ಮದೀನಾ ಮಹತ್ವ ಇತಿಹಾಸ ಅಧ್ಯಾಯ 41

https://chat.whatsapp.com/DjCbCGNiyBW7StPEIOqUnO

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 41*🍃
         💜💜💜💜💜💜💜

🌹🌹🌹🌹🌹🌹🌹🌹🌹🌹

*ಬಿಅ್ರು ಬುಳಾಅಃ* 

            ಇದು ಮದೀನಾದ ಸುಪ್ರಸಿದ್ಧ ಬಾವಿಗಳಲ್ಲಿ ಒಂದಾಗಿದೆ. ಇದರಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅಂಗಸ್ನಾನ ಮಾಡಿದ್ದಾರೆ. ಪ್ರವಾದಿವರ್ಯರ ಪಾವನ ಉಗುಳು ನೀರು ಈ ಬಾವಿಯಲ್ಲಿ ಸ್ಪರ್ಶವಾಗಿದ್ದರಿಂದ ಈ ಬಾವಿಗೆ ಹಲವಾರು ಮಹತ್ವಗಳಿವೆ. ಮೊದಲು ಕುಡಿಯಲು ಯೋಗ್ಯವಲ್ಲದ ನೀರಾಗಿತ್ತು . ಪ್ರವಾದಿವರ್ಯರ ಉಗುಳು ಮಿಶ್ರಿತಗೊಂಡಾಗ ನಂತರ ಔಷಧ ಸ್ಥಾನದಲ್ಲಿ ನಿಲ್ಲುವ ನೀರಾಗಿ ಮಾರ್ಪಟ್ಟಿತು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ಕಾಲದಲ್ಲಿ ಯಾರಿಗಾದರೂ ರೋಗಗಳು ಬಂದರೆ ಈ ಬಾವಿಯ ನೀರಿನಲ್ಲಿ ಸ್ನಾನ ಮಾಡಿಸುತ್ತಿದ್ದರು. ನಂತರ ಅವರು ಗುಣಮುಖರಾಗು ತಿದ್ದರು. ಅಬೂಬಕರ್ ಸಿದ್ದೀಕ್ (ರ) ರವರ ಮಗಳು ಅಸ್ಮಾ (ರ) ರವರು ಹೇಳುತ್ತಾರೆ “ ನಾವು ರೋಗಿಗಳನ್ನು ಮೂರು ದಿನಗಳ ಕಾಲ ಬುಳಾಅಃ ಬಾವಿಯ ನೀರಿನಿಂದ ಸ್ನಾನ ಮಾಡಿಸುತಿ ದ್ದೆವು. ನಂತರ ಅವರು ಗುಣಮುಖರಾಗುತ್ತಿದ್ದರು ” 

*ಬಿಅ್ರು ಬುಸ್ವಾ*

             ಮದೀನಾದ ಪ್ರಸಿದ್ಧ ಬಾವಿಗಳಲ್ಲಿ ಒಂದಾದ ಈ ಬಿಅ್ರು ಬುಸ್ವಾದ ನೀರಿನಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಸ್ನಾನ ಮಾಡಿದ್ದಾರೆ. ಅಬ್ದುರಹ್ಮಾನ್ (ರ) ರವರಿಂದ ವರದಿ ಮಾಡುವ ಹದೀಸ್ ಹೀಗಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಶುಹದಾಗಳ ಬಳಿ ಹೋಗಿ ಅವರ ಮಕ್ಕಳನ್ನು ಭೇಟಿಯಾಗುತಿದ್ದರು. ಹಾಗೆ ಒಂದು ದಿನ ಅಬೂ ಸಈದಿ ಲ್ ಖುದಿರಿ (ರ) ರವರ ಬಳಿ ನಬಿಯವರು ಕೇಳಿದರು ನಿಮ್ಮ ಬಳಿ ಸಿದ್ರ್ ಇದೆಯಾ .. ? ನನ್ನ ತಲೆಯನ್ನು ತೊಳೆಯಲಿಕ್ಕಿದೆ . ಇಂದು ಶುಕ್ರವಾರವಲ್ಲವಾ ? ಆಗ ಅಬೂ ಸಈದ್‌ (ರ) ರವರು ನೀಡಿದರು . ಹಾಗೆ ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಬುಸ್ವಾ ಬಾವಿಯೆಡೆಗೆ ಹೋಗಿ ತಲೆಯನ್ನು ತೊಳೆದರು . 

*ಬಿಅ್ರು ಗರಸ್*

           ಇದು ಮದೀನಾದ ಸುಪ್ರಸಿದ್ಧ ಬಾವಿ. ಮಸ್ಜಿದುಲ್ ಖುಬಾಇನ ಹತ್ತಿರವಿರುವ ಈ ಬಾವಿ ಯಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಸ್ನಾನ ಮಾಡಿದ್ದರು. ಈ ನೀರನ್ನು ಕುಡಿದಿದ್ದರು . ಅಂಗಸ್ನಾನ ಮಾಡಿ ಉಳಿದ ನೀರನ್ನು ಈ ಬಾವಿಗೆ ಸುರಿದ್ದಾರೆ . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಮರಣ ಹೊಂದಿದರೆ ಈ ನೀರಿನಲ್ಲಿ ಸ್ನಾನ ಮಾಡಿಸಬೇಕೆಂದು ಪ್ರತ್ಯೇಕ ವಸಿಯತ್ ಮಾಡಿದ್ದರು . ಅಲಿಯ್ (ರ) ರವರಿಂದ ವರದಿ ; ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹೇಳುತ್ತಾರೆ “ ನಾನು ಮರಣ ಹೊಂದಿದರೆ ನನ್ನ ಬಾವಿಯಿಂದ , ಬಿಅ್ರು ಗರಸ್‌ನಿಂದ ಸ್ನಾನ ಮಾಡಿಸಿರಿ ” 

*ಇತರ ಬಾವಿಗಳು*

            ಮದೀನಾದ ಇತರ ಹಲವಾರು ಸುಪ್ರಸಿದ್ಧ ಬಾವಿ ಆದರೆ ಅವುಗಳಲ್ಲಿ ಹಲವಾರು ಇಂದು ಕಾಣಸಿಗದು . ಬಿಅ್ರು ಇಹ್ನ್ , ಬಿಅ್ರು ಅನಸ್ ಬಿನ್ ಮಾಲಿಕ್ , ಬಿಅ್ರು ದ್ಸರ್‌ವಾನ್ , ಬಿಅ್ರುಲ್ ಖಿರಾಸ್ವ , ಬಿಅ್ಲ್ ಯಸೀರ್ , ಬಿಅ್ರು ಹಲ್ವಾ , ಬಿಅ್ರು ಅಲ್ವಾಫ್ ,ಬಿಅ್ರು ಜಮಲ್ ಮುಂತಾದ ಬಾವಿಗಳಿವೆ.

*ಮದೀನಾದ ಪರ್ವತಗಳು*

          ಮದೀನಾದಲ್ಲಿರುವ ಎಲ್ಲಾ ವಸ್ತುಗಳಿಗೆ ಮಹತ್ವವಿರುವಂತೆ ಅಲ್ಲಿರುವ ಪರ್ವತಗಳಿಗೆ ಕೂಡಾ ಮಹತ್ವವಿದೆ . ಇವುಗಳಲ್ಲಿ ಕೆಲವೊಂದು ಪರ್ವತಗಳು ಪ್ರವಾದಿವರ್ಯರ ಪುಣ್ಯ ಬಾಯಿಯಿಂದ ಪ್ರಶಂಸಿಸಲ್ಪಟ್ಟದ್ದಾಗಿ ಹದೀಸ್‌ಗಳಲ್ಲಿ ವರದಿಯಾಗಿದೆ . ಪ್ರವಾದಿವರ್ಯರನ್ನು ಪ್ರೀತಿಸಿದ ಪರ್ವತಗಳೂ ಇದೆ . 

*ಉಹ್ದ್  ಪರ್ವತ*

     ಮದೀನಾದಲ್ಲಿರುವ ಅತ್ಯಂತ ದೊಡ್ಡ ಪರ್ವತವಾಗಿದೆ ಉಹ್ದ್ , “ ಸ್ವರ್ಗದ ಸ್ಥಂಬಗಳಲ್ಲಿ ಒಂದು ಸ್ಥಂಬ ಉಹ್ದ್ ಪರ್ವತ ” ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹೇಳಿದ್ದಾರೆ . ಮದೀನಾದ ಉತ್ತರ ಭಾಗದಲ್ಲಿರುವ ಈ ಪರ್ವತ ಇಸ್ಲಾಮಿ ಇತಿಹಾಸದ ಮಹತ್ತರವಾದ ಘಟನೆಗಳಿಗೆ ಸಾಕ್ಷಿಯಾದ ಸ್ಥಳವಾಗಿದೆ . ಈ ಉಹ್ದ್ ಪರ್ವತ ಮದೀನಾ ಹರಮಿನ ವ್ಯಾಪ್ತಿಯೊಳಗೆ ಬರುತ್ತದೆ . ಯಾಕೆಂದರೆ ಮದೀನಾ ಹರಮಿನ ಉತ್ತರ ಭಾಗದಲ್ಲಿ ವ್ಯಾಪ್ತಿಯನ್ನು ನಿರ್ಣಯಿಸುವ ಸೌ‌ರ್ ಪರ್ವತ ಇದರ ಹಿಂದೆಯಾಗಿದೆ ಇರುವುದು . ಈ ಪರ್ವತ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರನ್ನು ಪ್ರೀತಿಸಿದ ಪರ್ವತ . ಅಬೂಹುರೈರಾ (ರ) ರವರಿಂದ ವರದಿ ; ಪ್ರವಾದಿ ಸ್ವಲ್ಲಲ್ಲಾಹು  ಅಲೈಹಿವಸಲ್ಲಮರವರು ಹೇಳುತ್ತಾರೆ “ ಉಹ್ದ್ ಪರ್ವತ ನಮ್ಮನ್ನು ಪ್ರೀತಿಸುತ್ತದೆ . ನಾವು ಅದನ್ನು ಕೂಡಾ ಪ್ರೀತಿಸುತ್ತೇವೆ ” ಅನಸ್ (ರ) ರವರಿಂದ ವರದಿ ; ಒಮ್ಮೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಉಹ್ದ್ ಪರ್ವತ ಹತ್ತಿದಾಗ ಜೊತೆಗೆ ಅಬೂಬಕರ್ (ರ) , ಉಮರ್ (ರ) ಹಾಗೂ ಉಸ್ಮಾನ್ (ರ) ರವರು ಇದ್ದರು . ಆಗ ಉಹ್ದ್ ಪರ್ವತ ಗಡಗಡ ನಡುಗಿತು . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹೇಳಿದರು “ ಓ ಉಹ್ದ್ ... ಗಟ್ಟಿಯಾಗಿ ನಿಲ್ಲು . ನಿನ್ನ ಮೇಲೆ ಪ್ರವಾದಿ , ಸಿದ್ದೀಖ್ ಹಾಗೂ ಎರಡು ಶುಹುದಾಗಳಿದ್ದಾರೆ . 

*ಜಬಲ್ ರುಮಾತ್* ಅರಬಿಯಲ್ಲಿ ಜಬಲ್ ಎಂದರೆ ಪರ್ವತ ಎಂದರ್ಥ ಉಹ್ದ್ ಪರ್ವತದ ದಕ್ಷಿಣ ಭಾಗದ ಲ್ಲಿರುವ ಚಿಕ್ಕ ಪರ್ವತವಾಗಿದೆ ಇದು . ಉಹ್ದ್ ಯುದ್ಧದ ವೇಳೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು 50 ಬಿಲ್ಲು ಬಾಣ ಪ್ರವೀಣ ನಿಲ್ಲಿಸಿದ ಸ್ಥಳವಾಗಿದೆ ಈ ಪರ್ವತ . ಏನೇ ಸಂಭವಿಸಿದರೂ ಇಲ್ಲಿಂದ ಕದಲಬಾರದು ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲ ಮರವರು ಅವರಲ್ಲಿ ಹೇಳಿದ್ದರು . ಯುದ್ಧದ ಪ್ರಾರಂಭದಲ್ಲಿ ಶತ್ರುಗಳಿಗೆ ಹಿನ್ನೆಡೆಯಾಗಿ ಓಡಿ ಹೋದಾಗ ರಣಾಂಗಣದಲ್ಲಿದ್ದ ಮುಸ್ಲಿಮರು ಸಮರಾರ್ಜಿತ ಸೊತ್ತುಗಳನ್ನು ಶೇಖರಣೆ ಮಾಡತೊಡಗಿದರು . ಸಂಪತ್ತಿನ ಮೋಹದಿಂದಾಗಿ ಈ ಪರ್ವತದ ಮೇಲಿದ್ದ ಜನರು ಅಲ್ಲಿಗೆ ಹೋಗಲು ತಯಾರಾದರು . ಆಗ ಸಂಘದ ನಾಯಕ ಅಬ್ದುಲಾಹಿ ಬಿನ್ ಝುಬೈರ್ (ರ) ರವರ ಪ್ರವಾದಿವರ್ಯರ ಆದೇಶ ವನ್ನು ನೆನಪಿಸಿದರು . ನಾಯಕನ ಮಾತಿಗೆ ಬೆಲೆ ಕೂಡದೆ 40 ರಷ್ಟು ಮಂದಿ ಇಳಿದು ಹೋದರು.
  ಕೇವಲ ಹತ್ತರಷ್ಟು ಜನ ಈ ರುಮಾಂತ್ ಪರ್ವತದ ಮೇಲೆ ನಿಂತಿದ್ದಾರೆ.ಶತ್ರುಗಳು ಪುನಃ ಯುದ್ಧಕ್ಕೆ ಬಂದಾಗ ಈ ಹೊತ್ತು ಜನರಿಗೆ ಅವರನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಲಿಲ್ಲ.ಇವರನ್ನು ಕೆಳಗಿಳಿಸಿ ಶತ್ರುಗಳು ಯುದ್ಧದಲ್ಲಿ ಮುನ್ನಡೆ ಪಡೆದರು.ಪರ್ವತದ ಮೇಲಿದ್ದ ಜನರ ಸಂಪತ್ತಿನೊಂದಿಗಿದ್ದ ಮೋಹ ಹಾಗೂ ಪ್ರವಾದಿ ವರ್ಯರ ಆದೇಶ ಧಿಕ್ಕರಿಸಿದ ಕಾರಣ ಯುದ್ಧದಲ್ಲಿ ಮುಸ್ಲಿಮರಿಗೆ ಹಿನ್ನಡೆಯಾಯಿತು.ಸುಮಾರು 70 ರಷ್ಟು ಸ್ವಹಾಬಿಗಳು ರಕ್ತ ಸಾಕ್ಷಿಗಳಾದರು.
   
     *ಮುಂದುವರಿಯುವುದು*