ಮದೀನಾ ಮಹತ್ವ ಇತಿಹಾಸ ಅಧ್ಯಾಯ 37

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 37*🍃
         💜💜💜💜💜💜💜

🌹🌹🌹🌹🌹🌹🌹🌹🌹🌹

*ಮಸ್ಜಿದು ಖಿಬ್ಲತೈನಿ* 

             ಮಸ್ಜಿದು ಖಿಬ್‌ಲತೈನಿ ಎಂದರೆ ಎರಡು ಖಿಬ್‌ಲಗಳಿಗೆ ಸಾಕ್ಷಿಯಾದ ಮಸೀದಿ ಎಂದಾಗಿದೆ . ಇಸ್ಲಾಮಿನ ಇತಿಹಾಸದ ಅತ್ಯಂತ ಮಹತ್ವವಿರುವ ಮಸೀದಿಗಳಲ್ಲಿ ಇದು ಕೂಡಾ ಒಂದು . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಯಹೂದಿಗಳ ಮನವೊಲಿಸಲು ಅಲ್ಲಾಹನ ಆಜ್ಞೆಯಂತೆ 16 ತಿಂಗಳಗಳ ಕಾಲ ಬೈತುಲ್ ಮುಖದ್ದಸ್‌ಗೆ ಅಭಿಮುಖವಾಗಿ ನಮಾಝ್ ಮಾಡುತ್ತಾರೆ . ಆದರೆ ಪ್ರವಾದಿವರ್ಯರು ಪವಿತ್ರ ಕಅ್ಬಾಲಯ ಕಿಬ್‌ಲಯಾಗುವುದನ್ನು ಬಯಸುತ್ತಿದ್ದರು . ಹಾಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಇಷ್ಟದಂತೆ ಅಲ್ಲಾಹನು ಕಅ್ಬಾಲಯಕ್ಕೆ ತಿರುಗಿ ನಮಾಜ್ ಮಾಡಲು ಅನುಮತಿ ನೀಡಿದ್ದು ಈ ಸ್ಥಳದಲ್ಲಿ ನಮಾಜ್ ಮಾಡುವ ಸಮಯದಲ್ಲಾಗಿತ್ತು . ನಂತರ ಇಲ್ಲಿ ಮಸೀದಿಯನ್ನು ನಿರ್ಮಿಸಲಾಯಿತು . ಆದ್ದರಿಂದ ಇದಕ್ಕೆ ಮಸ್ಜಿದು ಖಿಬ್ಲತೈನಿ ಎಂಬ ಹೆಸರು ಬಂತು . ಮದೀನಾದ ಉತ್ತರ ಭಾಗದಲ್ಲಿರುವ ಈ ಮಸೀದಿಯು ಬನೂ ಸಲ್ಮಾ ಗೋತ್ರದವರ ಸ್ಥಳದಲ್ಲಿರುವ ಕಾರಣ ಇದಕ್ಕೆ ಮಸ್ಜಿದು ಬನೀ ಸಲ್ಮಾ ಎಂಬ ಹೆಸರು ಕೂಡಾ ಇದೆ . ಇದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲೇ ನಿರ್ಮಿಸಲಾದ ಮಸೀದಿ . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಉಮ್ಮು ಬಶರ್ ಎಂಬ ಮಹಿಳೆಯನ್ನು ಸಂದರ್ಶಿಸಲು ಹೋದಾಗ ಈ ಸ್ಥಳದಲ್ಲಿ ನಮಾಜ್ ಮಾಡಿದರು . ಆಗ ಬನೂ ಸಲ್ಮಾ ಗೋತ್ರದವರು ಈ ಸ್ಥಳದಲ್ಲಿ ಮಸೀದಿ ನಿರ್ಮಿಸಲು ತಿರ್ಮಾನಿಸಿ ಪ್ರಸ್ತುತ ಸ್ಥಳವನ್ನು ಮಾರುವಂತೆ ಕೋರಿದಾಗ ಅವರು ತನ್ನ ಮನೆ ಸಹಿತ ಉಚಿತವಾಗಿ ನೀಡುತ್ತಾರೆ . 

*ಮಸ್ಜಿದುಲ್ ಜುಮುಅಃ*
 
           ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ನೇತೃತ್ವದಲ್ಲಿ ಮೊಟ್ಟ ಮೊದಲ ಜುಮುಅ ನಡೆದದ್ದು ಈ ಸ್ಥಳದಲ್ಲಾದ ಕಾರಣ ಇದಕ್ಕೆ ಮಸ್ಜಿದುಲ್ ಜುಮುಅಃ ಎಂಬ ಹೆಸರು ಬಂದಿದೆ . ನಾಲ್ಕು ದಿನಗಳ ಕಾಲ ಖುಬಾಅ್ ನಲ್ಲಿ ತಂಗಿದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲ ಮರು ಶುಕ್ರವಾರ ಬೆಳಿಗ್ಗೆ ಅಲ್ಲಿಂದ ಮದೀನಾದೆಡೆಗೆ ಪಯಣ ಬೆಳೆಸುತ್ತಾರೆ . ಬನೂ ಸಾಲಿಮ್ ಗೋತ್ರದವರು ಜೀವಿಸುತ್ತಿರುವ ಪ್ರದೇಶಕ್ಕೆ ತಲುಪಿದಾಗ ಅಲ್ಲಿ ಜುಮುಅ ನಮಾಝ್ ನಿರ್ವಹಿಸಿದರು ಇದು ಪ್ರವಾದಿವರ್ಯರ ನೇತೃತ್ವದಲ್ಲಿ ನಡೆದ ಮೊಟ್ಟ ಮೊದಲ ಜುಮುಅ ಹಾಗೂ ಇಲ್ಲಿ ಮಾಡಿದ ಖತುಬಾ ಮೊಟ್ಟ ಮೊದಲ ಜುಮುಅ ಋತುಬ . ಈ ಸ್ಥಳದಲ್ಲಿ ಬನೂ ಸಾಲಿಮ್ ಗೋತ್ರದವರು ಮಸೀದಿಯನ್ನು ನಿರ್ವಹಿಸಿದರು . ಇದಾಗಿದೆ ಮಸ್ಜಿದುಲ್ ಜುಮುಅ . ಇದು ಬನೂ ಸಾಲಿಮ್ ಗೋತ್ರದವರು ಪ್ರದೇಶದಲ್ಲಿರುವ ಕಾರಣ ಇದಕ್ಕೆ ಮಸ್ಜಿದು ಬನೀ 
ಸಾಲಿಮ್ ಎಂಬ ಹೆಸರು ಕೂಡಾ ಇದೆ . ಈ ಮಸೀದಿ ಸ್ಥಾಪಿಸಲ್ಪಟ್ಟ ಸ್ಥಳದ ಹೆಸರು ಖಬೀಬ್ ಎಂದಾಗಿರುವುದರಿಂದ ಇದಕ್ಕೆ ಮಸ್ಜಿದುಲ್ ಖಬೀಬ್ ಎಂದು ಕೂಡಾ ಕರೆಯುತ್ತಾರೆ . 

*ಮಸ್ಜಿದುಲ್ ಗಮಾಮ*
  
           ಈದ್ ನಮಾಜ್ ಮತ್ತು ಮಳೆ ಬೇಡುವ ನಮಾಜ್ ಮಾಡಲು ಪ್ರತ್ಯೇಕವಾಗಿ ಸಬೀಕರಣ ಗೊಳಿಸಿದ ಸ್ಥಳವಾಗಿದೆ . ಇಲ್ಲಿ ವಿಶಾಲವಾದ ಸ್ಥಳ ಇರುವುದರಿಂದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಈ ಎರಡು ನಮಾಝನ್ನು ಇಲ್ಲಿ ನಿರ್ವಹಿಸುತ್ತಿದ್ದರು . ಇದನ್ನು ಮದುಲ್ ಗಮಾಮ ಎಂದು ಕರೆಯುತ್ತಾರೆ . ಗಮಾಮ ಎಂದರೆ ಮೋಡ ಎಂದರ್ಥ .
ಮದುಲ್ ಗಮಾಮ ಈದ್ ನಮಾಜ್ ಮತ್ತು ಮಳೆ ಬೇಡುವ ನಮಾಜ್ ಮಾಡಲು ಪ್ರತ್ಯೇಕವಾಗಿ ಸಬೀಕರಣ ಗೊಳಿಸಿದ ಸ್ಥಳವಾಗಿದೆ . ಇಲ್ಲಿ ವಿಶಾಲವಾದ ಸ್ಥಳ ಇರುವುದರಿಂದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಈ ಎರಡು ನಮಾಝನ್ನು ಇಲ್ಲಿ ನಿರ್ವಹಿಸುತ್ತಿದ್ದರು . ಇದನ್ನು ಮದುಲ್ ಗಮಾಮ ಎಂದು ಕರೆಯುತ್ತಾರೆ . ಗಮಾಮ ಎಂದರೆ ಮೋಡ ಎಂದರ್ಥ . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮಳೆ ಬೇಡುವ ನಮಾಜ್ ಮಾಡಿ ಪ್ರಾರ್ಥಿಸಿದಾಗ ಪರಿಸರವಿಡೀ ಮೋಡ ಕವಿಯಿತು . ನಂತರ ಧಾರಾಕಾರ ಮಳೆ ಬಂತು . ಆದ್ದರಿಂದ ಜನರು ಇದನ್ನು ಮಸ್ಜಿದುಲ್ ಗಮಾಮ ಎಂದು ಕರೆಯತೊಡಗಿದರು . ಮಸ್ಜಿದುನ್ನಬವಿಯ ದಕ್ಷಿಣ ಭಾಗದಲ್ಲಿರುವ ಈ ಮಸೀದಿಗೆ ಮಸ್ಜಿದುಲ್ ಮುಸ್ವಲ್ಲಾ ಎಂಬ ಹೆಸರು ಕೂಡಾ ಇದೆ . ಮುಸಲ್ಲಾ ಎಂದರೆ ನಮಾಜ್ ಮಾಡುವ ಸ್ಥಳ ಎಂದಾಗಿದೆ . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಇಲ್ಲಿ ನಮಾಝ್ ಮಾಡುತ್ತಿದ್ದ ಕಾರಣ ಈ ಹೆಸರು ಬಂದಿದೆ . ಮಸ್ಜಿದುನ್ನಬವಿಯಲ್ಲಿ ವಿಶಾಲವಾದ ಸ್ಥಳವಕಾಶವಿಲ್ಲದ ಕಾರಣ ಹಿಜ್ರಾ 9 ನೇ ಶತಮಾನದ ತನಕ ಈದ್ ನಮಾಝನ್ನು ಈ ಮಸೀದಿಯಲ್ಲಿ ನಿರ್ವಹಿಸಲಾಗುತ್ತಿತು . ನಂತರದ ದಿನಗಳಲ್ಲಿ ಮಸ್ಜಿದುನ್ನಬವಿಗೆ ವರ್ಗಾಯಿಸಲಾಯಿತು . 

*ಮಸ್ಜಿದು ಅಬೀಬಕರ್ ಸಿದ್ದೀಕ್ ( ರ )*

  ‌‌.            ಈ ಮಸೀದಿ ಪ್ರವಾದಿವರ್ಯರು ನಮಾಝ್ ಮಾಡಿದ ಸ್ಥಳಗಳಲ್ಲಿ ಒಂದಾಗಿದೆ . ಇದು ಮಸ್ಜಿದುಲ್ ಮುಸಲ್ಲಾದ ಪಶ್ಚಿಮ ಭಾಗದಲ್ಲಾಗಿದೆ . ಇದಕ್ಕೆ ಮಸ್ಜಿದು ಅಬೂಬಕರ್ ಸಿದ್ದೀಕ್ ಎಂದು ನಾಮಕರಣ ಮಾಡಲು ಕಾರಣ ಅಬೂಬಕರ್ ( ರ ) ರವರು ತನ್ನ ಖಿಲಾಫತಿನ ಸಮಯ ದಲ್ಲಿ ಈ ಸ್ಥಳದಲ್ಲಿ ಈದ್ ನಮಾಝ್ಗೆ ನೇತೃತ್ವ ನೀಡಿದ್ದರು . ನಂತರ ಈ ಸ್ಥಳದಲ್ಲಿ ಮಸೀದಿ ನಿರ್ಮಾಣ ಮಾಡಿದ್ದು 5 ನೇ ಖಲೀಫಾ ಎಂದೇ ಖ್ಯಾತರಾದ ಉಮರ್ ಬಿನ್ ಅಬ್ದುಲ್ ಅಝೀಝ್ ( ರ ) ರವರಾಗಿದ್ದಾರೆ . 

*ಮಸ್ಜಿದು ಉಮರ್ ( ರ )* 

        ಮದುನ್ನಬವಿಯ ದಕ್ಷಿಣ ಭಾಗದಲ್ಲಿರುವ ಈ ಮಸೀದಿಯನ್ನು ಹಿಜ್ರಾ 850 ರಲ್ಲಾಗಿದೆ . ಈ ಸ್ಥಳದಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಈದ್ ನಮಾಝ್ ಮಾಡಿದ್ದಾರೆ . ಮಾತ್ರವಲ್ಲ . ಉಮರ್ ( ರ ) ರವರು ತನ್ನ ಆಡಳಿತ ಕಾಲದಲ್ಲಿ ಈ ಸ್ಥಳದಲ್ಲಿ ನಮಾಝ್ ಗೆ ನೇತೃತ್ವ ನೀಡಿದ್ದರು . ಆದ್ದರಿಂದ ಈ ಮಸೀದಿಗೆ ಮಸ್ಜಿದು ಉಮರ್ ( ರ ) ಎಂಬ ಹೆಸರು ಬಂದಿದೆ .

  *ಮಸ್ಜಿದು ಉಸ್ಮಾನ್ ( ರ )* 

          ಮದೀನಾದಲ್ಲಿರುವ ಈ ಮಸೀದಿಗೆ ವಿಶೇಷ ಮಹತ್ವವೇನು ಹೇಳಲಾಗುತ್ತಿಲ್ಲ . ಹಿಜ್ರಾ 15 ನೇ ಶತಮಾನದಲ್ಲಾಗಿದೆ ಈ ಮಸೀದಿಯನ್ನು ನಿರ್ಮಿಸಿದ್ದು , ಖುಲಫಾಉರ್ರಾಶಿದೀನ್‌ಗಳಲ್ಲಿ ಅಬೂಬಕರ್ ( ರ ) , ಉಮರ್ ( ರ ) ಹಾಗೂ ಅಲಿಯ್ ( ರ ) ಹೆಸರಿನಲ್ಲಿ ಮಸೀದಿಯಿರುವಾಗ ಈ ಮಸೀದಿಗೆ ಉಸ್ಮಾನ್ ( ರ ) ರವರ ಹೆಸರು ನೀಡಲಾಗಿದೆ .

     *ಮುಂದುವರಿಯುವುದು*