ಮದೀನಾ ಮಹತ್ವ ಇತಿಹಾಸ ,ಅಧ್ಯಾಯ 33


🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 33*🍃
         💜💜💜💜💜💜💜

 ❤️ *ಪಾವನ ಶರೀರ ಕದಿಯಲು ವಿಫಲ ಶ್ರಮಗಳು*
🌹🌹🌹🌹🌹🌹🌹🌹🌹🌹
              ಇಸ್ಲಾಮಿನ ಇತಿಹಾಸವನ್ನು ಪರಿಶೀಲಿಸಿದಾಗ ಇಸ್ಲಾಂ ವಿರೋಧಿಗಳು ದೀನನ್ನು ನಾಶಪಡಿಸಲು ಹಲವಾರು ಕುತಂತ್ರಗಳನ್ನು ಹೆಣೆದಿದ್ದಾರೆ. ಪ್ರವಾದಿವರ್ಯರು ಪವಿತ್ರ ಇಸ್ಲಾಮಿನ ಸುಂದರ ಸಂದೇಶದ ಪ್ರಭೋಧನಾ ದೌತ್ಯದೊಂದಿಗೆ ಬಂದಾಗ ಶತ್ರುಗಳು ಹಲವಾರು ಉಪಟಳಗಳನ್ನು ನೀಡಿದರು . ಅವರನ್ನು ಕೊಲ್ಲಲು ಸಂಚು ಹೂಡಿದರು . ಆದರೆ ಇದು ನಡೆಯುವುದೇ? ಅಲ್ಲಾಹನು ಪ್ರವಾದಿವರ್ಯರಿಗೆ ಪೂರ್ಣ ಸಂರಕ್ಷಣೆಯನ್ನು ನೀಡಿದ್ದಾನೆ . ಪವಿತ್ರ ಖುರ್‌ಆನ್ ಹೇಳುವುದನ್ನು ನೋಡಿ “ ಅಲ್ಲಾಹನು ನಿಮ್ಮನ್ನು ಜನರ ಕೇಡಿನಿಂದ ರಕ್ಷಿಸುತ್ತಾನೆ ” ( ಮಾಇದ - 67 ) ಈ ಶತ್ರುಗಳ ಉಪಟಳ ಜೀವಿತ ಕಾಲಕ್ಕೆ ಸೀಮಿತವಾಗಿರದೆ ಪ್ರವಾದಿವರ್ಯರ ಮರಣದ ನಂತರವೂ ಮುಂದುವರಿಸಿದ್ದಾರೆ . ಪ್ರವಾದಿವರ್ಯರ ಪಾವನ ಶರೀರವನ್ನು ಖಬ್‌ರಿನಿಂದ ಕದಿಯಲು ಶ್ರಮ ನಡೆಸಿದರು . ಹೀಗೆ ಪ್ರವಾದಿವರ್ಯರು ಹಾಗೂ ಅಬೂಬಕರ್ , ಉಮರ್ ( ರ ) ರವರ ಪಾವನ ಶರೀರಗಳ ಕದಿಯಲು ಹಲವಾರು ಬಾರಿ ಶ್ರಮ ನಡೆಸಿದ್ದಾರೆ . ಆದರೆ ಇದು ಸಾಧ್ಯವಾಗಿಲ್ಲ . ಯಾಕೆಂದರೆ ಅಲ್ಲಾಹನು ಪ್ರವಾದಿವರ್ಯರಿಗೆ ಜೀವನದಲ್ಲಿ ಹಾಗೂ ಮರಣದ ನಂತರ ಕೂಡಾ ಪೂರ್ಣ ಸಂರಕ್ಷಣೆ ನೀಡಿದ್ದಾನೆ . ವಿಫಲ ಯತ್ನಗಳ ಸಂಕ್ಷಿಪ್ತ ವಿವರಣೆ ಕೆಳಗೆ ನೀಡಲಾಗಿದೆ . 

*ಮೊದಲ ಶ್ರಮ*
.................,...................................
           ಪ್ರವಾದಿವರ್ಯರ ಪಾವನ ಶರೀರವನ್ನು ಕದಿಯಲು ಮೊದಲ ಶ್ರಮ ನಡೆದದ್ದು ಹಿಜ್ರಾ ಐದನೇ ಶತಮಾನದಲ್ಲಾಗಿದೆ . ಹಾಕಿಮುಲ್ ಅಬೀದಿಯ್ಯ್ ಎಂಬ ದುಷ್ಟ ರಾಜ ಪ್ರವಾದಿ ವರ್ಯರ ಶರೀರವನ್ನು ಈಜಿಪ್ಟಿಗೆ ಕೊಂಡು ಹೋಗಲು ಮಾಡಿದ ಶ್ರಮವಾಗಿದೆ ಇದು . - ಕೆಲವೊಂದು ನಾಸ್ತಿಕರು ಪ್ರವಾದಿವರ್ಯರ ಹಾಗೂ ಇಬ್ಬರು ಖಲೀಫರ ಪಾವನ ಶರೀರವನ್ನು ಮದೀನಾದಿಂದ ಈಜಿಪ್ಟಿಗೆ ತರುವಂತೆ ಸಲಹೆಯಿತ್ತರು . ಜಗತ್ತಿನ ನಾನಾ ಭಾಗದ ಜನರು ಇಲ್ಲಿಗೆ ಬರುತ್ತಾರೆ . ಇದರಿಂದ ಉನ್ನತ ಮಟ್ಟದ ಲಾಭಗಳಿಸಬಹುದು . ಈ ಮಾತನ್ನು ಕೇಳಿದಾಗ ರಾಜನಿಗೆ ಸರಿಯೆನಿಸಿತು . ಅದಕ್ಕಾಗಿ ಈಜ್‌ಪ್ತಿನಲ್ಲಿ ಒಂದು ಕಟ್ಟಡವನ್ನು ನಿರ್ಮಿಸಿದನು .ಪಾವನ ಶರೀರವನ್ನು ತರಲು ಅಬ್ದುಲ್ ಫುತೂಹನನ್ನು ಮದೀನಾಗೆ ಕಳುಹಿಸಿದರು . ಅವರ ಜೊತೆ ಹಲವಾರು ಸೈನಿಕರಿದ್ದಾರೆ . ಏನು ಮಾಡುವುದು ? ರಾಜನ ತೀರ್ಮಾನಕ್ಕೆ ಎದುರು ನಿಲ್ಲುವ ತಾಕತ್ತು ಅವರಿಗಿರಲಿಲ್ಲ . ಮದೀನಾಗೆ ಇವರು ತಲುಪಿದಾಗ ವಿಷಯ ಮನದಟ್ಟಾದ ಮದೀನಾ ನಿವಾಸಿಗಳು ಸುತ್ತುವರಿದರು . ಅಲ್ಲಿದ್ದ ಝರ್‌ಬಾನಿ ಎಂಬ ಖಾರಿಅ ಸೂರತು ತೌಬಾದ 12 ಮತ್ತು 13ನೇ ಸೂಕ್ತಗಳನ್ನು ಓದಿದರು . “ ಒಡಂಬಡಿಕೆ ಮಾಡಿಕೊಂಡ ಬಳಿಕ ಅವರು ಪುನಃ ತಮ್ಮ ಶಪಥಗಳನ್ನು ಮುರಿದು ನಿಮ್ಮ ಧರ್ಮವನ್ನು ಆಕ್ಷೇಪಿಸಿದರೆ ಆ ಸತ್ಯ ನಿಷೇಧಿಗಳ ಮುಂದಾಳುಗಳೊಂದಿಗೆ ಯುದ್ದ ಮಾಡಿರಿ. ಏಕೆಂದರೆ , ನಿಜವಾಗಿಯೂ ಅವರಿಗೆ ಯಾವುದೇ ಒಪ್ಪಂದ ಅಸ್ತಿತ್ವದಲ್ಲಿಲ್ಲ . ಅವರು ಸತ್ಯನಿಷೇಧವನ್ನು ವರ್ಜಿಸಲೂಬಹುದು . ” “ ತಮ್ಮ ಒಪ್ಪಂದವನ್ನು ಉಲ್ಲಂಘಸಿದ ಹಾಗೂ ರಸೂಲರನ್ನು ನಾಡಿನಿಂದ ಹೊರ ಹಾಕಲು ಉದ್ದೇಶವಿಟ್ಟ ಜನತೆಯ ವಿರುದ್ದ ನೀವು ಯುದ್ಧ ಮಾಡುವುದಿಲ್ಲವೆ . . . ? ಆರಂಭದಲ್ಲಿ ಯುದ್ಧ ವನ್ನು ಆರಂಭಿಸಿದವರು ಅವರೇ . ನೀವು ಅವರಿಗೆ ಹೆದರುತ್ತೀರಾ . . . ? ನೀವು ಸತ್ಯ ವಿಶ್ವಾಸಿ ಗಳಾಗಿದ್ದರೆ ಭಯಪಡಲು ಹೆಚ್ಚು ಹಕ್ಕುದಾರನು ಅಲ್ಲಾಹನಾಗಿರುವನು . ” ( ಸೂರತು ತೌಬಾ - 12 , 13 ) ಈ ಆಯತನ್ನು ಓದಿದಾಗ ಜನರಲ್ಲಿ ಆವೇಶ ಉಕ್ಕಿ ಬಂತು . ಅಬ್ದುಲ್ ಫುತೂಹ್ ಮತ್ತು ಸೈನಿಕರನ್ನು ಕೊಲ್ಲಲು ಮುಂದಾದರು . ಆದರೆ ಮದೀನಾ ಈಜಿಪ್ತ್ ನ ಆಡಳಿತದ ವ್ಯಾಪ್ತಿಯಲ್ಲಿರುವ ಕಾರಣ ಏನು ಮಾಡಲಾಗಲಿಲ್ಲ . ಈ ಅವಸ್ಥೆಯನ್ನು ಕಂಡಾಗ ಅಬ್ದುಲ್ ಫುತೂಹ್ “ ಹೌದು ಅಲ್ಲಾಹನಿದ್ದಾರೆ ಭಯಪಡಲು ಹೆಚ್ಚು ಹಕ್ಕುದಾರನು . ರಾಜ ಆಜ್ಞೆ ಇದರೂ ಕೂಡ ಈ ಕೆಲಸಕ್ಕೆ ನಾನು ಮುಂದಾಗಲಾರೆ ” ಎಂದನು . ಆದರೆ ಈ ಆಜ್ಞೆಯನ್ನು ಪಾಲಿಸದಿದ್ದರೆ ರಾಜ ಏನು ಮಾಡಿಯಾನು . . ? ಎಂಬ ಹೆದರಿಕೆ ಈತನ ಮನಸಿನಲ್ಲಿತ್ತು . ಮರುದಿನ ಭಯಂಕರ ಗಾಳಿ ಬೀಸಿತು . ಭೂಮಿ ಕಂಪಿಸಿದಂತಾಯಿತು . ಇದರಿಂದ ಸೈನಿಕರಲ್ಲಿ ಬಹುತೇಕ ಮಂದಿ ನಾಶವಾದರು . ಒಂಟೆ ಕುದುರೆಗಳು ಚೆಂಡು ಭೂಮಿಯಲ್ಲಿ ಓಡಾಡುವಂತೆ ಎಲ್ಲೆಲ್ಲೋ ಹೋಗಿ ಬಿದ್ದಿದ್ದವು . ಇದರಿಂದ ಅಬ್ದುಲ್ ಫುತೂಹಿಗೆ ತುಂಬಾ ಸಂತೋಷವಾಯಿತು . ಹೃದಯದಲ್ಲಿದ್ದ ದಿಗಿಲು ಮಾಯವಾಯಿತು . ಕಾರಣ ರಾಜನ ಆಜ್ಞೆಯನ್ನು ಪಾಲಿಸದಿರಲು ಕಾರಣವನ್ನು ಸ್ಪಷ್ಟವಾಗಿ ಹೇಳಬಹುದಾಗಿದೆ . ಶತ್ರುಗಳ ಪಾವನ ಶರೀರ ಕದಿಯಲಿರುವ ಮೊದಲ ಶ್ರಮ ವಿಫಲವಾಯಿತು . 

*ಎರಡನೇ ಶ್ರಮ*
..................................................
           ಇದೇ ದುಷ್ಟ ರಾಜ ಹಾಕಿಮ್ ಬಿಅಮ್ರಿಲ್ಲಾಹಿ ಪ್ರವಾದಿವರ್ಯರ ಖಬ್‌ರನ್ನು ತೊಡಲು ಒಂದು ವಿಭಾಗ ಜನರನ್ನು ಮದೀನಾಕ್ಕೆ ಕಳುಹಿಸಿದ . ಇವರು ಮದೀನಾಗೆ ಬಂದು ಮಸ್ಜಿದುನ್ನಬವಿಯ ಹತ್ತಿರ ವಾಸಿಸತೊಡಗಿದರು . ಜನರಿಗೆ ತಿಳಿಯದಂತೆ ಪ್ರವಾದಿವರ್ಯರ ಪಾವನ ಶರೀರವನ್ನು ಕದ್ದು ಸಾಗಿಸಲು ಖಬ್ರಿಗೆ ನೇರವಾಗಿ ಸುರಂಗವನ್ನು ತೋಡತೊಡಗಿ ದರು . ಸಲ್ಪ ಮುಂದುವರಿದಾಗ ಅವರಿಗೆ ಪ್ರಕಾಶವು ಕಂಡಿತು . ಅಷ್ಟರಲ್ಲಿ ಅಲ್ಲಿ ಜೋರಾಗಿ ಒಂದು ಶಬ್ದದ ಕೇಳಿಸಿತು “ ಓ ಜನರೇ . . . ನಿಮ್ಮ ನೆಬಿಯವರ ಖಬ್ರನ್ನು ತೊಡುತ್ತಿದ್ದಾರೆ ” ಈ ಮಾತನ್ನು ಕೇಳಿದ್ದೇ ತಡ ಜನ ಜಂಗುಳಿ ಅಲ್ಲಿ ಬಂದು ಸೇರಿತು . ಪ್ರವಾದಿವರ್ಯರ ಪಾವನ ಶರೀರವನ್ನು ಕದಿಯಲು ಬಂದ ದುಷ್ಟರನ್ನು ಕೊಂದು ಬಿಟ್ಟರು . ಶತ್ರುಗಳ ಎರಡನೇ ಶ್ರಮ ಕೂಡಾ ವಿಫಲವಾಯಿತು . ಅಲ್ಲಾಹನ್ನು ಪ್ರವಾದಿವರ್ಯರಿಗೆ ಪೂರ್ಣ ಸಂರಕ್ಷಣೆ ನೀಡುತ್ತಾನೆ . ಈ ಎರಡು ಘಟನೆಗಳು ನಡೆದದ್ದು ಹಿಜ್ರಾ 386 ರಿಂದ 411ರ ನಡುವೆಯಾಗಿದೆ.

     *ಮುಂದುವರಿಯುವುದು*