ಮದೀನಾ ಮಹತ್ವ ಇತಿಹಾಸ ಅಧ್ಯಾಯ 42

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 42*🍃
         💜💜💜💜💜💜💜

🌹🌹🌹🌹🌹🌹🌹🌹🌹🌹

*ಸಲ್ಅ್ ಪರ್ವತ*

          ಮದೀನಾದ ಉತ್ತರ ಭಾಗದಲ್ಲಿರುವ ಪರ್ವತವಾಗಿದೆ ಇದು. “ ಅಲ್ಲಾಹು ನಿಮ್ಮನ್ನು ಜನರ ಕೇಡಿನಿಂದ ರಕ್ಷಿಸುತ್ತಾನೆ ” ಎಂಬ ಮಾಇದ ಅಧ್ಯಾಯದ 67 ನೇ ಸೂಕ್ತ ಅವತೀರ್ಣ ಗೊಳ್ಳುವುದಕ್ಕಿಂತ ಮುಂಚೆ ಅಹ್ಝಾಬ್ ಯುದ್ಧದ ಸಮಯದಲ್ಲಿ ಪ್ರವಾದಿ ಸ್ವಲ್ಲಲ್ಲಾಹು  ಅಲೈಹಿವಸಲ್ಲಮರವರು ಈ ಪರ್ವತದಲ್ಲಿದ್ದ ಗುಹೆಯಲ್ಲಿ ಜೀವಿಸುತ್ತಿದ್ದರು. ಈ ಗುಹೆಯ ಉತ್ತರ ಭಾಗದಲ್ಲಿ ಮಸ್ಜಿದುಲ್ ಫತ್ಹ್ ಇದೆ . ಇಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ ರವರು ಅಹ್ಝಾಬ್ ಯುದ್ಧದಲ್ಲಿ ವಿಜಯ ಹೊಂದಲು ಪ್ರಾರ್ಥಿಸಿದ್ದರು .

 *ಸಲೀಅ್ ಪರ್ವತ*

            ಮದೀನಾದ ದಕ್ಷಿಣ ಭಾಗದಲ್ಲಿರುವ ಸಣ್ಣ ಪರ್ವತವಾಗಿದೆ ಸಲೀಅ್. ಬನೂ ಅಸ್ಲಮ ಗೋತ್ರದವರ ಮನೆ ಈ ಸ್ಥಳದಲ್ಲಿ ಇತ್ತು. 

*ಜಬಲ್ ಐರ್*
  
        ಮದೀನಾ ಹರಮಿನ ದಕ್ಷಿಣ ಭಾಗದಲ್ಲಿರುವ ವ್ಯಾಪ್ತಿಯನ್ನು ನಿರ್ಣಯಿಸುವ ಗಡಿರೇಖೆ ಜಬಲ್ ಐ‌ರ್ . ಕೆಂಪು ಬಂಡೆಕಲ್ಲಿನಿಂದ ಆವೃತವಾದ ಈ ಪರ್ವತದ ಮೇಲೆ ಯಾವುದೇ ವಸ್ತು ಮೊಳಕೆಯೊಡೆಯದು .

 *ಸೌರ್ ಪರ್ವತ*

         ಮದೀನಾ ಹರಮಿನ ಉತ್ತರ ಭಾಗದಲ್ಲಿರುವ ವ್ಯಾಪ್ತಿಯನ್ನು ನಿರ್ಣಯಿಸುವ ಗಡಿರೇಖೆ ' ಜಬಲು ಸೌರ್ . ಉತ್ತರ - ದಕ್ಷಿಣವಾಗಿ ಮೇಲಿನ ಈ ಎರಡು ಪರ್ವತಗಳ ನಡುವೆ ಮದೀನಾದ ಹರಮ್ ಇದೆ . 

*ಪೂರ್ವ ಹರ್ರಃ ಪರ್ವತ*

           ಮದೀನಾ ಹರಮಿನ ಪೂರ್ವ ಭಾಗದಲ್ಲಿರುವ ವ್ಯಾಪ್ತಿಯನ್ನು ನಿರ್ಣಯಿಸುವ ಗಡಿರೇಖೆ ” ಈ ಪೂರ್ವ ಹರ್ರಃ ಪರ್ವತ . ಇದಕ್ಕೆ ಹರ್ರತು ವಾಖಿಮಾ ಎಂದು ಕೂಡಾ ಕರೆಯುತ್ತಾರೆ.

*ಪಶ್ಚಿಮ ಹರ್ರಃ* 

           ಮದೀನಾ ಹರಮಿನ ಪಶ್ಚಿಮ ಭಾಗದಲ್ಲಿರುವ ವ್ಯಾಪ್ತಿಯನ್ನು ನಿರ್ಣಯಿಸುವ ಗಡಿರೇಖೆ ಪಶ್ಚಿಮ ಹರ್ರಃ ಪರ್ವತ . ಇದಕ್ಕೆ ಹರ್ರತು ವಬರ ಎಂಬ ಹೆಸರು ಕೂಡಾ ಇದೆ . ಮಸ್ಜಿದು ಖಿಬ್ಲತೈನಿ ಈ ಸ್ಥಳದಲ್ಲಿದೆ . 

*ಇತರ ಪರ್ವತಗಳು*

          ಮೇಲೆ ವಿವರಿಸಿದ ಪರ್ವತಗಳಲ್ಲದೆ ಮದೀನಾದಲ್ಲಿ ಇನ್ನಿತರ ಸಣ್ಣಪುಟ್ಟ ಪರ್ವತಗಳಿವೆ . ಅವುಗಳಲ್ಲಿ ಪ್ರಮುಖವಾದವುಗಳು ಜಬಲ್ ಮುಸ್‌ತಂದಿರ್ , ಜಬಲ್ ಅಅ್ಳುಂ, ಜಬಲ್ ಅನ್‌ವುಮ್ , ಜಬಲ್ ಮೀತ್ವಾನ್ ಮುಂತಾದವುಗಳು.

*ಜನ್ನತುಲ್ ಬಕೀಅ್*

          ಜನ್ನತುಲ್ ಬಕೀಅ್ ಮದೀನಾದ ದಫನು ಭೂಮಿ . ಇದನ್ನು ಬಕೀವುಲ್ ಗರ್‌ಖದ್ ಎಂದು ಕರೆಯುತ್ತಾರೆ . ಈ ಪ್ರದೇಶದಲ್ಲಿ ಗರ್ಖದ್ ಎಂಬ ಮರಗಳು ಹೆಚ್ಚಾಗಿದ್ದ ಕಾರಣ ಈ ಹೆಸರು ಬಂತು. ಸುಮಾರು 10 ಸಾವಿರದಷ್ಟು ಸ್ವಹಾಬಿಗಳ ಖಬ್‌ರ್ ಈ ಸ್ಥಳದಲ್ಲಿದೆ . ಇದಕ್ಕಿಂತ ಹೆಚ್ಚು ತಾಬಿಅ್ಗಳ ಖಬ್ರ್ಗಳಿವೆ . ಮುಸ್ಲಿಂ ಸಮುದಾಯದಲ್ಲಿ ಅತ್ಯಂತ ಶ್ರೇಷ್ಟರಾದ ಸ್ವಹಾಬಿಗಳ ಪಾವನ ಶರೀರಗಳನ್ನು ದಫನು ಮಾಡಲ್ಪಟ್ಟಿರುವಾಗ ಇದರ ಮಹತ್ವದ ಕುರಿತು ಪ್ರತ್ಯೇಕವಾಗಿ ಹೇಳಬೇಕೆ ... ? ಇದರ ಮಹತ್ವದ ಕುರಿತಾದ ಹಲವಾರು ಹದೀಸ್‌ಗಳನ್ನು ಗ್ರಂಥಗಳಲ್ಲಿ ಕಾಣಬಹುದು . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಜನ್ನತುಲ್ ಬಕೀಅ್ಗೆ ಹೋಗಿ ಅಲ್ಲಿನ ಖಬ್‌ರ್ ನಿವಾಸಿಗಳಿಗೆ ಬೇಕಾಗಿ ಪ್ರಾರ್ಥಿಸುತ್ತಿದ್ದರು . “ ಬಕೀಲ್ ನಿವಾಸಿಗಳಲ್ಲಿ 70 ಸಾವಿರ ಜನರು ಪರಲೋಕದಲ್ಲಿ ಪ್ರಕಾಶದಂತೆ ಹೊಳೆಯುತ್ತಿರುತ್ತಾರೆ . ಯಾವುದೇ ವಿಚಾರಣೆ ಇಲ್ಲದೆ ನೇರವಾಗಿ ಸ್ವರ್ಗವನ್ನು ಪ್ರವೇಶಿಸುತ್ತಾರೆ ” ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹೇಳಿದ್ದಾರೆ . ಮದೀನಾದ ಜನ್ನತುಲ್ ಬಕೀಅ್ನಲ್ಲಿ ದಫನು ಮಾಡಲ್ಪಟ್ಟವರಿಗೆ ಪ್ರವಾದಿವರ್ಯರ ವಿಶೇಷ ಶಿಫಾರಸ್ಸು ಲಭಿಸುತ್ತದೆ . ಅಬೂ ಕಅ್ಬ್ (ರ) ರವರಿಂದ ವರದಿ ; “ ನಮ್ಮ ಮಖ್ಬರದಲ್ಲಿ ಯಾರನ್ನಾದರೂ ದಫನು ಮಾಡಲ್ಪಟ್ಟರೆ ಅವರಿಗೆ ನಾವು ಪ್ರತ್ಯೇಕ ಶಿಫಾರಸ್ಸು ಮಾಡುತ್ತೇವೆ . ಅದರ ಪರವಾಗಿ ಸಾಕ್ಷಿ ನಿಲ್ಲುತ್ತೇವೆ ” ಜನ್ನತುಲ್ ಬಕೀಅ್ನಲ್ಲಿ ಮೊಟ್ಟ ಮೊದಲು ದಫನು ಮಾಡಲ್ಪಟ್ಟರು ಉಸ್ಮಾನು ಬಿನ್ ಮಳ್ವೂನ್ (ರ) ರವರಾಗಿದ್ದಾರೆ. ಇವರು ಮಕ್ಕಾದಿಂದ ಹಿಜ್ರಾ ಬಂದ ಮುಹಾಜಿರ್‌ಗಳಲ್ಲಿ ಪ್ರಮುಖರಾಗಿದ್ದಾರೆ. ಅದೇರೀತಿ ಮದೀನಾದ ಅನ್ಸಾರಿಗಳಲ್ಲಿ ಮೊಟ್ಟ ಮೊದಲು ಇಲ್ಲಿ ದಫನು ಮಾಡಲ್ಪಟ್ಟವರು ಅಸ್ಅದು ಬಿನ್ ಝುರಾರಃ (ರ) ರವರಾಗಿದ್ದಾರೆ . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ಮಕ್ಕಳ ಹಾಗೂ ಪತ್ನಿಯರ ಖಬ್ರುಗಳು ಈ ಜನ್ನತುಲ್ ಬಕೀಅ್ನಲ್ಲಿದೆ . 

ಪ್ರವಾದಿವರ್ಯರ ಮಕ್ಕಳು 

1.ಉಮ್ಮು ಕುಲ್ಸೂಮ್ (ರ) 
2.ರುಖಿಯಾ(ರ) 
3.ಝೈನಬಾ (ರ) 
4.ಫಾತಿಮಾ (ರ) 
5.ಇಬ್ರಾಹೀಂ(ರ)

*ಪ್ರವಾದಿವರ್ಯರ ಪತ್ನಿಯರು* 

1.ಆಯಿಶಾ (ರ) 
2.ಸೌದ      (ರ) 
3.ಹಫ್ಸಾ     (ರ) 
4.ಸ್ವಫಿಯಾ (ರ)
5.ಝೈನಬಾ (ರ) 
6.ಉಮ್ಮ ಸಲಮ (ರ) 
7.ಜುವೈರಿಯಾ (ರ) 
8.ಉಮ್ಮು ಹಬೀಬ (ರ) 
9.ಝೈನಬ (ರ)

     *ಮುಂದುವರಿಯುವುದು*