ಮದೀನಾ ಮಹತ್ವ ಇತಿಹಾಸ ಅಧ್ಯಾಯ 19
*
🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
*ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
*ಸಂಗ್ರಹ: ಯಾಸೀನ್ ನಾವೂರ್*
🍃 *ಅಧ್ಯಾಯ 19*🍃
💜💜💜💜💜💜💜
❤️ *ಮಸ್ಜಿದುನ್ನಬವಿ*
❤ *ಮಸೀದಿಯ ನಿರ್ಮಾಣ . . .*
❤️ *ಮಸೀದಿಯ ವಿಕಸನ ಪ್ರಕ್ರಿಯೆ*
🌹🌹🌹🌹🌹🌹🌹🌹🌹🌹🌹
ಪ್ರವಾದಿವರ್ಯರ ಮಸೀದಿ. ಅದರ ನಿರ್ಮಾಣ ಕಾರ್ಯದಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ನೇರವಾಗಿ ಭಾಗಿಯಾಗಿದ್ದರು. ಇಸ್ಲಾಮಿನ ಸುಂದರ ಆಶಯ ಆದರ್ಶಗಳನ್ನು ಸ್ವಹಾಬಿಗಳು ಕಲಿತ ಮದರಸ ಕೂಡಾ ಹೌದು. 'ನನ್ನ ಮಸೀದಿ' ಎಂದು ಪ್ರವಾದಿವರ್ಯರು ಹೇಳಿದ್ದಾಗಿ ಹದೀಸಿನಲ್ಲಿ ಕಾಣಬಹುದು. ಈ ಮಸೀದಿಯಲ್ಲಿ ನಿರ್ವಹಿಸಲ್ಪಡುವ ನಮಾಝಿಗೆ ದುಪ್ಪಟ್ಟು ಪುಣ್ಯವಿದೆ. ಅಂದರೆ ಈ ಮಸೀದಿಯಲ್ಲಿನ ಒಂದು ನಮಾಝ್ ಬೇರೆ ಮಸೀದಿಯಲ್ಲಿ ನಿರ್ವಹಿಸಲ್ಪಡುವ ಸಾವಿರ ನಮಾಝುಗಳಿಗಿಂತ ಶ್ರೇಷ್ಠವಾಗಿರುತ್ತದೆ. ಇಸ್ಲಾಮಿನ ಇತಿಹಾಸದಲ್ಲಿ ಅತ್ಯಂತ ಪಾವಿತ್ರ್ಯತೆಯಿರುವ ಮಸೀದಿಗಳು ಮೂರು. ಅವುಗಳಲ್ಲಿ ಒಂದಾಗಿದೆ ಮದೀನಾದ ಮದುನ್ನಬವಿ. ಪ್ರವಾದಿವರ್ಯರು ಪವಿತ್ರ ಇಸ್ಲಾಮಿನ ಪ್ರಭೋಧನಾ ದೌತ್ಯದೊಂದಿಗೆ ಬಂದ ನಂತರ ಎರಡನೆಯದಾಗಿ ಶಿಲಾನ್ಯಾಸ ಮಾಡಲ್ಪಟ್ಟ ಮಸೀದಿ ಯಾಗಿದೆ ಇದು. ಇದರ ನಿರ್ಮಾಣ ಕಾರ್ಯದಲ್ಲಿ ನೇರವಾಗಿ ಭಾಗಿಯಾದ ಪ್ರವಾದಿವರ್ಯ ರು ಸ್ವಹಾಬಿಗಳೊಂದಿಗೆ ಕಲ್ಲು - ಇಟ್ಟಿಗೆಗಳನ್ನು ಸಾಗಿಸಿದ್ದರು. ಮಸೀದಿ ನೆಲೆ ನಿಂತಿರುವುದು ಮದೀನಾದ ಹೃದಯ ಭಾಗದಲ್ಲಿ ಜನರಿಗೆ ಇಸ್ಲಾಮಿನ ಸಂದೇಶಗಳನ್ನು ತಲುಪಿಸಲ್ಪಟ್ಟ ಮೊದಲ ಕೇಂದ್ರ. ದಿವ್ಯ ಸಂದೇಶದ ವಿವರಣೆ , ಆರಾಧನೆ - ವಹಿವಾಟು ಸಂಬಂಧಿತವಾದ ಧಾರ್ಮಿಕ ನಿಯಮಗಳನ್ನು ಜನರಿಗೆ ಪ್ರವಾದಿವರ್ಯರು ತಿಳಿಸಿಕೊಡುತ್ತಿದ್ದದ್ದು ಈ ಮಸೀದಿಯಲ್ಲಾಗಿದೆ. ತಕ್ವಾದ ಮೇಲೆ ನಿರ್ಮಿಸಲಾದ ಮಸೀದಿ ಎಂದು ಖುರ್‌ಆನ್ ಪರಾಮರ್ಶಿಸಿದ ಮಸೀದಿಯಾಗಿದೆ ಈ ಮದುನ್ನಬವಿ ಎಂದು ಕೆಲವು ವಿದ್ವಾಂಸರು ಹೇಳಿದ್ದಾರೆ .
*ಮಸೀದಿಯ ನಿರ್ಮಾಣ . . .*
....................................
................
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮಕ್ಕಾದಿಂದ ಪವಿತ್ರ ಮದೀನಾಗೆ ಹಿಜ್ರಾ ಬಂದಾಗ ಒಂಟೆ ಮಂಡಿಯೂರಿದ ಸ್ಥಳದಲ್ಲಾಗಿದೆ ಮದುನ್ನಬವಿಯನ್ನು ನಿರ್ಮಿಸಿದ್ದು. ಹಿಜ್ರಾಗೆ ಮೊದಲು ಮದೀನಾ ನಿವಾಸಿಗಳು ಇಲ್ಲಿ ನಮಾಝ್ ಮಾಡುತ್ತಿದ್ದರು. ಮದೀನಾದ ನವ ಮುಸಲ್ಮಾನರಿಗೆ ಖುರ್‌ಆನ್ ಮತ್ತು ಪವಿತ್ರ ಇಸ್ಲಾಮಿನ ಆಶಯಗಳನ್ನು ಕಲಿಸಿಕೊಡಲು ಪ್ರವಾದಿವರು ಕಳುಹಿಸಿ ಕೊಟ್ಟ ಮುಸ್ಅದಿಬ್ನು ಉಮೈರ್(ರ) ಅನ್ಸಾರಿಗಳು ಹಾಗೂ ಮುಹಾಜಿರ್ಗಳೊಂದಿಗಿನ ನಮಾಝಿಗೆ ನೇತೃತ್ವ ನೀಡುತ್ತಿದ್ದರು. ಹಲವು ವರ್ಷಗಳ ನಂತರ ಪ್ರವಾದಿವರ್ಯರ ಜೊತೆ ಹಿಜಿರಾ ಬರಲು ಮಕ್ಕಾಗೆ ಮರಳಿದಾಗ ಅಸ್ಅದುಬಿನ್ ಝರಾರ (ರ) ಈ ಸ್ಥಾನವನ್ನು ವಹಿಸಿಕೊಂಡರು. ಅಸ್ಅದುಬಿನ್ ಝರಾರ (ರ) ನೇತೃತ್ವದಲ್ಲಿ ಇಸ್ಲಾಮಿ ಇತಿಹಾಸದಲ್ಲಿ ನಡೆದ ಮೊಟ್ಟ ಮೊದಲ ಜುಮುಆ ನಮಾಝ್ ಇದಾಗಿದೆ. ಅಂದು ಆ ಸ್ಥಳ ಅನ್ಸಾರಿಗಳಾದ ಸಹ್ಲ್ ಮತ್ತು ಸುಹೈಲ್ ಎಂಬ ಎರಡು ಅನಾಥ ಬಾಲಕರ ಒಡೆತನದಲ್ಲಿತ್ತು. ಪ್ರವಾದಿಯವರು ಅವರನ್ನು ಕರೆದು ಬೆಲೆ ನಿಶ್ಚಯಿಸಿದಾಗ ಅವರು ಹೇಳಿದರು "ಓ ಪ್ರವಾದಿಯರೇ ಯಾವುದೇ ಹಣ ನೀಡಬೇಕಾದ ಅವಶ್ಯಕತೆ ಇಲ್ಲ ಉಚಿತವಾಗಿಯೇ ನೀಡುತ್ತೇವೆ" ಅದನ್ನು ನಿರಾಕರಿಸಿದ ಪ್ರವಾದಿಯವರು ಹತ್ತು ದೀನಾರಿಗೆ ವ್ಯಾಪಾರ ನಡೆಸಿದರು.ಅಬೂಬಕ್ಕರ್ (ರ)ರೊಂದಿಗೆ ಹಣ ನೀಡಲು ಆಜ್ಞಾಪಿಸಿದರು. ನಂತರ ನಿರ್ಮಾಣ ಕಾರ್ಯ ಆರಂಭವಾಯಿತು. ಮಸೀದಿ ನಿರ್ಮಾಣದಲ್ಲಿ ಕಲ್ಲು ಸಾಗಿಸುವುದು ಮುಂತಾದ ಕಾರ್ಯಗಳಲ್ಲಿ ಪ್ರವಾದಿಯವರು ಸಕ್ರಿಯರಾಗಿದ್ದರು. ಈ ಸಮಯದಲ್ಲಿ ಕೆಲವೊಂದು ಸಾಲುಗಳನ್ನು ಹಾಡುವ ಮೂಲಕ ಸ್ವಹಾಬಿಗಳಿಗೆ ಪ್ರೇರಣೆ ನೀಡುತ್ತಿದ್ದರು. ಅದಕ್ಕೆ ಪ್ರತಿಯಾಗಿ ಸ್ವಹಾಬಿಗಳು ಕೂಡ ಹಾಡುತ್ತಿದ್ದರು. ಪ್ರವಾದಿಯರಿಗೆ ಹಾಡು ಸಲ್ಲುವಂತಹ ಕಾರ್ಯವಲ್ಲ. ಯಾಕೆಂದರೆ ಅಲ್ಲಾಹನು ಕುರ್ ಆನಿನಲ್ಲಿ ಹೇಳಿದ್ದಾನೆ "ನಾವು ಪ್ರವಾದಿವರ್ಯರಿಗೆ ಹಾಡನ್ನು ಕಲಿಸಲಿಲ್ಲ. ಅದು ಅವರಿಗೆ ಅಗತ್ಯ ಕೂಡಾ ಇಲ್ಲ" ( ಯಾಸೀನ್ - 69 ) ಕೆಲವೊಂದು ಸಾಲುಗಳನ್ನು ಹಾಡಲು ಕಾರಣ ಮಸೀದಿ ನಿರ್ಮಾಣ ಕಾರ್ಯದಲ್ಲಿ ಎಲ್ಲರು ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸುವ ಸಲುವಾಗಿತ್ತು. ಮಸೀದಿಯ ನಿರ್ಮಾಣ ಪೂರ್ಣಗೊಂಡಿತು. ಖರ್ಜೂರದ ಮರದ ತುಂಡುಗಳಾಗಿದೆ ಅದರ ಸ್ಥಂಭಗಳು. 70 ಅಡಿ ಉದ್ದ ಹಾಗೂ 60 ಅಡಿ ಅಗಲವಿದ್ದ ಈ ಮಸೀದಿಯ ಇದಕ್ಕೆ ಮೇಲ್ಚಾವಣಿ ಖರ್ಜೂರದ ಗರಿಗಳಾಗಿತ್ತು. ಅಂದು ಈ ಮಸೀದಿಗೆ ಮೂರು ಬಾಗಿಲುಗಳಿತ್ತು.
*ಮಸೀದಿಯ ವಿಕಸನ ಪ್ರಕ್ರಿಯೆ*
...................................................
ಪ್ರವಾದಿವರ್ಯರ ಮಸೀದಿ 'ಮದುನ್ನಬವಿ' ಕಾಲ ಕಾಲಕ್ಕೆ ನವೀಕರಣಗೊಳ್ಳುತ್ತಾ ಬಂದಿದೆ. ಇದರಿಂದಾಗಿ ಮಸೀದಿಯ ವ್ಯಾಪ್ತಿ ವಿಶಾಲವಾಯಿತು. ಕಾಲಕ್ರಮೇಣ ಮಸೀದಿಯಲ್ಲಿ ವಿಶಾಲಗೊಳಿಸಲು ಪ್ರಮುಖ ಕಾರಣ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿರುವುದು. ಪರಿಣಾಮವಾಗಿ ಮಸೀದಿಯಲ್ಲಿ ಸ್ಥಳಾವಕಾಶ ಸಾಕಾಗದಾಯಿತು. ಈ ಮಸೀದಿಯ ವಿಕಸನ ಕಾರ್ಯ ನಡೆದದ್ದು ಹಂತ ಹಂತವಾಗಿದೆ. ಪ್ರವಾದಿವರ್ಯರ ಕಾಲದಿಂದ ಆರಂಭಗೊಂಡ ಈ ಮಸೀದಿ ವಿಕಸನ ಪ್ರಕ್ರಿಯೆ ಇಂದಿನ ತನಕ ಮುಂದುವರಿದಿದೆ. ಇದನ್ನು ವಿಸ್ತಾರವಾಗಿ ಮುಂದೆ ನೋಡೋಣ. ಪ್ರವಾದಿವರ್ಯರ ಕಾಲದಲ್ಲಿ ಹಿಜ್ರಾ 7ನೇ ವರ್ಷ ಮುಹರ್ರಂ ತಿಂಗಳಲ್ಲಿ ನಡೆದ ಖೈಬರ್ ಯುದ್ಧದ ನಂತರವಾಗಿದೆ ಮಸೀದಿ ವಿಕಸನ ಪ್ರಕ್ರಿಯೆಗೆ ಪ್ರವಾದಿವರ್ಯರು ನಾಂದಿ ಹಾಡಿದ್ದು. ಹಿಜ್ರಾ ಒಂದನೇ ವರ್ಷದಲ್ಲಿ ನಿರ್ಮಾಣಗೊಂಡ ಈ ಮಸೀದಿಯಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾದಂತೆ ನಮಾಜ್ ಮಾಡಲು ಸ್ಥಳ ಸಾಕಾಗದಾಯಿತು. ಪರಿಣಾಮವಾಗಿ ಪ್ರವಾದಿವರ್ಯರು ಮಸೀದಿ ಯನ್ನು ವಿಶಾಲಗೊಳಿಸಲು ಮುಂದಾದರು. 15 ಅಡಿ ಉದ್ದ ಹಾಗೂ 20 ಅಡಿ ಅಗಲವನ್ನು ಈ ಮಸೀದಿಗೆ ಹೆಚ್ಚಿಸಿದರು. ಈ ಹೆಚ್ಚುವರಿ ಸ್ಥಳವನ್ನು ಖರೀದಿಸಿ ಕೊಟ್ಟಿದ್ದು ಉಸ್ಮಾನ್ ಬಿನ್ ಅಫ್ವಾನ್(ರ) ರವರಾಗಿದ್ದಾರೆ .
*ಮುಂದುವರಿಯುವುದು
Post a Comment