ಮದೀನಾ ಮಹತ್ವ ಇತಿಹಾಸ ಅಧ್ಯಾಯ16
🌟🌟🌟🌟🌟🌟🌟🌟
🍃 *ಅಧ್ಯಾಯ 16 *🍃
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
*ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
*ಸಂಗ್ರಹ: ಯಾಸೀನ್ ನಾವೂರ್*
🍃 *ಅಧ್ಯಾಯ 16 *🍃
💜💜💜💜💜💜💜
❤️ *ಮದೀನಾದ ಹಾದಿಯಲ್ಲಿ . . . . .*
❤️ *ಸೌರ್ ಗುಹೆಯಲ್ಲಿ ಮೂರು ದಿನ*
🌹🌹🌹🌹🌹🌹🌹🌹🌹🌹🌹
ಅಂದು ರಾತ್ರಿ ಪ್ರವಾದಿವರ್ಯರು ಅಬೂಬಕರ್(ರ) ರವರ ಮನೆಗೆ ಬಂದರು. ಅಲ್ಲಿಂದ ಇಬ್ಬರು ಸೌರ್ ಗುಹೆಯ ಹತ್ತಿರ ಹೋದರು. ಮನೆಯಿಂದ ಹೊರಡುವಾಗ ಅಬೂಬಕರ್ (ರ) ರವರು “ ಹಗಲು ಜನರು ಚರ್ಚಿಸುತ್ತಿರುವ ವಿಷಯಗಳ ಕುರಿತು ಸಂಜೆ ಗುಹೆಯ ಹತ್ತಿರ ಬಂದು ಮಾಹಿತಿ ನೀಡಲು ಆಜ್ಙಾಪಿಸಿದ್ದರು. ತನ್ನ ದಾಸ ಅಮಿರ್ ಬಿನ್ ಫಹೀರತ್ ನೊಂದಿಗೆ ಆಡನ್ನು ಮೇಯಿಸಿ ಸಂಜೆಯಾದಾಗ ಹಾಲು ತಲುಪಿಸಲು ಹೇಳಿದ್ದರು. ಗುಹಯಲ್ಲಿರುವ ಪ್ರವಾದಿವರ್ಯರಿಗೆ ಹಾಗೂ ಅಬೂಬಕರ್(ರ) ರವರಿಗೆ ಆಹಾರವನ್ನು ಅಸ್ಮಾ(ರ) ರವರು ತಲುಪಿಸುತ್ತಿದ್ದರು. ಗುಹೆಯ ಹತ್ತಿರ ತಲುಪಿದಾಗ ಅಬೂಬಕರ್(ರ) ರವರು ಪ್ರವಾದಿವರ್ಯರಲ್ಲಿ ಹೇಳಿದರು. ಓ ಪ್ರವಾದಿವರ್ಯರೇ . . . . ತಾವು ಗುಹೆಯ ಒಳಗೆ ಹೋಗದಿರಿ. ಅದರೊಳಗೆ ಏನಾದರೂ ವಿಷ ಜಂತುಗಳಿದರೆ ತಮ್ಮನ್ನು ಕಡಿಯಬಹುದು. ಹಾಗೆ ಅಬೂಬಕರ್(ರ) ರವರು ಒಳ ಹೋಗಿ ಗುಹೆಯನ್ನು ಸಂಪೂರ್ಣವಾಗಿ ಶುಚಿಗೊಳಿಸಿದರು. ಅದರಲ್ಲಿದ್ದ ತೂತುಗಳನ್ನು ತುಂಡು ಬಟ್ಟೆಗಳಿಂದ ಮುಚ್ಚಿದರು. ಕೊನೆಗೆ ಎರಡು ತೂತುಗಳು ಬಾಕಿಯಾಯಿತು. ಅದಕ್ಕೆ ತನ್ನೆರಡು ಕಾಲುಗಳನ್ನು ಮುಚ್ಚಿ ಪ್ರವಾದಿವರ್ಯರನ್ನು ಒಳಗೆ ಆಮಂತ್ರಿಸಿದರು. ಪ್ರವಾದಿ ವರ್ಯರು ಒಳ ಬಂದು ಅಬೂಬಕರ್(ರ) ರವರ ಮಡಿಲಲ್ಲಿ ಮಲಗಿದರು. ಕೆಲವು ಕ್ಷಣಗಳು ಕಳೆದಿರಬೇಕು. ಏನೋ ಅವರ ಕಾಲಿಗೆ ಕಚ್ಚಿತು. ನೋವು ಸಹಿಸಲಾಗದೆ ಕಣ್ಣಿನಿಂದ ಹೊರಬಂದ ಕಂಬನಿ ಪ್ರವಾದಿವರ್ಯರ ಮೇಲೆ ಬಿತ್ತು. ಎಚ್ಚರವಾದ ಪ್ರವಾದಿವರ್ಯ ರು ಕಾರಣ ಕೇಳಿದರು. ವಿಷಯ ತಿಳಿದಾಗ ಪ್ರವಾದಿವರ್ಯರು ಉಗುಳು ನೀರು ಸವರಿದರು. ಕ್ಷಣ ಮಾತ್ರದಲ್ಲಿ ಸಿದ್ದೀಕ್(ರ) ರವರು ಗುಣಮುಖರಾದರು. ಅಷ್ಟರಲ್ಲಿ ಗುಹೆಯೊಳಗಿದ್ದ ಹಾವು ಬಂದು ಅಬೂಬಕರ್ ಸಿದ್ದೀಕ್(ರ) ರವರಲ್ಲಿ ಕೇಳಿತು . “ ಹಲವಾರು ವರ್ಷಗಳಿಂದ ಪ್ರವಾದಿವರ್ಯರನ್ನು ಕಾಣಲು ತವಕಿಸುತ್ತಿದ್ದ ನನ್ನನ್ನು ತಾವೇಕೆ ತಡೆದಿರಿ . . . ? ಇದನ್ನು ಇಮಾಂ ರಾಝ(ರ) ರವರು ತನ್ನ ತಫ್ಸೀರುಲ್ ಕಬೀರ್ ಎಂಬ ಗ್ರಂಥದಲ್ಲಿ ವಿವರಿಸಿದ್ದಾರೆ. ಇತ್ತ ಕಡೆ ನೂರಾರು ತರುಣರು ಪ್ರವಾದಿವರ್ಯರ ಹುಡುಕಾಟದಲ್ಲಿದ್ದಾರೆ. ಹುಡುಕಿ ಕೊಟ್ಟವರಿಗೆ 100 ಒಂಟೆಗಳ ಇನಾಮು ನೀಡುವುದಾಗಿ ಖುರೈಶಿ ಪ್ರಮುಖರು ಆಗಲೇ ಘೋಷಿಸಿದ್ದರು. ಇದರಿಂದ ಪ್ರೇರಿತರಾದವರು ಎಲ್ಲೆಡೆ ಹುಡುಕಾಟ ಮಾಡತೊಡಗಿದರು. ಅಬೂಜಹಲನು ಅಬೂಬಕರ್ ಸಿದ್ದೀಖ್(ರ) ರವರ ಮನೆಗೆ ಬಂದು ಮಗಳಾದ ಅಸ್ಮಾ(ರ) ರಲ್ಲಿ ಕೇಳಿದ ನಿನ್ನ ತಂದೆಯವರು ಎಲ್ಲಿ ? ಅದಕ್ಕೆ ನನಗೆ ಗೊತ್ತಿಲ್ಲ. ' ಎಂದಾಗ ಆತ ಅವರ ಕೆನ್ನೆಗೆ ಬಿಗಿಯಾದ ಒಂದು ಏಟನ್ನು ಕೊಟ್ಟ. ಅದರ ತೀವ್ರತೆ ಎಷ್ಟಿತ್ತೆಂದರೆ ಅಸ್ಸಾ (ರ) ರವರ ಕಿವಿಯಲ್ಲಿದ್ದ ಆಭರಣ ಕೆಳಗೆ ಬಿದ್ದಿತ್ತು . ಪ್ರವಾದಿವರ್ಯರು ಹಾಗೂ ಅಬೂಬಕರ್ ಸಿದ್ದೀಕ್ ( ರ ) ರವರು ವಾಸಿಸುವ ಸೌರ್ ಗುಹೆಯತ್ತಿರ ಈ ಹುಡುಕಾಟದಲ್ಲಿ ತೊಡಗಿದ ಯುವಕರು ಬಂದರು. ಅಬೂಬಕರ್ (ರ) ರವರ ಎದೆಯಲ್ಲಿ ಭಯ ಆವರಿಸಿತು. 'ಹೆದರುವ ಅಗತ್ಯವಿಲ್ಲ . ಅಲ್ಲಾಹನು ನಮ್ಮ ಜೊತೆಗಿದ್ದಾನೆ ' ಎಂದರು ಪ್ರವಾದಿವರ್ಯರು. ಅವರು ಗುಹೆಯ ಹತ್ತಿರದಿಂದ ಹೊರಟು ಹೋದರು.ಆದರೆ ಅವರಿಗೆ ಈ ಇಬ್ಬರನ್ನು ಕಾಣಲಿಲ್ಲ . ಗುಹೆಯಲ್ಲಿ ಜೇಡ ಬಲೆಕಟ್ಟಿದನ್ನು ಕಂಡರು. ಪಾರಿವಾಳ ಮೊಟ್ಟೆ ಇಟ್ಟಿದ್ದನ್ನು ಕೂಡಾ . ಈ ಜೇಡ ಬಲೆಯನ್ನು ಕಂಡ ಅವರು ಹೇಳಿದರು “ ಇಲ್ಲಿ ಯಾರೂ ಕೂಡ ಇಲ್ಲ ” ಅವರಲ್ಲಿ ಉಮಯ್ಯತ್ ಬಿನ್ ಖಲಫ್ ಹೇಳಿದ “ ಈ ಜೇಡ ಬಲೆ ಮುಹಮ್ಮದರ ಜನನದ ಮೊದಲೇ ಇತ್ತು ” - ಪವಿತ್ರ ಖುರ್‌ಆನ್ ಹೇಳುವುದನ್ನು ನೋಡಿ . . . “ ನೀವು ಪ್ರವಾದಿವಯರಿಗೆ ಸಹಾಯ ಮಾಡದಿದ್ದರೆ ( ಚಿಂತಿಲ್ಲ ) ಅಲ್ಲಾಹನು ನೆರವಾಗುವನು . ಸತ್ಯ ನಿಷೇಧಿಗಳು ಅವರನ್ನು ಹೊರ ಹಾಕಿದಾಗ ಅವರ ಇಬ್ಬರ ಪೈಕಿ ಎರಡನೆಯವರಾಗಿದ್ದಾಗ , ಅವರಿಬ್ಬರೂ ಗುಹೆಯೊಳಗಿದ್ದಾಗ ಅವರು ನಮ್ಮ ಸಂಗಡಿಗರೊಂದಿಗೆ ವ್ಯಥೆಪಡಬೇಡಿ . ಖಂಡಿತವಾಗಿಯೂ ಅಲ್ಲಾಹನು ನಮ್ಮೊಂ ದಿಗಿದ್ದಾನೆ ಎಂದು ಹೇಳಿದಾಗ ನಿಜವಾಗಿಯೂ ಅಲ್ಲಾಹನು ನೆರವಾಗಿದ್ದಾನೆ . ಹಾಗೆ ಅಲ್ಲಾಹನು ತನ್ನ ಕಡೆಯಿಂದ ಅವರಿಗೆ ಶಾಂತಿಯನ್ನು ಇಳಿಸಿದನು . ನೀವು ಕಂಡಿರದ ಸೇನೆಗಳಿಂದ ಅವರಿಗೆ ಬಲ ಕೊಟ್ಟನು . ಸತ್ಯ ನಿಷೇಧಿಗಳ ವಚನವನ್ನು ಕೆಳಮಟ್ಟಕ್ಕಿಳಿಸಿದನು . ಅಲ್ಲಾಹನ ವಚನವೇ ಉನ್ನತವಾದದ್ದು . ಅಲ್ಲಾಹನು ಪ್ರತಾಪಶಾಲಿಯೂ ಮಹಾತಂತ್ರಜ್ಞನೂ ಆಗಿರುವನು . ( ತೌಬಾ – 40 )
*ಮದೀನಾದ ಹಾದಿಯಲ್ಲಿ . . . . .*
.............................................................
ಪ್ರವಾದಿವರ್ಯರು ಮಕ್ಕಾದಿಂದ ಹಿಜ್ರ ಹೋದ ವರ್ಷ ಪ್ರವಾದಿತ್ವದ 13ನೇ ವರ್ಷ . ಅಂದು ಗುರುವಾರ , ಸ್ವಫರ್ ತಿಂಗಳ ಕೊನೆಯ ಮೂರು ದಿನಗಳು ಬಾಕಿಯಿತ್ತು . ನಂತರ ಮೂರು ದಿನಗಳು ಅಂದರೆ ಶುಕ್ರ , ಶನಿ ಹಾಗೂ ರವಿವಾರಗಳು ಗುಹೆಯಲ್ಲಿ ಕಳೆದರು . ಸೋಮವಾರ ರಾತ್ರಿ ರಬೀವುಲ್ ಅವ್ವಲ್ ತಿಂಗಳ ಆರಂಭದಂದು ಮದೀನಾದೆಡೆಗೆ ಯಾತ್ರೆ ಹೊರಟರು . ಇದು ಬರೀ ನಾಲ್ಕು ಜನರ ಯಾತ್ರೆ ದಾರಿತೋರಿಸಲು ಅಬ್ದುಲಾಹಿ ಬಿನ್ ಉರೈಖತ್ . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು , ಅಬೂಬಕರ್ ಸಿದ್ದೀಕ್ ( ರ ) ಹಾಗೂ ಅವರ ಸೇವಕ ಆಮೀರ್ ಬಿನ್ ಫಹೀರ . ಹಾಗೆ ಈ ಯಾತ್ರಾ ಸಂಘ ಉಮ್ಮು ಮುಅ್ ಬದ್ರವರ ಅರವಟಿಕೆಯ ಹತ್ತಿರ ಹಾದು ಹೋಯಿತು. ಆಕೆ ದಾರಿಹೋಕರಿಗೆ ಹಾಲು - ಆಹಾರ ವಿತರಣೆ ಮಾಡುತ್ತಿದ್ದಳು . ಅವಳಲ್ಲಿ ಪ್ರವಾದಿವರ್ಯರು ಹಾಲನ್ನು ಕೇಳಿದರು . ಆದರೆ ಆಕೆಯ ಬಳಿ ಏನು ಇರಲಿಲ್ಲ . ಆಕೆಯ ಡೇರೆಯ ಹತ್ತಿರ ಆಡೊಂದನ್ನು ಕಂಡಾಗ ಅದರ ಹಾಲನ್ನು ಕರೆಯಲು ಸಮ್ಮತಿ ಕೇಳಿದರು . ಅದರಲ್ಲಿ ಹಾಲಿದ್ದರೆ ಕರೆಯಬಹುದು ಎಂದು ಅನುಮತಿ ದೊರಕಿತು . ಆದರೆ ಆ ಆಡಿನ ಕೆಚ್ಚಲು ಬರಿದಾಗಿತ್ತು . ಒಂದು ಹನಿ ಕೂಡಾ ಹಾಲು ಇರಲಿಲ್ಲ . ಪ್ರವಾದಿವರ್ಯರು ಆ ಆಡಿನ ಕೆಚ್ಚಲನ್ನು ಸ್ಪರ್ಶಿಸಿದರು . ಅದಕ್ಕೆ ಬೇಕಾಗಿ ಪ್ರಾರ್ಥನೆ ಮಾಡಿ ಬಿಸ್ಮಿ ಹೇಳಿ ಹಾಲು ಕರೆದರು . ಪಾತ್ರೆ ತುಂಬಿತು . ಅಲಿದ್ದ ಜನರೆಲ್ಲರು ಕುಡಿದರು . ಮತ್ತೂ ಕರೆದು ಯಾತ್ರೆಗೆ ತೆಗೆದಿರಿಸಿದರು . ನಂತರ ಯಾತ್ರೆ ಮುಂದುವರೆಸಿದರು . ಆಕೆಯ ಬಳಿಯಿದ್ದ ಪಾತ್ರೆಗಳೂ ಹಾಲಿನಿಂದ ತುಂಬಿದ್ದವು . ಆ ಮಹಿಳೆಯ ಗಂಡ ಮನೆಗೆ ಬಂದಾಗ ಪಾತ್ರೆಗಳಲ್ಲಿ ತುಂಬಿದ ಹಾಲನ್ನು ಕಂಡಾಗ ಆಶ್ಚರ್ಯಚಕಿತನಾಗಿ ಇದು ಎಲ್ಲಿಂದ ? ಎಂದು ಕೇಳಿದ . ಅದಕ್ಕೆ ಅವಳು ನಡೆದ ಸಂಗತಿಯನ್ನು ವಿವರವಾಗಿ ವಿವರಿಸಿ ಹೇಳಿದಾಗ ಆಕೆಯ ಗಂಡ ಹೇಳಿದ “ ಅವರನ್ನು ಕಂಡರೆ ನಾನು ಹಿಂಬಾಲಿಸುವೆ ” ಹಾಗೆ ಕೆಲವು ದಿನ ಗಳ ನಂತರ ಅವರು ಮದೀನಾಗೆ ಹಿಜ್ರಾ ಹೋದರು . ಪ್ರವಾದಿವರ್ಯರನ್ನು ಅಂಗೀಕರಿಸಿ ಮುಸ್ಲಿಮರಾದರು . ಪ್ರವಾದಿವರ್ಯರು ಕರೆದ ಈ ಆಡಿನಿಂದ ಉಮರ್ ( ರ ) ರವರ ಕಾಲದ ತನಕವೂ ಧಾರಾಳ ಹಾಲು ಸಿಗುತಿತ್ತು .
*ಮುಂದುವರಿಯುವುದು*
Post a Comment