ಮದೀನಾ ಮಹತ್ವ ಇತಿಹಾಸ ಅಧ್ಯಾಯ 28

https://chat.whatsapp.com/DjCbCGNiyBW7StPEIOqUnO

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 28*🍃
         💜💜💜💜💜💜💜

 ❤️ *ಈ ಪವಿತ್ರ ಕಟ್ಟಡದ ಬಗ್ಗೆ ಗೊತ್ತಿರಲಿ . . .*
 ❤️ *ಹಸಿರು ಖಬ್ಬ . . .*
🌹🌹🌹🌹🌹🌹🌹🌹🌹🌹🌹
               ಪ್ರವಾದಿವರ್ಯರ ಪಾವನ ಶರೀರ ಧಪನು ಮಾಡಲ್ಪಟ್ಟ ಹುಜ್ರತುಶ್ಶರೀಫ್ ಸಾಕ್ಷಾತ್ ಆಯಿಷಾ(ರ) ರವರ ಮನೆ . ಇದನ್ನು ಖರ್ಜೂರದ ಗರಿಗಳಿಂದ ನಿರ್ಮಿಸಲಾಗಿತ್ತು . ಅದರ ಬಾಗಿಲು ಮಾತ್ರ ಮರದ್ದು . ಉಮರ್ ( ರ ) ರವರ ಆಡಳಿತದ ತನಕ ಈ ಹುಜ್ರತುಶ್ಶರೀಫ್ ಇದೇ ರೀತಿ ಇತ್ತು. ಉಮರ್(ರ) ರವರು ಖಿಲಾಫತ್ ಆಡಳಿತ ಚುಕ್ಕಾಣಿ ಹಿಡಿದಾಗ ಖರ್ಜೂರದ ಗರಿಗಳಿಂದ ನಿರ್ಮಿಸಲಾದ ಗೋಡೆಗಳನ್ನು ಬದಲಾಯಿಸಿ ಇಟ್ಟಿಗೆಯಿಂದ ನಿರ್ಮಿಸಿದರು. ನಂತರ ಅಬ್ದುಲಾಹಿ ಬಿನ್ ಝುಬೈರ್(ರ) ರವರು ಕಲ್ಲಿನಿಂದ ಹುಜ್ರತುಶ್ಶರೀಫಿನ ಗೋಡೆಯನ್ನು ನಿರ್ಮಿಸಿದರು. '5ನೇ ಖಲೀಫ ' ಎಂದು ಖ್ಯಾತರಾದ ಉಮರ್ ಬಿನ್ ಅಬ್ದುಲ್ ಅಝೀಝ್(ರ) ರವರು ಮದೀನಾದ ಆಡಳಿತವನ್ನು ವಹಿಸಿದಾಗ ಉತ್ತಮ ಕಪ್ಪುಕಲ್ಲಿನಿಂದ ಹುಜ್ರತುಶ್ಶರೀಫಿನ ಗೋಡೆಗಳನ್ನು ನಿರ್ಮಿಸಿದರು . ಈ ಮೂರು ಖಬೃಗಳಿರುವ ಗೋಡೆಯನ್ನು ನಿರ್ಮಿಸಿದ್ದು ಪಂಚಾಕೃತಿಯಲ್ಲಾಗಿದೆ. ಇದರ ಮೇಲೆ ಹೊದಿಸಲಾಗುವ ಬಟ್ಟೆ ಕೂಡಾ ಇದೇ ಆಕೃತಿಯಲ್ಲಿದೆ. ಇದನ್ನು ಪಂಚಾಕೃತಿಯಲ್ಲಿ ನಿರ್ಮಿಸಲು ಪ್ರಮುಖ ಕಾರಣವೆಂದರೆ ' ಪವಿತ್ರ ಕಅ್‌ಬಾಲಯದಂತೆ ಚೌಕಾಕೃತಿಯಲ್ಲಿ ನಿರ್ಮಿಸಿದರೆ ಇದನ್ನು ಕಅ್ಬಾ ಎಂದು ಭಾವಿಸಿ ಜನರು ಅದಕ್ಕೆ ತಿರುಗಿ ನಮಾಝ್ ಮಾಡಿದರೆ ' ಎಂಬ ಭಯವಾಗಿತ್ತು . ಈ ಪಂಚಾಕೃತಿಯ ಕಟ್ಟಡದ ಹೊರಗೆ ಒಂದು ಕಟ್ಟಡ ನಿರ್ಮಿಸಲಾಗಿದೆ . ಇದುವೇ ಪವಿತ್ರ ಕಟ್ಟಡ. ಇದಕ್ಕೆ ಇಂದು ಹುಜ್ರತುಶ್ಶರೀಫ್ ಎಂದು ಕರೆಯಲಾಗಿದೆ. ಈ ಕಟ್ಟಡದ ನಾಲ್ಕು ದಿಕ್ಕಿನಲ್ಲಿ ನಾಲ್ಕು ಬಾಗಿಲುಗಳಿವೆ. 
   1= ದಕ್ಷಿಣ ದಿಕ್ಕಿನಲ್ಲಿರುವ ಬಾಗಿಲು. ಇದಕ್ಕೆ ಬಾಬುತೌಬ ಎಂದು ಕರೆಯುತ್ತಾರೆ. 

  2= ಪಶ್ಚಿಮ ದಿಕ್ಕಿನಲ್ಲಿರುವ ಬಾಗಿಲು. ಇದು ಉಸ್ತುವಾನತು ವಫೂದಿನ ಹತ್ತಿರ ಇರುವ ಕಾರಣ ಇದಕ್ಕೆ 'ಬಾಬಲ್ ವಫೂದ್' ಎಂದು ಕರೆಯಲಾಗುತ್ತದೆ.

 3= ಪೂರ್ವ ದಿಕ್ಕಿನಲ್ಲಿರುವ ಬಾಗಿಲು. ಇದಕ್ಕೆ ಬಾಬುಫಾತಿಮಾ ಎಂದು ಕರೆಯುತ್ತಾರೆ. ಕಾರಣ ಫಾತಿಮಾ(ರ) ರವರ ಮನೆಯ ಹತ್ತಿರವಾಗಿದೆ ಇದು ಇರುವುದು. ಈ ಮೂರು ಬಾಗಿಲುಗಳನ್ನು ಹಿಜ್ರಾ 668ರಲ್ಲಿ ನಿರ್ಮಿಸಲಾಗಿದೆ. 

4= ಉತ್ತರ ದಿಕ್ಕಿನಲ್ಲಿರುವ ಬಾಗಿಲು , ಪ್ರವಾದಿವರ್ಯರು ತಹಜ್ಜುದ್ ನಮಾಜ್ ಮಾಡುವ ಸ್ಥಳದ ಹತ್ತಿರವಿದ್ದ ಕಾರಣ ಇದಕ್ಕೆ ಬಾಬು ತಹಜ್ಜುದ್ ಎಂದು ಕರೆಯಲಾಗುತ್ತದೆ. ಇದನ್ನು ಹಿಜ್ರಾ 729ರಲ್ಲಿ ನಿರ್ಮಿಸಲಾಗಿದೆ. ಇಂದು ಈ ಪವಿತ್ರ ಕಟ್ಟಡ ಪೂರ್ವ ದಿಕ್ಕಿನಲ್ಲಿರುವ ಬಾಗಿಲನ್ನು ಬಿಟ್ಟು ಉಳಿದವುಗಳನ್ನೆಲ್ಲಾ ಮುಚ್ಚಲಾಗಿದೆ . ಈ ಬಾಗಿಲಿನಿಂದ ಒಳ ಬಂದರೆ ಪಂಚಾಕೃತಿಯ ಕಟ್ಟದ ಸುತ್ತಲು ಕಟ್ಟಿದ ಕಟ್ಟಡದ ಒಳಗೆ ಬಂದು ಸೇರುತ್ತಾರೆ . ಆದರೆ ಪಂಚಾಕೃತಿಯ ಕಟ್ಟಡ ಒಳಗೆ ಹೋಗಲು ಸಾಧ್ಯವಿಲ್ಲ . ಯಾಕೆಂದರೆ ಯಾವುದೇ ಬಾಗಿಲನ್ನು ನಿರ್ಮಿಸಲಾಗಿಲ್ಲ . ಇಂದು ಕಾಣುವ ಹಲವಾರು ದರ್ಗಾಗಳು ಪಂಚಾಕೃತಿಯಲ್ಲಿರುವ ಕಾರಣ ಇದೆ. ಈ ಪವಿತ್ರ ಕಟ್ಟಡದ ಒಳಗೆ ಉನ್ನತ ವ್ಯಕ್ತಿಗಳಿಗಲ್ಲದೆ ಪ್ರವೇಶವಿಲ್ಲ . ಮದೀನಾಗೆ ಹೋದವರು ಪ್ರವಾದಿವರ್ಯರಿಗೆ ಸಲಾಂ ಹೇಳುವುದು ಈ ಪವಿತ್ರ ಕಟ್ಟಡದ ಹೊರಗೆ ನಿಂತಾಗಿದೆ . 

*ಹಸಿರು ಖಬ್ಬ . . .* 
.............................................................
           ಮದೀನಾ ಮಸೀದಿಯ ಮಹಡಿಯ ಮೇಲಿರುವ ಹಸಿರು ಖುಬ್ಬವನ್ನು ಕಂಡರೆ ಸಾಕು ವಿಶ್ವಾಸಿ ಹೃದಯದಲ್ಲಿ ನವಚೈತನ್ಯ ತುಂಬಿ ತುಳುಕುತ್ತದೆ. ಈ ಖಬ್ಬ ಯಾವಾಗ ತಲೆ ಎತ್ತಿ ನಿಂತಿತು . . ? ಇದನ್ನು ನಿರ್ಮಿಸಿದವರು ಯಾರು . . ? ಮುಂತಾದ ಇತಿಹಾಸದ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಮಸ್ಜಿದುನ್ನಬವಿಯಲ್ಲಿ ಪ್ರಮುಖವಾಗಿ ಎರಡು ಖುಬ್ಬಗಳನ್ನು ಕಾಣಲು ಸಾಧ್ಯವಿದೆ. ಮಸ್ಜಿದುನ್ನಬವಿಯ ಮಹಡಿಯ ಮೇಲೆ ಹುಜ್ರತುಶ್ಶರೀಫಿಗೆ ನೇರವಾಗಿ ಇಂದು ಕಾಣುವ ಹಸಿರು ಖಬ್ಬ ಒಂದಾದರೆ ಮಸೀದಿಯ ಒಳಗೆ ಹುಜರತುಶ್ಶರೀಫಿನ ಮೇಲೆ ಇನ್ನೊಂದು ಸಣ್ಣ ಖುಬ್ಬವಿದೆ. ಹಿಜ್ರಾ 678ರ ತನಕ ಮಸ್ಜಿದುನ್ನಬವಿಯ ಮೇಲೆ ಖಬ್ಬವಿರಲಿಲ್ಲ . ಆದರೆ ಮಸ್ಜಿದುನ್ನಬವಿಯ ಹುಜ್ರತುಶ್ಶರೀಫಿನ ಮಹಡಿಯ ಮೇಲ್ಬಾಗದಲ್ಲಿ ಇತರ ಭಾಗಗಳಲ್ಲಿ ಇರದ ಪ್ರತ್ಯೇಕ ಕುರುಹು ಇತ್ತು. ಹಿಜ್ರಾ 678ರಲ್ಲಿ ಸುಲ್ತಾನ್ ಮನ್ಸೂರ್‌ರವರು ಹುಜ್ರತುಶ್ಶರೀಫಿನ ನೇರವಾಗಿ ಮಸ್ಜಿದುನ್ನಬವಿಯ ಮಹಡಿಯ ಮೇಲೆ ಖುಬ್ಬವನ್ನು ನಿರ್ಮಿಸಲು ಆಜ್ಞಾಪಿಸಿದರು. ಅದರಂತೆ ಈ ಖುಬ್ಬವನ್ನು ಮರದ ಹಲಗೆಗಳಿಂದ ನಿರ್ಮಿಸಲಾಯಿತು. ಅದರ ಮೇಲೆ ಸೀಸದ ತಗಡನ್ನು ಹಾಕಲಾಗಿತ್ತು. ಹಲಗೆಗಳು ಹಳತಾದರೆ ಹೊಸತನ್ನು ಜೋಡಿಸಲಾಗುತ್ತಿತ್ತು. ಹೀಗೆ ಹಲವು ವರ್ಷಗಳು ಮುಂದುವರೆಯಿತು. ಹಿಜ್ರಾ 886ರಲ್ಲಿ ಮಸ್ಜಿದುನ್ನಬವಿಯಲ್ಲಿ ಅಗ್ನಿ ದುರಂತ ಸಂಭವಿಸಿದಾಗ ಈ ಖುಬ್ಬ ಬೆಂಕಿಯಲ್ಲಿ ಕರಕಲಾಗಿ ಹೋಯಿತು. ಆಗ ಸುಲ್ತಾನ್ ಖಾಇತುಬಾಯಿ ನಿರ್ಮಾಣ ಚತುರರ ಅಭಿಪ್ರಾಯಗಳನ್ನು ಸಂಗ್ರಹಿಸಿ ಉತ್ತಮ ಗುಣಮಟ್ಟದ ಭದ್ರವಾದ ಖುಬ್ಬವನ್ನು ನಿರ್ಮಿಸಿದರು. ಅದಕ್ಕೆ ಪ್ರತ್ಯೇಕ ಸ್ಥಂಬಗಳನ್ನು ಸ್ಥಾಪಿಸಿದ್ದರು . ನಂತರ ಸುಲ್ತಾನ್ ಮಹ್ಮೂದರ ಕಾಲದಲ್ಲಿ ಈ ಖುಬ್ಬವನ್ನು ನವೀಕರಣ ಮಾಡಲಾಯಿತು. ಮೊದಲು ಈ ಮಸ್ಜಿದುನ್ನಬವಿಯ ಮಹಡಿಯ ಮೇಲಿರುವ ಖುಬ್ಬದ ಬಣ್ಣ ಹಸಿರಾಗಿರಲಿಲ್ಲ . ಹಿಜ್ರಾ 1235ರಲ್ಲಿ ' ಸುಲ್ತಾನ್ ಮಹ್ಮೂ ದ್ ' ರವರು ಈ ಖುಬ್ಬಕ್ಕೆ ಹಸಿರು ಬಣ್ಣ ನೀಡುವಂತೆ ಆಜ್ಞಾಪಿಸಿದರು . ಇದಕ್ಕೆ ಮೊದಲು ಖಬ್ಬದ ಬಣ್ಣ ಹಳದಿ ನಂತರ ಬಿಳಿಯಾಗಿತ್ತು . ಈ ಬಣ್ಣಕ್ಕೆ ಮಂಕು ಕವಿದರೆ ಹೊಸ ಬಣ್ಣವನ್ನು ಬಳಿಯಲಾಗುತ್ತದೆ .
ಮಸ್ಜಿದುನ್ನಬವಿಯ ಮಹಡಿಯ ಕೆಳಗೆ ಹಾಗೂ ಹುಜ್ರತ್ ಶರೀಫಿನ ಮೇಲೆ ಸಣ್ಣ ಖುಬ್ಬವನ್ನು ನಿರ್ಮಿಸಲಾಗಿದೆ . ಇದು ಹಸಿರು ಖಬ್ಬದ ನೇರ ಕೆಳಗೆ ಇದೆ. ಹಿಜ್ರ 9ನೇ ಶತಮಾನದ ಕೊನೆಯಲ್ಲಿ ಸುಲ್ತಾನ್ ಖಾಇತುಬಾಯಿ ಇದನ್ನು ನಿರ್ಮಿಸಿದರು .

     *ಮುಂದುವರಿಯುವುದು*


https://chat.whatsapp.com/DjCbCGNiyBW7StPEIOqUnO