ಮದೀನಾಮಹತ್ವ ಇತಿಹಾಸ ಅಧ್ಯಾಯ 18

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 18*🍃
         💜💜💜💜💜💜💜

 ❤️ *ಮೊದಲ ಜುಮುಅ ; ಮೊದಲ ಖುತುಬ*
 ❤️ *ಮದೀನಾ ಮಸೀದಿ - ಪರಿಸರ*
🌹🌹🌹🌹🌹🌹🌹🌹🌹🌹🌹
         ಶುಕ್ರವಾರ ಬೆಳಿಗ್ಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಖುಬಾಅ್‌ನಿಂದ ಮದೀನಾದೆಡೆಗೆ ಪಯಣ ಬೆಳೆಸಿದರು. ಬನೂಸಾಲಿಮ್ ಗೋತ್ರದವರು ವಾಸಿಸುವ ಸ್ಥಳ ತಲುಪಿದಾಗ ಜುಮುಅ ನಮಾಝಿನ ಸಮಯವಾಯಿತು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಅಲ್ಲಿ ಜುಮುಅ ನಮಾಝಿಗೆ ನೇತೃತ್ವ ನೀಡಿದರು. ಜುಮುಅ ಖುತುಬ ನಿರ್ವಹಿಸಿದರು. ಇದು ಪ್ರವಾದಿವರ್ಯರ ಮೊದಲ ಜುಮುಅ ಹಾಗೂ ಮೊದಲ ಜುಮುಅ ಖುತುಬ. ಮಕ್ಕಾದಲ್ಲಿ ಈ ಮೊದಲು ಯಾವುದೇ ಜುಮುಅ ನಮಾಝ್ ನಡೆದಿರಲಿಲ್ಲ. ಬನೂಸಾಲಿಮ್‌ನಲ್ಲಿ ಜುಮುಅ ನಡೆಯುವಾಗ ನೂರರಷ್ಟು ಜನರಿದ್ದರು .ಪ್ರವಾದಿವರ್ಯರು ಹಿಜ್ರಾ ಬರುವುದಕ್ಕಿಂತ ಮುಂಚೆಯೆ ಮದೀನಾದಲ್ಲಿ ಜುಮುಅ ನಮಾಝ್ ನಡೆದಿತ್ತು . ಅಸ್ಅದ್ ಬಿನ್ ಝುರಾರ(ರ) ರವರು ಇದಕ್ಕೆ ನೇತೃತ್ವ ನೀಡಿದರು. ಹಿಜ್ರಾ ಹೋಗುವ ಮೊದಲು ಮಕ್ಕಾದಲ್ಲಿ ಯಾವುದೇ ಜುಮುಅ ನಮಾಝ್ ನಡೆದಿರಲಿಲ್ಲ. ಕಾರಣ ಅಲ್ಲಿ ಜುಮುಅ ನಮಾಝ್ ನಡೆಸಲು ಬೇಕಾದ ಜನಸಂಖ್ಯೆ ಇರಲಿಲ್ಲ. ಮದೀನಾದಲ್ಲಿ ಪ್ರವಾದಿವರ್ಯರು ಬನೂಸಾಲಿಮ್ನಲ್ಲಿ ಜುಮುಅ ನಮಾಝ್ ಮುಗಿಸಿದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರವರು ಮದೀನಾದೆಡೆಗೆ ತೆರಳಿದರು. ಪ್ರವಾದಿವರ್ಯರನ್ನು ಸ್ವಾಗತಿಸಲು ಮದೀನಾ ನಿವಾಸಿಗಳು ನೆರೆದಿದ್ದರು. ಎಲ್ಲರೂ ಪ್ರವಾದಿವರ್ಯರು ತಮ್ಮ ಮನೆಗೆ ಬರಬೇಕೆಂದು ಆಶಿ ಸುತ್ತಿದ್ದರು. ಮದೀನಾದ ಅನ್ಸಾರಿಗಳ ಮನೆಯ ಹತ್ತಿರ ಪ್ರವಾದಿವರ್ಯರ ಒಂಟೆ ಹಾದುಹೋಗುವಾಗ ತಮ್ಮ ಮನೆಗೆ ಬರುವಂತೆ ಆಹ್ವಾನಿಸಿದರು. “ಅದನ್ನು ಬಿಟ್ಟು ಬಿಡಿ. ಅದು ಎಲ್ಲಿ ನಿಲ್ಲಬೇಕೆಂದು ಅದಕ್ಕೆ ಗೊತ್ತಿದೆ” ಎಂದರು ಪ್ರವಾದಿವರ್ಯರು. ಅಂದು ಮದೀನಾ ನಿವಾಸಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಬರ್ರಾಅ್ ಬಿನ್ ಆದ್ವಿಖ್(ರ)ರವರು ಹೇಳುತ್ತಾರೆ 'ಪ್ರವಾದಿವರ್ಯರು ಮದೀನಾಗೆ ಬಂದಾಗ ಅನ್ಸಾರಿಗಳಿಗೆ ಉಂಟಾದ ಸಂತೋಷ ಬೇರೆ ಯಾವಾಗಲೂ ಉಂಟಾಗಿರಲಿಲ್ಲ. ಅನಸ್ ( ರ ) ರವರು ಹೇಳುತ್ತಾರೆ “ ಅಂತಹ ಒಂದು ಪ್ರಶೋಭಿತ ದಿನವನ್ನು ನಾನು ಕಂಡಿರಲೇ ಇಲ್ಲ . ಮಕ್ಕಳು ಹಾಗೂ ಮಹಿಳೆಯರು ' ತ್ವಲಅಲ್ ಬದ್ರು ಅಲೈನಾ ' ಎಂಬ ಹಾಡನ್ನು ಸಂತೋಷದಿಂದ ಹಾಡುತಿದ್ದರು . ಹಾಗೆ ಪ್ರವಾದಿವರ್ಯರ ವಾಹನ ಅಬೂ ಅಯೂಬುಲ್ ಅನ್ಸಾರಿ ( ರ ) ಮನೆಯ ಮುಂದೆ ಬಂದು ನಿಂತಿತು . ವಾಹನ ಕೆಳಗೆ ಇಳಿದ ಪ್ರವಾದಿವರ್ಯರನ್ನು ಅಬೂ ಅಯೂಬ್ ( ರ ) ಮನೆಗೆ ಆಮಂತ್ರಿಸಿದರು . ಅವರ ಮನೆಗೆ ತೆರಳಿದ ಪ್ರವಾದಿ ಸ್ವಹಾಬಿ ವನಿತೆ ಉಮ್ಮು ದ್ ಬಿನ್ ಸಾಬಿತ್ ( ರ ) ರವರ ಅಥಿತಿ ಸತ್ಕಾರವನ್ನು ಸ್ವೀಕರಿಸಿದರು . ಪ್ರವಾದಿವರ್ಯರ ಮನೆ ಹಾಗೂ ಮಸ್ಜಿದುನ್ನಬವಿಯ ಕೆಲಸ ಪೂರ್ಣವಾಗುವ ತನಕ ಅಲ್ಲಿ ಜೀವಿಸಿದರು.

*ಮದೀನಾ ಮಸೀದಿ - ಪರಿಸರ*
...........................................................
•ಮದುನ್ನಬವಿ 
•ಮಸೀದಿಯ ನಿರ್ಮಾಣ         •ಮಸೀದಿಯ ವಿಕಸನ ಪ್ರಕ್ರಿಯೆ •ಮದುನ್ನಬವಿಯ ಬಾಗಿಲುಗಳು  
• ಮದುನ್ನಬವಿಯ ಮಿನಾರಗಳು
•ಮದುನ್ನಬವಿಯ ಮಿಹ್ರಾಬ್‌ಗಳು 
•ಮದುನ್ನಬವಿಯ ಸ್ಥಂಬಗಳು •ಮದೀನಾದ ಮಿಂಬರ್
•ರೌಳಾ ಶರೀಫ್ •ಹುಜ್ರತುಶ್ಶರೀಫ್ 
•ಹಸಿರು ಖುಬ್ಬ
•ಮಸ್ಜಿದುನ್ನಬವಿಯ ಮಹತ್ವ 
•ಮದೀನಾ ಸಂದರ್ಶಕರ ಗಮನಕ್ಕೆ . . .  
•ಅಹ್ಲುಸುಪ್ಪಃ  
•ಪಾವನ ಶರೀರ ಕದಿಯಲು ವಿಫಲ ಶ್ರಮಗಳು  •ಮದೀನಾದ ಮಸೀದಿಗಳು 
•ಮದೀನಾದ ಬಾವಿಗಳು 
•ಮದೀನಾದ ಪರ್ವತಗಳು 
•ಜನ್ನತುಲ್ ಬಕೀಅ್ 
•ಮದೀನಾ ಸಂರಕ್ಷಣೆಗೆ ಖಂದಕ್ ಯುದ್ಧ  
•ಮದೀನಾ ಝಿಯಾರತ್

     *ಮುಂದುವರಿಯುವುದು*