ಮದೀನಾ ಮಹತ್ವ ಇತಿಹಾಸ ಅಧ್ಯಾಯ 40

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
  
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 40*🍃
         💜💜💜💜💜💜💜

❤️ *ಮದೀನಾದ ಬಾವಿಗಳು*

🌹🌹🌹🌹🌹🌹🌹🌹🌹🌹
            ಮದೀನಾದಲ್ಲಿ ಪವಿತ್ರ ಇಸ್ಲಾಮಿನ ಇತಿಹಾಸದೊಂದಿಗೆ ತಳುಕು ಹಾಕಲ್ಪಡುವ ಹಲವಾರು ಬಾವಿಗಳಿವೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಸಂಬಂಧವಿರುವ ಎಲ್ಲದಕ್ಕೂ ಮಹತ್ವವಿದೆ . ಈ ಬಾವಿಗಳ ಮಹತ್ವದ ಬಗ್ಗೆ ಪ್ರತ್ಯೇಕ ಹೇಳಬೇಕಿಲ್ಲ ತಾನೆ ? ಇವುಗಳಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ನೀರು ಕುಡಿದ ಬಾವಿಗಳಿವೆ . ಕೆಲವೊಂದು ಬಾವಿಗಳಲ್ಲಿ ಅಂಗಸ್ನಾನ ಹಾಗೂ ಸ್ನಾನ ಮಾಡಿದ್ದಾರೆ . ಕೆಲವೊಂದು ಬಾವಿಯ ನೀರಿಗೆ ಉಗುಳಿದ್ದಾರೆ . ಇಂತಹ ಬಾವಿಗಳಲ್ಲಿ ಕೆಲವೊಂದು ಕಣ್ಮರೆಯಾದರೂ ಹಲವಾರು ಬಾವಿಗಳನ್ನು ಇಂದು ಕೂಡಾ ಕಾಣಲು ಸಾಧ್ಯವಿದೆ . ಇವುಗಳಿಗೆ ಹಲವಾರು ಮಹತ್ವ ಕೂಡಾ ಇದೆ . ಇಮಾಂ ನವವಿ (ರ) ರವರು ಹೇಳುತ್ತಾರೆ . ಇಂತಹ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದು ಸುನ್ನತ್ತಾಗಿದೆ . 30 ರಷ್ಟು ಇಂತಹ ಸ್ಥಳಗಳನ್ನು ಮದೀನಾ ನಿವಾಸಿಗಳು ಚೆನ್ನಾಗಿ ಬಲ್ಲರು . ಆದ್ದರಿಂದ ಸಾಧ್ಯವಾದಷ್ಟು ಇಂತಹ ಸ್ಥಳಗಳಿಗೆ ತಲುಪಲು ಶ್ರಮಿಸಬೇಕು .

*ಬಿಅ್ರು ಹಾಅ್*

           ಅರಬಿಯಲ್ಲಿ ಬಿಅ್ರು ಎಂದರೆ ಬಾವಿ ಎಂದರ್ಥ . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಈ ಬಾವಿಯ ನೀರನ್ನು ಕುಡಿದಿದ್ದಾರೆ . ಈ ನೀರಿಗೆ ವಿಶೇಷ ಪರಿಮಳವಿತ್ತು . ಈ ಬಾವಿ ಅಬೂ ತಲ್ಹ ( ರ ) ರವರ ಒಡೆತನದಲ್ಲಿತ್ತು . ತನ್ನ ಸಂಪತ್ತುಗಳ ಪೈಕಿ ಅತ್ಯಂತ ಪ್ರಿಯವಾದದು ಈ ಬಾವಿಯಾಗಿತ್ತು . “ ನಿಮಗೆ ಪ್ರಿಯವಾದ ವಸ್ತುಗಳಿಂದ ನೀವು ವೆಚ್ಚಮಾಡುವವರೆಗೂ ನೀವು ಪುಣ್ಯ ಪಡೆಯಲಾರಿರಿ ” ಎಂಬ ಆಲು ಇಮ್ರಾನ್ 92 ನೇ ಸೂಕ್ತ ಅವತೀರ್ಣಗೊಂಡಾಗ ಅಬೂ ತಲ್ಹ ( ರ ) ರವರು ಪ್ರವಾದಿವರ್ಯರ ಬಳಿ ಬಂದು ಹೇಳುತ್ತಾರೆ . ಓ ಪ್ರವಾದಿವರ್ಯರೆ ... ಅಲ್ಲಾಹನು ಹೇಳಿದ್ದನ್ನು ನಾನು ಕೇಳಿದ್ದೇನೆ . ನನಗೆ ಅತ್ಯಂತ ಪ್ರಿಯವಾದ ವಸ್ತು ಬಿಅ್ರು ಹಾಅ್ ಬಾವಿಯಾಗಿದೆ . ಇದನ್ನು ನಾನು ಅಲ್ಲಾಹನ ಹಾದಿಯಲ್ಲಿ ದಾನ ಮಾಡುತ್ತಿದ್ದೇನೆ . ಇದು ಒಳ್ಳೆಯದು . ಲಾಭ ಸಂಗತಿ ಎಂದು ಪ್ರೋತ್ಸಾಹಿಸಿ ಅವರಿಗೆ ಪ್ರಾರ್ಥಿಸಿದರು . ನಂತರ ಈ ಬಾವಿಯನ್ನು ಅಬೂ ತ್ವಲ್‌ಹ ( ರ ) ರವರ ಕುಟುಂಬ ಸಹಿತ ಇತರರೂ ಉಪಯೋಗಿಸುತ್ತಿದ್ದರು .

*ಬಿಅ್ರು ರೂಮಃ*

            ಇದಕ್ಕೆ ಬಿಅ್ರು ರೂಮಃ ಎಂಬ ಹೆಸರು ಬರಲು ಕಾರಣ ಮಝಿನ ಗೋತ್ರದ ಒಬ್ಬರು ಈ ಬಾವಿಯನ್ನು ತೋಡಿದರು . ನಂತರ ಆತ ಇದನ್ನು ಬನೂ ಗಫ್ಲಾರಿ ಗೋತ್ರದವರಿಗೆ ಇದಕ್ಕೆ ಆ ಗೋತ್ರದ ಯಜಮಾನ ಹೆಸರಿಟ್ಟರು . ಇದಕ್ಕೆ ಬಿರು ಉಸ್ಮಾನ್ ಎಂಬ ಹೆಸರು ಕೂಡಾ ಇದೆ . ಕಾರಣ ಯಹೂದಿಗಳ ಕೈಯಲ್ಲಿದ್ದ ಈ ಬಾವಿಯನ್ನು ಉಸ್ಮಾನ್ ( ರ ) ಖರೀದಿಸಿ ಮುಸ್ಲಿಮರಿಗೆ ದಾನ ಮಾಡಿದರು . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಮದೀನಾಗೆ ಹಿಜ್ರಾ ಬಂದಾಗ ಬಿರು ರೂಮಃದ ನೀರಲ್ಲದೆ ಕುಡಿಯಲು ಯೋಗ್ಯವಾದ ನೀರು ಲಭ್ಯವಾಗುತ್ತಿರಲಿಲ್ಲ . ಅಂದು ಮುಸಿಮರಿಗೆ ಸ್ವಂತವಾದ ಒಂದು ಬಾವಿ ಕೂಡಾ ಇರಲಿಲ್ಲ , ಕುಡಿಯಲು ಯೋಗ್ಯವಾದ ನೀರಿರುವ ಈ ಬಾವಿ ಯಹೂದಿಯ ಒಡೆತನದಲ್ಲಿತ್ತು . ಮುಸ್ಲಿಮರು ಇದರ ನೀರನ್ನು ಪಡೆಯ ಬೇಕಾದರೆ ಹಣವನ್ನು ಸಂದಾಯ ಮಾಡಬೇಕಿತ್ತು . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ ರವರು ಈ ಬಾವಿ ಮುಸ್ಲಿಮರ ಕೈಗೆ ಸಿಕ್ಕಿದ್ದರೆ ಎಂದು ಆಶಿಸುತ್ತಿದ್ದರು . ಅವರು ಈ ಬಾವಿಯನ್ನು ಖರೀದಿಸುವಂತೆ ಪ್ರೇರೆಪಿಸಿದರು . ಈ ಸಮಯದಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಸ್ವಹಾಬಿಗಳಲ್ಲಿ ಕೇಳಿದರು “ ಯಾರು ಈ ಬಾವಿಯನ್ನು ಖರೀದಿಸಿ ಮುಸ್ಲಿಮರಿಗೆ ದಾನ ಮಾಡುತ್ತಾರೆ ? ಅವರಿಗೆ ಸ್ವರ್ಗ ದಲ್ಲಿ ಉತ್ತಮ ಪಾನಿಯ ಲಭ್ಯವಾಗಲಿದೆ ” ಆಗ ಉಸ್ಮಾನ್ ( ರ ) ರವರು ಯಹೂದಿಯ ಬಳಿ ಹೋಗಿ ಈ ಬಾವಿಗೆ ಬೆಲೆಯನ್ನು ನಿಶ್ಚಯಿಸಿದರು . ಆದರೆ ಆತ ಪೂರ್ಣವಾಗಿ ಮಾರಲು ಸಿದ್ಧನಾಗಲಿಲ್ಲ . ಅರ್ಧವನ್ನು ಮಾರಿದ . ಅಂದರೆ ಒಂದು ದಿನ ಆತ ನೀರು ತೆಗೆದರೆ ಮತ್ತೊಂದು ಉಸ್ಮಾನ್ ( ರ ) ರವರು ನೀರು ತೆಗೆಯಬಹುದು . ಇದಕ್ಕಾಗಿ ಉಸ್ಮಾನ್ ( ರ ) 12 ಸಾವಿರ ದಿರ್‌ಹಮನ್ನು ನೀಡಿದರು . ಉಸ್ಮಾನ್ ( ರ ) ರವರು ತನ್ನ ಅವಧಿಯಲ್ಲಿ ಮುಸ್ಲಿಮರಿಗೆ ನೀರು ತೆಗೆಯಲು ಅವಕಾಶ ಮಾಡಿಕೊಟ್ಟರು . ಇದು ಯಹೂದಿಗೆ ಸಹಿಸಲಾಗಲಿಲ್ಲ . ' ನನ್ನ ನೀರು ಸಂಪೂರ್ಣ ನಾಶವಾಯಿತು ' ಎಂದು ಹೇಳತೊಡಗಿದ ಯಹೂದಿ ' ಹಾಗಾದರೆ ಪೂರ್ಣವಾಗಿ ನೀನೇ ತೆಗೆದುಕೋ ' ಎಂದಾಗ ಪುನಃ 8 ಸಾವಿರ ದಿರ್‌ಹಮ್ ಹಣ ನೀಡಿ ಬಾವಿಯನ್ನು ಪಡೆದು ಮುಸ್ಲಿಮರಿಗೆ ದಾನ ಮಾಡಿದರು .

*ಬಿಅ್ರು ಅರೀಸ್*

       ಈ ಬಾವಿಗೆ ಬಿಅ್ರು ಖಾತಂ ಎಂಬ ಹೆಸರಿದೆ . ಖಾತಮ್ ಎಂದರೆ ಉಂಗುರ ಎಂದರ್ಥ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ಉಂಗುರ ಉಸ್ಮಾನ್ ( ರ ) ರವರ ಕಾಲದಲ್ಲಿ ಇದರೊಳಗೆ ಬಿತ್ತು . ನಂತರ ಎಷ್ಟೇ ಹುಡುಕಾಡಿದರೂ ಸಿಗಲಿಲ್ಲ . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಈ ಬಾವಿಯ ನೀರನ್ನು ಉಪಯೋಗಿಸುತ್ತಿದ್ದರು . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ಕೈಯಲ್ಲಿದ್ದ ಉಂಗುರ ನಂತರ ಅಬೂಬಕರ್ ಸಿದ್ದೀಖ್ ( ರ ) ರವರ ಕೈಗೆ ಬಂತು . ಸಿದ್ದೀಖ್ ( ರ ) ರವರ ವಫಾತಿನ ನಂತರ ಉಮರ್ ( ರ ) ರವರ ಕೈವಶವಾಯಿತು . ಇದರ ನಂತರ ಉಸ್ಮಾನ್ ( ರ ) ರವರ ಕೈಯಲ್ಲಿ ಆರು ವರ್ಷಗಳ ಕಾಲವಿತ್ತು . ಒಂದು ದಿನ ಉಸ್ಮಾನ್ ( ರ ) ಬಿಅ್ರು ಅರೀಸ್ ಬಾವಿಯ ದಂಡೆಯಲ್ಲಿ ಕುಳಿತು ಈ ಉಂಗುರವನ್ನು ಹೊರತೆಗೆದರು . ಅಚಾನಕ್ ಬಾವಿಯೊಳಗೆ ಬಿತ್ತು . ಮೂರು ದಿನಗಳ ಕಾಲ ನಿರಂತರ ಹುಡುಕಾಡಿದರೂ ಸಿಗಲಿಲ್ಲ . ಪ್ರವಾದಿವರ್ಯರ ಈ ಬೆಳ್ಳಿಯ ಉಂಗುರದಲ್ಲಿ “ ಮುಹಮ್ಮದ್ ರಸೂಲುಲ್ಲಾಹ್ ” ಎಂದು ಬರೆದಿತ್ತು . 6 ವರ್ಷಗಳ ಕಾಲ ಉಸ್ಮಾನ್ ( ರ ) ಕೈವಶವಿದ್ದ ಈ ಉಂಗುರ ನಷ್ಟ ಹೊಂದಿದಾಗ ಅವರ ಆಡಳಿತದಲ್ಲಿ ಬಂಡಾಯ ಎದ್ದಿತು .

     *ಮುಂದುವರಿಯುವುದು