ಜ್ಞಾನಧಾರೆ: ಚರಿತ್ರೆ 📚**👑ಶ್ರೇಷ್ಠ ಚಕ್ರವರ್ತಿ ಸುಲೈಮಾನ್ ನೆಬಿ(ಅ) ರವರ ಜೀವನ ಚರಿತ್ರೆ...👑*

*🟦~~~~~~~✦ ﷽ ✦~~~~~~🟦*

*📚 ಜ್ಞಾನಧಾರೆ: ಚರಿತ್ರೆ 📚*

*👑ಶ್ರೇಷ್ಠ ಚಕ್ರವರ್ತಿ ಸುಲೈಮಾನ್ ನೆಬಿ(ಅ) ರವರ ಜೀವನ ಚರಿತ್ರೆ...👑*

*📍ಸಂಚಿಕೆ- 0️⃣6️⃣*

*👉🏻ಒಂದು ಹೊತ್ತಿಗೆ ಹನ್ನೆರಡು ಸಾವಿರ ಪಾತ್ರೆಗಳಲ್ಲಿ ಆಹಾರ ಪಾಕ..!!*

ಸುಲೈಮಾನ್ ನೆಬಿಯವರಿಗೆ ಅಲ್ಲಾಹು ನೀಡಿದ ಮತ್ತೊಂದು ಅನುಗ್ರಹ: ತಾಮ್ರದ ಲಾವಾರಸದ ಚಿಲುಮೆ ಹರಿಯುವ ತಾಣದ ಕುರಿತು ಅಲ್ಲಾಹು ಸುಲೈಮಾನ್ ನೆಬಿಯವರಿಗೆ ಮಾಹಿತಿ ತಿಳಿಸಿದ. ಪ್ರತಿ‌ ತಿಂಗಳಲ್ಲಿ ಮೂರು ದಿನ ರಾತ್ರಿ ತಾಮ್ರ ಉರಿದು ಲಾವಾರಸವಾಗಿ ಹರಿಯುತ್ತದೆ. ಉರಿದು ಹರಿಯುವ ಲಾವಾರಸ‌ವನ್ನು ತೆಗೆದು ಪಾತ್ರೆಗಳು ಮತ್ತು ಇತರ ಅತ್ಯಾವಶ್ಯಕ ವಸ್ತುಗಳನ್ನು ‌ನಿರ್ಮಿಸುತ್ತಿದ್ದರು.‌ ದೊಡ್ಡ‌ ದೊಡ್ಡ ಗಾತ್ರದ ಪಾತ್ರೆಗಳನ್ನು ಅವರು ನಿರ್ಮಿಸುತ್ತಿದ್ದರು. ಅವರ ಪೈಕಿ ಸಾವಿರಾರು ಜನರು ವ್ರತ್ತಾಕಾರದಲ್ಲಿ ಸುತ್ತಲೂ ಕುಳಿತು ಊಟ ಮಾಡುವಷ್ಟು ದೊಡ್ಡ ಗಾತ್ರದ ಪಾತ್ರೆಗಳಾಗಿತ್ತು ಅದು. ಮೂರು ಕಾಲುಗಳು ಇರುವ ದೊಡ್ಡ ತಾಮ್ರದ‌ ಪಾತ್ರೆಗಳು ನಿರ್ಮಿಸಿ ಅದರಲ್ಲಿ ಆಹಾರ ಪಾಕಮಾಡಿ ವಿತರಿಸುತ್ತಿದ್ದರು.

ಪಾತ್ರೆಗಳು ತುಂಬಾ ಭಾರ ತೂಗುವುದರ ಕಾರಣ ಇದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ದೂಡಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಪಾತ್ರೆಗಳೇ ಸಾವಿರಾರು‌ ಇತ್ತು. ಒಂದು ಹೊತ್ತಿನ ಆಹಾರ ಪಾಕ ಮಾಡುವ ಸಂದರ್ಭದಲ್ಲಿ ಹನ್ನೆರಡು ಸಾವಿರ ಪಾತ್ರೆಗಳಲ್ಲಿ ಆಹಾರ ಪಾಕ ಮಾಡುತ್ತಿದ್ದರು. ಒಂದೊಂದು ಪಾತ್ರೆಗೂ ಒಂದೊಂದು ಮುಖ್ಯ ಪಾಚಕರು ಇದ್ದು ಅವರಿಗೆ ಸಹಾಯ‌ ಮಾಡಲು ಹೇರಳ ಸಹಾಯಕ ಪಾಚಕರು ಇದ್ದರೆ ಆ ಅಡಿಗೆ ಕೊಣೆ ಎಷ್ಟು ದೊಡ್ಡದಾಗಿರಬಹುದು‌ ಎಂದು ಒಮ್ಮೆ ನೀವು ಊಹಿಸಿ‌ ನೋಡಿ..! ಇನ್ನು
ಕಲ್ಲುಗಳಿಂದಲೂ ಅನೇಕ ಪಾತ್ರೆಗಳನ್ನು ನಿರ್ಮಿಸಿದ್ದರು. ಆ ಕಲ್ಲಿನ ಒಂದು ಪಾತ್ರೆಯಲ್ಲಿ ‌ಹತ್ತು ಒಂಟೆಯ‌ ಮಾಂಸ ಹಿಡಿಯುತ್ತಿತ್ತು. ಇದು ಸುಲೈಮಾನ್‌ ನೆಬಿಯವರ ದ ಸಾಮ್ರಾಜ್ಯದ ದೈನಂದಿನ ಆಹಾರ‌ ಪಾಕ ಪದ್ಧತಿಯಾಗಿದ್ದು ಪ್ರತಿದಿನವೂ ಅದೆಷ್ಟು ಪ್ರಮಾಣದ ಆಹಾರ ಪಾಕ ಮಾಡುತ್ತಿದ್ದರು ಎಂದು ಒಮ್ಮೆ ಸಂಕಲ್ಪಿಸಿ ನೋಡಿ..!
ಅದೆಲ್ಲವೂ ತಿಂದು‌ ಮುಗಿಸುವಷ್ಟು ಮನುಷ್ಯರು ಅಲ್ಲಿಗೆ ಬರುತ್ತಿದ್ದರು. ತನ್ನ ಸಾಮ್ರಾಜ್ಯದ ಜನತೆಗೆ ಮಹಾನರು ಅನ್ನಪಾನೀಯಗಳಲ್ಲಿ‌ ಯಾವುದೇ ಕೊರತೆ ಉಂಟು ಮಾಡಿಲ್ಲ.

ಸುಲೈಮಾನ್ ನೆಬಿ(ಅ) ರವರ ಅನ್ನಧಾನ ಎಲ್ಲಾ ಕಡೆಗಳಲ್ಲೂ ಪ್ರಸಿದ್ದಿ ಪಡೆದಿತ್ತು.‌ ಮಹಾನರ ಭೋಜನ ಕೂಟದಲ್ಲಿ ಭಾಗವಹಿಸಲು ನಾನಾ ದಿಕ್ಕುಗಳಿಂದಲೂ ಸಾವಿರಾರು ಮಂದಿ ಹರಿದು ಬರುತ್ತಿದ್ದರು. ಸಮೃದ್ಧಭರಿತ ಈ ಭೂರಿ ಭೋಜನ ಬಡವರಿಗಾಗಿ ತಯಾರಿಸಿದ್ದಾಗಿದೆ. ಸಾದಾರಣ ಜನತೆ, ಬಡ‌ ಬಲ್ಲಿದರೆಲ್ಲಾ ಅಲ್ಲಿ ಭಾಗಿಯಾಗುತ್ತಿದ್ದರು. ಮಹಾನರು ಮಾತ್ರ ಆ ಭೋಜನ ಸೇವಿಸುತ್ತಿರಲಿಲ್ಲ. ಹಗಲು ಹೊತ್ತು‌ ಉಪವಾಸ ಹಿಡಿಯುತ್ತಿದ್ದು ಆ ವೇಳೆ ಮಹಾನರು ಹತ್ತಿ ನೇಯುತ್ತಿದ್ದರು. ಆ ನೇಯ್ದ ಹತ್ತಿಯನ್ನು ಅಂಗಡಿಗಳಿಗೆ‌ ಮಾರಿ‌ ಸಿಕ್ಕ ಹಣದಿಂದ ‌ಗೋಧಿ ರೊಟ್ಟಿ ಖರೀದಿಸುತ್ತಿದ್ದರು. ಅದು ತಿಂದಾಗಿತ್ತು ಮಹಾನರು ಉಪವಾಸ ತೊರೆಯುತ್ತಿದ್ದದ್ದು. ಆ ವೇಳೆಯೂ ಯಾವುದಾದರೂ ಅನಾಥರ‌ ಕಂಡರೆ ಅವರನ್ನೂ ಜೊತೆ ಸೇರಿಸಿ ಉಪವಾಸ ತೊರೆಯುತ್ತಿದ್ದರು. ಭೂ ಲೋಕದ ಶ್ರೇಷ್ಠ ಅಭಿಚಿಕ್ತ ಮಹಾ ಚಕ್ರವರ್ತಿಯ‌ ಭೋಜನಾ ಶೈಲಿಯಾಗಿತ್ತು ಇದು.

ಸುಲೈಮಾನ್ ನೆಬಿಯವರಿಗೆ ಅಲ್ಲಾಹು ಗಾಳಿಯನ್ನು ಅಧೀನಗೊಳಿಸಿ‌ ಕೊಟ್ಟ ಮಾಹಿತಿ, ‌ತಾಮ್ರದ ದ್ರಾವಕವನ್ನು ತೋರಿಸಿಕೊಟ್ಟ ಘಟನೆಯನ್ನು ಖುರ್'ಆನ್ ಅತಿ ಮನೋಜ್ಞವಾಗಿ ವಿವರಿಸುತ್ತದೆ.

وَلِسُلَيْمَٰنَ ٱلرِّيحَ غُدُوُّهَا شَهْرٌۭ وَرَوَاحُهَا شَهْرٌۭ ۖ وَأَسَلْنَا لَهُۥ عَيْنَ ٱلْقِطْرِ ۖ وَمِنَ ٱلْجِنِّ مَن يَعْمَلُ بَيْنَ يَدَيْهِ بِإِذْنِ رَبِّهِۦ ۖ وَمَن يَزِغْ مِنْهُمْ عَنْ أَمْرِنَا نُذِقْهُ مِنْ عَذَابِ ٱلسَّعِيرِ

"ಸುಲೈಮಾನರಿಗೆ ನಾವು ಗಾಳಿಯನ್ನು ನಿಯಂತ್ರಿಸಿ ಕೊಟ್ಟೆವು. ಅದರ ಬೆಳಗಿನ ಸಂಚಾರವು ಒಂದು ತಿಂಗಳ ದೂರವೂ ಸಂಜೆಯ ಸಂಚಾರವು ಒಂದು ತಿಂಗಳ ದೂರವೂ ಆಗಿತ್ತು. ನಾವು ಅವರಿಗಾಗಿ ತಾಮ್ರದ ಲಾವಾರಸದ ಚಿಲುಮೆಯನ್ನು ಹರಿಸಿದೆವು. ತಮ್ಮ ಪ್ರಭುವಿನ ಅಪ್ಪಣೆ ಪ್ರಕಾರ ಅವರ ಮುಂದೆ ಕೆಲಸ ಮಾಡುತ್ತಿದ್ದ ಕೆಲವು ಜಿನ್ನುಗಳನ್ನು ಅವರ ಅಧೀನಕ್ಕೆ ಕೊಟ್ಟೆವು. ಅವರ ಪೈಕಿ ಯಾವನಾದರೂ ನಮ್ಮ ಆಜ್ಞೆಯಿಂದ ತಪ್ಪಿದರೆ ಆತನಿಗೆ ನಾವು ಉರಿದೇಳುವ ಅಗ್ನಿಯ ಶಿಕ್ಷೆಯಿಂದ ಸವಿಯನ್ನುಣಿಸುವೆವು."[ಸೂ. ಸಬ'ಅ್: 12]

ಜಿನ್ನುಗಳು ಮಹಾನರಿಗೆ ಬೇಕಾಗಿ ಯಾವೆಲ್ಲಾ ಕೆಲಸ ಮಾಡುತ್ತಿದ್ದರು..! ಎಂಬುವುದು ತಿಳಿಯಲು ಪರಿಶುದ್ಧ ಖುರ್'ಆನ್ ತೆರೆದು ನೋಡಿದರೆ ಸಾಕು..

ಅವರು ಬಹು ದೊಡ್ಡ ಮಂಟಪಗಳು, ಕಟ್ಟಡಗಳನ್ನು ನಿರ್ಮಿಸಿದರು. ಖುರ್'ಆನ್ ನಲ್ಲಿ ಇದಕ್ಕೆ ಮ'ಆರಿಬಾ‌ ಎಂಬ ಪದವಾಗಿದೆ ಬಳಕೆ ಮಾಡಿರುವುದು.‌ ಅತಿ‌ ಮನೋಹರ‌ ಸೊಗಸಾಗಿ ಕಾಣುವ ಈ ಬಹು ದೊಡ್ಡ ಕಟ್ಟಡಗಳು, ‌ಮಂಟಪಗಳ‌ ನಿರ್ಮಾಣಕ್ಕೆ ಅವರು ಬಂಡೆಕಲ್ಲಿನಂತ ದೊಡ್ಡ ದೊಡ್ಡ ಕಲ್ಲುಗಳು‌ ಉಪಯೋಗಿಸುತ್ತಿದ್ದರು. ಮನುಷ್ಯರಿಗೆ ಇಂತಹ ಕಟ್ಟಡಗಳ ನಿರ್ಮಾಣ ಅಸಾಧ್ಯವಾಗಿತ್ತು. ನೀರು ತುಂಬಿಸಿ ಶೇಖರಿಸಿಡಲು‌ ದೊಡ್ಡ ಗಾತ್ರದ ಕೊಳಗಳಂತಹ ತೊಟ್ಟಿಪಾತ್ರೆಗಳ ನಿರ್ಮಿಸಿದರು. ಅದರಲ್ಲಿ ನೀರು ತುಂಬಿಸಿಟ್ಟರೆ ಒಂದು ಮಹಾ‌ ಜಲಾಶಯದಂತೆ ಕಾಣುತ್ತಿತ್ತು. 

ಮಹಾನರಾದ ಸುಲೈಮಾನ್ ನೆಬಿಯವರು‌‌‌ ಬಯಸಿದ್ದೆಲ್ಲವನ್ನೂ‌ ಅವರು ನಿರ್ಮಿಸಿ‌ ಕೊಡುತ್ತಿದ್ದರು. ಇನ್ನು ಆಹಾರ ಪಾಕ ಮಾಡಲು ಬಹು ದೊಡ್ಡ ಪಾತ್ರೆಗಳನ್ನು ನಿರ್ಮಿಸಿದ್ದು ಅದು ಒಂದೇ ಸ್ಥಳದಲ್ಲಿ ಸುಸ್ಥಿರಗೊಳಿಸಿ ಊರಿಸಿದ್ದರು. ಇದು‌ ದೊಡ್ಡ ಅನುಗ್ರಹವಾಗಿದ್ದು ಇದಕ್ಕೆ ದಾವೂದರ ಕುಟುಂಬ ಕೃತಜ್ಞರು ಎಂದು ಮೇಲಿನ ಆಯತಿನ ನಂತರ ಅಲ್ಲಾಹು ತಿಳಿಸುತ್ತಾನೆ.

يَعْمَلُونَ لَهُۥ مَا يَشَآءُ مِن مَّحَٰرِيبَ وَتَمَٰثِيلَ وَجِفَانٍۢ كَٱلْجَوَابِ وَقُدُورٍۢ رَّاسِيَٰتٍ ۚ ٱعْمَلُوٓا۟ ءَالَ دَاوُۥدَ شُكْرًۭا ۚ وَقَلِيلٌۭ مِّنْ عِبَادِىَ ٱلشَّكُورُ

"ಅವರು ಸುಲೈಮಾನರಿಗಾಗಿ ಕಟ್ಟಡಗಳು, ಪ್ರತಿಮೆಗಳು, ಕೊಳಗಳಂತಹ ತೊಟ್ಟಿ ಪಾತ್ರೆಗಳು ಮತ್ತು ಸ್ಥಿರಗೊಳಿಸಿ ಊರಲಾದ ಬೃಹತ್ ಅಡುಗೆಯ ಕಡಾಯಗಳು. ಹೀಗೆ ಅವರು ಇಚ್ಚಿಸುವುದನ್ನೆಲ್ಲ ಅವರು ಮಾಡಿಕೊಡುತ್ತಿದ್ದರು. ದಾವೂದರ ಸಂತತಿಯೇ, ಕೃತಜ್ಞತೆಯಾಗಿ ನೀವು ಕರ್ಮವೆಸಗಿರಿ. ನನ್ನ ದಾಸರಲ್ಲಿ ಕೃತಜ್ಞರು ಬಹಳ ಕಡಿಮೆ."[ಸೂ.ಸಬ'ಅ್]

ಪ್ರತಿ ಮನುಷ್ಯರಿಗೂ ಅಲ್ಲಾಹು ಅಗಣಿತ ಯಥೇಚ್ಛ ಅನುಗ್ರಹಗಳನ್ನು ನೀಡಿದ್ದಾನೆ. ಆದರೆ ಮನುಷ್ಯರ ಪೈಕಿ ಆ ಅನುಗ್ರಹಕ್ಕೆ ಕೃತಜ್ಞತಾ ಪೂರ್ವಕವಾಗಿ ಜೀವಿಸುವವರು‌ ಅತಿ ವಿರಳ. ದಾವೂದ್ ನೆಬಿ(ಅ) ರವರ ಕುಟುಂಬದ ಚರಿತ್ರೆ ವಿವರಿಸುವಾಗ ಅಲ್ಲಾಹು ಈ‌ ವಿಚಾರ ನಮಗೆ ಜ್ಞಾಪಿಸುತ್ತಾನೆ.

*ಮುಂದುವರೆಯುವುದು..*

*☘ _ಪುಣ್ಯ ಪ್ರವಾದಿ(ﷺ) ರ ಮೇಲೆ ಸ್ವಲಾತ್, ಸಲಾಂ ಅಧಿಕಗೊಳಿಸಿರಿ_👇🏻*
*اللهم صل على سيدنا محمد عدد ما في علم الله صلاة دائمة بدوام ملك الله*

*✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ರಾಜಸ್ಥಾನ*

*👆🏻Share maximum..🤝🏻*