ಪ್ರವಾದಿ ಪ್ರೇಮಿ ಮಿಸ್ರಿನ ರಾಣಿ

ಪ್ರವಾದಿ ಪ್ರೇಮಿ 
                           ಮಿಸ್ರಿನ ರಾಣಿ

ಅಲ್ಲಾಹನು ಪರಿಶುದ್ದ ಖುರ್ ಆನಿನಲ್ಲಿ ಹೇಳುವನು ಹೇಳಿರಿ ನೆಬಿಯೆ ಇಪ್ಪತ್ತ ಮೂರು ವರ್ಷಗಳ ಕಾಲ ಸಮೂಹದ ಒಳಿತಿಗಾಗಿ ಪ್ರಭೋಧನೆ ಮಾಡುವ ವೇಳೆಯಲ್ಲಿ ತ್ಯಾಗ,ಸಹನೆ,ಕಷ್ಟಗಳ ಅನುಭವಿಸಿದೆ
ನಾನು ನಿಮ್ಮೊಂದಿಗೆ ಕೇಳುವುದು ಒಂದೆ ಆಸ್ತಿ,ಸಂಪತ್ತಲ್ಲ ,ಹೊರತು
ನನಗೆ ನೀವು ಮಾಡಬೇಕಾದ ಕಾರ್ಯ ಒಂದೆ ಪ್ರವಾದಿಯರ ಪರಂಪರೆಯಾದ ಅಹ್ಲ್ ಬೈತಿನೊಂದಿಗೆ ನಿಕಟಸ್ನೇಹ ಸಂಪರ್ಕ ಬೆಳೆಸಿರಿ ಇದು ಮಾತ್ರ ನಿಮ್ಮೊಂದಿಗೆ ಕೇಳುವುದೆಂದು ಖುರ್ಆನ್ ಹೇಳುತ್ತಿದೆ.
ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮರು ಹೇಳುವರು ನಾನು ಎರಡು ಕಾರ್ಯಗಳನ್ನು ಬಿಟ್ಟು ಹೋಗುವೆನು. ಅದರಲ್ಲಿ ಒಂದಾಗಿದೆ ಕುಟುಂಬ .
ಇಮಾಂ ಶಾಫಿಈ ರಲಿಯಲ್ಲಾಹು ಅಲ್ಹ ಹೇಳುತ್ತಾರೆ ನನಗೆ ಪರಲೋಕದಲ್ಲಿ ರಕ್ಷೆ ಪಡಲಿರುವ ಕೇಂದ್ರ ಒಂದೆ ಅಹ್ಲ್ ಬೈತಿನೊಂದಿಗೆ ಸ್ನೇಹ.
ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮರ ಬೋಧನೆಯ ಪ್ರಕಾರ ಜೀವಿಸಿದಂತ ಮಹದಿಯಾಗಿದ್ದಾರೆ ನೆಫಿಸತುಲ್ ಮಿಸ್ರಿಯಾ ರಲಿಯಲ್ಲಾಹು ಅನ್ಹ.
ತ್ಯಾಗ ಎಂದ ಕ್ಷಣ ನೆನಪಿಗೆ ಬರುವಂತ ನಾಮವು 
ವಿಶ್ವಾಸಿ ವನಿತೆಯರು ಎಂದು ನೆನಪಿಡಬೇಕಾದ ಅಮರ ತ್ಯಾಗಿ ವನಿತೆಯಾಗಿದ್ದಾರೆ 
ನಬಿಯವರ ಕುಟುಂಬದಲ್ಲಿ ಜನಿಸಿ
ಇಸ್ಲಾಮ್ ಧರ್ಮಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಮಿಶ್ರಿನ ರಾಣಿ ನೆಫಿಸತುಲ್ ಮಿಸ್ರಿಯಾ ರಳಿಯಲ್ಲಾಹು ಅನ್ಹ.
ನೆಬಿ ಸಲ್ಲಲ್ಲಾಹು ಅಲೈಹುವ ಸಲ್ಲಮರ ಜನನ ಮಕ್ಕತುಲ್ ಮುಕರ್ರಮದಲ್ಲಾಗಿದೆ 
ಮಹದಿ ನೆಫಿಸತುಲ್ ಮಿಸ್ರಿಯಾ ಜನಿಸುವುದು ಹಿಜಿರಾ ೧೪೫ ಮಕ್ಕತುಲ್ ಮುಕರ್ರಮದಲ್ಲಿ ತಂದೆ ಸಯ್ಯಿದ್ ಹಿರಿಯವಿದ್ವಾಂಸ ರಾಗಿದ್ದಾರೆ ಜಹಫರ್ ಇಮಾಂ ರಲಿಯಲ್ಲಾಹು ಅನ್ಹು.ಮಕ್ಕದಲ್ಲಿ ದರ್ಸ್ ನಡೆಸುತ್ತಿರುವ ವೇಳೆಯಲ್ಲಿ ಒಬ್ಬರು ಬಂದು ಹೇಳುವರು ನಿಮ್ಮ ಹೆಂಡತಿಗೆ ಹೆಣ್ಣು ಮಗು ಹುಟ್ಟಿದೆ .ಜನನದ ವಾರ್ತೆ ಕೇಳಿದಾಗ ಅಲ್ಲಾಹನಿಗೆ ಶುಕ್ರ್ ಸೂಜೂದ್ ಮಾಡಿ ಉನ್ನತ ವಿದ್ಯೆ ಕೊಟ್ಟು ಸ್ವಾಲಿಹಿಗಳಾಗಲು ಪ್ರಾರ್ಥಿಸಿದರು.
ಬಂದ ಹೆಣ್ಣಿನೊಂದಿಗೆ ಹೇಳುವರು ನಫೀಸ ಎಂಬ ಹೆಸರಿಡಲು 
ಪ್ರವಾದಿಯರು ಜನಿಸಿದ ಪುಣ್ಯ ಊರಲ್ಲಿ ಜನಿಸಲು ಭಾಗ್ಯನೀಡಿತು .ತನ್ನ ಐದನೆ ಪ್ರಾಯದಲ್ಲಿ ತಂದೆಯೊಡನೆ ಮದೀನ ಮುನವ್ವರಕ್ಕೆ ತೆರಳಿ ಅದೆಷ್ಟೊ ವಿದ್ವಾಂಸರೊಂದಿಗೆ ಜ್ಞಾನ ಕಲಿಯಲು ಭಾಗ್ಯ ಲಭಿಸಿದ ಮಹಿಳೆಯಾಗಿದ್ದಾರೆ ನಫೀಸತಲ್ ಮಿಸ್ರಿಯಾ ರಲಿಯಲ್ಲಾಹು ಅನ್ಹ .ಕೆಲವು ವರ್ಷ ಅಲ್ಲೇ ಬದುಕಿದರು .
ಪ್ರವಾದಿಯ ನೆನೆದು ಪ್ರವಾದಿಯರ ಸ್ನೇಹದಿಂದ ಜೀವನ ಸಾಗಿಸಿದರು .ಮದುವೆಯ ವಯಸ್ಸುದಾಟಿದಾಗ ಅದೆಷ್ಟೋ ವರ ಬಂದರೂ ಯಾರನ್ನು ಸ್ವೀಕರಿಸದೆ ಕೊನೆಗೆ ದೊಡ್ಡ ವಿದ್ವಾಂಸರು ಸೂಫಿಯಾದ ಇಸ್ಹಾಕುಲ್ ಮುಹ್ತಮಿನ್ ಎಂಬವರನ್ನು ಮದುವೆಯಾದರು.
ಪ್ರವಾದಿಯರು ಕನಸಲಿ ಬಂದು
ಓ ಅಸನ್ ನೀವು ಇಸ್ಹಾಕುಲ್ ಮುಹ್ತಮಿನ್ ಎಂಬವರನ್ನು ಮದುವೆಯಾಗಿರೆಂಬ ಪ್ರವಾದಿಯರ ಅಜ್ಞೆಯಂತೆ ಮದುವೆಯಾದರು.
ಜ್ಞಾನ ಆರಾಧನೆ ,ಅಧ್ಯಾತ್ಮಿಕದಿಂದ ಕಾಲ ಕಳೆದ ಮಿಸ್ರಿಯಾ ಬೀವಿ 
ಕೆಲವೊಂದು ವರ್ಷಗಳ ನಂತರ ಪ್ರವಾದಿಯರ ಆಜ್ಞೆಯ ಪ್ರಕಾರ ಈಜಿಫ್ತಿನತ್ತ ತೆರಳುತ್ತಾರೆ.
ಎಲ್ಲ ಜನರೂ ಮಿಸ್ರಿಯಾ ಬೀವಿ ರಲಿಯಲ್ಲಾಹು ಅನ್ಹ ರ ಬರುವಿಕೆಗಾಗಿ ಕಾದು ಕುಳಿತಿದ್ದಾರೆ ಅವರನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ .
ಈಜಿಪ್ಟಿನ ಜನರ ಸಂಕಷ್ಟಕ್ಕೆ ಆಶಾ ಕ್ರೇಂದ್ರವಾಗಿದ್ದರು. ದಿನದಿಂದ ದಿನಕ್ಕೆ ನಫೀಸ ಬೀವಿಯರ ಅಭಿಮಾನಿ ಬಳಗ ಹೆಚ್ಚಾಗುತ್ತಾ ಹೋದಂತೆ ಎಲ್ಲರನ್ನು ತಿರಸ್ಕರಿಸುವ ಹಂತಕ್ಕೆ ಬಂದರು 
ಮಹಾತ್ಮರ ಸ್ವಭಾವವಾಗಿದೆ ಇಹಲೋಕದಲ್ಲಿ ಯಾರೊಂದಿಗೆ ಒಡನಾಟ ಬೆಳಸದೆ ಅಲ್ಲಾಹನ ತೃಪ್ತಿಗಾಗಿ ಜೀವಿಸಿ 
ಪರಲೋಕ ಗುರಿಯಾಗಿಸಿ ಬದುಕಿದರು.
ನಫೀಸ ರಲಿಯಲ್ಲಾಹು ಅನ್ಹ ತೀರ್ಮಾನಕ್ಕೆ ಬರುವರು ನಾನು ಇಲ್ಲಿ ಜೀವಿಸುವುದಿಲ್ಲ ಮದೀನ ಮುನವ್ವರಕ್ಕೆ ತೆರಳುವೆನೆಂಬ ವಾರ್ತೆ ಜನರಿಗೆ ಸಿಕ್ಕಿದಾಗ ಜನರೆಲ್ಲ ನಫೀಸಃ ಬೀವಿಯವರೊಂದಿಗೆ ಹೇಳುವರು ಬೇಡ ಅಮ್ಮ ನೀವು ಬದುಕಿರಿ ನಮಗೆ ಅಭಯ ಪ್ರವಾದಿಯ ಕುಟುಂಬವಾಗಿದೆ .
ಪ್ರವಾದಿಯರು ಹೇಳಿದಾಗೆ ಅಕಾಶದ ಕಾವಲುಗಾರರಾಗಿ ನಕ್ಷತ್ರಗಳು ಭೂಮಿಯ ಕಾವಲುಗಾರರು ಅಹ್ಲ್ ಬೈತಿನ ನೇತಾರರಾಗಿದ್ದಾರೆ 
ನಫೀಸ ಬೀವಿಯರು ಮದೀನಕ್ಕೆ ತೆರಳುವುದು ಯಾರೊಂದಿಗೆ ಕೋಪದಿಂದಲ್ಲ. ಅಧಿಕಾರಿ ಬಂದು ಹೇಳುವರು ೨ ಪರಿಹಾರ ಹೇಳುವರು ನನ್ನ ಮನೆಗೆ ತೆರಳಿ ಅಲ್ಲಿ ಆರಾಧನೆ ಮಾಡಿರಿ
ಇಬಾದತ್ ಮಾಡಲು ಕಷ್ಟ ಆಗುವುದದರೆ ಗುರುವಾರ ಶನಿವಾರದಂದು ಜನರ‌ ಆಶ್ರಯಕ್ಕಾಗಿ ಮೀಸಲಿಡಿರಿ.
ಹೀಗೆ 
ಇಬಾದತಿನಲ್ಲಿ ಬದುಕಿದ ಮಿಸ್ರಿಯಾ ಬೀವಿಯ ವಫಾತಿನ ವೇಳೆ
ಖುರ್ಆನಿನ ಅನ್ಹಾಂ ಸೂರತಿನ ೧೨ ಸೂಕ್ತ ರಹ್ಮತಿನ ಸೂಕ್ತ ಓದುತ್ತಿರುವಾಗ ಆಗಿದೆ ವಫಾತಾಗಿದ್ದರೆಂದು ಸೇವಕಿಯಾದ ಝೈನಾಬ ಬೀವಿ ರಲಿಯಲ್ಲಾಹು ಅನ್ಹ ಹೇಳುವರು .
ಶಾಫೀಈ ಇಮಾಂ ನೆಫಿಸ ಬೀವಿ ರಲಿಯಲ್ಲಾಹು ಅನ್ಹ ರೊಂದಿಗೆ ಪ್ರಾರ್ಥನೆ ಮಾಡುತ್ತಿದ್ದರು ಅಷ್ಟು ದೊಡ್ಡ ಶ್ರೇಷ್ಠ ವನಿತೆಯಾಗಿದ್ದರು.
ಇಸ್ಹಾಕುಲ್ ಮಹ್ತಮಿನ್ ತೀರ್ಮಾನಿಸಿದರು ಮದೀನದಲ್ಲಿ ಧಫನ್ ಮಾಡುವುದೆಂದು 
ಊರಿನ ಜನರೆಲ್ಲ ಬಂದು ಹೇಳುವರು ಬೇಡ ಅವರನ್ನು ಬರ್ಕತಿಗಾಗಿ ನಮ್ಮ ಊರಿನಲ್ಲೆ ದಫನ್ ಮಾಡಿರಿ 
ಜನರೆಲ್ಲ ಗೊಂದಲದಲ್ಲಾಗುವಾಗ ಪ್ರವಾದಿಯರು ಕನಸಲ್ಲಿ ಬಂದು ಹೇಳುವರು ನನ್ನ ಮಗಳಾದ ನೆಫಿಸತುಲ್ ಮಿಸ್ರಿಯಾ ರಲಿಯಲ್ಲಾಹು ಅನ್ಹರ ಅಲ್ಲೆ ದಫನ್ ಮಾಡಿರಿ ಅಲ್ಲಿನ ಜನರ ಅಭಯ ಕ್ರೇಂದ್ರವಾಗಲಿ  
ಕಲ್ಯಾನ ವೇಳೆಯಲ್ಲೂ,ದೀನಿ ಭೋಧನೆ ವೇಳೆಯಲ್ಲೂ ದಫನ್ ಮಾಡುವಾಗಲೂ, ಬದುಕಿನ ಸರ್ವ ರಂಗದಲ್ಲೂ ಪ್ರವಾದಿಯರ ಅಜ್ಞೆ ನಿರ್ದೆಶನದಂತೆ ನಿರ್ದರಿಸಿ ಧನ್ಯಗೊಂಡವರಾಗಿದ್ದಾರೆ 
ಮಹಾನ್ ವನಿತೆಯಾಗಿದ್ದಾರೆ ನೆಫಿಸತುಲ್ ಮಿಸ್ರಿಯಾ ಬೀವಿ ರಲಿಯಲ್ಲಾಹು ಅನ್ಹ .ಇಂದು ಮಿಸ್ರಿನ ಅತೀ ಝಿಯಾರತ್ ಕೇಂದ್ರವಾಗಿ ಮಾರ್ಪಟ್ಟಿದೆ 
ಮಹದಿ ನೆಫಿಸತುಲ್ ಮಿಸ್ರಿಯಾ ರಲಿಯಲ್ಲಾಹು ಅನ್ಹ ವಪಾತಾದ ತಿಂಗಳಾಗಿದೆ ಪರಿಶುದ್ದ ರಮಳಾನ್ ಅ ಮಹದಿಯರ ಬರ್ಕತಿನಿಂದ ಅಲ್ಲಾಹನು ಪರಲೋಕ ವಿಜಯಿಗಳ ಸಾಲಿನಲ್ಲಿ ಸೇರಿಸಲಿ ....
ಆಮೀನ್

*✍🏻ಮುಹಮ್ಮದ್ ತಮೀಮ್ ತೋಡಾರ್*
*#ಮಜ್ಲಿಸ್ ಗಾಣೆಮಾರ್*

      
_ಹೇಳಿರಿ ನಬಿ ﷺ ರವರ ಮೇಲೆ ಒಂದು ಸ್ವಲಾತ್ ........_

 *صَـلــُّوا عَـلَـى النَّبِيِّ ﷺ وَآلـِهِ * اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله*