📚 ಜ್ಞಾನಧಾರೆ: ಚರಿತ್ರೆ ಸಂಚಿಕೆ- 02* ಜಗತ್ತು ಕಂಡ ಶ್ರೇಷ್ಠ ಚಕ್ರವರ್ತಿ ಸುಲೈಮಾನ್ ನೆಬಿ(ಅ) ರವರ ಜೀವನ ಚರಿತ್ರೆ..

*🟦~~~~~~~✦ ﷽ ✦~~~~~~🟦*

*📚 ಜ್ಞಾನಧಾರೆ: ಚರಿತ್ರೆ 📚*

*👑ಜಗತ್ತು ಕಂಡ ಶ್ರೇಷ್ಠ ಚಕ್ರವರ್ತಿ ಸುಲೈಮಾನ್ ನೆಬಿ(ಅ) ರವರ ಜೀವನ ಚರಿತ್ರೆ...👑*

🌿🌿🌿🌿🌿🌿🌿🌿🌿🌿

*💥ಸಂಚಿಕೆ- 02*

ಈ‌ ಸಣ್ಣ ಮಗು ಚಿಂತಕ್ರಾಂತರಾಗದೆ ತನ್ನ ಶಿರ ಮೇಲಕ್ಕೆತ್ತಿ ಆಕಾಶದತ್ತ ನೋಡಿ ನಂತರ ಸುತ್ತಮುತ್ತಲೂ‌ ನೋಡುತ್ತಾ ಒಂದೇ ಸಮನೆ ಜೋರಾಗಿ ಕರೆದು ಹೇಳುತ್ತಾರೆ.."ಓ ಪಕ್ಷಿ ಸಂಕುಲವೇ..ಹಾರಾಡುತ್ತಾ ಇತ್ತ ಬನ್ನಿರಿ, ಬಿಸಿಲ ಬೇಗೆಯಿಂದ ಜನ ಬಳಲಿ ಬೆಂಡಾಗಿದ್ದಾರೆ, ಆದ್ದರಿಂದ ಈ ಬಳಲಿದ ಜನರಿಗೆ ನೆರಳನ್ನು ನೀಡಲು ನೀವೆಲ್ಲರೂ ಇತ್ತ ಬಂದು ತಮ್ಮ ರೆಕ್ಕೆಗಳನ್ನು ಬಿಚ್ಚಿ ಹಾಸಿರಿ. ಜನ ಇದು ಕೇಳಿ ಆಕಾಂಕ್ಷೆಯ ನಯನಗಳೊಂದಿಗೆ ಪರಸ್ಪರ ನೋಡುತ್ತಿರುವಾಗ..

ಆಶ್ಚರ್ಯಕರವೆಂಬಂತೆ..ಮಹಾನರ ವಿದಾಯಕ್ಕೆ ಸಾಕ್ಷಿಯಾಗಿದ್ದ ಪಕ್ಷಿ ಸಮೂಹವೆಲ್ಲಾ ಈ‌ ಬಾಲಕನ ಕೂಗು ಕೇಳಿ ಆಕಾಶದತ್ತ ಹಾರುತ್ತಾ ತಮ್ಮ ರೆಕ್ಕೆಗಳನ್ನು ಬಿಚ್ಚಿ ಕೊಡುತ್ತವೆ. ಆ ಮೂಲಕ‌ ಅಲ್ಲೆಲ್ಲಾ ಸೂರ್ಯನಿಂದ ಹೊರ ಸೂಸುತ್ತಿದ್ದ ಪ್ರಖರ ರಶ್ಮಿಗಳನ್ನು ತಮ್ಮ ಗರಿ-ರೆಕ್ಕೆಗಳ ಮೂಲಕ ಈ ಪಕ್ಷಿಗಳು ತಡೆದು ಜನರಿಗೆ ನೆರಳು ನೀಡಿ ಆಶ್ರಯ ನೀಡುತ್ತದೆ. ಈ ಮನೋಜ್ಞ ಕ್ಷಣದಿಂದ ಮನೋಗ್ಲಾನಿಯಾಗಿದ್ದ ಜನರ ನಯನಗಳಲ್ಲಿ ಈಗ ಆಶ್ವಾಸ,‌ ನೆಮ್ಮದಿ ಎದ್ದು ಕಾಣುತ್ತದೆ. ಸಮಾಧಾನದ ಕಣ್ಣಂಬನಿ ಜನರಿಂದ ತೊಟ್ಟಿಕ್ಕುತ್ತಿದ್ದು ಮಯ್ಯಿತ್ತ್ ಕಟ್ಟಿಲು(ಮಂಚ) ತಮ್ಮ ಭುಜದಲ್ಲಿ ಹಿಡಿಯುತ್ತಾ ಜನರು ಸಾಗುತ್ತಾರೆ. ರಾಜ ಸಿಂಹಾಸನದಿಂದ ಶಾಶ್ವತವಾದ ಮಣ್ಣಿನ ಲೋಕದತ್ತ, ಸಾರ್ವಭೌಮ ಸಾಮ್ರಾಜ್ಯದಿಂದ ಕಬರಿನ ಏಕಾಂತ ಜೀವನದತ್ತ ಒಮ್ಮೆಯೂ ಮರಳಿ ಬಾರದ ಲೋಕದತ್ತ ಬೀಳ್ಕೊಡಲು ಜನರೆಲ್ಲಾ ಸಾಲು ಸಾಲಾಗಿ ಸಾಗುತ್ತಿದ್ದಾರೆ. ಆ ಯಾತ್ರೆ ನೋಡಿ ನಿಂತ ಪರ್ವತ ಶ್ರೇಣಿಗಳು, ಗಿರಿ-ಶಿಖರಗಳು, ನದಿ-ಸರೋವರಗಳು ಎಲ್ಲವೂ ಅಲ್ಲಾಹನ ಪ್ರವಾದಿಯ ಅಂತ್ಯ ಯಾತ್ರೆಗೆ ಮೌನವಾಗಿ ಮಾತನಾಡುತ್ತಿತ್ತು. 

ಪ್ರವಾದಿವರ್ಯರೇ.. ನಾವಿಷ್ಟು ಕಾಲದ ತನಕ ತಮ್ಮೊಂದಿಗೆ ತಸ್ಬೀಹ್ ಹೇಳುತ್ತಿದ್ದು ಅದೆಲ್ಲವೂ ಯಥೇಷ್ಠ ಅನುಭೂತಿ ನೀಡುವ ನಿಮಿಷಗಳಾಗಿದೆ. ತಾವು ಝಬೂರ್ ಪಾರಾಯಣ ಮಾಡಲು ಆರಂಭಿಸಿದರೆ ಅದು ಕೇಳಿ ನಾವು ಸ್ಥಂಭೀಭೂತವಾಗಿ ನಿಂತದ್ದಿದೆ, ಅಟ್ಟಹಾಸದದಿಂದ ಜೋರಾಗಿ ಅತ್ತದ್ದಿದೆ, ನಮ್ಮೊಂದಿಗೆ ಪಕ್ಷಿ ಸಮೂಹಗಳ, ಪ್ರಾಣಿಗಳು ಸೋಜಿಗರಾಗಿ ನಿಂತದ್ದಿದೆ. ಓ ಪ್ರವಾದಿವರ್ಯರೇ.. ತಾವು ತಮ್ಮ ಹೊಣೆಗಾರಿಕೆ ಸಮರ್ಥವಾಗಿ ಪೂರ್ತಿಗೊಳಿಸಿದ್ದು ನಾವೆಲ್ಲಾ ಅದಕ್ಕೆ ಸಾಕ್ಷಿಯಾಗಿದ್ದೇವೆ..

ಮಯ್ಯಿತ್ತ್ ಸಾಗುತ್ತಾ ಗುಂಡಿ ತೋಡಿದ ಕಬರಿನ ಬಳಿ ತಲುಪಿತು. ಯಥಾವಿಧಿಯಂತೆ ಕಬರಿನ ಒಳಗೆ ಮಲಗಿಸಿ ಕಲ್ಲುಗಳಿಂದ ನಂತರ ಮಣ್ಣಿನಿಂದ ದಫನ್ ಮಾಡಲಾಯಿತು. ಪ್ರವಾದಿವರ್ಯರ ಪಾವನ ಸುವರ್ಣಯುಗದ ಸ್ಮರಣಾರ್ಥ ಒಂದು ಗೋರಿಕಲ್ಲನ್ನು(ಮೀಝಾನ್ ಕಲ್ಲು) ಊರಲಾಯಿತು. ದಿನಗಳು ಸಂಚರಿಸುತ್ತಿದ್ದಂತೆ ಆ ದಾರಿಯಲ್ಲಿ ಹಾರಾಡುವ ಪಕ್ಷಿಗಳು ಮಹಾನರಿಗೆ ಗೌರವ ಸೂಚಕವಾಗಿ ತಮ್ಮೆರಡು ರೆಕ್ಕೆಗಳನ್ನು ನಿಶ್ಯಬ್ದವಾಗಿ, ವಿನಯಪೂರ್ವಕವಾಗಿ ಬಿಚ್ಚಿ ಹಾಸುತ್ತಿದ್ದವು.

ಕಾಡು ಪ್ರಾಣಿಗಳ ಕಿವಿಗಳಲ್ಲಿ ಝಬೂರಿನ ವಚನಗಳು ಎಂದೆಂದೂ ಬಾಕಿಯಾಯಿತು. ಆ ನೆನಪಿನಲ್ಲೇ ಅವುಗಳು ನಿಶ್ಚಲವಾಗಿ ಕಾಲ ಕಳೆಯುತ್ತಿತ್ತು. ಈ ಧನ್ಯ ಸನ್ನಿವೇಶದಲ್ಲಾಗಿತ್ತು ಸುಲೈಮಾನ್ ನೆಬಿ(ಅ) ರವರ ಆಗಮನ. ಮಹಾನರ ಆಗಮನವನ್ನು ಸಕಲ ಜೀವಿಗಳು ಆಕಾಂಕ್ಷೆಯಿಂದ ನೋಡಿ ನಿಂತವು.

ಅದ್ಭುತವಾದ ಜ್ಞಾನವನ್ನಾಗಿತ್ತು ಮಹಾನರಾದ ದಾವೂದ್ ನೆಬಿಯವರಿಗೆ ಅಲ್ಲಾಹು ‌ನೀಡಿದ್ದು. ಅಲ್ಲಾಹು ಅವನು ಉದ್ಧೇಶಿಸಿದವರಿಗೆ ಜ್ಞಾನಾಮೃತ ನೀಡುವನು. ಅದಕ್ಕೆ ಇತರರ ಸಹಾಯ ಬೇಕಿಲ್ಲ. ಮನಸ್ಸಿಗೆ ತೋಚಿಸಿ ಅದು ಕನಸಿನ ಮೂಲಕ ಕಾಣಿಸಬಹುದು ಅಥವಾ ಅನುಭವದಿಂದ ಕಲಿಯಬಹುದು. ಓರ್ವ ಮನುಷ್ಯನಿಗೆ ಜ್ಞಾನ ನೀಡಬಲ್ಲ ದಾರಿ ಅಲ್ಲಾಹನೇ ಸ್ವೀಕರಿಸಬಲ್ಲ. 

ಮಹಾನರಾದ ದಾವೂದ್ ನೆಬಿಯವರಿಗೆ ಮಹಾ ಜ್ಞಾನ ನೀಡಿದಂತೆ ಅಲ್ಲಾಹು ಸುಲೈಮಾನ್ ನೆಬಿಯವರಿಗೂ ಅಗಣಿತ ಜ್ಞಾನ ನೀಡಿದ. ಸಕಲ ಕ್ಷೇತ್ರದಲ್ಲೂ ಪಾರಂಗತರಾಗುವ ಅರ್ಹತೆ, ಅವಕಾಶ ಮನುಷ್ಯರ ಪೈಕಿ ತುಂಬಾ ವಿರಳವಾಗಿದ್ದು ಇದು ಸಾಕಲ್ಲವೇ ಮಹಾನರ ಜ್ಞಾನದ ಮಟ್ಟ ಮನದಟ್ಟು ಮಾಡಲು. ಸಕಲ ಜ್ಞಾನ ನೀಡಿದ ನಂತರ ತಂದೆ ಮತ್ತು ಮಗನ ಮಾತು ತುಂಬಾ ಅರ್ಥವತ್ತಾಗಿದ್ದು ಸದಾಕಾಲವೂ ಸ್ಮರಿಸಬೇಕಾದ ಮಾತುಗಳಾಗಿದೆ. ಅವರಿಬ್ಬರೂ ಹೇಳುತ್ತಾರೆ:

ಸೃಷ್ಟಿಪತಿ, ಲೋಕ ಸೃಷ್ಟಿಕರ್ತನಾದ ಅಲ್ಲಾಹನಿಗೆ ಸರ್ವ ಸ್ತೋತ್ರಗಳು. 
ಅವನು ಸತ್ಯ ವಿಶ್ವಾಸಿಗಳಾದ ಸೃಷ್ಟಿಗಳ ಪೈಕಿ ಇತರರಿಗಿಂತಲೂ ನಮಗೆ ಶ್ರೇಷ್ಠತೆ ನೀಡಿದ್ದಾನೆ. ಪೂರ್ವಿಕರಿಗೆ ಅಪರಿಚಿತವಾಗಿದ್ದ ಸೈನಿಕರ ಸುರಕ್ಷಾ ಕವಚವಾಗಿ ಧರಿಸುವ ಸೈನ್ಯವಸ್ತ್ರದ ನಿರ್ಮಾಣ 
ಅಲ್ಲಾಹು ದಾವೂದ್ ನೆಬಿಯವರಿಗೆ ಕಲಿಸಿಕೊಟ್ಟನು. ಕಬ್ಬಿಣದಿಂದ ಹಲವು ವಿಧದ ಸಾಮಾಗ್ರಿಗಳ‌ ನಿರ್ಮಾಣ ಮಾಡಲು ಕಲಿಸಿಕೊಟ್ಟನು. ಪರ್ವತಗಳು ಸ್ತುತಿ ಕೀರ್ತನೆಗಳು, ಮಾತುಗಳು ಮನದಟ್ಟು ಮಾಡುವ ಯೋಗ್ಯ ಶಕ್ತಿ ನೀಡಿ ಕರುಣಿಸಿದನು. ಪಕ್ಷಿಸಂಕುಲಗಳು, ಪ್ರಾಣಿಗಳ ಮಾತು ಗ್ರಹಿಸುವ ಶಕ್ತಿ ಅಲ್ಲಾಹು ನೀಡಿದನು. ಇದೆಲ್ಲವೂ ಅಲ್ಲಾಹು ನೀಡಿದ ಶ್ರೇಷ್ಠತೆಗಳಾಗಿದೆ. ಅಲ್ಲಾಹು ಕರುಣಿಸಿದ ಅನುಗ್ರಹಗಳನ್ನು ಮುಕ್ತಕಂಠದಿಂದ ಹೇಳುವುದು ತಂದೆ-ಮಗನ ಸ್ವಭಾವವಾಗಿದ್ದು ಆ ಮೂಲಕ ಅಲ್ಲಾಹನಿಗೆ ಸ್ತುತಿಸುತ್ತಿದ್ದರು. 'ಅಲ್ಲಾಹನ ಸಂತೃಪ್ತಿಗೊಳಿಸುವಿಕೆ' ಎಂಬ ಈ ಮಹತ್ವದ ಕೆಲಸ
ಕಟ್ಟ ಕಡೆಯದಾಗಿ ಲೋಕ ನೇತಾರ ಪ್ರವಾದಿﷺ ರವರಿಗೆ ಖುರ್'ಆನ್ ಅವತರಿಸಿದಾಗ ಅಲ್ಲಾಹು ಈ ವಿಷಯ ಒತ್ತಿ ಹೇಳುತ್ತಾನೆ....

*ಮುಂದುವರೆಯುವುದು..*

*☘ _ಪುಣ್ಯ ಪ್ರವಾದಿ(ﷺ) ರ ಮೇಲೆ ಸ್ವಲಾತ್, ಸಲಾಂ ಅಧಿಕಗೊಳಿಸಿರಿ_👇🏻*
*اللهم صل على سيدنا محمد عدد ما في علم الله صلاة دائمة بدوام ملك الله*

*✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ರಾಜಸ್ಥಾನ*