ಮದೀನಾ ಮಹತ್ವ ಇತಿಹಾಸ ಅಧ್ಯಾಯ 17
🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
*ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
*ಸಂಗ್ರಹ: ಯಾಸೀನ್ ನಾವೂರ್*
🍃 *ಅಧ್ಯಾಯ 17*🍃
💜💜💜💜💜💜💜
❤️ *ಸುರಾಖತಿನ ವ್ಯರ್ಥ ಶ್ರಮ*
❤️ *ಖುಬಾಅ್ ನಲ್ಲಿ ಪ್ರವಾದಿವರ್ಯರು*-
🌹🌹🌹🌹🌹🌹🌹🌹🌹🌹🌹
ಮಕ್ಕಾದಿಂದ ಮದೀನಾಗೆ ಹೋಗುವ ಹಾದಿಯಾಗಿತ್ತು ಖುದೀದ್ ಎನ್ನುವುದು. ಪ್ರವಾದಿ ವರ್ಯರು ಈ ದಾರಿಯಾಗಿ ಮದೀನಾಗೆ ಹಿಜ್ರಾ ಹೋಗುತ್ತಿದ್ದರು. ಇವರ ಹಿಂದಿನಿಂದ ಹಿಂಬಾಲಿಸಿಕೊಂಡು ಸುರಾಖತ್ ಎಂಬಾತ ಬಂದ. ಈತ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲ ಮರು ಹಾಗೂ ಅಬೂಬಕರ್ ಸಿದ್ದೀಕ್(ರ) ರವರ ಹುಡುಕಾಟದಲ್ಲಿ ತೊಡಗಿದ್ದ ತರುಣರಲ್ಲಿ ಒಬ್ಬನಾಗಿದ್ದಾನೆ. ಸುರಾಖತ್ ಒಂದೆಡೆ ಕುಳಿತಿದ್ದ. ಒಬ್ಬ ಬಂದು ಅವನಲ್ಲಿ ಹೇಳಿದ ಯಾರೋ ಕೆಲವರು ಆ ದಾರಿಯಾಗಿ ಹೋಗುವುದನ್ನು ಕಂಡಿದ್ದೇನೆ. ಅದು ಮುಹಮ್ಮದ್ ಮತ್ತು ಸಂಗಡಿಗರು ಆಗಿರಬಹುದು. ಖುರೈಶಿಗಳ ನೂರು ಒಂಟೆಯ ಇನಾಮು ತನ್ನ ವಶವಾಗಬೇಕೆಂದು ಕೊಂಡು ಆತನನ್ನು ಸುರಾಖತ್ ನಿರುತ್ಸಾಹಗೊಳಿಸಿದನು. ಹಾಗೇನು ಇಲ್ಲ . . ! ಎಂದು ಆತನನ್ನು ಹೇಳಿ ಕಳಿಸಿದ. ಸ್ವಲ್ಪ ಸಮಯ ಕಳೆದಾಗ ಯಾರಿಗೂ ತಿಳಿಯದೆ ಆ ದಾರಿಯಾಗಿ ಹೋದ ಸುರಾಖತಿಗೆ ಪ್ರವಾದಿವರ್ಯರನ್ನು ಕಾಣಲು ಸಾಧ್ಯವಾಯಿತು. ಆತ ಪ್ರವಾದಿವರ್ಯರ ಬಳಿ ತಲುಪುತ್ತಿದ್ದಂತೆ ಆತನ ಕುದುರೆ ಮಗ್ಗರಿಸಿತು. ಪ್ರವಾದಿವರ್ಯ ಸಹಾಯದಿಂದ ಸರಿಯಾಯಿತು. ಈತ ದುರಾಸೆಯಿಂದ ಮತ್ತೂ ಮಂದಡಿ ಇಟ್ಟ. ಆತನ ಕುದುರೆಯ ಕಾಲು ಭೂಮಿಯಡಿಗೆ ಹೂತು ಹೋಯಿತು. ಪ್ರವಾದಿವರ್ಯರನ್ನು ಸಹಾಯಕ್ಕೆ ಕರೆದ. ಸಹಾಯ ಮಾಡಿದ ಪ್ರವಾದಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹಾಗೂ ಸಂಗಡಿಗರಿಗೆ ಸಂಪತ್ತು ನೀಡಲು ಮುಂದಾದ. ಅದನ್ನು ಅವರು ನಯವಾಗಿ ತಿರಸ್ಕರಿಸಿದರು. “ ನಮ್ಮ ಕುರಿತು ಯಾರಿಗೂ ಹೇಳಬೇಡ. ನಮ್ಮ ಹತ್ತಿರ ಯಾರನ್ನು ಬರಲು ಬಿಡಬೇಡ ” ಎಂದು ಅವನಲ್ಲಿ ಪ್ರವಾದಿವರ್ಯರು ಕೇಳಿಕೊಂಡರು. ಆತನಿಗೆ ಸಂಪೂರ್ಣ ಸುರಕ್ಷಿತತೆ ನೀಡಿರುವ ಬಗ್ಗೆ ಒಂದು ಪತ್ರ ಬರೆದು ಆತನ ಕೈಗೆ ನೀಡಿದರು. ಹಲವಾರು ವರ್ಷಗಳ ಕಳೆದ ನಂತರ ಪ್ರವಾದಿವರ್ಯ ಬಳಿ ಬಂದು ಇಸ್ಲಾಂ ಸ್ವೀಕರಿಸಿದನು. ಖದೀದ್ ದಾರಿಯಲ್ಲಿ ಪ್ರವಾದಿವರ್ಯರು ಆತನಲ್ಲಿ ಕಿಸ್‌ರಾ ರಾಜನ ಬಳೆ ಧರಿಸುವ ಕಾಲ ಬಂದರೆ ಏನಾಗಬಹುದು ? ಕಿಸ್‌ರಾ ಬಿನ್ ಹರ್‌ಮಝ್ ಎಂದು ಆಶ್ಚರ್ಯದಿಂದ ಕೇಳಿದಾಗ ಪ್ರವಾದಿವರ್ಯರು ಹೌದೆಂದರು. ಉಮರ್(ರ) ರವರ ಕಾಲದಲ್ಲಿ ಫಾರಿಸ್ ಮುಸ್ಲಿಮರ ವಶವಾದಾಗ ಸಮರಾ ರ್ಜಿತ ಸೊತ್ತಿನಲ್ಲಿ ಕಿಸ್‌ರಾ ರಾಜನ ಬಳೆ ಇತ್ತು. ಅದನ್ನು ಉಮರ್(ರ) ರವರು ಸುರಾಖತ್(ರ) ರವರ ಕೈಗೆ ಹಾಕಿದರು.
*ಖುಬಾಅ್ ನಲ್ಲಿ ಪ್ರವಾದಿವರ್ಯರು*-
...........................................
.............
ಮದೀನಾ ಮುಸ್ಲಿಮರಿಗೆ ಪ್ರವಾದಿವರ್ಯರು ಹಿಜ್ರಾ ಹೊರಟ ಸುದ್ದಿ ಸಿಕ್ಕಿತು. ಅವರು ಹರ್ರಃ ಎಂಬ ಸ್ಥಳಕ್ಕೆ ಮುಂಜಾನೆ ಬಂದು ಕಾಯುತ್ತಿದ್ದರು. ದೀರ್ಘ ಸಮಯ ಕಾದ ನಂತರ ಮನೆಗೆ ಮರಳಿದರು. ಆಗ ಓರ್ವ ಯಹೂದಿ ಕೋಟೆಯ ಮೇಲಿಂದ ಕೂಗಿ ಹೇಳಿದ “ ಓ ಅರಬ್ ಸಮೂಹವೇ . . . . ಇಂದು ನಿಮ್ಮ ಸಂತಸದ ಸಮಯ.ನೀವು ಕಾಯುತ್ತಿರುವುದು ತಲುಪಲು ಸನ್ನಿಹಿತವಾಗಿದೆ” ಸುಮಾರು 500ರಷ್ಟು ಮಂದಿ ಪ್ರವಾದಿವರ್ಯರನ್ನು ಸ್ವೀಕರಿಸಲು ಹರ್ರಃದೆಡೆಗೆ ಹೋದರು . ಪ್ರವಾದಿವರ್ಯರು ಮದೀನಾದ ಸಮೀಪದ ಖುಬಾಅ್ ಎಂಬಲ್ಲಿ ಬನೂ ಅಮ್ರ್ ಬಿನ್ ಔಫ್ ಗೋತ್ರದರ ಮನೆಯಲ್ಲಿ ತಂಗಿದರು. ಅಂದು ರಬೀವುಲ್ ಅವ್ವಲ್ 8 ಸೋಮ ವಾರ. ನಂತರ ನಾಲ್ಕು ದಿನಗಳು ಅಲ್ಲಿ ವಾಸಿಸಿದರು. ಈ ಸಮಯದಲ್ಲಿ ಖುಬಾಅ್‌ನಲ್ಲಿ ಮಸೀದಿಯೊಂದಕ್ಕೆ ಶಿಲಾನ್ಯಾಸ ಮಾಡಿದರು. ಇಸ್ಲಾಮ್ ಇತಿಹಾಸದಲ್ಲಿ ಮದೀನಾದಲ್ಲಿ ನಿರ್ಮಿಸಿದ ಮೊದಲ ಮಸೀದಿ. ಪ್ರವಾದಿವರ್ಯರು ಮದೀನಾಗೆ ಹಿಜ್ರಾ ಬಂದ ನಂತರವೂ ಅಲಿಯ್ಯ್(ರ) ರವರು ಮಕ್ಕಾದಲ್ಲಿ ಮೂರು ದಿನಗಳ ಕಾಲ ತಂಗಿದರು. ಯಾಕೆಂದರೆ . . . ಪ್ರವಾದಿವರ್ಯರಲ್ಲಿ ಮಕ್ಕಾದ ಜನತೆ ಸಂರಕ್ಷಿಸಿಡಲು ನೀಡಿದ್ದ ವಸ್ತುಗಳನ್ನು ಸುರಕ್ಷಿತವಾಗಿ ಮರಳಿಸುವ ಸಲುವಾಗಿತ್ತು. ಮೂರು ದಿನಗಳ ನಂತರ ಮದೀನಾಗೆ ಹಿಜ್ರ ಬಂದು ಖುಬಾಅ್‌ನಲ್ಲಿ ಪ್ರವಾದಿವರ್ಯ ರೊಂದಿಗೆ ಸೇರಿಕೊಂಡರು.
*ಮುಂದುವರಿಯುವುದು*
Post a Comment