ಮದೀನಾ ಮಹತ್ವ ಇತಿಹಾಸ ಅಧ್ಯಾಯ 20

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 20*🍃
         💜💜💜💜💜💜💜

 ❤️ *ನಾಲ್ಕು ಖಲೀಫರ ಕಾಲದಲ್ಲಿ . . .*
 ❤️ *ವಲೀದ್ ಬಿನ್ ಅಬ್ದುಲ್ ಮಲಿಕ್‌ನ ಕಾಲದಲ್ಲಿ*
🌹🌹🌹🌹🌹🌹🌹🌹🌹🌹🌹
               ನಾಲ್ಕು ಖಲೀಫರ ಕಾಲದಲ್ಲಿ ಮಸ್ಜಿದುನ್ನಬವಿ ಅಮೂಲಾಗ್ರ ಬದಲಾವಣೆ ಕಂಡಿದೆ . ಹಿಜ್ರಾ ಏಳನೇ ವರ್ಷ ಪ್ರವಾದಿವರ್ಯರು ಮಸೀದಿಯನ್ನು ಸಾಕಷ್ಟು ವಿಕಸನಗೊಳಿಸಿದ ಕಾರಣ ಅಬೂಬಕರ್ ಸಿದ್ದೀಕ್(ರ) ರವರು ಈ ಕಾರ್ಯಕ್ಕೆ ಮುಂದಾಗಲಿಲ್ಲ. ಆದರೆ ಪ್ರವಾದಿವರ್ಯರ ಕಾಲದಲ್ಲಿ ಸ್ಥಾಪಿಸಿದ ಕೆಲವೊಂದು ಸ್ಥಂಬಗಳು ಕೆಳಗುರುಳಿದಾಗ ಖರ್ಜೂರ ಮರದ ಬೇರೆ ಸ್ಥಂಬಗಳನ್ನು ಹಾಕಿದ್ದಾರೆ. ಎರಡನೇ ಖಲೀಫಾ ಉಮರುಲ್ ಫಾರೂಖ್(ರ) ರವರ ಕಾಲದಲ್ಲಿ ಮಸೀದಿಯಲ್ಲಿ ಕೆಲವು ಬದಲಾವಣೆಗಳು ಸಂಭವಿಸಿದೆ. ಅಬ್ದುಲ್ಲಾಹಿಬಿನ್ ಉಮರ್(ರ) ರವರಿಂದ ವರದಿ ; ಪ್ರವಾದಿವರ್ಯರ ಕಾಲದಲ್ಲಿ ಇಟ್ಟಿಗೆ ಹಾಗೂ ಖರ್ಜೂರ ಮರದ ತುಂಡುಗಳಿಂದಾಗಿದೆ ಮಸೀದಿಯನ್ನು ನಿರ್ಮಿಸಿದ್ದು . ಮುಜಾಹಿದ್(ರ) ಹೇಳುತ್ತಾರೆ “ ಅದರ ಸ್ಥಂಬ ಖರ್ಜೂರದ ಮರವಾಗಿತ್ತು . ಅಬೂಬಕರ್ ಸಿದ್ದೀಖ್(ರ) ರವರ ಕಾಲದಲ್ಲಿ ಯಾವುದೇ ಬದಲಾವಣೆ ಉಂಟಾಗಲಿಲ್ಲ . ಉಮರ್ (ರ) ರವರು ಪ್ರವಾದಿವರ್ಯರ ಕಾಲದಲ್ಲಿ ನಿರ್ಮಿಸಿದ್ದನ್ನು ಇಟ್ಟಿಗೆ ಹಾಗೂ ಖರ್ಜೂರದ ಮರದಿಂದ ನಿರ್ಮಿಸಿದರು. - ಉಮರ್ (ರ) ರವರ ಕಾಲದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾದ ಕಾರಣ ಮಸೀದಿಯಲ್ಲಿ ಸ್ಥಳಾವಕಾಶ ಕಡಿಮೆಯಾಯಿತು. ಜನರು ಈ ಬಗ್ಗೆ ಉಮರ್(ರ) ರಲ್ಲಿ ಅಪೇಕ್ಷಿಸಿದಾಗ ಮಸೀದಿಯನ್ನು ವಿಶಾಲಗೊಳಿಸಿದರು. ಇದರಿಂದಾಗಿ ಮಸೀದಿ 140 ಅಡಿ ಉದ್ದ ಹಾಗೂ 120 ಅಡಿಯಷ್ಟು ವ್ಯಾಪ್ತಿ ಉಂಟಾಯಿತು. ಮಸೀದಿಯ ಪೂರ್ವ ಭಾಗದಲ್ಲಿ ಬಾಬುನ್ನಿಸಾ  ತೆರೆದದ್ದು ಈ ಸಮಯದಲ್ಲಾಗಿದೆ. ಮದೀನಾ 3ನೇ ಖಲೀಫಾ ಉಸ್ಮಾನ್ ಬಿನ್ ಅಫ್ಘಾನ್(ರ) ರವರ ಕಾಲದಲ್ಲಿ ಮಸೀದಿಯಲ್ಲಿ ವಿಶೇಷ ಬದಲಾವಣೆ ಉಂಟಾಗಿದೆ . ಉಸ್ಮಾನ್(ರ) ರವರು ಅಧಿಕಾರ ವಹಿಸಿದ ನಾಲ್ಕನೇ ವರ್ಷದಲ್ಲಿ ಜನರು ಮಸ್ಜಿದುನ್ನಬವಿಯ ಸಮಸ್ಯೆಗಳ ಕುರಿತು ಖಲೀಫರಲ್ಲಿ ಹೇಳಿಕೊಂಡರು. ಈ ವಿಷಯವನ್ನು ಚರ್ಚೆ ಮಾಡಿದ ನಂತರ ಮಿಂಬರಿಗೆ ಹತ್ತಿ ಭಾಷಣ ಮಾಡುತ್ತಾ ಹೇಳು ತ್ತಾರೆ “ಇಂತಹ ಕಾರ್ಯದಲ್ಲಿ ನನಗಿಂತ ಮೊದಲು ಉಮರ್ (ರ) ರವರು ಮುಂದಿ ದ್ದಾರೆ” ಉಮರ್ (ರ) ರವರ ಈ ಕಾರ್ಯವನ್ನು ಪ್ರಶಂಸಿಸಿ ಅವರಿಗೆ ದುಆ ಮಾಡಿದರು . ವಿಶೇಷ ಕಲ್ಲುಗಳಿಂದ ಮಸೀದಿಯ ಸ್ಥಂಬಗಳನ್ನು ನಿರ್ಮಿಸುವುದರ ಜೊತೆಗೆ ವಿಶೇಷ ಮೇಲ್ಚಾವಣಿಯನ್ನೂ ಅವಳವಡಿಸಿದರು. ಈ ವಿಕಸನ ಪ್ರಕ್ರಿಯೆಯಲ್ಲಿ ಮಸೀದಿಯ ವ್ಯಾಪ್ತಿ 160 ಅಡಿ ಉದ್ದ ಹಾಗೂ 150 ಅಡಿ ಅಗಲವಾಯಿತು. ಹಿಜ್ರಾ 29ನೇ ವರ್ಷ ರಬೀವುಲ್ ಅವ್ವಲಿನಲ್ಲಿ ಪ್ರಾರಂಭಗೊಂಡ ಈ ಮಸ್ಜಿದುನ್ನಬವಿ ವಿಕಸನ ಪಕ್ರಿಯೆ ಹಿಜ್ರಾ 30 ಮುಹರ್ರಮಿ ನಲ್ಲಿ ಕೊನೆಗೊಂಡಿತು. ನಾಲ್ಕನೇ ಖಲೀಫಾ ಅಲಿಯ್(ರ) ರವರ ಕಾಲದಲ್ಲಿ ಯಾವುದೇ ವಿಕಸನ ನಡೆಯಲಿಲ್ಲ. ಉಸ್ಮಾನ್(ರ) ರವರ ಕಾಲದಲ್ಲಿ ನಡೆದ ಈ ಕಾಮಗಾರಿ ಭದ್ರವಾಗಿತ್ತು. ಆದ್ದರಿಂದ ಯಾವುದೇ ವಿಕಸನ ಪ್ರಕ್ರಿಯೆ ಅಗತ್ಯವಿರಲಿಲ್ಲ. ಈ ನಾಲ್ಕು ಖಲೀಫರುಗಳ ಕಾಲದಲ್ಲಿ ಮಸೀದಿಯ ಸಮೀಪ ವಿದ್ದ ಪ್ರವಾದಿ ಪತ್ನಿಯರ ಮನೆಗಳನ್ನು ಮಸೀದಿಯ ವ್ಯಾಪ್ತಿಗೆ ಒಳಪಡಿಸಿರಲಿಲ್ಲ.

*ವಲೀದ್ ಬಿನ್ ಅಬ್ದುಲ್ ಮಲಿಕ್‌ನ ಕಾಲದಲ್ಲಿ*
..........................................................
         ಮೂರನೇ ಖಲೀಫ ಉಸ್ಮಾನ್ ( ರ ) ರವರ ಆಡಳಿತದ ನಂತರ ಮದುನ್ನಬವಿಯ ಪುನರ್ ನಿರ್ಮಾಣ ನಡೆದದ್ದು ಉಮವಿಯ್ಯಾ ಆಡಳಿತದ ಪ್ರಮುಖರಾದ ವಲೀದ್ ಬಿನ್ ಅಬ್ದುಲ್ ಮಲಿಕ್‌ರವರ ಕಾಲದಲ್ಲಾಗಿದೆ. ಇಮಾಂ ಸುಂಹೂದಿ ( ರ ) ರವರು ತನ್ನ ವಫಾಉಲ್ ವಫಾ ಎಂಬ ಗ್ರಂಥದಲ್ಲಿ ಹೇಳುತ್ತಾರೆ “ ವಲೀದ್ ಬಿನ್ ಅಬ್ದುಲ್ ಮಲಿಕ್‌ರವರ ಆಡಳಿತ ಕಾಲದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾದ ಕಾರಣ ಮದುನ್ನಬವಿಯಲ್ಲಿ ನಮಾಝ್ ಮಾಡಲು ತೊಡಕಾಗುತಿತ್ತು . ಶುಕ್ರವಾರದ ಜುಮುಅ ಸಮಯದಲ್ಲಿ ಜನರು ಪ್ರವಾದಿ ಪತ್ನಿ ಯರ ಹುಜ್ರತ್‌ಗಳಲ್ಲಿ ನಮಾಝ್ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾದಾಗ ಮಸೀದಿ ಯನ್ನು ವಿಶಾಲಗೊಳಿಸಲು ಯೋಜನೆಗಳನ್ನು ಹಾಕಿ ಪ್ರವಾದಿ ಪತ್ನಿಯರ ಹಜ್ರತ್‌ಗಳನ್ನು ಮಸೀದಿ ವ್ಯಾಪ್ತಿಗೆ ಸೇರಿಸಲಾಯಿತು. ಈ ಮೊದಲು ಮಸೀದಿ ವಿಕಸನ ಪ್ರಕ್ರಿಯೆಗೆ ನೇತೃತ್ವ ನೀಡಿದ ಖಲೀಫರಲ್ಲಿ ಯಾರೂ ಕೂಡಾ ಪ್ರವಾದಿ ಪತ್ನಿಯರ ಹುಜ್ರತ್‌ಗಳನ್ನು ಮಸೀದಿ ವ್ಯಾಪ್ತಿಗೆ ಒಳಪಡಿಸಿರಲಿಲ್ಲ. ನಂತರ ವಲೀದ್ ಬಿನ್ ಅಬ್ದುಲ್ ಮಲಿಕ್‌ರವರ ಕಾಲದಲ್ಲಿ ಹೀಗೆ ಮಾಡಲಾಯಿತು.ಇವರ ಆಡಳಿತದ ಸಮಯದಲ್ಲಿ ಪ್ರವಾದಿ ಪತ್ನಿಯರೆಲ್ಲರೂ ಮರಣಹೊಂದಿದ್ದರು . ಇವರಲ್ಲಿ ಕೊನೆಯದಾಗಿ ಮರಣ ಹೊಂದಿದ್ದು ಉಮ್ಮ ಸಲಮ ( ರ ) ರವರು . ಇದು ಹಿಜ್ರಾ 59 ಅಥವಾ 61ನೇ ವರ್ಷದಲ್ಲಾಗಿದೆ . ವಲೀದ್‌ರವರು ಮಸೀದಿ ವಿಕಸನ ಪ್ರಕ್ರಿಯೆ ಪ್ರಾರಂಭಿಸಿದ್ದು ಹಿಜ್ರಾ 88ರಲ್ಲಾಗಿದೆ . ಮದೀನಾದಲ್ಲಿ ವಲೀದ್‌ರವರ ಗವರ್ನರಾಗಿದ್ದ ಉಮರ್‌ಬಿನ್ ಅಬ್ದುಲ್ ಅಝೀಝ್ ( ರ ) ರ ನೇತೃತ್ವದಲ್ಲಿ ಈ ಕೆಲಸ ಕಾರ್ಯ ನಡೆಯಿತು . ಈ ಮಸೀದಿಯ ಅಡಿಪಾಯವನ್ನು ಕಲ್ಲಿನಿಂದ ನಿರ್ಮಿಸಿ ಗೋಡೆಯನ್ನು ಭದ್ರ ಮಾಡಲಾಗಿತ್ತು . ಈ ಸಮಯದಲ್ಲಿ ಮದುನ್ನಬವಿ ಯಲ್ಲಿ 20 ಬಾಗಿಲುಗಳನ್ನು ನಿರ್ಮಿಸಲಾಗಿತ್ತು ಎಂದು ಮದೀನಾ ಇತಿಹಾಸಕಾರರು ಉಲ್ಲೇಖಿಸಿದ್ದಾರೆ . ಹಿಜ್ರ 88ನೇ ವರ್ಷ ರಬೀವುಲ್ ಅವ್ವಲಿನಲ್ಲಿ ಆರಂಭಗೊಂಡ ಈ ಕೆಲಸ ಹಿಜ್ರಾ 91ರಲ್ಲಿ ಕೊನೆಗೊಂಡಿತ್ತು .

   *ಮುಂದುವರಿಯುವುದು*