ರವಾದಿವರ್ಯರು ಈ ಮಿಂಬರಿಗೆ ಹತ್ತಿದಾಗ ಖರ್ಜೂರ ಮರದ ತುಂಡು ಮಗು ಅತ್ತ ಹಾಗೆ ಅತ್ತಿತ್ತು . ಪ್ರವಾದಿವರ್ಯರು ದೂರ ಸರಿದ ವಿರಹ ವೇದನೆಯಾಗಿದೆ ಅಳುವಿಗೆ ಕಾರಣ . ನಬಿಯವರು ಮಿಂಬರಿನ ಕೆಳಗೆ ಇಳಿದು ಬಂದು ಅದನ್ನು ಅಪ್ಪಿ ಹಿಡಿದರು . ನಂತರ ಅದರ ಅಳು ನಿಂತಿತ್ತು . ಪ್ರವಾದಿವರ್ಯರು ದೂರ ಸರಿದ ಕಾರಣ ಈ ನಿರ್ಜೀವ ಮರದ ತುಂಡು ಅತ್ತಿದ್ದು ಪ್ರವಾದಿವರ್ಯರ ಪ್ರತ್ಯೇಕ ಮುಅ್ಜಿಝತ್ತಾಗಿದೆ . ಇಂತಹ ಮಅ್‌ಜಿಝತ್ ಯಾವ ನಬಿಯರಿಗೂ ಉಂಟಾಗಿರಲಿಲ್ಲ . “ ಅಲ್ಲಾಹನು ನಿರ್ಜೀವ ವಸ್ತುಗಳಲ್ಲಿ ಕೂಡಾ ಒಂದು ವಿಶೇಷ ಶಕ್ತಿಯನ್ನು ಸೃಷ್ಟಿಸಿದ್ದಾನೆ ” ಎಂದು ವಿದ್ವಾಂಸರು ವಿವರಿಸಿದ್ದಾರೆ . - ಈ ಮರದ ತುಂಡನ್ನು ಎಲ್ಲಿ ದಫನು ಮಾಡಲಾಯಿತು . ಎಂಬುವುದರ ಬಗ್ಗೆ ಹಲವಾರು ಅಭಿಪ್ರಾಯಗಳಿವೆ . ಉಸ್ಮಾನ್ ( ರ ) ಮಸೀದಿ ಪುನರ್ ನಿರ್ಮಾಣ ಮಾಡುವ ತನಕ ಇತ್ತು ಎಂದಿದ್ದಾರೆ ಹಲವಾರು . ಅದನ್ನು ಆಗಲೇ ಅದೇ ಸ್ಥಳದಲ್ಲಿ ಧಪನು ಮಾಡಲಾಗಿದೆ . ಅದ ನ್ನು ಉಬಯ್ಯ್  ಬಿನ್ ಕಅ್ಬ್ ( ರ ) ರವರ ತೆಗೆದುಕೊಂಡು ಹೋದರು . ಕೆಲವು ಕಾಲ ಅದು ಅವರ ಬಳಿಯಿತ್ತು. ನಂತರ ಅದನ್ನು ಭೂಮಿ ನುಂಗಿತು . ಹೀಗೆ ಹಲವಾರು ಅಭಿಪ್ರಾಯ ಗಳು ಕಾಣಬಹುದು . ಪ್ರವಾದಿವರ್ಯರ ಈ ಮಿಂಬರ್‌ಗೆ ಹಲವಾರು ಮಹತ್ವಗಳಿವೆ. ಅಬೂಹುರೈರಾ ( ರ ) ರವರಿಂದ ವರದಿ ; “ ನನ್ನ ಮನೆ ಮತ್ತು ಮಿಂಬರಿನ ನಡುವೆ ಇರುವ ಸ್ಥಳ ಸ್ವರ್ಗದ ಉದ್ಯಾನಗಳಲ್ಲಿ ಒಂದು ಉದ್ಯಾನವಾಗಿದೆ ” ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದಾರೆ .ಮತ್ತೊಂದು ಹದೀಸಿನಲ್ಲಿ ಈ ರೀತಿಯಿದೆ “ ನನ್ನ ಮಿಂಬರ್ ಸ್ವರ್ಗ ಕದಗಳಲ್ಲಿ ಒಂದು ಕದವಾಗಿದೆ ” ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ “ ನನ್ನ ಮಿಂಬರಿನ ಹತ್ತಿರ ಪಾಪ ಮಾಡಿ ಯಾರಾದರೂ ಆಣೆ ಹಾಕಿದರೆ ' ನರಕದಲ್ಲಾಗಿದೆ ಆತನ ವಾಸಸ್ಥಳ ' ಎಂದು ದೃಢಪಡಿಸಲಿ ” 

*ಇತಿಹಾಸ ಪುಟದಲ್ಲಿ ಮಿಂಬರ್*
.........................................................
               - ಮದೀನಾದ ಮಸ್ಜುದುನ್ನಬವಿಯಲ್ಲಿರುವ ಮಿಂಬರ್ ಹಲವಾರು ಮಹತ್ತರವಾದ ಘಟನೆಗಳಿಗೆ ಸಾಕ್ಷಿಯಾಗಿದೆ. ಪ್ರಸ್ತುತ ಪ್ರವಾದಿವರ್ಯರ ಮಿಂಬರನ್ನು ಮುಆವಿಯಾ ( ರ ) ರವರ ಆಡಳಿತ ಕಾಲದಲ್ಲಿ ಮದೀನಾದ ಗವರ್ನರಾಗಿದ್ದ ಮರ್ವಾನ್ ಬಿನ್ ಹಕಮ್ ರವರು ಮುಆವಿಯಾ(ರ) ರವರ ಸೂಚನೆಯಂತೆ ಶಾಮಿಗೆ ಬದಲಾಯಿಸಲು ಪ್ರಾರಂಭಿಸಿದಾಗ ದಿಢೀರ್ ಮದೀನಾ ಪರಿಸರ ಕತ್ತಲಾವರಿಸಿತು . ಅಂದು ಅಸ್ವಾಭಾವಿಕ ಸೂರ್ಯಗ್ರಹಣ ಉಂಟಾಗಿತ್ತು . ಸೂರ್ಯ ಮರೆಯಾಗಿ ನಕ್ಷತ್ರಗಳು ಪ್ರತ್ಯಕ್ಷವಾಗಿತ್ತು . ಕಂಗಾಲಾಗಿದ್ದ ಮದೀನಾ ನಿವಾಸಿಗಳೊಂದಿಗೆ ಮರ್ವಾನ್ ಭಾಷಣ ಮಾಡಿ ಅಮೀರುಲ್ ಮುಅಮಿನೀನ್ ಮುಆವಿಯಾ ( ರ ) ರವರ ಅಣತಿಯಂತೆ ಈ ಕಾರ್ಯ ಮಾಡಿದುದಾಗಿ ತಿಳಿಸಿದರು . ಮುಆವಿಯಾ ( ರ ) ರವರಿಗೆ ಸುದ್ದಿ ಮುಟ್ಟಿಸಿ , ಬಡಗಿಯನ್ನು ಕರೆದು ಮಿಂಬರನ್ನು ಯಥಾಸ್ಥಾನದಲ್ಲಿ ಅಳವಡಿಸಿ ಅದಕ್ಕೆ ಆರು ಮೆಟ್ಟಿಲುಗಳನ್ನು ಮತ್ತೆ ಸೇರಿಸಲಾಯಿತು . ಜನರ ದಟ್ಟನೆಯಿಂದಾಗಿ ಹೀಗೆ ಮಾಡಿದ್ದಾಗಿ ಅವರು ಅನಂತರ ವಿವರಿಸಿದರು . ಈ ವಿವರಗಳನ್ನು ಝುಬೈರು ಬಿನ್ ಬಕರ್ ( ರ ) ರವರು  
 ' ಅಖ್ಬಾರುಲ್ ಮದೀನಾ ' ಎಂಬ ಗ್ರಂಥದಲ್ಲಿ ವಿವರಿಸಿದ್ದಾರೆ . ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮಿಂಬರಿನ ಕರ್ತೃ , ಕಅಬಾಲಯ ನಿರ್ಮಾಣದ ಬಡಗಿ ಬಾಖೂಂ ರೂಮೀಯವರಾಗಿದ್ದರು ಎಂದು ವರದಿಯಾಗಿದೆ . - ' ಹಿಜ್ರಾ 654ನೇ ವರ್ಷದಲ್ಲಿ ಮದೀನಾ ಮಸೀದಿಯಲ್ಲಿ ಅಗ್ನಿ ಅನಾಹುತ ಉಂಟಾಗುವ ವರೆಗೂ ಪ್ರಸ್ತುತ ಮಿಂಬರ್ ಉಪಯೋಗದಲ್ಲಿತ್ತು ' ಎಂದು ಇನ್ನು ನಜ್ಜಾರ್ ( ರ ) ರವರು ಹೇಳಿದ್ದಾರೆ . ನಂತರ ಹಿಜ್ರಾ 656ರಲ್ಲಿ ಯಮನ್ ಚಕ್ರವರ್ತಿಯಾಗಿದ್ದ ಮುಳಪ್ಪರ್‌ರವರು ಒಂದು ಮಿಂಬರನ್ನು ನಿರ್ಮಿಸಿ ಕಳುಹಿಸಿಕೊಟ್ಟಿದ್ದರು . ನಂತರ ಹತ್ತು ವರ್ಷಗಳ ತರುವಾಯ , ಅಂದರೆ ಹಿಜ್ರಾ 666ರಲ್ಲಿ ಆ ಮಿಂಬರನ್ನು ಬದಲಾಯಿಸಿ ಬೈಬರಸ್ ಎಂಬವರು ಸ್ವತಃ ನಿರ್ಮಿಸಿ ಕಳುಹಿಸಿಕೊಟ್ಟಿದ್ದ ಮಿಂಬರನ್ನು ಅಳವಡಿಸಲಾಯಿತು. ಹಿಜ್ರಾ 820ರ ವರೆಗೂ ಅದು ಉಪಯೋಗದಲ್ಲಿತ್ತು . ನಂತರ ಶೈಖ್ ಮುಅಯ್ಯದ್‌ರವರು ನಿರ್ಮಿಸಿದ ಮಿಂಬರನ್ನು ಸ್ಥಾಪಿಸಿ 867ರ ವರೆಗೂ ಅದು ಉಪಯೋಗದಲ್ಲಿತ್ತು . ನಂತರ ' ಖಶ್‌ಖದಂ ' ಒಂದು ನೂತನ ಮಿಂಬರ್ ನಿರ್ಮಿಸಿ ಕಳುಹಿಸಿಕೊಟ್ಟರು . ಈ ವಿವರಗಳನ್ನು ಇಬ್ನುನಜ್ಜಾರ್ ( ರ )ಉದ್ದರಿಸಿದ್ದಾರೆ . ಮಿಂಬರ್‌ಗಳನ್ನು ಕಾಲಕ್ರಮೇಣ ಬದಲಾಯಿಸಲಾಗುತ್ತಿತ್ತು . ಆದರೆ ಸ್ಥಾಪಿತ ಸ್ಥಳ ಮಾತ್ರ ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮಿಂಬರ್ ನೆಲೆಗೊಂಡಿದ್ದ ಅದೇ ಸ್ಥಳವಾಗಿತ್ತೆಂಬುವುದು ಗಮನಾರ್ಹ .

     *ಮುಂದುವರಿಯುವುದು*