ಜಾಗತಿಕ ಶ್ರೇಷ್ಠ ಚಕ್ರವರ್ತಿ ಸುಲೈಮಾನ್ ನೆಬಿ(ಅ) ರವರ ಜೀವನ ಚರಿತ್ರೆ...👑*

*☪️~~~~~~~✦ ﷽ ✦~~~~~~☪️*

*👑ಜಾಗತಿಕ ಶ್ರೇಷ್ಠ ಚಕ್ರವರ್ತಿ ಸುಲೈಮಾನ್ ನೆಬಿ(ಅ) ರವರ ಜೀವನ ಚರಿತ್ರೆ...👑*

🌿🌿🌿🌿🌿🌿🌿🌿🌿🌿

*🏮ಸಂಚಿಕೆ- 04*

*👉🏻ಸಮುದ್ರದಡಿಯಿಂದ ಮುತ್ತು ರತ್ನಗಳು ಹೆಕ್ಕುತ್ತಿದ್ದ‌‌ರು‌ ಇವರು...*

ಸುಲೈಮಾನ್ ನೆಬಿಯವರ ಸಾಮ್ರಾಜ್ಯದ ಬಂದರುಗಳಿಗೆ ಬಂದ ಈ ಉತ್ಪನ್ನಗಳು, ಗ್ರಾಮೀಣ ಆಹಾರ ಸಾಮಾಗ್ರಿಗಳು ಎಲ್ಲಾ ಖರೀದಿಸಿ ಅದಕ್ಕೆ ಬದಲಾಗಿ ನಾವಿಕರಿಗೆ ಮುತ್ತು, ಹರಳುಗಳ ನೀಡುತ್ತಿದ್ದರು. ಮಹಾನರು ಇತರ ರಾಷ್ಟ್ರಗಳ ರಾಜ‌ ಶ್ರೇಷ್ಠರುಗಳಿಗೆ ತನ್ನ ಪಾರಿತೋಷಕವಾಗಿ ಬೆಲೆ ಬಾಳುವ ಮುತ್ತು, ಮಾಣಿಕ್ಯಗಳು, ರತ್ನಗಳೆಲ್ಲಾ ಕಳುಹಿಸುತ್ತಿದ್ದರು.

ಮಹಾನರಾದ ಸುಲೈಮಾನ್ ನೆಬಿಯವರಿಗೆ ಇಷ್ಟೊಂದು ಮುತ್ತುಗಳು ಎಲ್ಲಿಂದ ಸಿಗುತ್ತದೆ ಎಂಬ ಒಂದು ಪ್ರಶ್ನೆ ಇಲ್ಲಿ ನಿಮಗೆ ಉದ್ಭವವಾಗುವುದು ಸರಳವೇ ಸೈ ..!
ತುಂಬಾ ಆಳ-ಗಭೀರವಾದ ಈ ಸಮುದ್ರಗಳಿಗೆ ಧುಮುಕಿ ಕೋಟ್ಯಾಂತರ ತರಹದ ವಿಚಿತ್ರ ಮೀನುಗಳು, ಅತಿ ತೀಕ್ಷ್ಣ ಉಗ್ರ ವಿಷವುಳ್ಳ ಬಹುದೊಡ್ಡ ಶಾರ್ಕ್, ನೀಲಿ ತಿಮಿಂಗಿಲ, ಗರಗಸ‌‌‌‌ ಮೀನು ಮುಂತಾದ ವಿಭಿನ್ನ ಬಲಾಢ್ಯಯುತ‌‌ ಮನುಷ್ಯನನ್ನೇ ಒಂದೇ ಹಿಡಿತಕ್ಕೆ ತಿಂದು ಮುಗಿಸಬಲ್ಲ,‌‌ ಬೃಹತ್ ಹಡಗುಗಳ ತಲೆ ಕೆಳಗಾಗಿಸಬಲ್ಲ ಬೃಹತ್ ಮೀನುಗಳು,‌ ಬಹು ವಿಷಕಾರಿ ಸರೀಸೃಪಗಳು ಎಲ್ಲಾ ಇರುವಾಗ ಅಲ್ಲಿಗೆ ಈಜುತ್ತಾ ತಲುಪಿ ಅಲ್ಲಿಂದ ಮುತ್ತು ರತ್ನಗಳು ತೆಗೆದುಕೊಂಡು ಹಿಂತಿರುಗಿ ಬರುವುದು ಎಂದರೆ ಅಸಾಮಾನ್ಯ ಸಂಗತಿಯೇ ಸೈ..

ಈ‌ ಕೆಲಸ ಮಾಡುತ್ತಿದ್ದವರೇ ಪಿಶಾಚಿಗಳು, ಹೌದು ಅಲ್ಲಾಹು ಪಿಶಾಚಿ ದೆವ್ವಗಳನ್ನು ಮಹಾನರಿಗೆ ಅಧೀನವಾಗಿಸಿ ಕೊಟ್ಟ. ಮಹಾನರು ಈ‌ ಪಿಶಾಚಿಗಳಿಗೆ ಕೆಲಸ ಮಾಡಲು ಆಜ್ಞಾಪಿಸುತ್ತಿದ್ದು ಅದರಂತೆ ಅವು ಕೆಲಸ ಮಾಡುತ್ತಿದ್ದವು.

ಪ್ರವಿಶಾಲ ಸಮುದ್ರ, ‌ಅಲ್ಲಿ ಜನ‌ರ ಹಿಂಡೇ ಜಮಾಯಿಸಿದೆ.‌ ಅದ್ಭುತವೊಂದು ಸಂಭವಿಸಲಿಕ್ಕಿದೆ. ಮಹಾನರು ಅತ್ತ ಬಂದು ಪಿಶಾಚಿಗಳನ್ನು ಕರೆದರು. ‌ಮಹಾನರ ಕರೆಯಂತೆ ಅವು ಬಂದು ಮಹಾನರ ಮುಂದೆ ಹಾಜರಾದವು. 

ಮಹಾನರು ಆಜ್ಞಾಪಿಸಿದರು: ಈ ಆಳ ಸಮುದ್ರಕ್ಕೆ ಮುಳುಗಿರಿ, ಅಲ್ಲಿಂದ ಮುತ್ತು ರತ್ನಗಳು ತೆಗೆದುಕೊಂಡು ಬನ್ನಿರಿ..

ಮಹಾನರ ಆಜ್ಞಾನುಸಾರ ಅವು ಸಮುದ್ರಕ್ಕೆ ಹಾರಿದವು, ತುಂಬಾ ಹೊತ್ತು ಕಳೆಯಲಿಲ್ಲ. ಸೆಕೆಂಡುಗಳ ವ್ಯತ್ಯಾಸದಲ್ಲಿ ತಕ್ಷಣವೇ ಅವರೆಲ್ಲಾ ತಮ್ಮ ಸಂಘದ ಜೊತೆ ಸಮುದ್ರದಿಂದ ಎದ್ದೇಳಿ ಹೊರ ಬಂದರು. ಅವರ ಕೈ ತುಂಬಾ ಮುತ್ತು ರತ್ನಗಳಿತ್ತು. ನೋಡುಗರಲ್ಲೆಲ್ಲಾ ಒಮ್ಮೆಲೇ ಆವೇಶ, ಆಹ್ಲಾದ,‌ ಆಶ್ಚರ್ಯದ ಕಣ್ಣುಗಳಿಂದ ನೋಡಿದ್ದು ಸಂತೋಷ ಅಲ್ಲಿ ತುಂಬಿ ಮನೆ ಮಾಡಿತ್ತು.

ಪರಿಶುದ್ಧ ಖುರ್'ಆನ್ ವಿವರಿಸುತ್ತಿರುವುದು ನೋಡಿರಿ..

وَمِنَ ٱلشَّيَٰطِينِ مَن يَغُوصُونَ لَهُۥ وَيَعْمَلُونَ عَمَلًۭا دُونَ ذَٰلِكَ ۖ وَكُنَّا لَهُمْ حَٰفِظِينَ

ಶೈತಾನರ ಪೈಕಿ ಅವರಿಗಾಗಿ ಮುಳುಗೇಳುವ ಕೆಲವರನ್ನು ನಾವು ಅವರ ನಿಯಂತ್ರಣಕ್ಕೆ ತಂದು ಕೊಟ್ಟಿದ್ದೆವು. ಇದಕ್ಕೆ ಹೊರತಾಗಿ ಇತರ ಕೆಲಸಗಳನ್ನೂ ಅವರು ಮಾಡುತ್ತಿದ್ದರು. ಇವರೆಲ್ಲರ ಸಂರಕ್ಷಕರು ನಾವೇ ಆಗಿದ್ದೆವು.

ಈ ಆಯತಿನ ಒಟ್ಟು ತಾತ್ಪರ್ಯ "ಸಮುದ್ರದಿಂದ ಮುತ್ತುಗಳನ್ನು ತೆಗೆಯುವ ಮೊದಲಾದ ಕಷ್ಟದ ಕೆಲಸಗಳನ್ನು ಮಾಡಲು ಸುಲೈಮಾನ್ ನೆಬಿಯವರಿಗೆ ಅಲ್ಲಾಹು ಪಿಶಾಚಿಗಳನ್ನು ಅಧೀನಗೊಳಿಸಿ ಕೊಟ್ಟದ್ದು ಒಂದು ಅನುಗ್ರಹವಾಗಿದೆ. ಸೂರಾ ಸಬಅಃದಲ್ಲಿ ‘ಕೆಲಸಗಳಿಗಾಗಿ ಜಿನ್ನುಗಳನ್ನು ಅವರಿಗೆ ಅಧೀನಗೊಳಿಸಿ ಕೊಡಲಾಗಿದೆ’ ಎಂದಿ ರುವುದನ್ನು ಕಾಣಬಹುದು. ಪಿಶಾಚಿಗಳು ಕಟ್ಟಡ ನಿರ್ಮಾಣ ಮಾಡುವವರೂ, ಮುಳುಗು ತಜ್ಞರೂ ಆಗಿದ್ದಾರೆಂದು ಸೂರಾ ಸ್ವಾದ್‍ನಲ್ಲಿದೆ. ಈ ಸೂಕ್ತದಲ್ಲೂ ಮುಳುಗೇಳುವ ಪಿಶಾಚಿಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದ್ದರಿಂದ ಕಾರ್ಮಿಕರಾಗಿ ಜಿನ್ನುಗಳಿದ್ದರೆಂದೂ ಕಷ್ಟದ ಕೆಲಸಗಳನ್ನು ಮಾಡಿದ್ದು ಪಿಶಾಚಿಗಳೆಂದೂ ಇದರಿಂದ ಮನದಟ್ಟು ಮಾಡಬಹುದು. ಪಿಶಾಚಿಗಳು ನಾಶಕಾರಿಗಳಾಗಿದ್ದರೂ ಅವರ ಯಾವುದೇ ಕುತಂತ್ರಗಳೂ ಸುಲೈಮಾನ್‌ ನೆಬಿಯವರ ಬಳಿ ನಡೆಯಲಿಲ್ಲ. ಅಲ್ಲಾಹು ಅವರನ್ನು ಸಂರಕ್ಷಿಸಿದನು." ಎಂದಾಗಿದೆ

ಆಳವಾದ ಸಮುದ್ರಗಳಿಂದ ಮುತ್ತು ರತ್ನಗಳು ಹೆಕ್ಕಿ ತೆಗೆದುಕೊಂಡು ಬರುವುದು ಮಾತ್ರ ಈ ಪಿಶಾಚಿಗಳ ಕೆಲಸವಾಗಿರಲಿಲ್ಲ, ಬದಲಾಗಿ ಬೃಹತ್ ಗಗನಚುಂಬಿ ಕಟ್ಟಡಗಳನ್ನೂ ಈ ಪಿಶಾಚಿಗಳು ಮಾಡುತ್ತಿದ್ದರು, ಮಹಾನರು ಪ್ರಯಾಣ ಬೆಳೆಸುವಾಗ‌ ಅದಕ್ಕೆ ಸಂಬಂಧಿಸಿದ ಎಲ್ಲಾ‌ ಮೂಲ ಸೌಕರ್ಯಗಳು, ಅವಶ್ಯವಾದ ಎಲ್ಲಾ‌ ಸಹಾಯ ಸಹಕಾರಗಳು‌ ಕೂಡಾ ಇದು‌ ಮಾಡುತ್ತಿತ್ತು.

ಅನುಕೂಲಕರ ಹವಾಮಾನ, ಆಕಾಶವು ನೀಲಾಂಬರವಾಗಿ ಸುಂದರವಾಗಿ ಗೋಚರಿಸಿದರೆ ಮಹಾನರು ಪ್ರಯಾಣ‌ ಹೊರಡಲು ಸಿದ್ಧರಾಗುವರು. 

ಪ್ರಯಾಣ ಸಮಯ ಘೋಷಿಸಿದ‌ ಬೆನ್ನಲ್ಲೇ ಎಲ್ಲಾ ಸೈನಿಕ ಪಡೆಗಳು ಶಸ್ತ್ರಾಸ್ತ್ರಳೊಂದಿಗೆ ಸಿದ್ಧರಾಗುವರು. ಒಂಟೆಗಳು, ಕುದುರೆಗಳು, ಕತ್ತೆಗಳು, ಮನುಷ್ಯರು, ಜಿನ್ನುಗಳು, ಪಿಶಾಚಿಗಳು, ಪ್ರಾಣಿಗಳು, ಪಕ್ಷಿ ಸಂಕುಲಗಳು, ಆಹಾರ ಸಾಮಾಗ್ರಿಗಳು, ಬಟ್ಟೆ ಬರೆಗಳು, ಕುಶಲಕರ್ಮಿಗಳು, ‌ಮದ್ದು ಗುಂಡುಗಳು ಮತ್ತು ಇತರ ಪ್ರಮುಖ ಉಪಕರಣಗಳು ಎಲ್ಲಾ ತಯಾರಿ‌ ಮಾಡಿ ಪ್ರಯಾಣಕ್ಕೆ ಸನ್ನದ್ಧರಾಗುವರು.

ಉತ್ತಮ ಗುಣಮಟ್ಟದ ತರಬೇತಿ ಪಡೆದ ಸೈನ್ಯ ಪಡೆ ಅಲ್ಪಾವಧಿಯಲ್ಲೇ ಪ್ರಯಾಣಕ್ಕೆ ಬೇಕಾಗುವ ಸಕಲ ಸಿದ್ಧತೆಗಳನ್ನು ಮಾಡಿ ಮುಗಿಸುವರು. ಇನ್ನೇನು ಹೊರಡಲು ಮಾತ್ರ ಬಾಕಿ. ಎಲ್ಲರೂ ಅಣಿಯಾಗಿ ಒಗ್ಗಟ್ಟಿನಿಂದ ಮುಂದೆ ಚಲಿಸಬೇಕು. ಒಗ್ಗಟ್ಟು ಮುರಿದು ಒಂದು ಅಡಿ ಹೆಜ್ಜೆ ಮುಂದೆಯಾಗಲೀ ಅಥವಾ ಹಿಂದೆಯಾಗಲೀ ಇಡುವಂತಿಲ್ಲ.‌ ಪರಿಪೂರ್ಣವಾಗಿ ಶಿಸ್ತು ಸಂಯಮದಿಂದ ಮುಂದೆ ನಡೆಯಬೇಕು. ‌ಮಹಾನರು ಆಗಮಿಸಿದರು. ‌ಇನ್ನು ಪ್ರಯಾಣ ಆರಂಭಿಸಲಾಗುತ್ತದೆ. ಬೃಹತ್ ಸೈನ್ಯ ಪಡೆ ‌ಮಹಾನರ ಹಿಂದಿನಿಂದಲೇ ಹಿಂಬಾಲಿಸಿತು.‌ ಪಕ್ಷಿಗಳೆಲ್ಲಾ ಸುಡು ಬಿಸಿಲಿನ ರಕ್ಷಣೆ ನೀಡಲು ಮಹಾನರ ಮೇಲಿನಿಂದ ನೆರಳನ್ನು ನೀಡಲು ಆರಂಭಿಸಿತು. ಮಹಾನರು ಸುತ್ತಲೂ ದೃಷ್ಟಿ ಹಾಕಿ ನಿರೀಕ್ಷಿಸುವರು.‌ ಜೀವಜಾಲಗಳ ಶಬ್ಧ ತುಂಬಾ ಸೂಕ್ಷ್ಮವಾಗಿ ಆಲಿಸುವರು. ದೂರ ದಿಕ್ಕಿನಿಂದ ಒಂದು ಸಣ್ಣ ಶಬ್ದ, ಗಾಳಿಯಿಂದ‌ ಹಬ್ಬುತ್ತಾ ಬರುತ್ತದೆ ಆ ಶಬ್ದ. ಗಾಳಿಯಿಂದ ಆ ಶಬ್ದ ಮಹಾನರತ್ತ ಅಪ್ಪಳಿಸಿ ಕಿವಿಯತ್ತ ಬಡಿಯುತ್ತದೆ. ಆಗ ಮಹಾನರಿಗೆ ತಿಳಿಯಲು ಸಾಧ್ಯವಾಯಿತು ಅದೊಂದು ಇರುವೆಯ ಶಬ್ಧ ಎಂದು. ಮಹಾನರು ಆ ಶಬ್ಧವನ್ನು‌‌ ಸರಿಯಾಗಿ ಆಲಿಸುವರು. 

*ಮುಂದುವರೆಯುವುದು..*

*☘ _ಪುಣ್ಯ ಪ್ರವಾದಿ(ﷺ) ರ ಮೇಲೆ ಸ್ವಲಾತ್, ಸಲಾಂ ಅಧಿಕಗೊಳಿಸಿರಿ_👇🏻*
*اللهم صل على سيدنا محمد عدد ما في علم الله صلاة دائمة بدوام ملك الله*

*✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ರಾಜಸ್ಥಾನ*

*👆🏻Share maximum..🤝🏻*