ಮದೀನಾ ಮಹತ್ವ ಇತಿಹಾಸ ಅಧ್ಯಾಯ 1
🌟🌟🌟🌟🌟🌟🌟🌟
ಮದೀನಾ ಮಹತ್ವ ಇತಿಹಾಸ
💫💫💫💫💫💫💫💫
ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಲ್ಮ
ಸಂಗ್ರಹ: ಯಾಸೀನ್ ನಾವೂರ್
🍃 ಅಧ್ಯಾಯ 1🍃
💜💜💜💜💜💜💜
❤️ ಪುಣ್ಯ ಭೂಮಿ ಮದೀನಾ ❤️
🌹🌹🌹🌹🌹🌹🌹🌹🌹🌹🌹
ಮದೀನಾ ಹೆಸರು ಕೇಳುವಾಗ ನೈಜ ವಿಶ್ವಾಸಿಯ ಹ್ರದಯ ಆನಂದ ಸಾಗರದಲ್ಲಿ ತೇಲಾಡುತ್ತದೆ. ನವ ಚೈತನ್ಯ ತುಂಬಿ ಹೊಸ ಪ್ರಪಂಚಕ್ಕೆ ಇಳಿದ ಸುಮಧುರ ಅನುಭವ. ಈ ಮಧುರ ಸವಿಯಲು ಪ್ರವಾದಿ ಪ್ರೇಮಿಗಳಿಗೆ ಮಾತ್ರ ಸಾಧ್ಯ. ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಪಾದಸ್ಪರ್ಶದಿಂದ ಅನುಗ್ರಹೀತಗೊಂಡ ಮದೀನಾ ಮಣ್ಣನ್ನು ಚುಂಬಿಸಲು ವಿಶ್ವಾಸಿಯ ತುಟಿಗಳು ಹಾತೊರೆಯುತ್ತಿರುತ್ತದೆ. ಸಂಕಷ್ಟ-ಸಮಸ್ಯೆಗಳಿಂದ ಜಗತ್ತಿನಲ್ಲಿ ಅತ್ಯಂತ ಕೆಟ್ಟ ಊರಾಗಿದ್ದ ಅಂದಿನ ಯಸ್ರಿಬ್
ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಆಗಮನದಿಂದ ಜಗತ್ತಿನಲ್ಲಿಯೇ ಅತ್ಯಂತ ಮಹತ್ವವಿರುವ ಸ್ಥಳವಾಗಿ ಮಾರ್ಪಟ್ಟಿತು.
ಅರಬಿಯಲ್ಲಿ ಮದೀನಾ ಎಂದರೆ ಪಟ್ಟಣವೆಂದರ್ಥ. ಆದರೆ ಇದು ಮದೀನತುರ್ರಸೂಲ್. ಪ್ರವಾದಿಯವರ ಪಟ್ಟಣ. ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಇಲ್ಲಿ ವಾಸಿಸಿದ ಕಾರಣ ಈ ಹೆಸರು ಬಂತು.ಇಸ್ಲಾಮಿನ ಬೆಳವಣಿಗೆಗೆ ಕಾರಣವಾದ ಈ ಮದೀನಾ ಇಸ್ಲಾಮಿಕ್ ಆಡಳಿತ ಮೊಟ್ಟ ಮೊದಲು ಜಾರಿಗೆ ಬಂದ ಪ್ರದೇಶ. ಇಸ್ಲಾಮಿನ ಸುಂದರ ಶರೀಅತ್ ನಿಯಮಗಳನ್ನು ಸ್ವೀಕರಿಸಿದ ಪುಣ್ಯ ಭೂಮಿ.
ಮದೀನಾದ ಮಹತ್ವ ಬರೆದು ಮುಗಿಯದು. ಆದರೂ ಈ ವಿನೀತನಿಂದ ಸಾಧ್ಯವಾದಷ್ಟು ವಿವರಿಸಲು ಪ್ರಯತ್ನಿಸಿದ್ದೇನೆ. ಪವಿತ್ರ ಇಸ್ಲಾಮಿನ ಪೋಷಣೆಗೆ ಅಲ್ಲಾಹನು ಆಯ್ಕೆ ಮಾಡಿದ ಪವಿತ್ರ ಭೂಮಿ ಮದೀನಾ ಕೇಂದ್ರವಾಗಿ ಹಲವಾರು ದೇಶಗಳು ಇಸ್ಲಾಮಿನ ವಶವಾಯಿತು. ಈಮಾನಿನ ಪ್ರಭೆ ಜಗತ್ತಿಗೆ ಹರಡಿರುವುದು ಮದೀನಾದಿಂದಲೇ.
ಮದೀನಾ ನಿವಾಸಿಗಳು 'ಅನ್ಸಾರಿಗಳು' ಎಂಬ ಗೌರವ ನಾಮ ಪಡೆದರು. ಅರ್ಥಾತ್ ಸಹಾಯಿಗಳು. ಅಂದರೆ ಪವಿತ್ರ ಇಸ್ಲಾಮಿನ ಸರ್ವತೋಮುಖ ಬೆಳವಣಿಗೆಗೆ ಬೇಕಾಗಿ ಸರ್ವವನ್ನು ತ್ಯಾಗಮಾಡಿದ ಮಹಾ ಉದಾರಿಗಳು. ತಮ್ಮ ಸ್ವತ್ತಿನಿಂದ ಮಕ್ಕಾದಿಂದ ಹಿಜ್ರಾ ಬಂದ ಸ್ವಹಾಬಿಗಳಿಗೆ ಪಾಲು ನೀಡಿದರು. ಒಂದಕಕ್ಕಿಂತ ಹೆಚ್ಚು ಪತ್ನಿಯಂದಿರಿರುವವರು ತಲಾಖ್ ಹೇಳಿ ಮುಹಾಜಿರ್ ಗಳಿಗೆ ಮದುವೆ ಮಾಡಿ ಕೊಟ್ಟರು.
ಪವಿತ್ರ ಖುರ್ ಆನಿನ ಹಲವು ಸೂಕ್ತಗಳು ಅವತೀರ್ಣಗೊಂಡದ್ದು ಮದೀನಾದಲ್ಲಿ . ಹಿಜಿರಾದ ನಂತರ ಖುರ್ ಆನಿನ ಪೂರ್ವ ಸಂರಕ್ಷಣೆ ನಡೆದದ್ದು ಮಣ್ಣಿನಲ್ಲಿ. ನಂತರ ಖುರ್ ಆನಿನ ಕ್ರೋಡೀಕರಣ ಹಾಗೂ ಇತರ ಸ್ಥಳಗಳಿಗೆ ವಿತರಣೆ ಹೀಗೆ ಎಲ್ಲವೂ ನಡೆದದ್ದು ಮದೀನದಲ್ಲಿ.
ಹಿಜಿರಾದ ನಂತರ ಖುರ್ ಆನಿನ ಪೂರ್ವ ಸಂರಕ್ಷಣೆ ನಡೆದದ್ದು ಮಣ್ಣಿನಲ್ಲಿ. ನಂತರ ಖುರ್ ಆನಿನ ಕ್ರೋಡೀಕರಣ ಹಾಗೂ ಇತರ ಸ್ಥಳಗಳಿಗೆ ವಿತರಣೆ ಹೀಗೆ ಎಲ್ಲವೂ ನಡೆದದ್ದು ಮದೀನದಲ್ಲಿ.
ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಪ್ರೀತಿಸಿದ ಊರು ಮದೀನಾ. ಮದೀನಾ ಕೂಡ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರವರನ್ನು ಪ್ರೀತಿಸಿದೆ. ಪ್ರವಾದಿಯವರ ಮಸೀದಿ 'ಮಸ್ಜಿದುನ್ನಬವಿ' ಇರುವುದು ಮದೀನದಲ್ಲಿ. ಮಹಾತ್ಮರೆಲ್ಲರೂ ಮದೀನವನ್ನು ಪ್ರೀತಿಸಿದರು. ಮದೀನಾದಲ್ಲಿ ಬದುಕಿದ ಇಮಾಮ್ ಮಾಲಿಕ್(ರ.ಅ) ರವರ ಪ್ರೇಮ ಇದಕ್ಕೆ ಜ್ವಲಂತ ನಿದರ್ಶನ. ಮದೀನದಲ್ಲಿ ಚಪ್ಪಲಿ ಹಾಕಿ ನಡೆಯಲಿಲ್ಲ.ವಾಹನ ಸಂಚಾರ ಮಾಡಲಿಲ್ಲ. ಯಾರಾದರೂ 'ಕೆಸರು ಮಣ್ಣು' ಎಂದರೆ ಮೂವತ್ತು ಛಡಿಯೇಟು ನೀಡಿ ಜೈಲಿನಲ್ಲಿ ಬಂದಿಸಿಡಬೇಕೆಂದು ಫತ್ವಾ ನೀಡಿದ್ದರು ಕೂಡಾ.
ಮದೀನಾದೊಂದಿಗಿರುವ ಪ್ರೀತಿ ಹೃದಯದಲ್ಲಿ ಈಮಾನ್ ಜೀವಂತವಾಗಿರುವ ಲಕ್ಷಣ. ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಈ ಮದೀನವನ್ನು ಪ್ರೀತಿಸಿದ್ದಾರೆ. ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಪ್ರೀತಿಸಿದ್ದನ್ನು ಪ್ರೀತಿಸುವುದು ಈಮಾನಿನ ಭಾಗ ತಾನೇ...? ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು ಹೀಗೆ ಪ್ರಾರ್ಥಿಸುತ್ತಿದ್ದರು 'ಮದೀನಾವನ್ನು ನಮಗೆ ಪ್ರೀತಿ ಇರುವಂತದ್ದನ್ನಾಗಿ ಮಾಡು ನಾವು ಅಲ್ಲಾಹನನ್ನು ಪ್ರೀತಿಸಿದ ಹಾಗೆ. ಅದಕ್ಕಿಂತಲೂ ಹೆಚ್ಚು '
ಮದೀನಾದ ಮಹತ್ವ, ಐತಿಹಾಸಿಕ ಸ್ಥಳಗಳು, ಇತಿಹಾಸ ಮುಂತಾದವುಗಳ ಬಗ್ಗೆ ಕಲಿಯಲೇಬೇಕು. ಇದು ಮದೀನಾದೊಂದಿಗಿನ ಪ್ರೀತಿಯ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ. ಮದೀನಾದ ಗತ ಹಾಗೂ ಇಂದಿನ ಸಂಪೂರ್ಣ ಹಾಗು ಹೋಗುಗಳ ಬಗ್ಗೆ ಈ ಪುಸ್ತಕ ಸಂಪೂರ್ಣ ಬೆಳಕು ಚೆಲ್ಲುತ್ತದೆ. ಓದಿ ನೋಡಿ....
ಮುಂದುವರಿಯುವುದು
Post a Comment