ಮದೀನಾ ಮಹತ್ವ ಇತಿಹಾಸ ಅಧ್ಯಾಯ 39

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 39*🍃
         💜💜💜💜💜💜💜

🌹🌹🌹🌹🌹🌹🌹🌹🌹🌹

*ಮಸ್ಜಿದು ಬನೂ ಹರಾಮ್* 

           ಬನೂ ಹರಾಮ್ ಗೋತ್ರದವರ ಪ್ರದೇಶದಲ್ಲಿರುವ ಕಾರಣ ಇದಕ್ಕೆ ಮಸ್ಜಿದು ಬನೀ ಹರಾಮ್ ಎಂಬ ಹೆಸರು ಬಂದಿದೆ . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಸಲ್ಅ್ ಪರ್ವದ ಕಣಿವೆಯಲ್ಲಿ ಈ ಗೋತ್ರದವರಿಗೆ ವಾಸಿಸಲು ಅನುಮತಿ ನೀಡಿದರು . ಅಲ್ಲಿಗೆ ಹೋಗಿ ವಾಸಿಸಿದ ಈ ಗೋತ್ರ ಮಸೀದಿಯೊಂದನ್ನು ನಿರ್ಮಿಸಿದರು . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲ ಮರು ಈ ಮಸೀದಿಯಲ್ಲಿ ನಮಾಜ್ ಮಾಡಿದ್ದಾರಾ .... ? ಇಲ್ಲವಾ .... ? ಎಂಬುವುದರ ಬಗ್ಗೆ ಭಿನ್ನಾಭಿಪ್ರಾಯಗಳಿವೆ . ಉಮರ್ ಬಿನ್ ಅಬ್ದುಲ್ ಅಝೀಝ್ ( ರ ) ರವರು ಈ ಮಸೀದಿ ಯನ್ನು ವಿಶಾಲಗೊಳಿಸಿದರು . 

*ಮಸ್ಜಿದು ಬನೀ ದಿನಾರ್*

            ಬನೂ ದಿನಾರ್ ಗೋತ್ರದವರ ಪ್ರದೇಶದಲ್ಲಿರುವ ಕಾರಣ ಇದಕ್ಕೆ ಮಸ್ಜಿದು ಬನೀ ದಿನಾರ್ ಎಂಬ ಹೆಸರು ಬಂದಿದೆ . ಈ ಮಸೀದಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ನಮಾಝ್ ಮಾಡಿದ ಸ್ಥಳಗಳಲ್ಲಿ ಒಂದಾಗಿದೆ . 

*ಮಸ್ಜಿದು ಬನೀ ಳಫ್‌‌ರ್*
 
             ಬನೂ ಳಫ್‌‌ರ್ ಗೋತ್ರದವರ ಪ್ರದೇಶದಲ್ಲಿರುವ ಕಾರಣ ಈ ಮಸೀದಿಗೆ ಮಸ್ಜಿದುಬನೀ ಳಫ್‌ರ್ ಎಂಬ ಹೆಸರು ಬಂದಿದೆ . ಇದು ಕೂಡಾ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ನಮಾಝ್ ಮಾಡಿದ ಸ್ಥಳಗಳಲ್ಲಿ ಒಂದಾಗಿದೆ . ಈ ಮಸೀದಿಗೆ ಮಸ್ಜಿದುಲ್ ಬಗ್ಲ ಎಂಬ ಹೆಸರಿದೆ . ಬಗ್ಲ ಎಂದರೆ ಹೇಸರಗತ್ತೆ ಎಂದರ್ಥ . ಪ್ರವಾದಿವರ್ಯರ ವಾಹನವಾದ ಇದನ್ನು ಈ ಸ್ಥಳದಲ್ಲಿ ಕಟ್ಟಿಹಾಕಲಾಗುತಿತ್ತು . 

*ಮಸ್ಜಿದು ಸಯ್ಯದುಶ್ಯುಹದಾಅ್*

    ‌.      ಶುಹದಾಗಳ ನೇತಾರ ಮಹಾನುಭಾವರಾದ ಹಂಝ ( ರ ) ರವರು ವಧಿಸಲ್ಪಟ್ಟ ಉಹ್ದ್ನಲ್ಲಿ ಸ್ಥಾಪಿಸಲಾದ ಮಸೀದಿಯಾಗಿದೆ ಇದು . ಆದ್ದರಿಂದ ಮಸ್ಜಿದು ಸಯ್ಯಿದು ಶ್ಶುಹದಾಅ್ ಹಂಝತು ಬಿನ್ ಅಬ್ದುಲ್ ಮುತ್ತಲಿಬ್ ಎಂಬ ಹೆಸರು ಬಂದಿದೆ . ಹಿಜ್ರಾ 570 ರಲ್ಲಾಗಿದೆ ಈ ಮಸೀದಿಯ ನಿರ್ಮಾಣ ಕಾರ್ಯ ನಡೆದದ್ದು . 

*ಇತರ ಮಸೀದಿಗಳು*

  ‌‌.           ಮದೀನಾದಲ್ಲಿ ಇವುಗಳಲ್ಲದೆ ಬೇರೆ ಹಲವಾರು ಮಸೀದಿಗಳಿವೆ . ಮದೀನಾ ಎಂಬ ಪವಿತ್ರ ಊರಿನಲ್ಲಿ ಸ್ಥಾಪಿಸಲ್ಪಟ್ಟ ಮಸೀದಿಯಾಗಿದ್ದರಿಂದ ಇತರ ಮಸೀದಿಗಳಿಂತ ಇವುಗಳಿಗೆ ಮಹತ್ವ ಇದೆ ಎನ್ನುವುದರಲ್ಲಿ ಸಂಶಯವಿಲ್ಲ . ಅವುಗಳಲ್ಲಿ ಕೆಲವೊಂದನ್ನು ನೀಡಲಾಗಿದೆ . ಮಸ್ಬಿದುರ್ರಾಯ , ಮಸ್ಜಿದು ಬನೀ ಹಾರಿಸ್ , ಮಸ್ಜಿದುಲ್ ಫಳೀಖ್ , ಮಸ್ಜಿದುಲ್ ಅಸ್ವಬ , ಮಸ್ಜಿದು ಉತ್‌ಬಾನ್ ಬಿನ್ ಮಾಲಿಕ್ , ಮಸ್ಜಿದು ಬನೀಉನೈಫ್ , ಮಸ್ಜಿದು ಫಸ್ಹ್ , ಮಸ್ಜಿದು ಸಬಖ್ ಹಾಗೂ ಮಸ್ಜಿದುಶ್ಶಜರ ಮುಂತಾದವುಗಳು.

     *ಮುಂದುವರಿಯುವುದು*

🤲🤲 *ಪವಿತ್ರ ರಾತ್ರಿಯಲಿ ನಿಮ್ಮ ದುಆದಲ್ಲಿ ನಮ್ಮನ್ನೂ ನಮ್ಮ ಕುಟುಂಬವನ್ನೂ ಮರೆಯದಿರಿ*🤲🤲