ಮದೀನಾ ಮಹತ್ವ ಇತಿಹಾಸ ಅಧ್ಯಾಯ 43

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 43*🍃
         💜💜💜💜💜💜💜

🌹🌹🌹🌹🌹🌹🌹🌹🌹🌹

*ಮದೀನಾ ಸಂರಕ್ಷಣೆಗೆ ಖಂದಕ್ ಯುದ್ಧ*

           ಈ ಯುದ್ಧಕ್ಕೆ ಅಹ್ಝಾಬ್ ಯುದ್ಧ ' ಎಂದು ಕೂಡಾ ಕರೆಯುತ್ತಾರೆ . ಪವಿತ್ರ ಮದೀನಾ ವನ್ನು ಶತ್ರುಗಳು ನಾಶಪಡಿಸಲು ಬಂದಾಗ ಅನಿವಾರ್ಯವಾಗಿ ನಡೆದ ಯುದ್ಧವಾಗಿದೆ ಇದು . ಭಿನ್ನತೆಗಳ ಮೂಲಕ ನಿತ್ಯವೂ ಸಮಸ್ಯೆಗಳನ್ನು ಬಯಸುತ್ತಿದ್ದ ಯಹೂದಿ ಗೋತ್ರವಾಗಿದೆ ಬನೂ ನಜೀರ್. ಇವರು ಮದೀನಾದಲ್ಲಿ ಜೀವಿಸುತ್ತಿದ್ದ ಯಹೂದಿಗಳಾಗಿದ್ದರು. ಮುಸ್ಲಿಮರು ಹಾಗೂ ಇವರು ಪರಸ್ಪರ ಒಪ್ಪಂದ ಮಾಡಿಕೊಂಡು ಜೀವಿಸುತ್ತಿದ್ದರು . ಇಬ್ಬರಲ್ಲಿ ಯಾರ ಮೇಲೆಯಾದರೂ ಯಾರಾದರು ಯುದ್ಧಕ್ಕೆ ಬಂದರೆ ಪರಸ್ಪರ ಸಹಾಯ ಮಾಡಬೇಕೆಂದು ಒಪ್ಪಂದವಾಗಿತ್ತು . ಮಕ್ಕಾ ಮುಶ್ರಿಕರು ಉಹ್ದ್ ಯುದ್ಧಕ್ಕೆ ಬಂದಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಇವರಲ್ಲಿ ಆರ್ಥಿಕ ಸಹಾಯವನ್ನು ಕೇಳಿದರು . ಇಲ್ಲಸಲ್ಲದ ಸಬೂಬು ಗಳನ್ನು ಹೇಳಿ ತಪ್ಪಿಸಿದರಲ್ಲದೆ ಹಲವಾರು ಒಪ್ಪಂದಗಳನ್ನು ಮುರಿದರು . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರನ್ನು ಕೊಲ್ಲಲು ಕೂಡಾ ಮುಂದಾಗಿದ್ದರು . ಶಾಂತಿ , ಸಹಬಾಳ್ವೆಗೆ ಮಾರಕವಾಗಿರುವ ಕಾರಣ ಇವರನ್ನು ಮದೀನಾದಿಂದ ಹೊರಹಾಕು ವುದು ಅನಿವಾರ್ಯವಾಯಿತು . ಅಂದಹಾಗೆ ಇವರಿಗೆ ಮುತ್ತಿಗೆ ಹಾಕಿ ಮದೀನಾದಿಂದ ಹೊರ ಕಳುಹಿಸಲಾಯಿತು . ಮದೀನಾದಿಂದ ಹೊರ ಹೋದ ಇವರಲ್ಲಿ ಕೆಲವರು ಖೈಬರ್‌ನಲ್ಲಿ , ಇನ್ನು ಕೆಲವರು ಶಾಮಿನಲ್ಲಿ ಜೀವಿಸತೊಡಗಿದರು . ಖೈಬರಿನಲ್ಲಿ ಜೀವಿಸತೊಡಗಿದ ಯಹೂದಿಗಳು ಮುಸ್ಲಿಮರ ವಿರುದ್ಧ ಸೇಡು ತೀರಿಸಲು ನಿರಂತರ ಕುತಂತ್ರಗಳನ್ನು ಹೆಣೆಯತೊಡಗಿದರು . ಮುಸ್ಲಿಮರನ್ನು ಸಂಪೂರ್ಣವಾಗಿ ನಿರ್ಣಾಮ ಮಾಡುವ ಪಣ ತೊಟ್ಟಿದ್ದರು. ಹಾಗೆ ಇವರಲ್ಲಿ ಒಂದು ವಿಭಾಗ ಮಕ್ಕಾ ಖುರೈಶಿಗಳು ಹಾಗೂ ಗತ್ಫಾನ್ ಗೋತ್ರಗಳನ್ನು ಭೇಟಿಯಾಗಿ ಮುಸ್ಲಿಮರ ವಿರುದ್ಧ ಯುದ್ಧ ಮಾಡುವಂತೆ ಪ್ರೇರಣೆ ನೀಡಿದರು . ' ಮುಸ್ಲಿಮರನ್ನು  ಸಂಪೂರ್ಣವಾಗಿ ನಿರ್ಣಾಮ ಮಾಡುವವರೆಗೆ ತಮ್ಮ ಜೊತೆಗಿರುತ್ತೇವೆ ' ಎಂಬ ಭರವಸೆಯನ್ನು ಕೂಡಾ ನೀಡಿದರು . “ಮಹಮ್ಮದರ ಧರ್ಮಕ್ಕಿಂತ ನಿಮ್ಮ ಧರ್ಮ ಉತ್ತಮವಾದುದು ” ಎಂದು ಹುರಿದುಂಬಿಸಿದರು . ಹಾಗೆ ಖುರೈಶಿಗಳು ಹಾಗೂ ಗತ್ಫಾನ್ ಗೋತ್ರದವರು ಯುದ್ಧಕ್ಕೆ ಬೇಕಾದ ಸಜ್ಜೀಕರಣ ಮಾಡತೊಡಗಿದರು . ಶತ್ರುಗಳು ಯುದ್ಧಕ್ಕೆ ಬರುವ ವಿಷಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರಿಗೆ ತಿಳಿಯಿತು . ' ಶತ್ರುಗಳನ್ನು ತಡೆಯಲು ಯಾವ ತಂತ್ರಗಳನ್ನು ಪಾಲಿಸುವುದು ' ಎಂದು ಸ್ವಹಾಬಿ ಗಳೊಂದಿಗೆ ಚರ್ಚಿಸಿದರು . ಆಗ ಸಲ್ಮಾನುಲ್ ಫಾರಿಸಿ (ರ) ರವರು ಹೇಳುತ್ತಾರೆ “ ನಾವು ಫಾರಿಸಿನಲ್ಲಿದ್ದಾಗ ಶತ್ರುಗಳನ್ನು ತಡೆಯಲು ಸುತ್ತಲೂ ಕಂದಕಗಳನ್ನು ತೋಡುತ್ತಿದ್ದೆವು . ಹಾಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಶತ್ರುಗಳನ್ನು ತಡೆಯಲು ಕಂದಕವನ್ನು ತೋಡುವುದಾಗಿ ನಿರ್ಧರಿಸಿದರು . ಎಲ್ಲಿ ನೋಡಬೇಕೆಂದು ಗುರುತು ಹಾಕಿದರು . ಪ್ರತಿ ಹತ್ತು ಜನರು 40 ಅಡಿ ಕಂದಕವನ್ನು ತೋಡುವಂತೆ ನಿರ್ಣಯಿಸಲಾಯಿತು . ಕಂದಕ ತೋಡುವ ಮುಸ್ಲಿಮರಿಗೆ ಆವೇಶ ಉಂಟಾಗಲು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲ ಮರು ಅವರ ಜೊತೆ ಕೆಲಸ ಕಾರ್ಯಗಳಲ್ಲಿ ಭಾಗಿಯಾದರು . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಕೆಲಸ ಮಾಡಿ ವಿಶ್ರಾಂತಿ ಪಡೆಯುವಾಗ ಸ್ವಹಾಬಿಗಳು ಬಂದು ಹೇಳಿದರು “ ನಾವು ಕೆಲಸಗಳನ್ನು ಪೂರ್ತಿಗೊಳಿಸುತ್ತೇವೆ . ನೀವು ಕೆಲಸ ಮಾಡಬೇಕಾದ ಅಗತ್ಯವಿಲ್ಲ ” ಆಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು “ ನಿಮ್ಮ ಜೊತೆ ಪ್ರತಿಫಲದಲ್ಲಿ ನಾನು ಕೂಡಾ ಭಾಗಿಯಾಗುತ್ತೇನೆ ” ಎಂದರು . ಶತ್ರುಗಳು ಮದೀನಾ ತಲುಪುವುದಕ್ಕಿಂತ ಮೊದಲು ಈ ಕಂದಕ ಪೂರ್ಣಗೊಳ್ಳಬೇಕಿದೆ . ಆದ್ದರಿಂದ ಸ್ವಹಾಬಿಗಳು ಹಸಿವು - ದಣಿವುಗಳನ್ನು ಲೆಕ್ಕಿಸದೆ ಆರು ದಿನಗಳಲ್ಲಿ ಪೂರ್ಣ ಗೊಳಿಸಿದರು . ಈ ಕಂದಕವನ್ನು ತೊಡಿದ್ದು ಮದೀನಾದ ಉತ್ತರ ಭಾಗದಲ್ಲಾಗಿದೆ . ಪೂರ್ವ ಹರ್ರಃ ಪರ್ವತದಿಂದ ಹಿಡಿದು ಪಶ್ಚಿಮ ಹರ್ರಃ ಪರ್ವತದ ತನಕವಾಗಿದೆ ಈ ಕಂದಕ ಇರುವುದು.
ಮದೀನಾದ ಸುತ್ತಲೂ ಕಂದಕವನ್ನು ತೋಡಿರಲಿಲ್ಲ . ಇದರ ಅಗತ್ಯ ಕೂಡಾ ಇರಲಿಲ್ಲ . ಯಾಕೆಂದರೆ ಪರ್ವತ , ಕಟ್ಟಡ ಹಾಗೂ ಖರ್ಜೂರ ಮರಗಳಿಂದ ಮದೀನಾದ ಇತರ ಭಾಗಗಳು ಆವೃತವಾಗಿದ್ದವು . ಆದ್ದರಿಂದ ಈ ಭಾಗಗಳ ಮೂಲಕ ಶತ್ರುಗಳಿಗೆ ಮದೀನಾಗೆ ಸುಲಭವಾಗಿ ಲಗ್ಗೆಯಿಡಲು ಸಾಧ್ಯವಿರಲಿಲ್ಲ . ಸುಮಾರು 5544 ಮೀಟರ್ ಉದ್ದದಲ್ಲಿ ಈ ಕಂದಕವನ್ನು ತೊಡಲಾಗಿತ್ತು . 4.62 ಮೀಟರ್ ಅಗಲವಿದ್ದ ಈ ಕಂದಕ 3.23 ಮೀಟರ್ ಆಳ ಕೂಡಾ ಇತ್ತು . ಅಬೂ ಸುಫ್ಯಾನ್ ನೇತೃತ್ವದಲ್ಲಿ ಶತ್ರುಸೇನೆ ಮದೀನಾದೆಡೆಗೆ ಪಯಣ ಬೆಳೆಸಿತು . ಅಂದು ಶತ್ರು ಪಾಳಯದಲ್ಲಿ 10 ಸಾವಿರ ಸೈನಿಕರಿದ್ದರು . ಇದರಲ್ಲಿ ಖುರೈಶಿಗಳು 4 ಸಾವಿರವಾದರೆ ಉಳಿದ ಆರು ಸಾವಿರ ಸೈನಿಕರು ಗತ್ಫಾನ್ ಗೋತ್ರದವರಾಗಿದ್ದರು . ಇತ್ತ ಪ್ರವಾದಿ ಸ್ವಲ್ಲಲ್ಲಾಹು  ಅಲೈಹಿವಸಲ್ಲಮರವರು ಹಿಜ್ರಾ 5 ನೇ ವರ್ಷ ಶವ್ವಾಲ್ ತಿಂಗಳಲ್ಲಿ ಮೂರು ಸಾವಿರ ಸೈನಿಕ ರೊಂದಿಗೆ ಯುದ್ಧ ರಣಾಂಗಣಕ್ಕೆ ಹೊರಟರು . ಸಲ್‌ಅ್ ಪರ್ವತದ ಸಮೀಪ ಡೇರೆಗಳನ್ನು ನಿರ್ಮಿಸಿದರು. ಶತ್ರುಗಳ ಮತ್ತು ಮುಸ್ಲಿಮರ ನಡುವೆ ಬೃಹತ್ ಕಂದಕವಿದೆ. ಮಹಿಳೆಯ ಹಾಗೂ ದಾಸಿಯರು ಸುರಕ್ಷಿತರಾಗಿರಲು ಕೋಟೆಯೊಳಗೆ ಇರುವಂತೆ ವ್ಯವಸ್ಥೆ ಮಾಡಲಾಯಿತು . ಶತ್ರುಗಳ ಬೃಹತ್ ಸೇನೆಯನ್ನು ಕಂಡಾಗ ಮುಸ್ಲಿಮರು ಹೇಳುತ್ತಾರೆ “ ಇದುವೇ ಅಲ್ಲಾಹು ಮತ್ತು ರಸೂಲರು ವಾಗ್ದಾನವಿತ್ತ ಸತ್ವ ಪರೀಕ್ಷೆ ಹಾಗೂ ವಿಜಯದ ಮಾರ್ಗ . ಖುರ್‌ಆನ್ ಹೇಳುವುದನ್ನು ನೋಡಿ “ ಸತ್ಯವಿಶ್ವಾಸಿಗಳು ಸೇನೆಗಳನ್ನು ಕಂಡಾಗ ಇದುವೇ ಅಲ್ಲಾಹು ಮತ್ತು ಪೈಗಂಬರರು ನಮಗೆ ವಾಗ್ದಾನ ಮಾಡಿದ್ದು , ಅಲ್ಲಾಹು ಮತ್ತು ಸಂದೇಶ ವಾಹಕರ ಮಾತು ನಿಜವಾಗಿತ್ತು ಎಂದು ಹೇಳಿದರು. ಈ ವಾಗ್ದಾನವು ಅವರ ಸತ್ಯವಿಶ್ವಾಸವನ್ನು , ಅವರ ಸಮರ್ಪನೆಯನ್ನು ಹೆಚ್ಚಿಸಿತು ( ಅಲ್ ಅಹ್ಝಾಬ್ -22 ) ಆದರೆ ಈ ಬೃಹತ್ ಸೇನೆಯನ್ನು ಕಂಡಾಗ ಮುಸ್ಲಿಂ ಸೇನೆಯಲ್ಲಿದ್ದ ಕಪಟ ವಿಶ್ವಾಸಿಗಳ ಹೃದಯ ನಡುಗಿತು . ಖರ್‌ಆನ್ ಹೇಳುವುದನ್ನು ನೋಡಿ “ ಕಪಟ ವಿಶ್ವಾಸಿಗಳೂ ಹೃದಯಗಳಲ್ಲಿ ರೋಗವಿದ್ದವರು ಅಲ್ಲಾಹು ಮತ್ತು ಅವನ ಪ್ರವಾದಿ ನಮಗೆ ವಂಚನೆಯನ್ನಲ್ಲದೆ ಇನ್ನೇನನ್ನು ವಾಗ್ದಾನ ಮಾಡಿಲ್ಲ ಎಂದು ಹೇಳುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ ( ಅಲ್ ಅಹ್ಝಾಬ್ -12 ) ಶತ್ರುಗಳು ಕಂದಕವನ್ನು ಕಂಡಾಗ ಆಶ್ಚರ್ಯಚಕಿತರಾದರು . ಈ ತನಕ ಯಾವುದೇ ಅರಬಿಗಳು ಇಂತಹ ತಂತ್ರವನ್ನು ಪ್ರಯೋಗಿಸಿರಲಿಲ್ಲ . ಬಹಳ ಆವೇಶದಿಂದ ಬಂದ ಶತ್ರುಗಳಿಗೆ ನಿರಾಸೆಯಾಯಿತು . ' ಮದೀನಾ ಸರ್ವನಾಶ ' ಎಂಬ ಅವರ ಮನದಾಸೆ ಕನಸಾಗಿಯೇ ಉಳಿಯಿತು . ಮುಸ್ಲಿಮರಿಗೆ ದಿಗ್ಟಂಧನ ಹಾಕಲು ತೀರ್ಮಾನಿಸಿದರು . ಪರಸ್ಪರ ಬಿಲ್ಲು - ಬಾಣ ಗಳಿಂದ ಯುದ್ಧ ನಡೆಯುತ್ತಿದೆ . ಹೊಂಡವನ್ನು ಮುಚ್ಚಿ ಮದೀನಾಗೆ ಲಗ್ಗೆ ಇಡಲು ಶ್ರಮಿಸುತ್ತಾರೆ . ಆದರೆ ಏನು ಮಾಡು ವುದು .. ? ಸ್ವಹಾಬಿಗಳ ಶಕ್ತವಾದ ಪ್ರತಿದಾಳಿಯಿಂದ ಅವರು ವಿಫಲಾದರು . ದಿನವಿಡೀ ಯುದ್ಧದಲ್ಲಿ ತೊಡಗಿದ್ದರುವ ಸ್ವಹಾಬಿಗಳ ನಮಾಝ್ ಖಳಾಗುತಿತ್ತು ರಾತ್ರಿ ಖಳಾ ಸಂದಾಯ ಮಾಡುತಿದ್ದರು . ನಮಾಝನ್ನು ಸರಿಯಾದ ಸಮಯದಲ್ಲಿ ನಿರ್ವಹಿಸಲು ತಡೆಯಾದ ಶತ್ರುಗಳಿಗೆ ವಿರುದ್ಧವಾಗಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಪ್ರಾರ್ಥಿಸಿದ್ದರೂ ಕೂಡಾ . ಯುದ್ಧವು ಇನ್ನಷ್ಟು ತೀವ್ರಗೊಂಡಿತು . ಶತ್ರುಗಳು ಮುಸ್ಲಿಮರ ವಿರುದ್ಧ ದಿಗ್ಭಂಧನ ಇನ್ನಷ್ಟು ಮುಂದುವರಿಸಿದರು . ಮುಸ್ಲಿಮರಲ್ಲಿ ಭೀತಿ ಹೆಚ್ಚಾಯಿತು . ಶತ್ರುಗಳು ಮೇಲ್ಬಾಗಳಿಂದ ಕೆಳಭಾಗ ಗಳಿಂದ ಆವರಿಸಿದರು . ಮುಸ್ಲಿಂ ಸೇನೆಯಲ್ಲಿದ್ದ ಕಪಟ ವಿಶ್ವಾಸಿಗಳು ವಂಚಿಸಿ ಮನೆ ಮರಳಿದ್ದಾರೆ . ಪವಿತ್ರ ಖುರ್‌ಆನ್ ಹೇಳುವುದನ್ನು ನೋಡಿ “ ಅಲ್ಲಿ ಸತ್ಯ ವಿಶ್ವಾಸಿಗಳು ಚೆನ್ನಾಗಿ ಪರೀಕ್ಷಿಸಲ್ಪಟ್ಟರು ಮತ್ತು ತೀವ್ರವಾಗಿ ನಡುಗಿಸಲ್ಪಟ್ಟರು ” ( ಅಲ್ ಅಹ್ಝಾಬ್ -11 )  ಗತ್ಫಾನ್ ಗೋತ್ರವವರೊಂದಿಗೆ ಒಪ್ಪಂದ ಮಾಡೋಣ ... ? ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಸಹಾಬಿಗಳಲ್ಲಿ ಚರ್ಚಿಸಿದಾಗ ಔಸ್ ಮತ್ತು ಖಝ್ರಜ್ ಗೋತ್ರದ ನಾಯಕರಾದ ಸಮದೀನಾ 96 ,ಸಅ್ದ್ ಬಿನ್ ಮುಆದ್ (ರ) ಹಾಗೂ ಸಅ್ದ್ ಬಿನ್ ಉಬಾದ ( ರ ) ರವರ ನಿರಾಕರಿಸಿದರು . “ ಇದು ಅಲ್ಲಾಹನ ಆಜ್ಞೆಯಲ್ಲದಿದ್ದರೆ ಯುದ್ಧವನ್ನು ಮುಂದುವರಿಸುವ ” ಎಂದು ಹೇಳಿದರು . ಹಾಗೆ ಯುದ್ಧ ಮುಂದುವರಿಯುತಿತ್ತು . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹಾಗೂ ಅನುಯಾಯಿಗಳು ಈ ಯುದ್ಧದಲ್ಲಿ ಪ್ರಾರ್ಥಿಸಲು ಒಂದು ಪ್ರಾರ್ಥನೆಯನ್ನು ಕಲಿಸಿಕೊಟ್ಟರು . ಭೀತಿಯುಂಟಾಗುವಾಗ ಪ್ರಾರ್ಥಿಸತೊಡಗಿದರು . ಅಲ್ಲಾಹನು ಅವರ ಪ್ರಾರ್ಥನೆಗೆ ಉತ್ತರ ನೀಡಿದರು . ಮುಸ್ಲಿಮರ ವಿಜಯಕ್ಕೆ ಬೇಕಾದ ಎಲ್ಲಾ ಕಾರಣಗಳನ್ನು ಉಂಟು ಮಾಡಿದನು . ಶತ್ರುಗಳ ಒಕ್ಕೂಟದಲ್ಲಿ ಬಿರುಕು ಉಂಟಾಯಿತು . ಪರಸ್ಪರ ಭಿನ್ನಾಭಿಪ್ರಾಯಗಳ ಉಂಟಾಗಿ ಐಕ್ಯತೆ ನಷ್ಟ ಹೊಂದಿತು . ಯುದ್ಧ ನಾಯಕ ಅಬೂಸುಫ್ಯಾನ್ ಖುರೈಶಿಗಳನ್ನು ಕರೆದು ಹೇಳುತ್ತಾನೆ “ ಓ ಖುರೈಶಿಗಳೇ .... ನಮ್ಮ ಕುದುರೆ - ಒಂಟೆಗಳು ವಿನಾಶದ ಅಂಚಿನಲ್ಲಿದೆ . ಯಹೂದಿಗಳಿಂದ ನಮಗೆ ನಿರೀಕ್ಷಿಸಿದಷ್ಟು ಸಹಾಯ ಲಭ್ಯವಾಗಲಿಲ್ಲ . ಭೀಕರವಾದ ಗಾಳಿ ಬೀಸುತ್ತಿದೆ . ನಮಗೆ ಅದನ್ನು ತಡೆಯಲು ಸಾಧ್ಯವಾಗುವುದಿಲ್ಲ . ನಮ್ಮ ಡೇರೆ , ಮನೆ ಮಠಗಳು ಹಾರಿ ಹೋಗಲು ಕ್ಷಣ ಮಾತ್ರ ಬಾಕಿಯಿದೆ . ನೀವು ಮರಳಿ ಹೋಗಿರಿ . ನಾನು ಹೊರಡುತ್ತಿದ್ದೇನೆ ” ಖುರೈಶಿಗಳು ಯುದ್ಧದಿಂದ ಮರಳಿ ಹೋಗಿದ್ದಾರೆ ಎಂಬ ಸುದ್ದಿ ಗಲ್ಫಾನ್ ಗೋತ್ರ ದವರಿಗೆ ತಲುಪಿದಾಗ ಅವರು ಕೂಡಾ ತಮ್ಮ ಊರಿಗೆ ಹೊರಟು ಹೋದರು . ಶತ್ರುಗಳ ಚಲನವಲನಗಳ ಬಗ್ಗೆ ತಿಳಿಯಲು ಪ್ರವಾದಿವರ್ಯರ ನಿದೇಶನದಂತೆ ರಹಸ್ಯವಾಗಿ ಹೋಗಿದ್ದ ಹುದೈಫಾ (ರ) ರವರು ಮರಳಿ ಬಂದು ಪ್ರವಾದಿವರ್ಯರಿಗೆ ನಡೆದ ಸಂಗತಿಯನ್ನು ಬಿಡಿ ಬಿಡಿಯಾಗಿ ವಿವರಿಸಿ ಹೇಳುತ್ತಾರೆ . ಪವಿತ್ರ ಖುರ್‌ಆನ್ ಹೇಳುವುದು ನೋಡಿ “ ಸತ್ಯವಿಶ್ವಾಸಿಗಳೇ ... ಸೈನ್ಯಗಳು ನಿಮಗೆ ಬಂದಾಗ ನಾವು ಅವರ ಮೇಲೆ ಬಿರುಗಾಳಿಯನ್ನೂ ನಿಮಗೆ ಕಾಣಿಸದಿರುವ ಸೈನ್ಯಗಳನ್ನು ಕಳುಹಿಸಿದ ಸಂದರ್ಭದಲ್ಲಿ ಅಲ್ಲಾಹನು ನಿಮಗೆ ಮಾಡಿದ ಅನುಗ್ರಹಗಳನ್ನು ಸ್ಮರಿಸಿರಿ . ನೀವು ಮಾಡುತಿದ್ದವನ್ನು ಅಲ್ಲಾಹನು ಚೆನ್ನಾಗಿ ನೋಡುತ್ತಿದ್ದನು ( ಅಲ್ ಅಹ್ಝಾಬ್ -19 ) ಹಾಗೆ ಯುದ್ಧ ಪೂರ್ಣಗೊಂಡಿತು . ಮುಸ್ಲಿಮರು ವಿಜಯದ ಪತಾಕೆ ಹಾರಿಸಿದರು . ಶತ್ರುಗಳ ಸಂಘಟಿತ ಶ್ರಮ ವಿಫಲಗೊಂಡಿತು . ಯಹೂದಿಗಳು ಇನ್ನಷ್ಟು ಮುಖಭಂಗಕ್ಕೆ ಒಳಗಾದರು . ಈ ಯುದ್ಧದಲ್ಲಿ ಮುಸ್ಲಿಮರಿಂದ ಆರು ಸ್ವಹಾಬಿಗಳು ರಕ್ತಸಾಕ್ಷಿಗಳಾದರು . ಶತ್ರುಗಳಿಂದ ಮೂರು ಜನರು ಕೊಲ್ಲಲ್ಪಟ್ಟರು.

     *ಮುಂದುವರಿಯುವುದು*