ಮದೀನಾ ಮಹತ್ವ ಇತಿಹಾಸ ಅಧ್ಯಾಯ 44

https://chat.whatsapp.com/DjCbCGNiyBW7StPEIOqUnO

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 44*🍃
         💜💜💜💜💜💜💜

🌹🌹🌹🌹🌹🌹🌹🌹🌹🌹

*ಮದೀನಾ ಝಿಯಾರತ್*

            ಪವಿತ್ರ ಮದೀನಾ ಸಂದರ್ಶನ ಹಾಗೂ ಪುಣ್ಯ ಪ್ರವಾದಿಯವರ ಝಿಯಾರತ್ ಮಾಡಲು ಬಯಕೆ ಇರದವರು ಯಾರು ಕೂಡಾ ಇರಲಾರರು .  ಪ್ರವಾದಿ ಪ್ರೇಮಿಗಳ ಹೃದಯ ಯಾವಾಗಲೂ ಮದೀನಾ ಪರಿಸರದಲ್ಲಿ ಸುತ್ತಾಡುತ್ತಿರುತ್ತದೆ. ಮಸ್ಜಿದುನ್ನಬವಿಯ ಮೇಲಿರುವ ಹಸಿರು ಖುಬ್ಬವನ್ನು ಕಾಣಲು ಭಾಗ್ಯ ಲಭಿಸಿದರೆ ಅವರ ಹೃದಯದ ನವೋಲ್ಲಸಕ್ಕೆ ಸೀಮೆ ಇದೆಯೇ ... ? ಏನೇಯಾದರೂ ಮದೀನಾಗೆ ಹೋಗಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರಿಗೆ ಸಲಾಂ ಹೇಳಬೇಕು . ಆ ಮದೀನಾದ ಮಣ್ಣನ್ನು ಚುಂಬಿಸಬೇಕು . ವಿಶ್ವಾಸಿ ಮನಗಳ ತುಡಿತಗಳಾಗಿವೆ ಇವುಗಳು . ಎಲ್ಲದಕ್ಕೂ ಪರಿಹಾರ ಮದೀನಾ , ಈಮಾನಿನ ಸುರಕ್ಷಿತ ತಾಣ ಮದೀನಾ , ಮದೀನಾವನ್ನು ನಿತ್ಯವೂ ನೆನೆಯುವ ಹೃದಯದಲ್ಲಿ ಯಾವ ಅಂಧ ವಿಶ್ವಾಸವು ಮನೆ ಮಾಡದು . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹೇಳಿದ್ದಾರೆ “ ಖಂಡಿತವಾಗಿಯೂ ವಿಶ್ವಾಸವೆಂಬುವುದು ಮದೀನದತ್ತ ಹಿಂದಿರುಗಲು ತವಕಿಸುತ್ತಿರುತ್ತದೆ . ಹಾವು ತನ್ನ ಬಿಲಕ್ಕೆ ಹಿಂತಿರುಗಲು ಹವಣಿಸುತ್ತಿರುವಂತೆ ಇಲ್ಲಿ ಈಮಾನ್ ಮದೀನಾಕ್ಕಾಗಿ ತವಕಿಸುತ್ತಿರುತ್ತದೆ ಎಂದರೆ ' ಹೃದಯದಲ್ಲಿ ಈಮಾನಿರುವ ಜನರು ಸದಾ ಮದೀನಾದೆಡೆಗೆ ಹಾತೊರೆಯುತ್ತಿರುತ್ತಾರೆ ' ಎಂದಾಗಿದೆ ಇಮಾಮರುಗಳ ಅಭಿಮತ . ಮದೀನಾಗೆ ಹೋಗಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಖಬ್ರ್ ಸಂದರ್ಶಿಸಿದರೆ ಇಹಪರದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ . ಉನ್ನತ ಸ್ಥಾನ ಹಾಗೂ ಮಹತ್ವಗಳು ಲಭ್ಯವಾಗುತ್ತದೆ . ಹಲವಾರು ಮಹತ್ವಗಳು ಮದೀನಾ ಸಂದರ್ಶಕರಿಗೆ ಇದೆ . ಅವುಗಳನ್ನು ಮನದಟ್ಟು ಮಾಡೋಣ . 

*1. ಶಫಾಅತ್ ಲಭಿಸುತ್ತದೆ* 
 
          ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಖಬ್ರ್ ಸಂದರ್ಶನದಿಂದ ಮಾತ್ರ ವಿಶೇಷ ಶಫಾಅತನ್ನು ಪಡೆಯಬಹುದೆಂದು ಹದೀಸಿನಲ್ಲಿ ಕಾಣಬಹುದು . ಅಬ್ದುಲಾಹಿ ಬಿನ್ ಉಮರ್  ( ರ ) ರವರಿಂದ ವರದಿ ; ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹೇಳುತ್ತಾರೆ “ ಯಾರಾದರೂ ನನ್ನ ಖಬ್ರ್ ಸಂದರ್ಶನ ಮಾಡಿದರೆ ನನ್ನ ಶಫಾಅತ್ ಅವರಿಗೆ ಕಡ್ಡಾಯವಾಗಿದೆ . ” ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಈ ವಿಶೇಷ ಶಫಾಅತ್ ಲಭಿಸಬೇಕಾದರೆ ಮುಸ್ಲಿಮಾಗಿ ಮರಣ ಹೊಂದಬೇಕು ತಾನೇ ? ಇದರಿಂದ ಒಂದು ವಿಷಯ ಸಷ್ಟವಾಗುತ್ತಿದೆ . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ಖಬ್ರ್ ಸಂದರ್ಶನ ಮಾಡಿದವರು ಮುಸ್ಲಿಮರಾಗಿಯಲ್ಲದೇ ಮರಣ ಹೊಂದುವುದಿಲ್ಲ . ಇದಕ್ಕಿಂತ ದೊಡ್ಡ ಭಾಗ್ಯ ಇನ್ನೇನಿದೆ .. ? 

*2. ಜೀವಿತಾವಧಿಯಲ್ಲಿ ಸಂದರ್ಶಿಸಿದ ಹಾಗೆ*

       ಸ ಮದೀನಾಗೆ ಹೋಗಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ಖಬ್ರ್ ಸಂದರ್ಶನ ಮಾಡಿದರೆ ಜೀವನದಲ್ಲಿ ನಬಿಯವರನ್ನು ಸಂದರ್ಶನ ಮಾಡಿದ ಹಾಗೆ ಎಂದಿದ್ದಾರೆ ಪ್ರವಾದಿವರ್ಯರು . ಅಬ್ದುಲಾಹಿ ಬಿನ್ ಉಮರ್ ( ರ ) ರವರಿಂದ ವರದಿ ಮಾಡುವ ಹದೀಸ್ ' ಹೀಗಿದೆ . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹೇಳುತ್ತಾರೆ “ ಯಾರಾದರೂ ಹಜ್ಜ್ ನಿರ್ವಹಿಸಿ ನನ್ನ ಮರಣ ನಂತರ ಖಬ್ರ್ ಸಂದರ್ಶನ ಮಾಡಿದರೆ ಅವನ ನನ್ನ ಜೀವನದಲ್ಲಿ ಸಂದರ್ಶಿಸಿದ ಹಾಗೆ ” 

*3 , ಇತರ ಮಹತ್ವಗಳು*

    ‌.   ಅಲ್ಲಾಹನಿಂದ ಪ್ರತಿಫಲ ಅಪೇಕ್ಷೆಯೊಂದಿಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರನ್ನು ಝಿಯಾರತ್ ಮಾಡಿದವನಿಗೆ ಇಹಪರ ಯಶಸ್ಸು ಖಡಾ ಖಂಡಿತ . ಇದಲ್ಲದೆ ಇನ್ನಿತರ ಹಲವಾರು ವಿಶೇಷತೆಗಳು ಆತನಿಗೆ ಲಭಿಸುತ್ತದೆ . ಇಮಾಮರುಗಳು ವಿವರಿಸಿದ ಕೆಲವೊಂದನ್ನು  ಇಲ್ಲಿ ನೀಡಲಾಗಿದೆ . 

1. ಉನ್ನತ ಸ್ಥಾನಮಾನಗಳು ಲಭ್ಯವಾಗುತ್ತದೆ . 
2. ಉನ್ನತ ಗುರಿಯನ್ನು ತಲುಪಬಹುದು . 
3. ಅಗತ್ಯತೆಗಳು ಪೂರೈಸಲ್ಪಡುತ್ತದೆ 
4. ಸಾಮರ್ಥ್ಯಗಳು ಲಭ್ಯವಾಗುತ್ತದೆ . 
5. ವಿನಾಶದಿಂದ ಸಂರಕ್ಷಣೆ ಲಭಿಸುತ್ತದೆ . 
6. ನೀಚ ಕಾರ್ಯಗಳಿಂದ ಮುಕ್ತವಾಗುತ್ತಾನೆ . 
7. ಸಂಕಷ್ಟಗಳಿಗೆ ಪರಿಹಾರ ಲಭ್ಯವಾಗುತ್ತದೆ . 
8. ಸಂಕೀರ್ಣ ಸಮಸ್ಯೆಗಳಿಂದ ಮುಕ್ತಿ . 
9. ಮರಣ ಉತ್ತಮವಾಗಿರುತ್ತದೆ . 
10. ಅಲ್ಲಾಹನ ವಿಶೇಷ ಕರುಣೆ ಲಭಿಸುತ್ತದೆ . 
      
        ಒಬ್ಬ ಪರಿಪೂರ್ಣ ವಿಶ್ವಾಸಿಯ ಹೃದಯದಲ್ಲಿ ಮದೀನಾ ಸಂದರ್ಶನದ ಬಯಕೆ  ಇರದಿರುವುದು ಅಸಾಧ್ಯ . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ಖಬ್ರ್ ಸಂದರ್ಶನ ಮಾಡಲು ಎಲ್ಲಾ ಸೌಕರ್ಯಗಳು ಲಭ್ಯವಿದ್ದು ಆ ಕಡೆ ಮುಖ ತಿರುಗಿಸದವನ ಕುರಿತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹೇಳುವುದನ್ನು ನೋಡಿ . ಅಬ್ದುಲಾಹಿ ಬಿನ್ ಉಮರ್ ( ರ ) ರವರಿಂದ ವರದಿ ; ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲ ಮರವರು ಹೇಳುತ್ತಾರೆ “ ಯಾರಾದರು ಹಜ್ಜ್ ನಿರ್ವಹಿಸಿ ನನ್ನನ್ನು ಸಂದರ್ಶಿಸದಿದ್ದರೆ ಖಂಡಿತವಾಗಿಯೂ ಅವನು ನನ್ನನ್ನು ಕೋಪಿಸಿದ್ದಾನೆ ” ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲ ಮರವರ ಕೋಪಕ್ಕೆ ತುತ್ತಾದವನ ಅವಸ್ಥೆಯ ಕುರಿತು ಹೆಚ್ಚಿನ ವಿವರಣೆ ಅಗತ್ಯವಿಲ್ಲ ತಾನೆ ... ? ಮತ್ತೊಂದು ಹದೀಸಿನಲ್ಲಿ ಹೀಗಿದೆ “ ನನ್ನ ಸಮುದಾಯದಲ್ಲಿ ಒಬ್ಬನಿಗೆ ಸೌಕರ್ಯವಿದ್ದೂ ನನ್ನನ್ನು ಸಂದರ್ಶಿಸದಿದ್ದರೆ ಆತನಿಗೆ ಯಾವುದೇ ನ್ಯಾಯೀಕರಣವಿಲ್ಲ . ” 

               *ಸಶೇಷ*