ಮದೀನಾ ಮಹತ್ವ ಇತಿಹಾಸ ಅಧ್ಯಾಯ 29

https://chat.whatsapp.com/DjCbCGNiyBW7StPEIOqUnO


🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 29*🍃
         💜💜💜💜💜💜💜

 ❤️ *ಮಸ್ಜಿದುನ್ನಬವಿಯ ಮಹತ್ವ* 
🌹🌹🌹🌹🌹🌹🌹🌹🌹🌹🌹
              ಮಸ್ಜಿದುನ್ನಬವಿ ಪ್ರವಾದಿವರ್ಯರ ಮಸೀದಿ . ಇದರ ನಿರ್ಮಾಣ ಪ್ರಕ್ರಿಯೆಯಲ್ಲಿ ಪ್ರವಾದಿವ ರ್ಯರು ನೇರವಾಗಿ ಭಾಗವಹಿಸಿದ್ದಾರೆ. ಕಲ್ಲುಗಳನ್ನು ಸ್ವಹಾಬಿಗಳ ಜೊತೆ ಹೊತ್ತು ತಂದಿದ್ದಾರೆ. ಈ ಮಸೀದಿಗೆ ಹಲವಾರು ಮಹತ್ವಗಳಿವೆ. ಮನಸ್ಸಿನಲ್ಲಿ ಮದೀನಾದ ಬಗ್ಗೆ ಪ್ರೇಮ ಹಾಗೂ ಭಕ್ತಿ ಹೆಚ್ಚಲು ಇದನ್ನು ಮನದಟ್ಟು ಮಾಡಬೇಕಾದ ಅಗತ್ಯ

 1= ತಖ್ವಾದ ಮೇಲೆ ಸ್ಥಾಪಿಸಲ್ಪಟ್ಟಿದ್ದು . . -           
          .ಮದೀನಾದ ಮಸ್ಜಿದುನ್ನಬವಿ ತಖ್ವಾದ ಮೇಲೆ ಸ್ಥಾಪಿಸಲ್ಪಟ್ಟ ಮಸೀದಿ. ಇದನ್ನು ಖುರ್‌ಆನ್ ಹೇಳುವುದನ್ನು ನೋಡಿ . . . ಮೊದಲ ದಿನವೇ ಭಕ್ತಿಯ ಮೇಲೆ ಅಸ್ಥಿವಾರ ಹಾಕಲಾದ ಮಸೀದಿಯೇ ತಾವು ನಮಾಜ್ ಮಾಡಲು ಯೋಗ್ಯವಾದುದು. ಪರಿಶುದ್ಧತೆಯನ್ನು ಇಷ್ಟಪಡುವ ಪುರುಷರು ಆ ಮಸೀದಿಯಲ್ಲಿರುತ್ತಾರೆ. ( ತೌಬಾ - 108 ) ಖರ್‌ಆನಿನಲ್ಲಿ ಪ್ರಸ್ತಾಪಿಸಲ್ಪಟ್ಟ ಈ ಮಸೀದಿ ಯಾವುದು ? ಹಲವಾರು ಅಭಿಪ್ರಾಯಗಳಿ ದ್ದರೂ 'ಮಸ್ಜಿದುನ್ನಬವಿ' ಕೂಡಾ ಒಂದಾಗಿದೆ. ಇಮಾಂ ಮುಸ್ಲಿಂ (ರ) ರವರಿಂದ ವರದಿ ; ಅಬೂ ಸಈದಿಲ್ ಖದ್ರಿ ( ರ ) ರವರು ಹೇಳುತ್ತಾರೆ “ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲ ಮರು ಪತ್ನಿಯರ ಮನೆಯಲ್ಲಿದ್ದಾಗ ನಾನು ಅವರ ಹತ್ತಿರ ಹೋಗಿ ಕೇಳಿದೆ “ ಓ ಅಲ್ಲಾಹನ ರಸೂಲರೆ . . . ತಖ್ವಾದ ಮೇಲೆ ಸ್ಥಾಪಿಸಲ್ಪಟ್ಟ ಮಸೀದಿ ಯಾವುದು ? ಕಲ್ಲುಗಳ ರಾಶಿಯನ್ನು ತೆಗೆದು ನೆಲದಲ್ಲಿ ಇಟ್ಟ ನಂತರ ಹೇಳಿದರು ' ಮದೀನಾದ ನಿಮ್ಮ ಮಸೀದಿಯಾಗಿದೆ ' ( ಮುಸ್ಲಿಂ ) ನಮಾಝ್ ಮಾಡಿದರೆ ದುಪ್ಪಟು ಪುಣ್ಯ ಲಭಿಸುವ ಮಸೀದಿಯಾಗಿದೆ ಇದು. “ಇದರಲ್ಲಿ ಇರುವುದು ಪುರುಷರು ಮಾತ್ರ ” ಎಂದು ಖುರ್‌ಆನ್ ಹೇಳುತ್ತಿದ್ದರೆ ಸ್ತ್ರೀಯರನ್ನು ಮಸೀದಿಗೆ ಕರೆತರಬೇಕು ' ಎಂದು ಹಠ ಹಿಡಿಯುವ ನವೀನವಾದಿಗಳ ವಿವೇಕಕ್ಕೆ ಮಂಕು ಕವಿದಿದೆ ಎನ್ನದೆ ನಿರ್ವಾಹವಿಲ್ಲ. 

2= ಸತ್ಕರ್ಮಗಳಿಗೆ ದುಪ್ಪಟ್ಟು ಪುಣ್ಯ : - 
          ಮಸ್ಜಿದುನ್ನಬವಿಯ ಮತ್ತೊಂದು ವಿಶೇಷತೆಯಾಗಿದೆ ಈ ಮಸೀದಿಯಲ್ಲಿ ನಿರ್ವಹಿಸಲ್ಪಟ್ಟ ಸತ್ಕರ್ಮಗಳಿಗೆ ದುಪ್ಪಟ್ಟು ಪುಣ್ಯ ಲಭಿಸುತ್ತದೆ. ಒಬ್ಬನು ಇತರ ಮಸೀದಿಯಲ್ಲಿ ಸಾವಿರ ರಕ್ ಅತ್ ನಮಾಝ್ ನಿರ್ವಹಿಸುವುದಕ್ಕಿಂತ ಈ ಮಸೀದಿಯಲ್ಲಿ ಎರಡು ರಕ್‌ಅತ್ ನಮಾಝ್ ನಿರ್ವಹಿಸುವುದು ಅತ್ಯಂತ ಶ್ರೇಷ್ಟವಾಗಿದೆ. ಅಬೂಹುರೈರಾ (ರ) ರವರಿಂದ ವರದಿ ; “ ನನ್ನ ಈ ಮಸೀದಿಯಲ್ಲಿ ನಿರ್ವಹಿಸಲ್ಪಡುವ ಒಂದು ನಮಾಝ್ ಮಸ್ಜಿದುಲ್ ಹರಾಂ ಅಲ್ಲದ ಇತರ ಮಸೀದಿಯಲ್ಲಿ ನಿರ್ವಹಿಸಲ್ಪಡುವ ಸಾವಿರ ನಮಾಝ್ಗಿಂತ ಶ್ರೇಷ್ಠವಾಗಿದೆ. ( ಬುಖಾರಿ ) ಈ ಮಸೀದಿಯಲ್ಲಿ ನಿರ್ವಹಿಸಲ್ಪಡುವ ನಮಾಝಿನ ಸುಜೂದ್ , ರುಕೂಅ್ ಮುಂತಾದವುಗಳಿಗೆ ಸಾವಿರ ರುಕೂಅ್ ಸುಜೂದಿನ ಪ್ರತಿಫಲ ಲಭಿಸುತ್ತದೆ ಎಂದು ಈ ಹದೀಸಿನ ವ್ಯಾಖ್ಯಾನದಲ್ಲಿ ವಿದ್ವಾಂಸರು ಹೇಳಿದ್ದಾರೆ.

 3=ಮದುನ್ನಬವಿಗೆ ಯಾತ್ರೆ :-
             ಕೇವಲ ನಮಾಜ್ ಮಾಡಲು ಬೇಕಾಗಿ ಯಾತ್ರೆ ಹೋಗಲು ಪ್ರೇರಣೆ ನೀಡಲ್ಪಟ್ಟ ಮಸೀದಿಗಳಲ್ಲಿ ಒಂದಾಗಿದೆ ಮಸ್ಜಿದುನ್ನಬವಿ. ಅಬೂ ಹುರೈರಾ(ರ) ರವರಿಂದ ವರದಿ ; ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ “ ಮೂರು ಮಸೀದಿಗಳಲ್ಲದೆ ವಾಹನ ಸೌಕರ್ಯ ಏರ್ಪಡಿಸಬಾರದು . ನನ್ನ ಈ ಮಸೀದಿ , ಮಸ್ಜಿದುಲ್ ಹರಾಂ ಹಾಗೂ ಮಸ್ಚಿದುಲ್ ಅಕ್ಸ್ವಾ ( ಅಹ್ಮದ್ ) ಕಅ್ ಬ್ (ರ) ರವರು ಹೇಳುತ್ತಾರೆ ; ಳುಹಾ ಸಮಯದಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಯಾತ್ರೆಯಿಂದ ಹಿಂತಿರುಗಿದರೆ ನೇರವಾಗಿ ಮಸ್ಜಿದುನ್ನಬವಿಗೆ ಬರುತಿದ್ದರು . ಅಲ್ಲಿ ಎರಡು ರಕ್ಅತ್ ನಮಾಝ್ ಮಾಡಿ ಅಲ್ಪ ಸಮಯ ಕೂರುತಿದ್ದರು . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ ; ' ನನ್ನ ಮಸೀದಿಗೆ ನಮಾಝ್ ಮಾಡಲು ಮಾತ್ರ ಒಬ್ಬ ಪೂರ್ಣ ಶುದ್ದಿಯೊಂದಿಗೆ ಬಂದರೆ ಆತನಿಗೆ ಹಜ್‌ನ ಪ್ರತಿಫಲ ಲಭಿಸುತ್ತದೆ. 

4= ಮದುನ್ನಬವಿಯ ಮುತಅಲ್ಲಿಮ್ ಮತ್ತು ಮುಅದ್ವಿನ್ :-
         ಮಸ್ಜಿದುನ್ನಬವಿಯ ಮಹತ್ವ ಅದಕ್ಕೆ ಮಾತ್ರ ಸೀಮಿತವಲ್ಲ. ಅಲ್ಲಿ ಹೋದವರಿಗೆ ಕೂಡಾ ಲಭಿಸುತ್ತದೆ. ಪ್ರತ್ಯೇಕವಾಗಿ ಅಲ್ಲಿ ಕಲಿಯುವ ಮುತಅಲ್ಲಿಮರಿಗೆ ಹಾಗೂ ಬಾಂಗ್ ಕೊಡುವ ಮುಅದ್ಸಿನ್‌ಗಳಿಗೆ ವಿಶೇಷ ಮಹತ್ವವಿದೆ. ಮಸೀದಿಯಲ್ಲಿ ಬಾಂಗ್ ಕೊಡುವ ಮುಅದ್ಸಿನ್‌ಗಳ ಮಹತ್ವದ ಕುರಿತು ಜಾಬಿರ್ ಬಿನ್ ಅಬ್ದುಲ್ಲಾಹಿ(ರ) ರವರು ವರದಿ ಮಾಡಿದ ಹದೀಸ್ ಹೀಗಿದೆ . “  ಸ್ವರ್ಗಾಕೆ ಮೊದಲು ಪ್ರವೇಶಿಸುವವರು ಯಾರು ? ಎಂದು ಪ್ರವಾದಿವರ್ಯರಲ್ಲಿ ಕೇಳಲಾಯಿತು . ಆಗ ನಬಿಯವರು ಹೇಳುತ್ತಾರೆ “ ಅಂಬಿಯಾಗಳು , ಶುಹದಾಗಳು ಮತ್ತು ಮುಅದ್ಸಿನ್‌ಗಳು . ಇದರಲ್ಲಿ ಮೊದಲು ಕಅ್‌ಬಾಲ ಯ , ಬೈತುಲ್ ಮುಖದ್ದಸ್ ಹಾಗೂ ನನ್ನ ಮಸೀದಿಯ ಮುಅದ್ಸಿನ್‌ಗಳಾಗಿದ್ದಾರೆ . ನಂತರ ಇತರ ಜನರು ತಮ್ಮ ಸತ್ಕರ್ಮಗಳ ಅನುಸಾರವಾಗಿ ಪ್ರವೇಶಿಸುವರು. ಮದೀನಾದ ಮಸೀದಿಯಲ್ಲಿ ಕಲಿಯುವ ಮುತಅಲ್ಲಿಮರ ಕುರಿತು ಅಬೂ ಹುರೈರಾ(ರ) ರವರು ವರದಿ ಮಾಡಿದ ಹದೀಸ್ ಹೀಗಿದೆ “ ಪ್ರವಾದಿವರ್ಯರು ಹೇಳಿರುವುದಾಗಿ ನಾನು ಕೇಳಿದ್ದೇನೆ . ಈ ಮಸೀದಿಗೆ ಕಲಿಯಲೋ ಅಥವಾ ಕಲಿಸಲೋ ಯಾರಾದರೂ ಬಂದರೆ ಆತನಿಗೆ ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವವರ ಸ್ಥಾನ ಲಭಿಸುತ್ತದೆ. ಬೇರೆ ಉದ್ದೇಶಕ್ಕಾಗಿ ಬಂದವನಾದರೆ ಆತನು ಇನ್ನೊಬ್ಬನ ಸರಕುಗಳನ್ನು ನೋಡುವುವವನಂತೆ ಸರಿ ( ಇಬ್ನ್ ಮಾಜಃ )

     *ಮುಂದುವರಿಯುವುದು*

https://chat.whatsapp.com/DjCbCGNiyBW7StPEIOqUnO