ಮದೀನಾ ಮಹತ್ವ ಇತಿಹಾಸ ಅಧ್ಯಾಯ 31

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 31*🍃
         💜💜💜💜💜💜💜

 ❤️ *ಅಹ್ಲುಸುಪ್ಪ*
 
🌹🌹🌹🌹🌹🌹🌹🌹🌹🌹🌹
            9= ನಬಿಯವರಿಗೆ ಸಲಾಂ ಹೇಳುವುದು;-
          ಮಸೀದಿಗೆ ಪ್ರವೇಶಿಸಿದ ನಂತರ ಪ್ರವಾದಿವರ್ಯರ ಖಬ್ರಿನ ಬಳಿ ತೆರಳಬೇಕು. ಖಬ್ ರಿನ ಗೋಡೆಗೆ ಅಭಿಮುಖವಾಗಿ ನಿಲ್ಲಬೇಕು. ಭಯಭಕ್ತಿಯಿಂದ ವಿನಯಾನ್ವಿತನಾಗಿ ಕೆಳಗೆ ನೋಡುತ್ತಿರಬೇಕು. ಮನದಲ್ಲಿ ಯಾವುದೇ ಐಹಿಕ ಚಿಂತೆಗಳಿರಬಾರದು. ಪ್ರವಾದಿವರ್ಯರ ಪುಣ್ಯ ಸನ್ನಿಧಿಯಲ್ಲಿ ಇದ್ದೇನೆ ಎಂಬ ಪ್ರಜ್ಞೆ ಇರಬೇಕು. ಶಬ್ದ ಎತ್ತದೆ ಮೆತ್ತಗೆ ಸಲಾಂ ಹೇಳಬೇಕು . ಸಲಾಮಿನ ಕನಿಷ್ಠ ರೂಪ ಹೀಗಿದೆ “ ಅಸ್ಸಲಾಮು ಅಲೈಕ ಯಾ ರಸೂಲಲ್ಲಾಹ್ . . . ” ಅಲ್ಲಿಂದ ಒಂದು ಅಡಿಯಷ್ಟು ಬಲಭಾಗಕ್ಕೆ ಹಿಂದೆ ಸರಿದು ಅಬೂಬಕರ್ ಸಿದ್ದೀಕ್(ರ) ರವರಿಗೆ ಸಲಾಂ ಹೇಳಬೇಕು . ನಂತರ ಅದೇರೀತಿ ಉಮರ್ (ರ) ರವರಿಗೆ ಸಲಾಂ ಹೇಳಬೇಕು . 

 10= ಇವುಗಳು ಸಲ್ಲದು . . . !;-       
              ಪ್ರವಾದಿವರ್ಯರಿಗೆ ಸಲಾಂ ಹೇಳಲು ಹೋದಾಗ ಹುಜ್ರತುಶ್ಶರೀಫಿಗಿಂತ ಅಲ್ಪ ದೂರವಾಗಿ ನಿಲ್ಲಬೇಕು . ಹುಜ್ರತುಶ್ಶರೀಫಿನ ಕಿಟಕಿಯನ್ನು ಮುಟ್ಟುವುದು. ಚುಂಬಿಸುವುದು ಮತ್ತು ಅದಕ್ಕೆ ಎದೆ , ಹೊಟ್ಟೆ ಅಥವಾ ಬೆನ್ನು ತಾಗಿಸಿ ನಿಲ್ಲುವುದು ಕರಾಹತ್ತಾಗಿದೆ . ಪ್ರವಾದಿವರ್ಯರ ಜೀವನದಲ್ಲಿ ಎಷ್ಟು ದೂರ ನಿಲ್ಲುತ್ತೇವೆಯೋ ಈಗಲು ಕೂಡ ಅಷ್ಟೇ ದೂರ ನಿಂತು ಸಲಾಂ ಹೇಳಬೇಕು . ಯಾರೋ ಅಜ್ಞಾನಿಗಳು ಹಾಗೆ ಮಾಡಿದರೆ ನಾವು ಅದನ್ನು ಹಿಂಬಾಲಿಸಬಾರದು . 

11= ಜಮಾಅತ್‌ , ಇಅತಿಕಾಫ್ ಮರೆಯದಿರಿ . 
        ಮದೀನಾದಲ್ಲಿ ಎಷ್ಟು ದಿನ ತಂಗುತ್ತೇವೋ ಅಷ್ಟು ದಿನ ಎಲ್ಲಾ ಫರ್‌ಳ್ ನಮಾಝ್ ಮಸೀದಿಯಲ್ಲಿ ಜಮಾಅತ್ತಾಗಿ ನಿರ್ವಹಿಸಲು ಶ್ರಮಿಸಬೇಕು . ಮಸೀದಿಯ ಒಳಗೆ ಹೋದಾಗಲೆಲ್ಲಾ ಇಅತಿಕಾಫಿನ ಸಂಕಲ್ಪ ಮಾಡಬೇಕು . ಕಾರಣ ಅಲ್ಲಿ ನಿರ್ವಹಿಸಲ್ಪಡುವ ನಮಾಝ್ ಹಾಗೂ ಇಅತಿಕಾಫಿಗೆ ದುಪ್ಪಟ್ಟು ಪುಣ್ಯ ಲಭ್ಯವಿದೆ . ಈ ಪುಣ್ಯಗಳನ್ನು ಬೇರೆ ಮಸೀದಿಗಳಲ್ಲಿ ಸಂಪಾದಿಸಲು ಸಾಧ್ಯವಾಗದು . 

12= ಜೋರಾಗಿ ಮಾತನಾಡುವುದು ಸಲ್ಲದು ;
          ಮಸ್ಜಿದುನ್ನಬವಿಯಲ್ಲಿ ಹಾಗೂ ಪ್ರವಾದಿವರ್ಯರ ಖಬ್ರಿನ ಸಮೀಪ ಶಬ್ದ ಎತ್ತಿ ಮಾತನಾಡುವುದು ಸಲ್ಲದು . ನಮಾಜ್ ಮಾಡುವಾಗಲೂ ಖುರ್‌ಆನ್ ಪಾರಾಯಣ ನಡೆಸುವಾಗಲೂ ಮತ್ತು ದ್ವಿಕ್ಸ್ ಹೇಳುವಾಗಲೂ ಶಬ್ದ ಎತ್ತಿ ಹೇಳಬಾರದು . ಪವಿತ್ರ ಖುರ್ ಆನ್ ಹೇಳುದನ್ನು ನೋಡಿ “ ಸತ್ಯ ವಿಶ್ವಾಸಿಗಳೇ ನಿಮ್ಮ ಧ್ವನಿಗಳನ್ನು ಪ್ರವಾದಿವರ್ಯರ ಧ್ವನಿಗಿಂತ ಎತ್ತರಿಸಬೇಡಿರಿ ! ನೀವು ಪರಸ್ಪರ ಸ್ವರವೆತ್ತಿ ಮಾತನಾಡುವಂತೆ ಪ್ರವಾದಿವರ್ಯರೊಡನೆ ಉಚ್ಚ ಸ್ವರದಲ್ಲಿ ಮಾತನಾಡಬೇಡಿರಿ . ನಿಮಗೆ ಅರಿವೇ ಇಲ್ಲದಂತೆ ನಿಮ್ಮ ಸುಕೃತಿಗಳು ನಿಷ್ಟಲ ವಾಗುವ ಅಪಾಯವಿರುದರಿಂದ ( ಈ ಆದೇಶ ) ” - “ ಅಲ್ಲಾಹನ ದೂತರ ಸನ್ನಿಧಿಯಲ್ಲಿ ತಮ್ಮ ಧ್ವನಿಯನ್ನು ತಗ್ಗಿಸಿ ಕೊಳ್ಳುವವರಾರೋ ಅವರ ಹೃದಯಗಳನ್ನು ಅಲ್ಲಾಹನು ತಾಗೆ ( ಭಯಭಕ್ತಿಗೆ ) ಪರೀಕ್ಷಿಸಿ ತೆಗೆದಿರುವನು . ಅವರಿಗೆ ಪಾಪಮುಕ್ತಿಯೂ ಘನವೆತ್ತ ಪ್ರತಿಫಲವೂ ಇದೆ ” (ಅಲ್ ಹುಜರಾತ್ 2,3) ಖರ್‌ಆನಿನ ಈ ಆದೇಶ ಮರಣದ ನಂತರ ಕೂಡಾ ಇದೆ ಎಂಬುವುದನ್ನು ಮರೆ ಯರಬಾರದು . 

13= ಬಾಂಗಿನ ನಂತರ ಹೊರಬರಬೇಡಿರಿ . . .  
           ಮದೀನಾದ ಮಸ್ಜಿದುನ್ನಬವಿಯಲ್ಲಿರುವಾಗ ಬಾಂಗ್ ಆದರೆ ಆ ನಮಾಜನ್ನು ಮುಗಿಸಿದ ನಂತರವೇ ಹೊರಬರಬೇಕು . ಯಾವುದೇ ಅಗತ್ಯವಿಲ್ಲದೆ ಹೊರಬಂದರೆ ಆತನ ಕಪಟ ವಿಶ್ವಾಸಿಯಾಗುವನು ಎಂದು ಪ್ರವಾದಿವರ್ಯರು ಎಚ್ಚರಿಕೆ ನೀಡಿದ್ದಾರೆ . ಅಬೂಹುರೈರಾ ( ರ ) ರವರಿಂದ ವರದಿ “ ನನ್ನ ಈ ಮಸೀದಿಯ ಬಾಂಗನ್ನು ಕೇಳಿ ಅನಗತ್ಯವಾಗಿ ಹೊರಹೋದರೆ ಕಪಟ ವಿಶ್ವಾಸಿಯಾಗಿಯಲ್ಲದೆ ಮರಳುವುದಿಲ್ಲ ”.

14= ಮಸ್ಜಿದುಲ್ ಖುಬಾಇನ ಸಂದರ್ಶಣ
       ಮದೀನಾಗೆ ಹೋದವರಿಗೆ ಮಸ್ಜಿದುಲ್ ಖುಬಾಅನ್ನು ಸಂದರ್ಶಿಸುವುದು ಹಾಗೂ ಅದರಲ್ಲಿ ಎರಡು ರಕಅತ್ ನಮಾಜ್ ಮಾಡುವುದು ಪ್ರತ್ಯೇಕ ಸುನ್ನತಿದೆ . ಈ ಮಸೀದಿಗೆ ಶನಿವಾರ ಹೋಗುವುದು ಉತ್ತಮವಾಗಿದೆ . ಯಾಕೆಂದರೆ ಪ್ರವಾದಿವರ್ಯರು ಎಲ್ಲ ಶನಿವಾರ ಈ ಮಸೀದಿಗೆ ಹೋಗಿ ನಮಾಜ್ ಮಾಡಿ ಬರುತ್ತಿದ್ದರು . ತಖ್ವಾದ ಮೇಲೆ ಸ್ಥಾಪಿಸಲ್ಪಟ್ಟ ಮಸೀದಿ ಇದಾಗಿದೆ ಎಂಬ ಅಭಿಪ್ರಾಯ ಕೂಡಾ ಇದೆ . 

15= ಬಕೀಅ , ಉಹ್ದ್ ಸಂದರ್ಶಣ
         ಮದೀನಾಗೆ ಹೋದವರು ಎಲ್ಲಾ ದಿನ ಬಕೀಅ ಗೆ ಹೋಗಿ ಝಿಯಾರತ್ ಮಾಡಬೇಕು . ಮದೀನಾ ಪ್ರತ್ಯೇಕವಾಗಿ ಜುಮುಅ ದಿನದಂದು , ಪ್ರವಾದಿವರ್ಯರಿಗೆ ಸಲಾಂ ಹೇಳಿದ ನಂತರವಾಗಿದೆ ಇದನ್ನು ಮಾಡಬೇಕಾದುದು . “ ಪ್ರವಾದಿವರ್ಯರು ಬಕೀಅ ಗೆ ಹೋಗಿ ಅಲ್ಲಿ ಪ್ರಾರ್ಥನೆ ನಡೆಸುತ್ತಿದ್ದರು ಎಂದು ಆಯಿಶಾ ( ರ ) ರವರು ವರದಿ ಮಾಡಿದ್ದಾರೆ . ಉಹ್ದ್ ಯುದ್ಧದಲ್ಲಿ ರಕ್ತಸಾಕ್ಷಿಗಳಾದ ಶುಹದಾಗಳನ್ನು ಝಿಯಾರತ್ ಮಾಡುವುದು ಪತ್ಯೇಕ ಸುನ್ನತ್ತಿದೆ . ಇದು ಗುರುವಾರವಾಗಿರುವುದು ಉತ್ತಮ . ಝಿಯಾರತ್ ಮಾಡುವಾಗ ಮೊದಲು ಹಂಝ ( ರ ) ರದಿಂದ ಪ್ರಾರಂಭಿಸಬೇಕು . ಮದುನ್ನಬವಿಯಲ್ಲಿ ಸುಬ್ಹಿ ನಮಾಝ್ ನಿರ್ವಹಿಸಿ ಹೊರಬರಬೇಕು . ಉಹ್ದ ನಲ್ಲಿ ಳುಹ್ರ್ ನಮಾಝನ್ನು ಜಮಾಅತ್ತಾಗಿ ನಿರ್ವಹಿಸಬೇಕು . 

*ಅಹ್ಲುಸುಪ್ಪ*
........,.,..................................
...............
              ಇಸ್ಲಾಮೀ ಧಾರ್ಮಿಕ ಜ್ಞಾನದ ಕೇಂದ್ರಗಳಾದ ದರ್ಸಿನ ಮೂಲ ಮದೀನಾ . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮದೀನಾದಲ್ಲಿ ಪ್ರಾರಂಭಿಸಿದ ಈ ದರ್ಸ್ ಪರಂಪರೆ ಇಂದಿಗೂ ಮುಂದುವರಿದಿದೆ . ಇಲ್ಲಿ ಕಲಿಯುತ್ತಿರುವ ಸ್ವಹಾಬಿಗಳಿಗೆ ಅಹ್ಲುಸುಪ್ಪ ಎಂದು ಕರೆಯುತ್ತಾರೆ . ಅಸ್ಸುಫ್ಫ ಎಂದರೆ ಮಸ್ಜಿದುನ್ನಬವಿಯ ಹಿಂಭಾಗದಲ್ಲಿರುವ ಒಂದು ಸ್ಥಳವಾಗಿದೆ . ಕುಟುಂಬಸ್ಥರು , ಮನೆ - ಮಠ ಇಲ್ಲದವರು ಇಲ್ಲಿ ಜೀವಿಸುತ್ತಿದ್ದರು . ಅವರು ಪ್ರವಾದಿವರ್ಯ ರಿಂದ ಪವಿತ್ರ ಇಸ್ಲಾಮಿನ ಸುಂದರ ಸಂದೇಶಗಳನ್ನು ಕಲಿಯುತ್ತಿದ್ದರು . ಇವರ ಸಂಖ್ಯೆ ಹೆಚ್ಚು ಕಡಿಮೆಯಾಗುತಿತ್ತು . ಅವರಲ್ಲಿ ಯಾರದರೂ ಮರಣ ಹೊಂದಿದರೆ , ಮದುವೆಯಾದರೆ ಅಥವಾ ಬೇರೆಡೆಗೆ ಯಾತ್ರೆ ಹೋದರೆ ಸಂಖ್ಯೆಯಲ್ಲಿ ಹೆಚ್ಚು ಕಡಿಮೆಯಾಗುತ್ತಿತ್ತು . - ಇಲ್ಲಿ ಬಂದು ಕಲಿತು ಮರಳಿ ಹೋಗುತ್ತಿದ್ದ ಸ್ವಹಾಬಿಗಳು ತನ್ನ ಗೋತ್ರದ ಜನರಿಗೆ ಇಸ್ಲಾಮಿನ ಧಾರ್ಮಿಕ ನಿಯಮಗಳನ್ನು ಕಲಿಸುತ್ತಿದ್ದರು . ಎಲ್ಲರಿಗೂ ಮಸೀದಿಗೆ ಬಂದು ಕಲಿಯುವ ಸೌಕರ್ಯವಿರಲಿಲ್ಲ . ಅವರು ದೈನಂದಿನ ಬದುಕಿಗಾಗಿ ದುಡಿಯುವುದರಿಂದ ಮಸೀದಿಗೆ ಬಂದು ಕಲಿಯಲು ಸಮಯ ಸಾಕಾಗುತ್ತಿರಲಿಲ್ಲ . ಆದ್ದರಿಂದ ಅಹ್ಲು ಸುಫ್ಫದವರು ಅವರಿಗೆ ಕಲಿಸುತ್ತಿದ್ದರು . - ಇವರಲ್ಲಿ ಅತೀ ಹೆಚ್ಚಿನ ಜನರು ಮಕ್ಕಾದಿಂದ ಹಿಜ್ರಾ ಬಂದವರಾಗಿದ್ದಾರೆ . ಇವರಲ್ಲಿ ಹೆಚ್ಚಿನವರಿಗೆ ಮನೆ - ಮಠ , ಆಸ್ತಿ - ಪಾಸ್ತಿ ಕುಟುಂಬಿಕರು ಹೀಗೆ ಏನೂ ಇರಲಿಲ್ಲ . ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರ್ಮಿಸಲಾದ ವಸತಿ ಶಾಲೆ ಕೂಡಾ ಆಗಿತ್ತು . ಆದರೆ ಎಷ್ಟೇ ಹಸಿವು ಸಹಿಸಬೇಕಾಗಿ ಬಂದರೂ ಯಾರಲ್ಲಿ ಕೂಡಾ ಕಾಡಿಬೇಡುತ್ತಿರಲಿಲ್ಲ . ಸ್ವಾಭಿಮಾನದಿಂದ ಬದುಕು ತಿದ್ದರು . ಇವರ ಬಗ್ಗೆ ಪವಿತ್ರ ಖುರ್ ಆನ್ ಹೇಳುವುದನ್ನು ನೋಡಿ “ ಅಲ್ಲಾಹನ ಮಾರ್ಗದಲ್ಲಿ ಬಂಧಿತರಾದ ಬಡವರಿಗೆ ದಾನವು ಸಂದಾಯವಾಗಲಿ , ಜೀವನಾಧಾರಕ್ಕಾಗಿ ಹೊರಗಿಲಿಯಲು ಅವರಿಗೆ ಸಾಧ್ಯವಾಗುತ್ತಿಲ್ಲ . ಅವರ ಸ್ವಾಭಿಮಾನದಿಂದಾಗಿ ಅವರ ಸ್ಥಿತಿಗೊತ್ತಿಲ್ಲದವರು ಅವರನ್ನು
ಸ್ಥಿತಿವಂತರೆಂದು ಭಾವಿಸುತ್ತಾರೆ . ಅವರು ಯಾರೆಂದು ಕುರುಹುಗಳಿಂದ ನಿಮಗೆ ತಿಳಿಯಬಹುದಾಗಿದೆ . ಜನರಲ್ಲಿ ಅವರೆಂದಿಗೂ ಕಾಡಿ ಬೇಡುವವರಲ್ಲ . ನೀವಿತ್ತ ದಾನವನ್ನು ಖಂಡಿತಾ ಅಲ್ಲಾಹನು ಅರಿತುಕೊಳ್ಳುತ್ತಾನೆ . ( ಅಲ್ ಬಕರ - 273 ) ಇವರಿಗೆ ಮನೆ - ಮಠ , ಆಸ್ತಿ - ಪಾಸ್ತಿಗಳೇನು ಇಲ್ಲದ ಕಾರಣ ಅಲ್ಲಾಹನು ಇವರಿಗೆ ಹೆಚ್ಚಾಗಿ ದಾನ ಮಾಡಲು ಪ್ರೇರಣೆ ನೀಡುತ್ತಾನೆ ಎಂದು ವಿದ್ವಾಂಸರು ವ್ಯಾಖ್ಯಾನದಲ್ಲಿ ಸ್ಪಷ್ಟ ಪಡಿಸಿದ್ದಾರೆ . ಅಹ್ಲುಸುಫ್ಫದವರು ಸಹಿಸಿದ ತ್ಯಾಗ , ಪಟ್ಟ ಪಾಡು , ಅನುಭವಿಸಿದ ಸಂಕಷ್ಟಗಳು ಅಷ್ಟಿಷ್ಟಲ್ಲ . ಅವರ ಬದುಕಿನ ದಯನೀಯ ಅವಸ್ಥೆ ಹೇಗಿತ್ತೆಂದರೆ ಅಬೂಬಕರ್ ಸಿದ್ದೀಖ್ ( ರ ) ರವರು ಹೇಳುತ್ತಾರೆ “ ನಾನು 70ರಷ್ಟು ಸುಫ್ಫಾದ ಜನರನ್ನು ಕಂಡಿದ್ದೇನೆ . ಅವರಲ್ಲಿ ಯಾರಿಗೂ ಸರಿಯಾದ ಮೇಲಂಗಿ , ಲುಂಗಿ ಏನೂ ಇರಲಿಲ್ಲ . ಒಂದು ವಸ್ತ್ರವನ್ನು ಉಡುತ್ತಿದ್ದರು . ಕೆಲವರ ಆ ವಸ್ತ್ರ ಮಣಿಗಂಟಿನ ತನಕವಿದ್ದರೆ ಇನ್ನೂ ಕೆಲವರದ್ದು ಅದಕ್ಕಿಂತ ಮೇಲೆ ಇತ್ತು . ಗೌಪ್ಯ ಭಾಗ ಬೇರೆಯವರಿಗೆ ದರ್ಶನವಾಗದಿರಲಿ ಅಂತ ವಸ್ತವನ್ನು ಗಟ್ಟಿಯಾಗಿ ಹಿಡಿಯುತ್ತಿದ್ದರು ” ಅಹ್ ಸುಫ್ಫಾದಲ್ಲಿದ್ದ ಪ್ರಮುಖ ಸ್ವಹಾಬಿಗಳು 
1-ಅಬೂ ಹುರೈರಾ ( ರ )
2- ಅಬೂದ್ಸರ್ರುಲ್‌ ಗಿಫ್ರಾರಿ ( ರ ) 
3-ಕಅಬ್ ಬಿನ್ ಮಾಲಿಕ್ ( ರ )
4-ಸಲ್ಮಾನುಲ್ ಫಾರಿಸಿ ( ರ ) 
5 -ಹನ್ಳಲತ್ ಬಿನ್ ಅಬೀ ಆಮಿರ್ ( ರ )
6- ಹಾರಿಸ್ ಬಿನ್ ನುಅಮಾನ್ ( ರ ) 
7- ಹುದ್ಸೈಫತುಲ್ ಯಮಾನಿ ( ರ ) 
8- ಅಬ್ದುಲ್ಲಾಹಿ ಬಿನ್ ಮಸ್ ಊದ್ ( ರ ) 
9- ಸುಹೈಬ್ ಬಿನ್ ಸಿನಾನ್ ( ರ ) 
10- ಸಾಲಿಮಾ ( ರ ) 
11- ಬಿಲಾಲು ಬಿನ್ ರಬಾಅ ( ರ ) 
12- ಸಅದ್ ಬಿನ್ ಮಾಲಿಕ್ ( ರ )

     *ಮುಂದುವರಿಯುವುದು*