ಸಂಗ್ರಹ: ಯಾಸೀನ್ ನಾವೂರ್ 🍃ಅಧ್ಯಾಯ 9

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 9*🍃
         💜💜💜💜💜💜💜

 ❤️ *ಮದೀನಾದಲ್ಲಿ ಇಸ್ಲಾಂ ಮಾತ್ರ* 
 ❤️ *ಮದೀನಾ ಇತಿಹಾಸ*
🌹🌹🌹🌹🌹🌹🌹🌹🌹🌹🌹

           ಪವಿತ್ರ ಮದೀನಾ ಈಮಾನಿನ ಸಂಗಮ ತಾಣ. ಅಲ್ಲಿ ಏನಿದ್ದರೂ ಇರುವುದು ಮುಸ್ಲಿಮರು ಮಾತ್ರ ಅಂದರೆ ಪವಿತ್ರ ಇಸ್ಲಾಮಲ್ಲದ ಒಂದೇ ಒಂದು ಧರ್ಮಕ್ಕೆ ಮತ್ತು ಅದರ ಅನುಯಾಯಿಗಳಿಗೆ ಮದೀನಾಗೆ ಪ್ರವೇಶವಿಲ್ಲ. ಅಬೂರಾಫಿ(ರ) ರವರಿಂದ ವರದಿ ಮಾಡಿದ ಹದೀಸ್ ಹೀಗಿದೆ“ ಮದೀನಾದಲ್ಲಿ ಪವಿತ್ರ ಇಸ್ಲಾಮಲ್ಲದ ಒಂದೇ ಒಂದು ಧರ್ಮ ಇರಬಾರದು” ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಆಜ್ಞಾಪಿಸಿದ್ದಾರೆ. ಇಂದು ಮಕ್ಕಾ ಮದೀನಾದಲ್ಲಿ ಮುಸ್ಲಿಮರೇತರಿಗೆ ಪ್ರವೇಶವಿಲ್ಲ ಎಂಬ ಸಂಗತಿಯನ್ನು ನಾವು ಸ್ಮರಿಸಬೇಕಿದೆ. 

*ಮದೀನಾ ಇತಿಹಾಸ*
..................................................

          ಪವಿತ್ರ ಮದೀನಾಗಿರುವ ಹಲವಾರು ನಾಮಗಳಲ್ಲಿ ಒಂದಾಗಿದೆ ದಾರುಲ್ ಹಿಜ್ರ ಎನ್ನುವುದು. ಅಂದರೆ ವಲಸಿಗರ ಊರು. ಮದೀನಾಕ್ಕಿರುವ ಈ ಹೆಸರು ನೂರಕ್ಕೆ ನೂರು ಸಮಂಜಸ. ಯಾಕೆಂದರೆ ಮದೀನಾದ ಇತಿಹಾಸ ಪುಟಗಳನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ಮೂಲ ನಿವಾಸಿಗಳೆಂದು ಯಾರನ್ನು ಕೂಡಾ ಗುರುತಿಸಲು ಸಾಧ್ಯವಾಗದು. ಅಲ್ಲಿ ಜೀವಿಸುತ್ತಿರುವರೆಲ್ಲರೂ ಅಲ್ಲಿಗೆ ವಲಸೆ ಬಂದವರೇ ಆಗಿದ್ದಾರೆ. ಮದೀನಾಗೆ ಬಂದ ಮೊಟ್ಟ ಮೊದಲ ವಲಸಿಗರೆಂದರೆ ಮಹಾ ಪ್ರಳಯದ ಸಮಯದಲ್ಲಿ ನೂಹ್ ನಬಿ(ಅ) ರವರ ಹಡಗಿನಲ್ಲಿ ಉಳಿದ ವಿಶ್ವಾಸಿಗಳು.ನೂಹ್ ನಬಿ(ಅ) ರವರ ಮಗ ಸಾಮ್‌ನ ಸಂತಾನ ಪರಂಪರೆಯಲ್ಲಿ ಬರುವ ಕೆಲವರು ಇಲ್ಲಿ ಬಂದು ಜೀವಿಸಿದರು. ಇವರ ನಂತರ ರೋಮನ್ನರಿಂದ ನಿರಂತರ ಪೀಡಿಸಲ್ಪಟ್ಟ ಯಹೂದಿಯರು ಅಲ್ಲಿಂದ ಪಲಾಯನ ಮಾಡಿ ಬಂದು ನೆಲೆಸಿದ್ದು ಇದೇ ಯಸ್‌ರಿಬಿನಲ್ಲಿ. ನಂತರ ಅಲ್ಲಾಹನ ಕೋಪಕ್ಕೆ ಬಲಿಯಾಗಿ ಬೃಹತ್ ಜಲಸಂಗ್ರಹದ ಅಣೆಕಟ್ಟು ಒಡೆದು ಸರ್ವನಾಶಗೊಂಡ ಸಬಲ್ ನಿವಾಸಿ ಗಳಲ್ಲಿ ಉಳಿದವರು ಮದೀನಾಗೆ ಬಂದರು. ಅವರಾಗಿದ್ದಾರೆ ಅಣ್ಣ ತಮ್ಮಂದಿರ ಗೋತ್ರವಾದ ಔಸ್ ಮತ್ತು ಖಝ್ರಜ್. 
ಕೊನೆಯದಾಗಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅಲ್ಲಾಹನ ಆಜ್ಞೆಯಂತೆ ಮದೀನಾಗೆ ಹಿಜ್ರಾ ಬಂದರು. ಜೊತೆಗೆ ಸ್ವಹಾಬಿಗಳು ಹಂತ ಹಂತವಾಗಿ ಬಂದರು. ಮಾತ್ರ ವಲ್ಲ ಮದೀನಾ ಎಂಬುವುದು ಪ್ರತಿಯೊಬ್ಬ ವಿಶ್ವಾಸಿಯು ಹಿಜ್ರ ಹೋಗಬೇಕಾದ ಸ್ಥಳ. ಯಾಕೆಂದರೆ ಅದು ಈಮಾನಿನ ಅಭಯ ತಾಣ. ಅಲ್ಲಿ ಮರಣ ಬಯಸುವುದು ಪುಣ್ಯ ಕಾರ್ಯ. ಇಹಪರ ರಕ್ಷೆ , ಪರಲೋಕದಲ್ಲಿ ಪ್ರತ್ಯೇಕ ಶಿಫಾರಸ್ಸು ಹೀಗೆ ಎಲ್ಲವು ಮದೀನಾದಲ್ಲಿದೆ. ಮದೀನಾದ ಮೊದಲ ನಿವಾಸಿಗಳು ನೂಹ್ ನಬಿ(ಅ) ರವರ ಕಾಲದಲ್ಲಿ ನಡೆದ ಮಹಾ ಜಲ ಪ್ರಳಯದ ನಂತರವಾಗಿದೆ ಬಹುತೇಕ ಇತಿಹಾಸದ ಪರಿಗಣನೆ. ಅಂತೆಯೇ ಪವಿತ್ರ ಮದೀನಾದ್ದು ಕೂಡಾ. ಮಹಾ ಪ್ರಳಯ ಮುಗಿದ ನಂತರ ನೂಹ್ ನಬಿ (ಅ) ರವರ ಹಡಗು ಜೂದಿ ಪರ್ವತದ ಮೇಲೆ ನಿಂತಿತು. ಆ ನಂತರ ಮದೀನಾ ಮುನವ್ವರದಲ್ಲಿ ಜೀವಿಸಿದವರು ಯಾರು ಎಂಬುವುದರ ಬಗ್ಗೆ ಪ್ರಮುಖವಾಗಿ ಐದು ಅಭಿಪ್ರಾಯಗಳು ಇತಿಹಾಸಕಾರರ ನಡುವೆ ಇದೆ. ಇವುಗಳಲ್ಲಿ ಅತ್ಯಂತ ಪ್ರಬಲವಾದುದು ಹಡಗಿನಿಂದ ಇಳಿದ ವಿಶ್ವಾಸಿಗಳು ನಂತರ ವಾಸಿಸಿದ್ದು ಬಾಬಿಲ್ ಎಂಬ ಪಟ್ಟಣದಲ್ಲಾಗಿದೆ. ಅಂದು ಅವರು ಬರೀ 80 ಮಂದಿ ಮಾತ್ರವಾಗಿದ್ದರು. ಇವರಲ್ಲಿ ನೂಹ್ ನಬಿ(ಅ) ರವರ ಮಗ ಸಾಮಿನ ಸಂತಾನ ಪರಂಪರೆಯಲ್ಲಿ ಬರುವ ಉಬೈಲ್ ಬಿನ್ ಅವ್ಳ್ ಎಂಬವನ ಮಕ್ಕಳು ಮೊಟ್ಟ ಮೊದಲು ಮದೀನಾದಲ್ಲಿ ಬಂದ ಜೀವಿಸಿದರು.ಈ ಮದೀನಾಗೆ ಯಸ್ರಿಬ್ ಎಂದು ನಾಮ ಬಂದದ್ದು ಇವರಿಂದಾಗಿದೆ. ಉಬೈಲ್ ಬಿನ್ ಅವ್ರ ಮಕ್ಕಳಲ್ಲಿ ಯಸ್‌ರಿಬ್ ಎಂಬವನು ಇಲ್ಲಿಗೆ ಮೊಟ್ಟ ಮೊದಲು ಬಂದವನಾಗಿ ದ್ದಾನೆ. ಆದ್ದರಿಂದ ಆತನ ಹೆಸರು ನೀಡಲಾಯಿತು. 

     *ಮುಂದುವರಿಯುವುದು*

Follow this link to join my WhatsApp group: https://chat.whatsapp.com/DjCbCGNiyBW7StPEIOqUnO

ಇನ್ನು ಮುಂದೆ *"ಮದೀನಾ ಮಹತ್ವ ಇತಿಹಾಸ"* ಲೇಖನಗಳು ಈ ಗ್ರೂಪಿನಲ್ಲಿ..

💞صَلَّى اللَّهُ عَلٰى مُحَمَّدْ صَلَّى اللَّهُ عَلَيهِ وَسَلَّم🌹