ಮದೀನಾ ಮಹತ್ವ ಇತಿಹಾಸ ಅಧ್ಯಾಯ 27

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 27*🍃
         💜💜💜💜💜💜💜

 ❤️ *ಮದೀನಾದಲ್ಲಿ ಮರಣ ಯಾಕೆ ?*
❤️ *ಹುಜ್ರತುಶ್ಯರೀಫ್‌ನಲ್ಲಿರುವ ಖಬ್ರ್ ಗಳು*
❤️ *ಖಬ್‌ರ್ ಗಳು ಹೀಗಿವೆ . . .* 
🌹🌹🌹🌹🌹🌹🌹🌹🌹🌹🌹
                ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಮರಣ ಮಹತ್ವಗಳು ತುಂಬಿರುವ ಮಕ್ಕಾದಲ್ಲಾಗಿರದೆ ಮದೀನಾದಲ್ಲಿ ಏಕೆ ಸಂಭವಿಸಿತು . . ? ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲ ಮರವರು ಮದೀನಾಗೆ ಬರುವುದಕ್ಕಿಂತ ಮುಂಚೆ ಸಂಕಷ್ಟ ಸಮಸ್ಯೆಗಳ ಬೀಡಾಗಿತ್ತು ಅಂದಿನ ಯಸ್ರಿಬ್ , ಯಾರೇ ಅಲ್ಲಿಗೆ ಹೋದರೆ ರೋಗವನ್ನು ಉಚಿತವಾಗಿ ಪಡೆಯುವುದರಲ್ಲಿ ಸಂಶಯವಿರಲಿಲ್ಲ . ಈ ಭೂಮಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ಆಗಮನದಿಂದ ಪುನೀತ ಗೊಂಡಿತು . - ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ತನ್ನ 53ನೇ ವಯಸ್ಸಿನಲ್ಲಿ ಅನಿವಾರ್ಯ ಕಾರಣಕ್ಕಾಗಿ ತಾಯಿನೆಲವಾದ ಮಕ್ಕಾವನ್ನು ಬಿಟ್ಟು ಮದೀನಾಗೆ ಹಿಜ್ರಾ ಬಂದರೂ ಕೆಲವು ವರ್ಷಗಳ ನಂತರ ಮಕ್ಕಾ ಸಂಪೂರ್ಣವಾಗಿ ನಬಿಯವರ ಅಧೀನಕ್ಕೆ ಬರುತ್ತದೆ . ಆದರೂ ಕೂಡಾ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಮರಣ ಹೊಂದಿದಾಗ ಪಾವನ ಶರೀರ ದಫನು ಮಾಡಲ್ಪಟ್ಟಿದ್ದು ಮದೀನಾದಲ್ಲಿ ಇದಕ್ಕಿರುವ ಕಾರಣ ಇಮಾಮರುಗಳು ವಿವರಿಸುತ್ತಾರೆ . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ಪಾವನ ಶರೀರಕ್ಕೆ ಮಹತ್ವವೇನು ಇಲ್ಲ . ಬದಲಾಗಿ ಕಅಬಾಲಯ ಹಾಗೂ ಇನ್ನಿತರ ಮಹತ್ವಗಳಿಂದ ಪ್ರವಾದಿವರ್ಯರ ಪಾವನ ಶರೀರಕ್ಕೆ ಮಹತ್ವ ಬಂದಿದೆ ಎಂದು ಕೆಲವರು ಭಾವಿಸಬಹುದು . ಈ ಭಾವನೆ ಇಲ್ಲವಾಗಿಸಿ “ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಜೀವಿಸಿದ ಹಾಗೂ ಮರಣ ಹೊಂದಿದ ಸ್ಥಳಕ್ಕೆ ಪ್ರವಾದಿವರ್ಯರ ಮೂಲಕ ವಿಶೇಷ ಮಹತ್ವ ಲಭಿಸಿದೆ ” ಎಂಬುವುದನ್ನು ತಿಳಿಸಲು ಸಲುವಾಗಿದೆ ಇದು . ಮಾತ್ರವಲ್ಲ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಖಬ್ರ್ ಮಕ್ಕಾದಲ್ಲಾದರೆ ಹಜ್‌ ಅಥವಾ ಉಮ್ರಾಗೆ ಬಂದವರು ಪ್ರವಾದಿವರ್ಯರ ಖಬ್ರ್ ಸಂದರ್ಶನ ಮಾಡಿ ಹೋಗಬಹುದು . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರನ್ನು ಲಕ್ಷ್ಮವಾಗಿಸಿಕೊಂಡು ಝಿಯಾರತ್‌ಗೆ ಬರದಿರಬಹುದು . ಈ ಪರಿಸ್ಥಿತಿ ಇಲ್ಲವಾಗಿಸಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರನ್ನು ಮಾತ್ರ ಲಕ್ಷವಾಗಿ ಯಾರತ್ ಹೋಗುವಂತೆ ಮಾಡುವುದರ ಸಲುವಾಗಿದೆ ಪಾವನ ಶರೀರವನ್ನು ಮದೀನಾದಲ್ಲಿ ದಫನು ಮಾಡಲ್ಪಟ್ಟದ್ದು . - ಅದೇ ರೀತಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ಜನನ ಮಹತ್ವವಿರುವ ರಮಳಾನ್  ಅಥವಾ ಇನ್ನಿತರ ತಿಂಗಳಲ್ಲಿ ನಡೆಯದೆ ರಬೀವುಲ್ ಅವ್ವಲ್ ತಿಂಗಳಲ್ಲೇಕೆ ನಡೆಯಿತು . . ? ಇಮಾಮರು ಹೇಳುತ್ತಾರೆ “ ರಬೀವುಲ್ ಅವ್ವಲ್ ತಿಂಗಳಿಗೆ ಮಹತ್ವ ಲಭಿಸಿದ್ದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ಜನನದಿಂದಾಗಿದೆ ” ಮಹತ್ವವಿರುವ ತಿಂಗಳುಗಳಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಜನಿಸಿದರು ಎಂದಲ್ಲ.

*ಹುಜ್ರತುಶ್ಯರೀಫ್‌ನಲ್ಲಿರುವ ಖಬ್ರ್ ‌ಗಳು*
............................................................
            ಹುಜುತುಶ್ಶರೀಫಿನಲ್ಲಿ ಈಗ ಇರುವುದು ಮೂರು ಖಬ್ರುಗಳು ಮಾತ್ರ ಪ್ರವಾದಿ ಸ್ವಲ್ಲ ಲ್ಲಾಹು ಅಲೈಹಿವಸಲ್ಲಮರು ಹಾಗೂ ಇಬ್ಬರು ಖಲೀಫರದ್ದು . ಪ್ರವಾದಿವರ್ಯರ ಪಾವನ ಶರೀರ ದಫನು ಮಾಡಲ್ಪಟ್ಟ ಸ್ಥಳದ ಹತ್ತಿರವಾಗಿದೆ ಅಬೂಬಕರ್(ರ) ರವರು ಖಬ್ರ್ ಇರುವುದು . ಅಬೂಬಕರ್(ರ) ರವರು ಜನಾಝವನ್ನು ತೆಗೆದುಕೊಂಡು ಬಂದ ಜನರು ಪ್ರವಾದಿವರ್ಯರ ಖಬ್ರಿನ ಹತ್ತಿರ ಇಟ್ಟು ಸಲಾಂ ಹೇಳುತ್ತಾರೆ. ಅಬೂಬಕರ್‌ರವರು ಬಾಗಿಲಲ್ಲಿದ್ದಾರೆ. ಆಗಲೇ ಬಾಗಿಲು ತೆರೆದುಕೊಂಡು “ ಪ್ರಿಯಕನನ್ನು ಪ್ರಿಯಕನೊಂದಿಗೆ ಸೇರಿಸಿ ” ಎಂದು ಖಬ್ರಿನ ಒಳಗಿನಿಂದ ಶಬ್ದ ಕೇಳಿ ಬಂತು . - ಅಬೂಲುಅ್ ಲುಅತ್ ಎಂಬ ದುಷ್ಟ ವಿಷದಲ್ಲಿ ಮುಳುಗಿಸಿದ ಖಡ್ಗದಲ್ಲಿ ತಿವಿದಾಗ ಉಮರ್(ರ) ಪ್ರಜ್ಞೆ ತಪ್ಪಿ ಬಿದ್ದರು . ಪ್ರಜ್ಞೆ ಮರಳಿದಾಗ ತನ್ನ ಮಗ ಅಬ್ದುಲ್ಲಾಹಿ(ರ) ರವರೊಂದಿಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಹತ್ತಿರ ಮಲಗಲು ಸ್ಥಳ ಸಿಗಬಹುದೆ ? ಎಂದು ವಿಚಾರಿಸಲು ಕಳುಹಿಸಿಕೊಟ್ಟರು . ಆಗ ಆಯಿಷಾ ( ರ ) ರವರು ಹೇಳುತ್ತಾರೆ “ ಈ ಸ್ಥಳವನ್ನು ನನಗಾಗಿ ಮೀಸಲಿರಿಸಿದ್ದೆ . ಉಮರ್ ( ರ ) ರವರು ಕೇಳಿದ್ದರಿಂದ ಬಿಟ್ಟು ಕೊಡುತ್ತಿದ್ದೇನೆ ” ಅಬೂಬಕರ್ ಸಿದ್ದೀಕ್ ( ರ ) ರವರ ಹಿಂದೆ ಉಮರ್ ( ರ ) ರವರನ್ನು ದಫನು ಮಾಡಲಾಯಿತು . * ಈ ಹುಜ್ರತುಶ್ಶರೀಫಿನಲ್ಲಿ ಮೂರು ಖಬ್ರ್‌ ಗಳಾಯಿತು . ಇನ್ನೊಂದು ಖಬ್ರ್‌ ಈ ಹುಜ್ರತುಶ್ಶರೀಫಿನ ಒಳಗೆ ಬರಕ್ಕಿದೆ . ಅದು ಪ್ರವಾದಿ ಈಸಾ ನಬಿ (ಅ) ರವರದ್ದು . ಈಸಾ ನಬಿ ( ಅ ) ರವರು ಬಾನಿನಿಂದ ಇಳಿದು ಬಂದು ಜಗತ್ತಿನಲ್ಲಿ ಕೋಭೆ ತುಂಬುವ ದುಷ್ಟ ದಜ್ಞಾ ಲನು ಸಂಹಾರ ಮಾಡುತ್ತಾರೆ , ಮದೀನಾದಲಿ ಮರಣ ಹೊಂದುವ ಈಸಾ ನಬಿ ( ಅ ) ರವರನು , ಹುಜ್ರತುಶ್ಶರೀಫಿನಲ್ಲಿ ದಫನು ಮಾಡಲಾಗುತ್ತದೆ . ಈ ಬಗ್ಗೆ ಸ್ವಹೀಹಾದ ಹದೀಸ್‌ಗಳಲ್ಲಿ ಬಹಳ ಸ್ಪಷ್ಟವಾಗಿ ಕಾಣಬಹುದು . ಇದರೊಂದಿಗೆ ಹುಜ್ರತುಶ್ಶರೀಫಿನಲ್ಲಿ ನಾಲ್ಕು ಖಬ್ರ್ ಗಳಾಯಿತು . ಆದರೆ ಮಸ್ಜಿದುನ್ನಬವಿಯ ಒಳಗೆ ಹುಜ್ರರತುಶ್ಶರೀಫಿನ ಹತ್ತಿರ ಮತ್ತೊಂದು ಖಬ್ರ್ ಇದೆ ಎಂದು ಹಾಶಿಯತು ಬುಜೈರಿಮಿಯಲ್ಲಿ ಕಾಣಬಹುದು . ಅದು ಖಾಳಿ ಅಬೂ ಶುಜಾಲ್(ರ) ರವರ ಖಬ್ರಾಗಿದೆ . ಅಗರ್ಭ ಶ್ರೀಮಂತರರಾಗಿದ್ದ ಇವರು ಎಲ್ಲವನ್ನು ಬಿಟ್ಟು ಮದೀನಾದಲ್ಲಿ ಬಂದು ಜೀವಿಸ ತೊಡಗಿದರು . ಅಲ್ಲಿ ಹುಜ್ರತುಶರೀಫಿನ ಸೇವಕರಲ್ಲಿ ಒಬ್ಬರು ಮರಣ ಹೊಂದುವ ತನಕ ಮಸೀದಿ ಗುಡಿಸುವುದು , ಹಾಸಿಗೆ ಬಿಡಿಸುವುದು ಮತ್ತು ದ್ವೀಪಗಳಿಗೆ ಬೆಂಕಿ ಹಚ್ಚುವ ಕೆಲಸಗಳನ್ನು ಮಾಡುತ್ತಿದ್ದರು . ಸೇವಕರೊಬ್ಬರ ಮರಣ ನಂತರ ಹುಜ್ರತುಶರೀಫಿನ ಉಸ್ತುವಾರಿ ಇವರಿಗೆ ಲಭಿಸಿತು . ಮರಣ ತನಕ ಹುಜ್ರತುಶ್ಶರೀಫಿನ ಸೇವೆಯಲ್ಲಿ ನಿರತರಾಗಿದ್ದರು . ಮರಣದ ನಂತರ ಅವರು ಮದುನ್ನಬವಿಯ ಬಾಬು ಜಿಬ್ರೀಲ್ ಹತ್ತಿರ ದಫನು ಮಾಡಲಾಯಿತು . ಇವರ ತಲೆ ಪ್ರವಾದಿವರ್ಯರ ಹುಜ್ರತುಶ್ಶರೀಫಿಗೆ ಹತ್ತಿರವಿದೆ . 160 ವರ್ಷಗಳ ಕಾಲ ಜೀವಿಸಿದ ಈ ಮಹಾನುಭಾವರ ಒಂದೇ ಒಂದು ಕೂದಲು ಬಿಳಿಯಾಗಿರಲಿಲ್ಲ . ಶರೀರದ ಚರ್ಮ ಸುಕ್ಕು ಕಟ್ಟಿರಲಿಲ್ಲ . ಇವರು ಹಲವಾರು ಗ್ರಂಥಗಳ ಕರ್ತೃ ಕೂಡಾ ಹೌದು. 

*ಖಬ್‌ರ್ ಗಳು ಹೀಗಿವೆ . . .* 
...........................................................
               ಹುಜ್ರತುಶ್ಶರೀಫಿನಲ್ಲಿ ಪ್ರವಾದಿವರ್ಯರು , ಅಬೂಬಕರ್ ಸಿದ್ದೀಖ್ ( ರ ) ಹಾಗೂ ಉಮರ್ ( ರ ) ರವರ ಖಬ್ರ್‌ಗಳಿವೆ . ಇವುಗಳ ಹೇಗೆ ಇದೆ . . ? ಎಂದು ವಿದ್ವಾಂಸರು ಸ್ಪಷ್ಟ ಪಡಿಸಿದ್ದಾರೆ . ಇದನ್ನು ಮನದಟ್ಟು ಮಾಡಬೇಕಾದ ಅಗತ್ಯವಿದೆ . ಯಾಕೆಂದರೆ ಸಲಾಂ ಹೇಳುವಾಗ ಯಾವ ರೀತಿ ಹೇಳಬೇಕು . . ? ಎಂಬುವುದನ್ನು ಇದು ಕಲಿಸಿಕೊಡುತ್ತದೆ . - ಪ್ರವಾದಿವರ್ಯ ಪವಿತ್ರ ಖಬ್‌ರ್ ಮಿಹ್ರಾಬಿಗಿಂತ ಹಿಂಭಾಗದಲ್ಲಿದೆ . ಅದರ ಹಿಂದೆ ಅಬೂಬಕರ್ ಸಿದ್ದೀಖ್ ( ರ ) ರವರ ಖಬ್‌ರ್ ಇದೆ . ಪ್ರವಾದಿವರ್ಯರನ್ನು ಹೆಗಲ ಭಾಗದಲ್ಲಿ ಸಿದ್ದೀಖ್ (ರ) ರವರ ತಲೆ ಇದೆ . ಅಬೂಬಕರ್ ( ರ ) ರವರ ಹಿಂದೆ ಉಮರ್ ( ರ ) ರವರ ಖಬ್ರ್ ಇದೆ . ಅಬೂಬಕರ್ ( ರ ) ರವರ ಹೆಗಲ ನೇರ ಉಮರ್ ( ರ ) ರವರ ತಲೆ ಇರುವುದು . ಪವಾದಿವರ್ಯರಿಗೆ ಸಲಾಂ ಹೇಳಲು ಹೋದವನು ಖಿಬ್ಲಕ್ಕೆ ವಿರುದ್ದವಾಗಿ ಖಬ್ರಿನ ಗೋಡೆಗೆ ಅಭಿಮುಖವಾಗಿ ನಿಲ್ಲಬೇಕು . ನಂತರ ಪ್ರವಾದಿ ವರ್ಯರಿಗೆ ಸಲಾಂ ಹೇಳಬೇಕು . ಅಲ್ಲಿಂದ ಒಂದು ಅಡಿಯಷ್ಟು ಬಲಭಾಗಕ್ಕೆ ಹಿಂದೆ ಸರಿದು ಅಬೂಬಕರ್ ( ರ ) ರವರಿಗೆ ಸಲಾಂ ಹೇಳಬೇಕು ಕಾರಣ ಪ್ರವಾದಿವರ್ಯರ ಹೆಗಲ ಬಳಿಯಾಗಿದೆ ಸಿದ್ದೀಕ್ ( ರ ) ರವರು ತಲೆ ಇರುವುದು . ನಂತರ ಪುನಃ ಒಂದು ಅಡಿಯಷ್ಟು ಬಲಭಾಗಕ್ಕೆ ಹಿಂದೆ ಸರಿದು ಉಮರ್ ( ರ ) ರವರಿಗೆ ಸಲಾಂ ಹೇಳಬೇಕು . ಅಬೂಬಕರ್ ಸಿದ್ದೀಖ್ ( ರ ) ರವರ ಹೆಗಲ ಭಾಗದಲ್ಲಾಗಿದೆ ಉಮರ್ ( ರ ) ರವರು ತಲೆ ಇರುವುದು.

     *ಮುಂದುವರಿಯುವುದು*