ಮದೀನಾ ಮಹತ್ವ ಇತಿಹಾಸ ಅಧ್ಯಾಯ 24

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 24*🍃
         💜💜💜💜💜💜💜

 ❤️ *ಮಸ್ಜಿದುನ್ನಬವಿಯ ಮಿನಾರಗಳು*
 ❤️ *ಮಸ್ಜಿದುನ್ನಬವಿಯ ಮಿಹ್ರಾಬ್ ಗಳು* -
🌹🌹🌹🌹🌹🌹🌹🌹🌹🌹🌹
        ಪ್ರವಾದಿವರ್ಯರ ಹಾಗೂ ನಾಲ್ಕು ಖಲೀಫರ ಕಾಲದಲ್ಲಿ ಮಸ್ಜಿದುನ್ನಬವಿಗೆ ಯಾವುದೇ ಮಿನಾರಗಳಿರಲಿಲ್ಲ. ಹಿಜ್ರಾ 88ರಲ್ಲಿ ನಡೆದ ಪುನರ್ ನಿರ್ಮಾಣ ಕಾರ್ಯದಲ್ಲಿ ಉಮರ್ ಬಿನ್ ಅಬ್ದುಲ್ ಅಝೀಝ್(ರ) ರವರು ಮಸೀದಿಗೆ 4 ಮಿನಾರಗಳನ್ನು ನಿರ್ಮಿಸಿದರು. ಮಸೀದಿ ನಾಲ್ಕು ಮೂಲೆಯಲ್ಲಿ ಒಂದೊಂದು ಮಿನಾರವನ್ನು ಸ್ಥಾಪಿಸಿದರು. ಈ ಘಟನೆಯಿಂದ ಮಿನಾರಗಳು ಮಸೀದಿಯ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿತು. ಮಿನಾರಗಳನ್ನು ನಿರ್ಮಿಸಲ್ಪಟ್ಟ ನಂತರ ಮುಅದ್ಸಿನ್‌ಗಳು ಮಿನಾರದಲ್ಲಿ ಬಾಂಗ್ ಕೊಡುತ್ತಿ ದ್ದರು. ಮಸ್ಜಿದಿನ್ನಬವಿಯ ಪಶ್ಚಿಮ ಹಾಗೂ ದಕ್ಷಿಣ ಭಾಗಗಳು ಸಂದಿಸುವ ಮೂಲೆಯಲ್ಲಾಗಿದೆ ಬಾಂಗ್ ಕೊಡುವ ಮಿನಾರ ಇರುವುದು. ಇದಕ್ಕೆ ಮಿನಾರ ತುರಈಸಿಯ್ಯ ಎಂದು ಕೂಡಾ ಕರೆಯುತ್ತಾರೆ . ಖಾಇತುಬಾಯಿಯ ಕಾಲದಲ್ಲಿ ಸಿಡಿಲಿನ ಕಾರಣದಿಂದಾಗಿ ಮಸ್ಜಿದುನ್ನಬವಿಗೆ ಬೆಂಕಿ ಹಿಡಿ ದಾಗ ಈ ಮಿನಾರ ನಶಿಸಿ ಹೋಗಿತ್ತು. ಹಿಜ್ರಾ 392ರಲ್ಲಿ ಇವರು ಪುನಃ ನಿರ್ಮಿಸಿದರು . ಸುಲ್ತಾನ್ ಅಬ್ದುಲ್ ಮಜೀದಿನ ಕಾಲದಲ್ಲಿ ಮದುನ್ನಬವಿಗೆ ಒಂದು ಮಿನಾರವನ್ನು ಹೆಚ್ಚಿಸಲಾಯಿತು . ಆದರೆ ಆಲುಸಊದರು ಆಡಳಿತದ ಚುಕ್ಕಾಣಿ ಹಿಡಿದಾಗ ಈ ಮಿನಾರವನ್ನು ತೆರವುಗೊಳಿದ ನಂತರ ಮಸ್ಜಿದುನ್ನಬವಿಗೆ ನಾಲ್ಕು ಮಿನಾರವಾಗಿದೆ ಇರುವುದು. ಈ ಇವುಗಳನ್ನು ಉತ್ತಮ ವಿನ್ಯಾಸದೊಂದಿಗೆ ನಿರ್ಮಿಸಿದ್ದಾರೆ .

*ಮಸ್ಜಿದುನ್ನಬವಿಯ ಮಿಹ್ರಾಬ್ ಗಳು* -
..........................................................
           ಅರಬಿಯಲ್ಲಿ ಮಿಹ್ರಾಬ್ ಎಂದರೆ ನಮಾಝ್ ಮಾಡುವ ಸ್ಥಳ ಎಂದರ್ಥ. ಮದೀನಾ ಮಸೀದಿಯಲ್ಲಿ ಇಂತಹ ಹಲವಾರು ಮಿಹ್ರಾಬ್‌ಗಳನ್ನು ಕಾಣಬಹುದು. ಅವುಗಳಿಗೆ ಹಲವಾರು ಮಹತ್ವಗಳಿವೆ.

 1= ಮಿಹ್ರಾಬುನ್ನಬವಿ
             ಮಸ್ಜಿದುನ್ನಬವಿಯಲ್ಲಿ ಪ್ರವಾದಿವರ್ಯರು ನಮಾಝ್ ಮಾಡಿದ ಸ್ಥಳವನ್ನು ಪ್ರತ್ಯೇಕ ಒಂದು ಮಿಹ್ರಾಬಾಗಿ ಇಂದಿನ ಹಾಗೆ ಮಾಡಿರಲಿಲ್ಲ. ಕಾರಣ ಪ್ರವಾದಿವರ್ಯರ ಹಾಗೂ ನಾಲ್ಕು ಖಲೀಫರ ಕಾಲದಲ್ಲಿ ಮಿಹ್ರಾಬಿನ ವ್ಯವಸ್ಥೆ ಇರಲಿಲ್ಲ. ಇಂದು ಕಾಣುವ ಈ ಮಿಹ್ರಾಬಿನ ಶೈಲಿಯನ್ನು ಜಾರಿಗೆ ತಂದದ್ದು 5ನೇ ಖಲೀಫಾ ಎಂದು ಖ್ಯಾತರಾದ ಉಮರ್ ಬಿನ್ ಅಬ್ದುಲ್ ಅಝೀಝ್(ರ) ವರಾಗಿದ್ದಾರೆ. ಪ್ರವಾದಿವರ್ಯರು ಮದೀನಾದಲ್ಲಿ 16 ತಿಂಗಳು ಹಾಗೂ ಕೆಲವು ದಿನಗಳು ಬೈತುಲ್ ಮುಖದ್ದಸಿಗೆ ಅಭಿಮುಖವಾಗಿ ನಮಾಝ್ ಮಾಡಿದ್ದರು. ನಂತರ ಪ್ರವಾದಿವರ್ಯರು
ಬಯಸಿದ ಹಾಗೆ ಖುರ್‌ಆನ್ ಸೂಕ್ತ ಅವತೀರ್ಣಗೊಂಡಿತು. ಆಗ ಉಸ್ತುವಾನತುಲ್ ಆಯಿಶಾಗೆ ನೇರವಾಗಿ ನಮಾಝ್ ಮಾಡುತ್ತಿದ್ದ ಪ್ರವಾದಿವರ್ಯರು ಅಲ್ಲಿಂದ ತಿರುಗಿ ಖರ್ಜೂರ ಮರದ ಸ್ಥಂಬವಿದ್ದಲ್ಲಿಗೆ ನಮಾಝ್ ಮಾಡಿದರು. ನಂತರ ಇದನ್ನು ಮಿಹ್ರಾಬಾಗಿ ಮಾರ್ಪಾಡು ಮಾಡಲಾಯಿತು. ಇದೇ ಸ್ಥಳದಲ್ಲಾಗಿದೆ ಉಸ್ತುವಾನತುಲ್ ಮುಖಲ್ಲಖ್ ಇರುವುದು .

 2 = ಮಿಹ್ರಾಬುಲ್ ಉಸ್ಮಾನಿಯ್ಯ.  
         ಇದು ಉಸ್ಮಾನ್(ರ) ರವರು ಜನರಿಗೆ ಇಮಾಮರಾಗಿ ನಮಾಜು ಮಾಡಿದ ಸ್ಥಳವಾಗಿದೆ . ಉಸ್ಮಾನ್(ರ) ರವರ ಆಡಳಿತ ಕಾಲದಲ್ಲಿ ಮಸ್ಜಿದುನ್ನಬವಿಯನ್ನು ವಿಶಾಲಗೊಳಿಸಿದಾಗ ಸಹಜ ವೆಂಬಂತೆ ಇಮಾಮತ್ತಿನ ಸ್ಥಳ ಬೇರೆಯಾಯಿತು. ಇಮಾಮರಾಗಿದ್ದ ಉಮರ್ (ರ) ರವರು ಶತ್ರುವಿನಿಂದ ತಿವಿಯಲ್ಪಟ್ಟಂತಹ ಸಂಗತಿ ಉಂಟಾಗದಿರಲು ಈ ಸ್ಥಳದ ಹತ್ತಿರ ಇಟ್ಟಿಗೆಯಿಂದ ಎತ್ತರಿಸಿ ಕಟ್ಟಿದರು. ಉಮರ್ ಬಿನ್ ಅಬ್ದುಲ್ ಅಝೀಝ್(ರ) ರವರು ಇದನ್ನು ಪುನರ್ ನಿರ್ಮಾಣ ಮಾಡಿ ಮಿಹ್ರಾಬ್ ಉಸ್ಮಾನಿಯ ಎಂದು ನಾಮಕರಣ ಮಾಡಿದರು. 

3= ಮಿಹ್ರಾಬುತ್ತಹಜ್ಜುದ್
         ಪ್ರವಾದಿವರ್ಯರು ರಾತ್ರಿ ನಮಾಜ್ ಮಾಡುವ ಸ್ಥಳವಾಗಿದೆ ಇದು. ಪ್ರವಾದಿವರ್ಯರು ರಾತ್ರಿ ನಮಾಝ್ ಮಾಡುತಿದ್ದದ್ದು ಇಲ್ಲಿಯಾಗಿದೆ ಎಂದು ಈಸಾ ಬಿನ್ ಅಬಿದಿಲ್ಲಾಹಿ ಎಂಬವರು ತನ್ನ ತಂದೆಯವರಿಂದ ವರದಿ ಮಾಡಿದ್ದಾರೆ. ಈ ಉಸ್ತುವಾನತ್ ಫಾತಿಮಾ(ರ) ರವರ ಮನೆಯ ಹಿಂಭಾಗದಲ್ಲಾಗಿತ್ತು. ಪ್ರಸ್ತುತ ಈ ಮಿಹ್ರಾಬನ್ನು ಇಂದು ಮುಸ್ಹಫ್ ತೆಗೆದಿರಿಸುವ ಸ್ಥಳವಾಗಿ ಮಾರ್ಪಡಿಸಲಾಗಿದೆ . 

4= ಮಿಹ್ರಾಬು ಫಾತಿಮಾ :
            ಮಿಹ್ರಾಬ್ ತಹಜ್ಜುದಿನ ಮುಂಭಾಗದಲ್ಲಾಗಿದೆ ಈ ಮಿಹ್ರಾಬ್ ಇರುವುದು. ಇಬ್ನು ನಜ್ಜಾರ್(ರ) ರವರು ಹೇಳುತ್ತಾರೆ “ಫಾತಿಮಾ(ರ) ರವರ ಮನೆಯನ್ನು ಈಗ ರೂಮನ್ನಾಗಿ ಮಾಡಲಾಗಿದೆ. ಅದರಲ್ಲಿ ಒಂದು ಮಿಹ್ರಾಬಿದೆ. ಅದು ಪ್ರವಾದಿವರ್ಯರ ಹುಜ್ರತು ಶರೀಫ್‌ನ ಹಿಂಬಾಗದಲ್ಲಾಗಿತ್ತು.

5= ಮಿಹ್ರಾಬುಲ್ ಹನಫಿಯ್ಯ್
             ಮಸ್ಜಿದುನ್ನಬವಿಯಲ್ಲಿ ನಡೆಯುವ ಇಮಾಮತ್ ಮಾಲಿಕಿ ಮದ್ಸ್ ಹಬ್ ಪ್ರಕಾರವಾಗಿದೆ. ಆದರೆ 9ನೇ ಶತಮಾನದಲ್ಲಿ ಶಾಫಿ ಮದ್ಹಬಿನ ಒಂದು  ಇಮಾಮರನ್ನು ನೇಮಿಸಲಾಯಿತು. ಮಾಲಿಕ್ ಮದ್ಹಬಿನ ಇಮಾಂ ಸುಬ್ಹ್ ನಮಾಜ್ ಮಾಡುವ ಮೊದಲು ಶಾಫೀ ಮದ್ಸ್ ಅಬಿನ  ಹಬಿನ ಇಮಾಂ ನಮಾಝ್ ಮಾಡುತ್ತಿದ್ದರು . ನಂತರ ಮಾಲಿಕ್ ಮದ್ಹಬಿನ ಇಮಾಂ ಸುಬ್ಹಿ ನಮಾಜ್ ಮಾಡುವರು . ಬೇರೆ ವಕ್ತಿನಲ್ಲಿ ಮಾಲಿಕಿ ಮದ್ವಿಜ್‌ಬಿನ ಇಮಾಂ ಮೊದಲು ನಮಾಜ್ ಮಾಡುತ್ತಿದ್ದರು . ನಂತರ ಶಾಫಿ ಮದ್ಸ್ ಹಬಿನ ಇಮಾಂ ನಮಾಜ್ ಮಾಡುತ್ತಿದ್ದರು. ಆದರೆ 9ನೇ ಶತಮಾನದ ಮಧ್ಯಭಾಗದಲ್ಲಿ ಹನಫೀ ಮದ್ಸ್ ಹಬಿನ ಒಂದು ಇಮಾಮನ್ನು ನಿಶ್ಚಯಿಸಿ ಒಂದು ಮಿಹ್ರಾಬಿನ ವ್ಯವಸ್ಥೆ ಮಾಡಲಾಯಿತು. ಆದರಿಂದ ಇದು ಮಿಹ್ರಾಬುಲ್ ಹನಫಿಯ್ಯಾ ಎಂದು ಪ್ರಸಿದ್ದಿಯಾಗಿದೆ. ಇದನ್ನು ನಿರ್ಮಿಸಿದ್ದು ಶೈಖ್ ತೌಗಾನ್ ಎಂಬವರು. ಇದಕ್ಕೆ ವಿನ್ಯಾಸವನ್ನು ತುಂಬಿದ್ದು ಸುಲ್ತಾನ್ ಸುಲೈಮಾನ್ ಖಾನ್‌ರವರಾಗಿದ್ದಾರೆ. ಆದ್ದರಿಂದರಿಂದ ಇದನ್ನು ಮಿಹ್ರಾಬು ಸುಲೈಮಾನ್ ಎಂದು ಕೂಡಾ ಕರೆಯುತ್ತಾರೆ.

     *ಮುಂದುವರಿಯುವುದು*