ಮದೀನಾ ಮಹತ್ವ ಇತಿಹಾಸ ಅಧ್ಯಾಯ 34

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
  
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 34*🍃
         💜💜💜💜💜💜💜

🌹🌹🌹🌹🌹🌹🌹🌹🌹🌹

*ಮೂರನೇ ಶ್ರಮ*

           ಸುಲ್ತಾನ್ ನೂರುದ್ದೀನ್ ಸಜ್ಜನ ವ್ಯಕ್ತಿಯಾಗಿದ್ದರು. ಪ್ರತಿದಿನ ರಾತ್ರಿ ಎದ್ದು ತಹಜ್ಜುದ್ ನಮಾಝ್ ಮಾಡುವ ರೂಢಿ ಮಾಡಿಕೊಂಡಿದ್ದ ಇವರು ದ್ಸಿಕ್ರ್ಗಳನ್ನು ಹೇಳಿ ಪುನಃ ಮಲಗುತ್ತಿದ್ದರು . ಹೀಗಿರಲು ಒಂದು ದಿನ ತಹಜ್ಜುದ್ ನಮಾಜ್ ಮಾಡಿ ಮಲಗಿದಾಗ ಕನಸಿನಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಕಂಡರು . ಇಬ್ಬರು ಯುವಕರನ್ನು ತೋರಿಸಿ “ ಇವರಿಂದ ನನ್ನನ್ನು ರಕ್ಷಿಸಿರಿ ” ಎಂದು ಹೇಳಿದರು . ರಾಜ ನೂರುದ್ದೀನ್‌ರವರಿಗೆ ತಕ್ಷಣ ಎಚ್ಚರವಾಯಿತು . ಏನು ಮಾಡುವುದು ? ಎಂದು ಅವರಿಗೆ ಗೊತ್ತಾಗಲಿಲ್ಲ . ಅಂಗಸ್ನಾನ ಮಾಡಿ ನಮಾಜ್ ನಿರ್ವಹಿಸಿದ ನಂತರ ಪುನಃ ಮಲಗಿದರು . ನಿದ್ದೆಯಲ್ಲಿ ಮೊದಲಿನಂತೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕನಸು ಕಂಡಿತು . ಆ ಇಬ್ಬರು ವ್ಯಕ್ತಿಗಳನ್ನು ತೋರಿಸಿ ಅವರಿಂದ ರಕ್ಷಿಸುವಂತೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ . ತಕ್ಷಣ ರಾಜನಿಗೆ ಎಚ್ಚರವಾಯಿತು . ಈ ಕನಸಿನ ವಾಸ್ತವಾಂಶ ರಾಜನಿಗೆ ತಿಳಿಯಲಿಲ್ಲ . ರಾಜ ನಮಾಜ್ ಮಾಡಿ ಮಲಗಿದರು . ಮೂರನೇ ಬಾರಿ ಕೂಡಾ ಅದೇ ರೀತಿ ಕನಸು ಕಂಡರು . ಎಚ್ಚರ ಗೊಂಡ ರಾಜನಿಗೆ ಮತ್ತೆ ನಿದ್ದೆ ಹತ್ತಲಿಲ್ಲ . ಸುಲ್ತಾನ್ ನೂರುದ್ದೀನ್‌ರವರಿಗೆ ಒಳ್ಳೆಯ ಮಂತ್ರಿಯಿದ್ದ . ಆತನ ಹೆಸರು ಜಮಾಲುದ್ದೀನ್ . ಮಂತ್ರಿಯನ್ನು ಕರೆಸಿ ವಿಷಯವನ್ನು ತಿಳಿಸಿದಾಗ “ ಇನ್ನು ಇಲ್ಲಿ ನಿಂತರಾಗದು. ನೇರ ಮದೀನಾಕ್ಕೆ ಹೋಗುವ . ಈ ಕನಸನ್ನು ಯಾರೊಂದಿಗೂ ಹೇಳದಿರಿ ” ಎಂದು ಸಲಹೆ ಯಿತ್ತ . ಹಾಗೆ ಸುಲ್ತಾನ್ ನೂರುದ್ದೀನ್ ಮಂತ್ರಿ ಸಹಿತ 20 ಜನರ ಸಂಘ ಅಂದು ರಾತ್ರಿ ಮದೀನಾದೆಡೆಗೆ ಪಯಣ ಬೆಳೆಸಿತು . ಜೊತೆ ಧಾರಾಳ ಸಂಪತ್ತು ಕೂಡಾ ತಂದಿದ್ದರು . 16 ದಿನಗಳ ದೀರ್ಘ ಯಾತ್ರೆಯ ನಂತರ ಮದೀನಾ ತಲುಪಿದರು . ಮದೀನಾದ ಹೊರಗೆ ಸ್ನಾನ ಮಾಡಿ ಮಸೀದಿಗೆ ಹೋಗಿ ಕೌಳಾ ಶರೀಫಿನಲ್ಲಿ ನಮಾಜ್ ಮಾಡಿದರು . ನಂತರ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ಝಿಯಾರತ್ ಮಾಡಿದರು . ನಂತರ ಏನು ಮಾಡುವುದೆಂದು ತೋಚದೆ ರಾಜ ಒಂದೆಡೆ ಕುಳಿತಿದ್ದನು. ಬುದ್ಧಿವಂತನಾಗಿದ್ದ ಮಂತ್ರಿ ಆ ಇಬ್ಬರನ್ನು ಕಂಡುಹಿಡಿಯಲು ಒಂದು ತಂತ್ರ ಮಾಡಿದ . ಮದೀನಾ ನಿವಾಸಿಗಳೊಂದಿಗೆ ಮಂತ್ರಿ ಹೇಳುತ್ತಾರೆ “ ಓ ಜನರೇ ... ರಾಜನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಝಿಯಾರತ್ ಮಾಡಲು ಬಂದಿದ್ದಾರೆ . ಜೊತೆಗೆ ಮದೀನಾ ನಿವಾಸಿಗಳಿಗೆ ದಾನ ನೀಡಲು ಧಾರಾಳ ಸಂಪತ್ತುಗಳನ್ನು ತಂದಿದ್ದಾರೆ . ಒಬ್ಬರು ಕೂಡಾ ಬಾಕಿಯಾಗದೆ ಇದನ್ನು ಪಡೆಯಬೇಕು ” ಹಾಗೆ ಮದೀನಾ ನಿವಾಸಿಗಳೆಲ್ಲರು ಅಲ್ಲಿ ಒಟ್ಟು ಸೇರಿದರು . ಬರುವಾಗ ತೆಗೆದುಕೊಂಡು ಬಂದಿದ್ದ ಸಂಪತ್ತನ್ನು ವಿತರಣೆ ಮಾಡಿದರು . ಪ್ರವಾದಿವರ್ಯ ರು ಸೂಚಿಸಿದ ಇಬ್ಬರು ಯುವಕರು ಕಾಣುತ್ತಿಲ್ಲ . ಜನರೆಲ್ಲರು ದಾನಧರ್ಮಗಳು ಪಡೆದ ನಂತರ ರಾಜ ಕೇಳಿದ ಯಾರಾದರೂ ದಾನ ಪಡೆಲು ಬಾಕಿಯಾಗಿದ್ದಾರೆಯೇ .. ? ಅವರು ಹೇಳಿದರು ' ಯಾರೂ ಇಲ್ಲ . ಸರಿಯಾಗಿ ಪರಿಶೀಲಿಸಿ ನೋಡಿ ಎಂದು ರಾಜ ಅವರಲ್ಲಿ ಹೇಳಿದರು . ಆಗ ಅವರು ಪಶ್ಚಿಮದಿಂದ ಬಂದ ಇಬ್ಬರು ಯುವಕರಿದ್ದಾರೆ . ಅವರು ಯಾರಿಂದಲೂ ಏನನ್ನೂ ಸ್ವೀಕರಿಸುವುದಿಲ್ಲ . ಅವರು ಶ್ರೀಮಂತರು . ಧಾರಾಳ ದಾನ - ಧರ್ಮಗಳನ್ನು ಮಾಡುವವರಾಗಿದ್ದಾರೆ . ರಾಜನಿಗೆ ಸಮಾಧಾನವಾಯಿತು . ಅವರಿಬ್ಬರನ್ನು ಕರೆತರಲು ಆಜ್ಞಾಪಿಸಿದರು . ಅವರನ್ನು ರಾಜ ಸನ್ನಿಧಿಗೆ ಹಾಜರು ಪಡಿಸಲಾಯಿತು . ಈ ಇಬ್ಬರು ಕಂಡಾಗ ಪ್ರವಾದಿವರ್ಯರು ರಕ್ಷಿ ಸಲು ಹೇಳಿದ್ದು ಇವರಿಂದಾಗಿದೆ ಎಂದು ರಾಜನಿಗೆ ಮನದಟ್ಟಾಯಿತು . ನಂತರ ಅವರನ್ನು ವಿಚಾರಣೆ ಮಾಡಲಾಯಿತು . ರಾಜ ಅವರಲ್ಲಿ ಕೇಳಿದ ನೀವು ಎಲ್ಲಿಂದ ಬಂದಿದ್ದೀರಿ ... ? ಪಾಶ್ಚಾತ್ಯ ಊರಿನಿಂದ ಎಂದರು . ಪವಿತ್ರ ಹಜ್ ಕರ್ಮ ನಿರ್ವಹಿಸಲು ಬಂದಿದ್ದೇವೆ . ಈ ವರ್ಷ ಇಲ್ಲಿ ತಂಗುವುದಾಗಿದೆ
ನಮ್ಮ ತೀರ್ಮಾನ . ರಾಜ ಸತ್ಯ ಹೇಳಬೇಕು ಎಂದು ಹೇಳಿದಾಗ ಅವರು ಮಾತನಾಡಲಿಲ್ಲ . ಅವರ ವಾಸಸ್ಥಳವನ್ನು ವಿಚಾರಿಸಿದ ರಾಜ ಅಲ್ಲಿ ತಪಾಸಣೆಗೈಯ್ಯಲು ಹೋದ . ಅಲ್ಲಿ ಹೋಗಿ ನೋಡಿದಾಗ ಧಾರಾಳ ಸಂಪತ್ತು ಹಾಗೂ ಕೆಲವೊಂದು ವಸ್ತುಗಳಲ್ಲದೆ ಬೇರೇನು ಕಾಣಲಿಲ್ಲ . ಮದೀನಾ ನಿವಾಸಿಗಳು ಅವರ ಬಗ್ಗೆ ಮಹತ್ವವನ್ನು ಹೇಳತೊಡಗಿದರು . “ ಇವರು ವರ್ಷ ಪೂರ್ತಿ ವ್ರತಾಚರಿಸುತ್ತಾರೆ . ಯಾವಾಗಲೂ ರೌಳಾ ಶರೀಫಿನಲ್ಲೇ ನಮಾಜ್ ಮಾಡುತ್ತಾರೆ . ಪ್ರವಾದಿವರ್ಯರನ್ನು ಝಿಯಾರತ್ ಮಾಡುತ್ತಾರೆ . ಪ್ರತಿ ದಿನ ಬಕೀಅ ಸಂದರ್ಶನ ಮಾಡುತ್ತಾರೆ . ಪ್ರತಿ ಶನಿವಾರ ಖುಬಾಅ ಮಸೀದಿಗೆ ಹೋಗುತ್ತಾರೆ . ಅವರಲ್ಲಿ ಏನಾದರೂ ಕೇಳಿದರೆ ಬರಿಗೈಯ್ಯಲ್ಲಿ ಯಾರನ್ನೂ ಮರಳಿಸುವುದಿಲ್ಲ . ರಾಜನಿಗೆ ಆಶ್ಚರ್ಯವಾಯಿತು . ಏನು ಮಾಡುವುದು ? ಎಂದು ತೋಚದಾಯಿತು . ಈ ಇಬ್ಬರು ವ್ಯಕ್ತಿಗಳಿರುವ ಮನೆಯನ್ನು ರಾಜ ಸುತ್ತತೊಡಗಿದ . ಮನೆಯೊಳಗಿದ್ದ ಹಾಸಿಗೆಯನ್ನು ಎತ್ತಿ ನೋಡಿದಾಗ ರಹಸ್ಯ ಬಯಲಾಯಿತು . ಅಲ್ಲಿ ಪ್ರವಾದಿವರ್ಯರ ಖಬ್‌ರಿನ ನೇರಕ್ಕೆ ಹೋದ ಒಂದು ಸುರಂಗ ಕಾಣಸಿಕ್ಕಿತು . ಜನರು ಸ್ಥಂಭೀಭೂತರಾದರು . ಈ ಇಬ್ಬರ ಕಪಟ ಮುಖವನ್ನು ಮನದಟ್ಟು ಮಾಡಿದರು . ವಾಸ್ತವ ಏನೆಂದು ಹೇಳುವಂತೆ ರಾಜ ಅವರ ಒತ್ತಾಯಿಸಿದನು . ಆದರೆ ಅವರು ಬಾಯಿ ಬಿಡಲಿಲ್ಲ . ಅವರಿಗೆ ಸಾಕಷ್ಟು ಹೊಡೆಯಲಾಯಿತು . ಬಡಿಯಲಾಯಿತು . ಕೊನೆಗೆ ಅವರು ಸತ್ಯವನ್ನು ಸಮ್ಮತಿಸಿದರು “ ನಾವು ಕ್ರೈಸ್ತರು . ಪಶ್ಚಿಮದ ಜನರು ಹಜ್ಜ್ಗಾಗಿ ಬರುವಾಗ ಅವ ರೊಂದಿಗೆ ಕ್ರೈಸ್ತ ಪುರೋಹಿತರು ನಮ್ಮನ್ನು ಕಳುಹಿಸಿದರು ” ಮದೀನಾಗೆ ಬಂದ ಇವರು ಪ್ರವಾದಿವರ್ಯರ ಖಬ್ರಿನ ಬಳಿ ವಾಸ್ತವ್ಯ ಹೂಡಿದರು . ಪ್ರತಿದಿನ ರಾತ್ರಿ ಸುರಂಗ ತೋಡುತಿದ್ದರು . ಆ ಮಣ್ಣನ್ನು ಪ್ರತಿದಿನ ಬೆಳಿಗ್ಗೆ ಬಕೀಅಗೆ ಹೋಗಿ ಹಾಕಿ ಬರುತಿದ್ದರು . ಹೀಗೆ ಕೆಲವು ಕಾಲ ಮುಂದುವರಿಯಿತು . ಈ ಸುರಂಗ ಪ್ರವಾದಿವರ್ಯರ ಖಬ್ರಿನ ಬಳಿ ತಲುಪಿದಾಗ ಆಕಾಶದಲ್ಲಿ ಭೀಕರವಾದ ಸಿಡಿಲು - ಮಿಂಚು ಕಾಣಿಸತೊಡಗಿತು . ಭೂಮಿ ಅಲುಗಾಡಿದಂತೆ ಭಾಸವಾಯಿತು . ಅವರಿಗೆ ಸುರಂಗ ತೋಡುವ ಈ ಪ್ರಕ್ರಿಯೆ ಮುಂದುವರಿಸಲಾಗಲಿಲ್ಲ . ಈ ಸಮಯದಲ್ಲಾಗಿದೆ ರಾಜನಿಗೆ ಕನಸಿನಲ್ಲಿ ಪ್ರವಾದಿ ಸ್ವಲ್ಲಲ್ಲಾಹು . ಅಲೈಹಿವಸಲ್ಲಮರು ವಿಷಯ ತಿಳಿಸುವುದು . ಹಾಗೆ ರಾಜ ಮದೀನಾಗೆ ಬಂದು ಈ ಇಬ್ಬರು ದುಷ್ಟರನ್ನು ಹಿಡಿದಾಗ ರಾಜ ಆಳುತ್ತಿದ್ದರು . ಈ ದುಷ್ಟರಿಗೆ ವಧೆ ಶಿಕ್ಷೆ ನೀಡಲಾಯಿತು . ತನ್ನ ಆಸ್ಥಾನಕ್ಕೆ ಮರಳಿದ ಸುಲ್ತಾನ್ ನೂರುದ್ದೀನ್ ರವರು ಕ್ರೈಸ್ತರೊಂದಿನ ಎಲ್ಲಾ ಸಂಬಂಧಗಳನ್ನು ಕಡಿದು ಬಿಟ್ಟರು . ನಂತರ ಸುಲ್ತಾನ್ ನೂರುದ್ದೀನ್‌ರವರು ಪ್ರವಾದಿವರ್ಯರ ಹಜ್ರತುಶ್ಶರೀಫ್‌ನ ಸುತ್ತ ಲೂ ಬೃಹತ್ತಾದ ಹಾಗೂ ಆಳವಾದ ಹೊಂಡವನ್ನು ತೋಡಿದರು . ಕಬ್ಬಿಣ ಹಾಗೂ ಬೃಹತ್ ಕಲ್ಲುಗಳಿಂದ ನಾಲ್ಕು ಭಾಗವನ್ನು ಭದ್ರಪಡಿಸಲಾಯಿತು . ನಂತರ ಅದರ ಮೇಲೆ ಸೀಸವನ್ನು ಸುರಿಯಲಾಯಿತು . ಇನ್ನು ಮುಂದೆ ಪ್ರವಾದಿವರ್ಯರ ಪಾವನ ಶರೀರವನ್ನು ಹೊತ್ತೊಯ್ಯಲು ಯಾರಿಗೂ ಕೂಡ ಸಾಧ್ಯವಾಗಬಾರದು ಎಂಬ ಇರಾದೆಯಿಂದಾಗಿದೆ ರಾಜ ಹೀಗೆ ಮಾಡಿದ್ದು.

    *ಮುಂದುವರಿಯುವುದು*