ಜ್ಞಾನಧಾರೆ: ಚರಿತ್ರೆ 📚 👑ಜಗತ್ತು ಕಂಡ ಶ್ರೇಷ್ಠ ಚಕ್ರವರ್ತಿ ಸುಲೈಮಾನ್ ನೆಬಿ(ಅ) ರವರ ಜೀವನ ಚರಿತ್ರೆ...👑ಸಂಚಿಕೆ- 03*

*🟦~~~~~~~✦ ﷽ ✦~~~~~~🟦*

*📚 ಜ್ಞಾನಧಾರೆ: ಚರಿತ್ರೆ 📚*

*👑ಜಗತ್ತು ಕಂಡ ಶ್ರೇಷ್ಠ ಚಕ್ರವರ್ತಿ ಸುಲೈಮಾನ್ ನೆಬಿ(ಅ) ರವರ ಜೀವನ ಚರಿತ್ರೆ...👑*

🌿🌿🌿🌿🌿🌿🌿🌿🌿🌿

*🔰ಸಂಚಿಕೆ- 03*

◼️ಪರಿಶುದ್ಧ ಖುರ್'ಆನಿನ ಇಪ್ಪತ್ತೇಳನೇ ಅಧ್ಯಾಯವಾದ ಸೂರತ್ ನಮ್ಲ್ ನಲ್ಲಿ ಅಲ್ಲಾಹು ಹೇಳುತ್ತಾನೆ: 

وَلَقَدْ ءَاتَيْنَا دَاوُۥدَ وَسُلَيْمَٰنَ عِلْمًۭا ۖ وَقَالَا ٱلْحَمْدُ لِلَّهِ ٱلَّذِى فَضَّلَنَا عَلَىٰ كَثِيرٍۢ مِّنْ عِبَادِهِ ٱلْمُؤْمِنِينَ

ದಾವೂದ್ ಮತ್ತು ಸುಲೈಮಾನರಿಗೆ ನಾವು ಸುಜ್ಞಾನವನ್ನು ದಯಪಾಲಿಸಿದೆವು. ‘ತನ್ನ ಅನೇಕ ಸತ್ಯವಿಶ್ವಾಸಿ ದಾಸರಿಗಿಂತ ನಮಗೆ ಶ್ರೇಷ್ಟತೆಯನ್ನು ಕರುಣಿಸಿದ ಅಲ್ಲಾಹನಿಗೆ ಸರ್ವಸ್ತುತಿ’ ಎಂದು ಅವರಿಬ್ಬರೂ ಹೇಳಿದರು.(ಸೂ.ನಮ್ಲ್: 15)

'ಸುಜ್ಞಾನ' ಅಂದರೆ ಮೃಗಪಕ್ಷಿಗಳ ನುಡಿಗಳ ಗ್ರಹಿಕೆ ಹಾಗೂ ಅಲ್ಲಾಹನ ಸವಿಶೇಷ ಜ್ಞಾನದಿಂದ ಅವರಿಗೆ ನೀಡಲಾದ ವಿಶೇಷ ತರಬೇತಿ ಮುಂತಾದವು ಇಲ್ಲಿನ ತಾತ್ಪರ್ಯ. (ಜಾಮಿಉಲ್ ಬಯಾನ್ 19/87)

ಪುತ್ರನು ತಂದೆಯ ಉತ್ತರಾಧಿಕಾರಿಯಾಗಿದ್ದಾರೆ, ಯಾವೆಲ್ಲಾ ವಿಷಯದಲ್ಲಿ..!? ನುಬುವ್ವತ್(ಪ್ರವಾದಿತ್ವ ಮುದ್ರೆ), ರಾಜಾಧಿರಾಜ, ಜ್ಞಾನ ಎಂಬೀ ವಿಷಯದಲ್ಲಿ ತಂದೆಗೆ ಸರಿಸಾಟಿಯಾದರೆ ಇನ್ನೂ ಕೆಲವು ವಿಷಯಗಳಲ್ಲಿ ಮಗನು ತಂದೆಗಿಂತಲೂ ಮುಂಚೂಣಿಯಲ್ಲಿದ್ದರು. ಆಡಳಿತ, ಮೇಲ್ವಿಚಾರಣೆಯ ವಿಷಯದಲ್ಲಿ ಮಗ ಹೆಚ್ಚು ಖ್ಯಾತಿ ಪಡೆದರು. ಪಿಶಾಚಿ, ದೆವ್ವ, ಜಿನ್ನುಗಳು ಮತ್ತು ಗಾಳಿಯನ್ನು ಮಹಾನರಿಗೆ ಅಧೀನ ಮಾಡಿ ಕೊಡಲಾಯಿತು. ಮಗನ ಆಡಳಿತದ ಅವಧಿಯಲ್ಲಿ ತಮ್ಮ ಸಾಮ್ರಾಜ್ಯದ ವ್ಯಾಪ್ತಿ ವರ್ಧಿಸಿತು. ಅತಿ ಶಕ್ತ, ದಕ್ಷತೆಯ ಆಡಳಿತ ವ್ಯವಸ್ಥೆ ಮಹಾನರ ಕಾಲದಲ್ಲಿ ಜಾರಿಗೆ ಬಂತು. 

ಪರಿಶುದ್ಧ ಖುರ್'ಆನ್ ನಲ್ಲಿ ಅಲ್ಲಾಹು ಹೇಳುತ್ತಾನೆ:

وَوَرِثَ سُلَيْمَٰنُ دَاوُۥدَ ۖ وَقَالَ يَٰٓأَيُّهَا ٱلنَّاسُ عُلِّمْنَا مَنطِقَ ٱلطَّيْرِ وَأُوتِينَا مِن كُلِّ شَىْءٍ ۖ إِنَّ هَٰذَا لَهُوَ ٱلْفَضْلُ ٱلْمُبِينُ

"ಸುಲೈಮಾನರು ದಾವೂದರ ಉತ್ತರಾಧಿಕಾರಿ ಯಾದರು. ಅವರು, ‘ಜನರೇ..! ಪಕ್ಷಿಗಳ ಭಾಷೆಯನ್ನು ನಮಗೆ ಕಲಿಸಿಕೊಡಲಾಗಿದೆ. (ಅಗತ್ಯವಿರುವ) ಎಲ್ಲಾ ವಸ್ತುಗಳಿಂದ (ಬೇಕಾದುದನ್ನು) ನಮಗೆ ಕೊಡಲಾಗಿದೆ. ನಿಶ್ಚಯವಾಗಿಯೂ ಇದುವೇ ಪ್ರತ್ಯಕ್ಷವಾದ ಅನುಗ್ರಹ’ ಎಂದರು."(ಸೂ.ನಮ್ಲ್)

ಅಂದರೆ ಆಧುನಿಕ ಕಾಲದ ತಜ್ಞರು ಹಲವು ಪಕ್ಷಿಗಳ ಭಾಷೆಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಅವುಗಳಿಗೆ ವ್ಯತ್ಯಸ್ಥ ಸನ್ನಿವೇಶಗಳನ್ನು ಅಭಿವ್ಯಕ್ತಿಗೊಳಿಸುವ ವಿಭಿನ್ನ ಶಬ್ದಗಳಿವೆ. ದುಃಖ, ಸಂತೋಷ, ಆಹಾರದ ಅವಶ್ಯಕತೆ, ಶತ್ರುಗಳಿಂದ ರಕ್ಷಣೆ ಮುಂತಾದ ವಿಭಿನ್ನ ಸನ್ನಿವೇಶಗಳನ್ನು ವಿಭಿನ್ನ ಶಬ್ಧಗಳ ಮೂಲಕ ಅವು ಪ್ರತಿಬಿಂಬಿಸಬಲ್ಲವು ಎಂದು ಆಧುನಿಕ ವಿಜ್ಞಾನದಿಂದ ಸಾಬೀತಾಗಿದೆ. ಈ ಗ್ರಂಥದ ಪವಾಡಕ್ಕೂ ಇದೊಂದು ಸಾಕ್ಷಿ. `ತನ್ನ ದೃಷ್ಟಾಂತಗಳನ್ನು ಅವನು ನಿಮಗೆ ತೋರಿಸಿ ಕೊಡುವನು ಎಂದು ಇದೇ ಅಧ್ಯಾಯದ ಕೊನೆಯಲ್ಲಿ ಅಲ್ಲಾಹು ಹೇಳಿದ್ದಾನೆ. ಪಕ್ಷಿಗಳ ಭಾಷೆಗಳ ಬಗ್ಗೆ ಆ ಕಾಲದಲ್ಲಿ ಆತನು ಹೊರಗೆಡಹಿದ ಜ್ಞಾನವು ಇದಕ್ಕೆ ನಿದರ್ಶನ. (ತಫ್ಸೀರುಲ್ ಖುರ್'ಆನ್ 19/128) 

ಮೇಲಿನ ಸೂಕ್ತದಲ್ಲಿ ಅಗತ್ಯವಿರುವ ಎಲ್ಲಾ ವಸ್ತುಗಳಿಂದ ನಮಗೆ ಕೊಡಲಾಗಿದೆ ಅಂದರೆ "ಅರ್ಥಾತ್ ಇಹಲೋಕದ ಒಳಿತುಗಳ ಪೈಕಿ ಎಲ್ಲ ವಸ್ತುಗಳನ್ನು ಕೊಡಲಾಗಿದೆ." ಎಂದರ್ಥವಾಗಿದೆ.

ದೇಶವನ್ನಾಳುವ ಶ್ರೇಷ್ಠ ರಾಜಾಧಿರಾಜನಿಗೆ ಅತ್ಯುತ್ತಮ ಗುಣಮಟ್ಟದ ಸೈನ್ಯ ಪಡೆಬೇಕು. ಸಾಮ್ರಾಜ್ಯದ ವಿಸ್ತಾರವಾಗುವಾಗ ಸೈನ್ಯಬಲವನ್ನೂ ವೃದ್ಧಿಸಬೇಕು, ಸಾಮ್ರಾಜ್ಯದ ಬೇಹುಗಾರಿಕಾ ವಿಭಾಗ ಅತಿ ಬಲಾಢ್ಯವಾಗಿರಬೇಕು. ಶತ್ರುಗಳ ಚಲನವಲನ ನಿರೀಕ್ಷಿಸಲು ಅವರ ಗೂಢಚರ್ಯೆ, ಗೂಢತಂತ್ರ ತಿಳಿಯಲು, ಸ್ವಂತ ರಹಸ್ಯಗಳು ಶತ್ರುಗಳಿಂದ ಮುಚ್ಚಿಟ್ಟು ಗೌಪ್ಯವಾಗಿ ಜೋಪಾನವಾಗಿರಿಸಲು ಮುಂತಾದ ಎಲ್ಲಾ ರಕ್ಷಣಾತ್ಮಕ ಕೆಲಸಕಾರ್ಯಗಳಿಗೆ ಉತ್ತಮ ಸೈನ್ಯ ಶಕ್ತಿ ಬೇಕು.

ಸುಲೈಮಾನ್ ನೆಬಿ(ಅ) ರ ಸೈನ್ಯದಲ್ಲಿ ಪಿಶಾಚಿಗಳು, ಜಿನ್ನುಗಳಿದ್ದು ಅವರು ಅತಿ ವೀರ-ಶೂರ ಬಲಾಢ್ಯರಾಗಿದ್ದರು. ಅವರಿಂದ ಮಹಾನರು ಅತಿ ಕಠಿಣವಾದ ಕೆಲಸಗಳನ್ನು ಮಾಡಿಸುತ್ತಿದ್ದರು.

ಸೈನ್ಯದ ಮತ್ತೊಂದು ವಿಭಾಗ ಪಕ್ಷಿ ಸಮೂಹವಾಗಿತ್ತು. ಮಾಹಿತಿಗಳು ಕಲೆ ಹಾಕಲು, ಸಂದೇಶಗಳ ರವಾನಿಸಲು ಪಕ್ಷಿಗಳನ್ನು ಉಪಯೋಗಿಸುತ್ತಿದ್ದರು. ಮನುಷ್ಯರಿಂದ ಮಾಡಲು ಅಸಾಧ್ಯ ಅಶಕ್ಯವಾದ ಕೆಲಸವನ್ನು ಜಿನ್ನುಗಳು, ಪಿಶಾಗಳಿಂದ‌ ಮಾಡಿಸುತ್ತಿದ್ದರು.

ಪರಿಶುದ್ಧ ಖುರ್'ಆನ್ ನಲ್ಲಿ ಈ ರೀತಿ ಕಾಣಬಹುದು:

وَحُشِرَ لِسُلَيْمَٰنَ جُنُودُهُۥ مِنَ ٱلْجِنِّ وَٱلْإِنسِ وَٱلطَّيْرِ فَهُمْ يُوزَعُونَ

ಸುಲೈಮಾನರಿಗಾಗಿ ಜಿನ್ನ್, ಮಾನವ ಮತ್ತು ಪಕ್ಷಿಗಳ ಸೇನೆಗಳನ್ನು ಜಮಾಯಿಸಲಾಗಿತ್ತು. ಅವುಗಳನ್ನು ಸಂಪೂರ್ಣ ನಿಯಂತ್ರಣದಲ್ಲಿ ಇಡಲಾಗಿತ್ತು."(ಸೂ.ನಮ್ಲ್: 17)

ಸಾಧಾರಣವಾಗಿ ಪಿಶಾಚಿಗಳು, ಜಿನ್ನುಗಳು ಮನುಷ್ಯರ ಆಜ್ಞೆಗಳಿಗೆ ಅನುಸಾರವಾಗಿ ಜೀವಿಸಲು ಇಚ್ಛಿಸಲ್ಲ ಬದಲಾಗಿ ಮನುಷ್ಯರ ದಾರಿ ತಪ್ಪಿಸುವ ಕೆಲಸ ಇದು ಮಾಡುತ್ತದೆ, ಆದರೆ ಸುಲೈಮಾನ್ ನೆಬಿಯವರ ವಿಷಯದಲ್ಲಿ ಇದು ತದ್ವಿರುದ್ಧಾಗಿತ್ತು.

ಸುಲೈಮಾನ್ ನೆಬಿ(ಅ) ಓರ್ವ ಮನುಷ್ಯನಾಗಿದ್ದು ಆ ಮನುಷ್ಯ ಜಿನ್ನುಗಳು, ಪಿಶಾಚಿಗಳನ್ನು ತನ್ನ ಸುಪರ್ದಿನಲ್ಲಿಟ್ಟಿದ್ದರು. ಮಹಾನರ ಆಜ್ಞೆಯನ್ನು ಶಿರಸಾವಹಿಸಿ ಅವರು ಪಾಲಿಸುತ್ತಿದ್ದರು. ಇದೊಂದು ಅದ್ಭುತ ಸಿದ್ಧಿಯಾಗಿದ್ದು ತಂದೆಗೆ ಕಬ್ಬಿಣದ ಉಪಯುಕ್ತ ಪ್ರಯೋಗ ಕಲಿಸಿಕೊಟ್ಟರೆ‌ ಮಗನಿಗೆ ತಾಮ್ರ, ಹಿತ್ತಾಳೆಯ ಉಪಯುಕ್ತ ಉಪಯೋಗದ ಕುರಿತು ಅಲ್ಲಾಹು ಕಲಿಸಿಕೊಟ್ಟನು. ಈ ತಾಮ್ರದಿಂದ ಹಲವು ಬಗೆಯ ಸಾಮಾಗ್ರಿಗಳ ನಿರ್ಮಾಣ, ಅದು ಸಿಗುವ ಮೂಲತಾಣ ಎಲ್ಲವೂ ಅಲ್ಲಾಹು ಮಹಾನರಿಗೆ ತಿಳಿಸಿಕೊಟ್ಟನು. ಇದರ ಗಣಿಗಾರಿಕೆ ಅತೀವ ಕಠಿಣವಾಗಿದ್ದು ಈ ಕೆಲಸಗಳನ್ನು ಮಾಡಲು ಮಹಾನರು ಜಿನ್ನುಗಳು, ‌ಪಿಶಾಚಿಗಳಿಗೆ ಆಜ್ಞಾಪಿಸುತ್ತಿದ್ದರು.‌ ಅವರು ಅದಕ್ಕೆ ಶಿರಬಾಗಿ ಯಥಾವತ್ತಾಗಿ ಕೆಲಸಮಾಡುತ್ತಿದ್ದರು. ಇನ್ನು ಸರಿಯಾಗಿ ಕೆಲಸ ಮಾಡದಿದ್ದರೆ ಅತಿ ರೂಕ್ಷ ಶಿಕ್ಷೆಗೆ ಅವರು ಈಡಾಗುತ್ತಿದ್ದರು. ಮಹಾನರ ಶಿಕ್ಷೆಗೆ ಹೆದರಿ ಅವರೆಲ್ಲರೂ ಚಾಕಚಕ್ಯತೆಯಿಂದ ತಮ್ಮ ಕೆಲಸ ಮಾಡುತ್ತಿದ್ದರು..

*ಮುಂದುವರೆಯುವುದು..*

*☘ _ಪುಣ್ಯ ಪ್ರವಾದಿ(ﷺ) ರ ಮೇಲೆ ಸ್ವಲಾತ್, ಸಲಾಂ ಅಧಿಕಗೊಳಿಸಿರಿ_👇🏻*
*اللهم صل على سيدنا محمد عدد ما في علم الله صلاة دائمة بدوام ملك الله*

*✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ರಾಜಸ್ಥಾನ*

*👆🏻Share maximum..🤝🏻*