ಮದೀನಾ ಮಹತ್ವ ಇತಿಹಾಸ ಅಧ್ಯಾಯ 5

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 5*🍃
         💜💜💜💜💜💜💜

 ❤️ *ದಜ್ಜಾಲಿನಿಂದ ಸಂರಕ್ಷಣೆ*
 ❤️ *ಮದೀನಾದ ಪವಿತ್ರ ಮಣ್ಣು*
🌹🌹🌹🌹🌹🌹🌹🌹🌹🌹

        ಈ ಹೆಸರು ಕೇಳದವರು ಇರಲಿಕ್ಕಿಲ್ಲ.ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ಸಮುದಾಯವಾದ ನಾವು ಅಂತ್ಯದಿನ ಸಮೀಪಿಸುವಾಗ ಎದುರಿಸುವ ಅತ್ಯಂತ ಭಯಾನಕ ಫಿತ್ನವಾಗಿದೆ ಈತನ ಉಪಟಳ.ಗತಕಾಲದಲ್ಲಿ ಬಂದ ಎಲ್ಲಾ ಪ್ರವಾದಿಗಳು ತಮ್ಮ ಅನುಯಾಯಿಗಳಿಗೆ ಈತನ ಕುರಿತು ಎಚ್ಚರಿಕೆ ನೀಡಿದ್ದಾರೆ. ಪ್ರವಾದಿವರ್ಯರು ಈತನ ಕುರಿತು ಬಹಳಷ್ಟು ವಿವರಿಸಿದ್ದಾರೆ.ಯಾಕೆಂದರೆ ಈತ ಈ ಸಮುದಾಯದಲ್ಲಿ ಹೊರಡುತ್ತಾನೆ ಎಂಬುವುದು ಖಡಾ ಖಂಡಿತ.ಕಾರಣ ನಾವು ಭೂಮಿಯ ಮೇಲಿನ ಕೊನೆಯ ಸಮುದಾಯ.ಆದರೆ ಮದೀನಾ ಹಾಗೂ ನಿವಾಸಿಗಳು ಈತನಿಂದ ನಿರ್ಭೀತರಾಗಿರುತ್ತಾರೆ . ದಜ್ಜಾಲ್ ಯಾರು? ಎಂಬ ಪ್ರಶ್ನೆಗೆ ಆದಂ ಸಂತತಿಗಳಲ್ಲಿನ ಓರ್ವ ಪುರುಷ ಎನ್ನುವುದು ಸಾಮಾನ್ಯ ಉತ್ತರ.ಆತನಿಗೆ ಹಲವಾರು ವಿಶೇಷತೆಗಳಿರುತ್ತದೆ. ಆತನ ಕುರಿತು ಪರಿಚಯ ನೀಡುವ ಹದೀಸ್‌ಗಳು ಆತನ ಬಲೆಗೆ ಬೀಳದಂತೆ ಎಚ್ಚರಿಕೆಯನ್ನು ನೀಡುತ್ತದೆ. ಆದ್ದರಿಂದ ಈತ ಹೊರಬಂದರೆ ವಿಶ್ವಾಸಿಗಳಿಗೆ ಪರಿಚಯ ಸಿಗುತ್ತದೆ. ಒಕ್ಕಣ್ಣನಾಗಿರುವ ಈತನ ಎರಡು ಕಣ್ಣುಗಳ ನಡುವೆ "ಕಾಫಿರ್ ” ಎಂದು ಬರೆದಿಡಲಾಗಿರುತ್ತದೆ. ಇದನ್ನು ಸಾಕ್ಷರನೂ,ನಿರಕ್ಷರಿಯೂ ಓದುತ್ತಾನೆ. ಈತನಿಗೆ ಮಕ್ಕಳು ಉಂಟಾಗದು. 'ತಾನೊಬ್ಬ ದೇವ ' ಎಂಬ ನಂಬಿಕೆ ತಾಳಲು ಜನರನ್ನು ಒತ್ತಾಯ ಪಡಿಸುತ್ತಾನೆ. ಈತನ ಉಪಟಳ ಆದಂ ನಬಿಯವರಿಂದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ತನಕ ಯಾರೂ ಅನುಭವಿಸದ ಅತೀ ದೊಡ್ಡ ಫಿತ್ನ. ಈತನಿಂದ ಉಂಟಾಗುವ ಅದ್ಭುತ ಕಾರ್ಯಗಳಿಗೆ ಖವಾರಿಕ್ ಎಂದು ಕರೆಯಲಾಗುತ್ತದೆ . ಆತನ ಜೊತೆ ನರಕ ಹಾಗೂ ಸ್ವರ್ಗವಿದೆ ಎಂದು ಹದೀಸಿನಲ್ಲಿ ವರದಿಯಾಗಿದೆ. ವಾಸ್ತವದಲ್ಲಿ ಆತನ ನರಕ ಸ್ವರ್ಗವಾಗಿರುತ್ತದೆ. ಸ್ವರ್ಗ ನರಕ ವಾಗಿರುತ್ತದೆ. ಈತ ಮಳೆಗಾಗಿ ಆಕಾಶದೆಡೆಗೆ ಆಜ್ಞೆ ಮಾಡಿದಾಗ ಕ್ಷಣ ಮಾತ್ರದಲ್ಲಿ ಮಳೆಯಾಗುತ್ತದೆ. ಭೂಮಿಯಲ್ಲಿ ಮೊಳಕೆಯೊಡೆಯಲು ಆಜ್ಞೆ ನೀಡಿದಾಗ ಸಸಿಗಳು ಹೊರಬರುತ್ತದೆ. ಸಂಪತ್ತುಗಳ ರಾಶಿ ಆತನ ಬಳಿರುತ್ತದೆ. ಈತನಿಂದ ಉಂಟಾಗುವ ಖವಾರಿಕ್ ಎಂದು ಅದ್ಭುತ ಕಾರ್ಯ ಹದೀಸ್‌ಗಳಲ್ಲಿ ವರದಿಯಾದ್ದರಿಂದ ಸಂಶಯಕ್ಕೆ ಯಾವುದೇ ಆಸ್ಪದವಿಲ್ಲ. ಇದು ಅಲ್ಲಾಹನ ತೀರ್ಮಾನವಾಗಿದೆ . - ಭೂಮಿಯಲ್ಲಿಡೀ ಸಂಚರಿಸುವ ಈತ ಬದುಕುವುದು ಬರೀ 40 ದಿನಗಳು ಮಾತ್ರ ಮೊದಲ ಒಂದು ದಿನ ಒಂದು ವರ್ಷದ ದೀರ್ಘತೆ ಹೊಂದಿರುತ್ತದೆ. ನಂತರ ಒಂದು ತಿಂಗಳು ತದನಂತರ ಒಂದು ವಾರ ಹಾಗೂ ಉಳಿದ ದಿನಗಳು ಸಾಮಾನ್ಯ ದಿನಗಳ ದೀರ್ಘತೆ ಇರುತ್ತದೆ. ಈ ಒಂದು ದಿನ ಒಂದು ವರ್ಷದ ದೀರ್ಘತೆ ಇರುವಾಗ ಯಾವ ರೀತಿ ನಮಾಝ್ ಮಾಡಬೇಕೆಂದು ಇಮಾಮರು ಚರ್ಚಿಸಿದ್ದಾರೆ. ಬರೀ ಐದು ವಕ್ತ್ ನಮಾಝ್ ಸಾಕಾಗುತ್ತದೆಯೇ . . ? ಅಥವಾ ಒಂದು ವರ್ಷದ ನಮಾಝ್ ಮಾಡಬೇಕೆ? ಅಂದು ಒಂದು ದಿನದ ನಮಾಝ್ ಸಾಕಾಗುತ್ತದಾ? ಎಂದು ಸ್ವಹಾಬಿಗಳು ಕೇಳಿದಾಗ ಪ್ರವಾದಿವರ್ಯರು "ಇಲ್ಲ" ಎಂದಿದ್ದಾರೆ. ಸಾಧರಣವಾಗಿ ಎರಡು ನಮಾಝ್ಗಳ ಅಂತರ ಎಷ್ಟು ಎಂಬುವುದನ್ನು ಮನದಟ್ಟು ಮಾಡಿ ವರ್ಷ ಪೂರ್ತಿ ನಮಾಝನ್ನು ಮಾಡಬೇಕಾಗುತ್ತದೆ.(ಮಿರ್ ಕಾತ್ 9/382/383)ಈಸಾ ನಬಿ (ಅ)ರವರು ಡಮಸ್ಕಸಿನ ಒಂದು ಮಿನಾರದ ಬಳಿ ಇಳಿದು ಬರುವಾಗ ದಜ್ಜಾಲ್ ಮಸ್ಜಿದುಲ್ ಅಕ್ಸ್ವಾದೆಡೆಗೆ ಹೋಗುತ್ತಾನೆ. ಇಸ್ರೇಲಿನ ಬಾಬು ಲುದ್ ಎಂಬಲ್ಲಿ ಈತನ ವಧೆ ನಡೆಯುತ್ತದೆ. ಜಗತ್ತನ್ನೆಲ್ಲಾ ಬುಡಮೇಲು ಮಾಡುವ ಈತನಿಗೆ ಮಕ್ಕಾ - ಮದೀನಾಕ್ಕೆ ಪ್ರವೇಶವಿಲ್ಲ . ಮಾಲಿಕ್ ( ರ ) ರವರಿಂದ ವರದಿ ; “ಮಕ್ಕಾ ಮದೀನಾ ಬಿಟ್ಟು ದಜ್ಜಾಲ್ ಕಾಲಿಡದ ಒಂದೇ ಒಂದು ಸ್ಥಳವಿಲ್ಲ. ಮದೀನಾದ ಎಲ್ಲಾ ಭಾಗದಲ್ಲೂ ಮಲಕ್‌ಗಳು ಸಾಲುಸಾಲಾಗಿ ಕಾವಲು ನಿಂತಿರುತ್ತಾರೆ ”ಈತನ ಉಪಟಳದಿಂದ ಮದೀನಾ ನಿವಾಸಿಗಳು ನಿರ್ಭೀತರಾಗಿರುತ್ತಾರೆ. ಹೌದು ಈಮಾನಿನ ಸುರಕ್ಷಿತ ತಾಣ ಮದೀನಾ.

*ಮದೀನಾದ ಪವಿತ್ರ ಮಣ್ಣು*
.......................................................

ಮದೀನಾ ಮಣ್ಣಿನ ಪಾವಿತ್ರ್ಯತೆಯ ಕುರಿತು ವರ್ಣಿಸಲು ಯೋಗ್ಯ ಪದಗಳ ಕೊರತೆಯಿದೆ. ಪ್ರವಾದಿವರ್ಯರ ಪಾವನ ಪಾದ ಸ್ಪರ್ಶದಿಂದ ಪುನೀತಗೊಂಡ ಈ ಮಣ್ಣು ಕಣ್ಣಿಗೆ ಹಾಕುವ ಸುರುಮಕ್ಕಿಂತ ಅಮೂಲ್ಯವಾದುದು. ಕಣ್ಣಿಗೆ ಮುದ ನೀಡುವ ಅಮೂಲ್ಯ ಮುತ್ತು ಮದೀನಾ ಮಣ್ಣು. ಈ ಮಣ್ಣಿನಲ್ಲಿ ನಡೆದಾಡಲಿರುವ ಯೋಗ್ಯತೆ ಬಿಡಿ. ! ಚುಂಬಿಸಲು ಕೂಡಾ ಅರ್ಹತೆ ಇಲ್ಲ. ಇದು ಪವಿತ್ರ ಮದೀನಾ ಮಣ್ಣಿನ ಕುರಿತು ಪ್ರವಾದಿ ಪ್ರೇಮಿಗಳ ಪ್ರೇಮ ಭಾಷೆ . ಇಮಾಂ ಮುಸ್ಲಿಂ ( ರ ) ರವರ ವರದಿ ಮಾಡಿದ ಹದೀಸಿನಲ್ಲಿ ಮದೀನಾದ ಅನುಗ್ರಹೀತ ಮರಳ ಕಣಗಳಿಂದ ರೋಗಗಳಿಗೆ ಶಮನ ಲಭಿಸಿದರ ಬಗ್ಗೆ ಈ ರೀತಿಯಿದೆ. “ಪ್ರವಾದಿ ಸ್ವಲ್ಲ ಲ್ಲಾಹು ಅಲೈಹಿವಸಲ್ಲಮರವರು ಗಾಯ ಹಾಗೂ ಇತರ ಯಾವುದರ ಬಗ್ಗೆ ಸಂಕಷ್ಟ ತೋಡಿ ಕೊಂಡರೆ ಹೀಗೆ ಮಾಡುತಿದ್ದರು.( ತೋರು ಬೆರಳಿನ ತುದಿಯನ್ನು ಭೂಮಿಯಲ್ಲಿ ಇಟ್ಟು ನಂತರ ಎತ್ತಿ ಹೇಳುತ್ತಿದ್ದರು) ಅಲ್ಲಾಹನ ನಾಮದಾಣೆ ನಮ್ಮ ಭೂಮಿಯ ಮಣ್ಣು , ನಮ್ಮಲ್ಲಿ ಕೆಲವರ ಉಗುಳು ನೀರಿನಿಂದ , ಅಲ್ಲಾಹನ ಸಮ್ಮತಿ ಪ್ರಕಾರ ರೋಗ ಶಮನವಾಗಲಿದೆ. ಮದೀನಾ ಹಲವಾರು ರೋಗಗಳಿಗೆ ದಿವ್ಯ ಔಷಧವಾಗಿದೆ ಮದೀನಾದ ಪವಿತ್ರ ಮಣ್ಣು . ಪ್ರವಾದಿ ವರ್ಯರ ಪಾದ ಸ್ಪರ್ಶದಿಂದ ಅನುಗ್ರಹೀತವಾದ ಈ ಮಣ್ಣಿನಲ್ಲಿ ಇಮಾಂ ಮಾಲಿಕ್ ( ರ ) ರವರು ಚಪ್ಪಲಿ ಹಾಕಿ ನಡೆದಾಡಲಿಲ್ಲ . ಕತ್ತೆ - ಕುದುರೆಗಳ ಮೇಲೆ ಸವಾರಿ ಮಾಡಲಿಲ್ಲ . ಪ್ರವಾದಿವರ್ಯರ ಪಾವನ ಶರೀರವನ್ನು ದಫನು ಮಾಡಲ್ಪಟ್ಟಿದ್ದು ಮದೀನಾದಲ್ಲಾಗಿದೆ . ಈ ಮದೀನಾದ ಮಣ್ಣನ್ನು ಯಾರಾದರೂ ಆಕ್ಷೇಪಿಸಿದರೆ ಕಠಿಣ ಶಿಕ್ಷೆಗೆ ಗುರಿಯಾಗಿಸಬೇಕೆಂದಾಗಿದೆ ಇಮಾಮರುಗಳ ಅಭಿಮತ . ಮದೀನಾದ ಮಣ್ಣನ್ನು 'ಕೆಸರು ಮಣ್ಣು' ಎಂದು ಗೌರವಯುತವಲ್ಲದ ಪದವನ್ನು ಬಳಕೆ ಮಾಡಿದರೆ ಆತನಿಗೆ 30 ಛಡಿಯೇಟು ನೀಡಿ ಜೈಲಲ್ಲಿ ಬಂಧಿಸಿಡಬೇಕೆಂದು ಇಮಾಂ ಮಾಲಿಕ್ (ರ) ರವರು ನೀಡಿದ ಫತ್ವಾವನ್ನು ಇಮಾಂ ಸುಂಹೂದಿ ( ರ ) ರವರು ತನ್ನ ವಫಾಉಲ್ ವಫಾ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ . ( ವಫಾಉಲ್ ವಫಾ 1/671) ಪ್ರವಾದಿವರ್ಯರ ಪಾದ ಸ್ಪರ್ಶದಿಂದ ಮದೀನಾ ಮಣ್ಣಿಗೆ ಇಷ್ಟೊಂದು ಮಹತ್ವವಾದರೆ ಹಾಗೂ ಈ ಮಣ್ಣನ್ನು ದೂಷಿಸಿದವರಿಗೆ ಇಷ್ಟೊಂದು ಕಠಿಣ ಶಿಕ್ಷೆಯಾದರೆ ಪುಣ್ಯ ಪ್ರವಾದಿಯನ್ನು ಆಕ್ಷೇಪಿಸುವ ನೂತನವಾದಿಗಳ ಅವಸ್ಥೆ ಏನಾಗಿರಬಹುದು . . ? 
   
     *ಮುಂದುವರಿಯುವುದು*