ಮದೀನಾ ಮಹತ್ವ ಇತಿಹಾಸ ಅಧ್ಯಾಯ 26

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 26*🍃
         💜💜💜💜💜💜💜

 ❤️ *ಮಿಂಬರಿನ ಮಹತ್ವ*
 ❤️ *ರೌಳಾ ಶರೀಫ್*
 ❤️ *ಹುಜ್ರತುಶ್ಶರೀಫಃ*
🌹🌹🌹🌹🌹🌹🌹🌹🌹🌹🌹   
              ಪ್ರವಾದಿವರ್ಯರ ಮಿಂಬರಿಗೆ ಹಲವಾರು ಮಹತ್ವಗಳಿವೆ. ಆರಾಧನೆಗಳಿಗೆ ದುಪ್ಪಟ್ಟು ಪುಣ್ಯಗಳು ಲಭಿಸುವ ರೌಳಾ ಶರೀಫ್ ಇರುವುದು ಮಿಂಬರ್ ಮತ್ತು ಹುಜ್ರತುಶರೀಫಿನ ನಡುವೆಯಾಗಿದೆ . ಸಹ್ಲ್ ಬಿನ್ ಸಅದ್(ರ) ರವರಿಂದ ವರದಿ ; ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ; ನನ್ನ ಮಿಂಬರ್ ಸರ್ಗದ ಕದಗಳಲ್ಲಿ ಒಂದು ಕದವಾಗಿದೆ. ಈ ಮಿಂಬರಿನ ಮಹತ್ವವನ್ನು ಸೂಚಿಸುವ ಒಂದು ಘಟನೆಯನ್ನು ನುಲ್ಮಾನ್ ಬಿನ್ ಬಶೀರ್ (ರ) ರವರು ವರದಿ ಮಾಡಿದ್ದಾರೆ . “ ಒಂದು ಜುಮುಅ ದಿನದಂದು ನಾನು ಪ್ರವಾದಿ ವರ್ಯರ ಮಿಂಬರಿನ ಬಳಿಯಿದ್ದೆ . ಆಗ ಸ್ವಹಾಬಿಯೊಬ್ಬರು ಹೇಳಿದರು “ ಇಸ್ಲಾಮನ್ನು ಬಿಟ್ಟರೆ ಒಳ್ಳೆಯ ಸತ್ಕರ್ಮ ಹಜ್ ಯಾತ್ರಿಕರಿಗೆ ಜಲಪಾನ ಮಾಡುವುದು ಮತ್ತೊಬ್ಬರು ಹೇಳಿದರು “ ಇಸ್ಲಾಮನ್ನು ಬಿಟ್ಟರೆ ಉತ್ತಮ ಸತ್ಕರ್ಮ ಮಸ್ಜಿದುಲ್ ಹರಾಮಿನ ಸೇವೆ ಮಾಡುವುದು ” ಅಲ್ಲಿದ್ದ ಬೇರೊಬ್ಬರು ಹೇಳುತ್ತಾರೆ “ ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ನಡೆಸುವುದು ನೀವೆಲ್ಲರು ಹೇಳಿದಕ್ಕಿಂತ ಉತ್ತಮ ಸತ್ಕರ್ಮವಾಗಿದೆ ” ಈ ವಾದ - ವಿವಾದಗಳ ನಡೆಯುವ ಸ್ಥಳಕ್ಕೆ ಬಂದ ಉಮರ್ (ರ) ರವರು ಅವರಲ್ಲಿ ಹೇಳಿದರು . “ ಪ್ರವಾದಿವರ್ಯರ ಮಿಂಬರಿನ ಬಳಿ ಶಬ್ದವೆತ್ತಿ ಮಾತನಾಡಬೇಡಿರಿ . ಪ್ರವಾದಿ ವರ್ಯರು ಈ ಮಿಂಬರಿ ಅಷ್ಟೊಂದು ಮಹತ್ವವನ್ನು ಕಲ್ಪಿಸುತ್ತಿದ್ದರು . ಇದನ್ನು ಖರ್‌ಆನ್ ಹೇಳುವುದು ನೋಡಿ .  - “ ಹಜ್ ಯಾತ್ರಿಕರಿಗೆ ಜಲಪಾನ ಮಾಡಿಸುವುದನ್ನು ಮತ್ತು ಮಸ್ಜಿದುಲ್ ಹರಾಮಿನ ಸೇವೆಯನ್ನು ನೀವು ಅಲ್ಲಾಹು ಮತ್ತು ಪರಲೋಕದಲ್ಲಿ ವಿಶ್ವಾಸವಿಟ್ಟು ಅಲ್ಲಾಹನ ಮಾರ್ಗದಲ್ಲಿ ಹೋರಾಟ ನಡೆಸುವವನ ಕರ್ಮಕ್ಕೆ ಸರಿಸಮಾನವೆಂದು ಪರಿಗಣಿಸಿದ್ದೀರಾ ? ಅದರ ಅಲ್ಲಾಹನ ಬಳಿ ಸಮನರಾಗುವುದಿಲ್ಲ . ಅಧರ್ಮಿಗಳಾದ ಜನರನ್ನು ಅಲ್ಲಾಹನು ಸನ್ಮಾರ್ಗಕ್ಕೆ ತರುವುದಿಲ್ಲ . ( ತೌಬಾ - 19 ) 

*ರೌಳಾ ಶರೀಫ್*
..............................................................
               ಮಸ್ಜಿದುನ್ನಬವಿಯ ಮತ್ತೊಂದು ಪುನೀತ ಸ್ಥಳವಾಗಿದೆ ರೌಳಾ ಶರೀಫ್ , ಪ್ರತಿಯೊಂದು ವಿಶ್ವಾಸಿ ಹೃದಯ ಇಲ್ಲಿ ಆರಾಧನೆ ನಿರ್ವಹಿಸಲು ಸದಾ ತವಕಿಸುತ್ತಿರುತ್ತದೆ . ರೌಳಾ ಶರೀಫ್ ಎಂದರೆ ಪ್ರವಾದಿವರ್ಯರ ಮಿಂಬರ್ ಹಾಗೂ ಹುಜ್ರತುಶ್ಶರೀಫಿನ ನಡುವೆ ಇರುವ ಸ್ಥಳವಾಗಿದೆ . ಹುಜಿರತುಶ್ಶರೀಫ್ ಎಂದರೆ ಪ್ರವಾದಿವರ್ಯರ ಪಾವನ ಶರೀರ ದಫನು ಮಾಡಲ್ಪಟ್ಟ ಸ್ಥಳ . ಈ ಸ್ಥಳಕ್ಕಿರುವ ಹಲವಾರು ಮಹತ್ವಗಳು ಹದೀಸಿನಲ್ಲಿ ವರದಿಯಾಗಿದೆ.
ಪ್ರವಾದಿವರ್ಯರು ಇದನ್ನು 'ಸ್ವರ್ಗೀಯ ಉದ್ಯಾನ ' ಎಂದು ಬಣ್ಣಿಸಿದ್ದಾರೆ. - ಅಬೂ ಹುರೈರಾ ( ರ ) ರವರಿಂದ ವರದಿ ; “ ನನ್ನ ಮನೆ ಮತ್ತು ಮಿಂಬರಿನ ನಡುವೆರುವ ಸ್ಥಳ ಸ್ವರ್ಗದ ಉದ್ಯಾನಗಳಲ್ಲಿ ಒಂದು ಉದ್ಯಾನವಾಗಿದೆ ” ( ಬುಖಾರಿ - ಮುಸ್ಲಿಂ ) ಈ ಸ್ಥಳದಲ್ಲಿ ನಿರ್ವಹಿಸಲ್ಪಟ್ಟ ಆರಾಧನೆಗೆ ಸ್ವೀಕೃತಿ ಖಡಾ ಖಂಡಿತ , ಪ್ರಾರ್ಥನೆಗೆ ಉತ್ತರ ಲಭಿಸುತ್ತದೆ . ಅಲ್ಲಾಹನ ವಿಶೇಷ ಕರುಣೆಗೆ ಪಾತ್ರರಾಗಲು ಈ ಸ್ಥಳದಲ್ಲಿ ಇಬಾದತ್ ಬೇಕೇ ಬೇಕು . ಸತ್ಕರ್ಮಗಳಿಗೆ ದುಪ್ಪಟ್ಟು ಪುಣ್ಯ ಲಭಿಸುತ್ತದೆ . ಆದ್ದರಿಂದ ಈ ಸ್ಥಳ ಎಂದೂ ಜನ ಜಂಗುಳಿಯಿಂದ ತುಂಬಿರುತ್ತದೆ . ಕನಿಷ್ಠ ಪಕ್ಷ ಎರಡು ರಕ್ ಅತ್ ನಮಾಝ್ ಮಾಡಲು ಸಿಗಬಹುದೇ ಎಂದು ತವಕಿಸದವರು ಯಾರೂ ಇರಲಾರರು . ಹುಜ್ರತುಶ್ಶರೀಫ್ ಹಾಗೂ ಮಿಂಬರಿನ ನಡುವೆ ಸುಮಾರು 53 ಅಡಿಗಳಷ್ಟು ಅಂತರವಿದೆ . ಈ ಸ್ಥಳದಲ್ಲಿ ನಮಾಜ್ ಮಾಡಲು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಪ್ರತ್ಯೇಕ ಪ್ರೇರಣೆ ನೀಡಿದ್ದಾರೆ . ಆಯಿಷಾ ( ರ ) ರರವರಿಂದ ವರದಿ ; “ ಮಸೀದಿಯ ಈ ಸ್ಥಂಬದ ಹತ್ತಿರ ಒಂದು ಸ್ಥಳವಿದೆ . ಅಲ್ಲಿ ನಮಾಜ್ ಮಾಡುವುದರ ಮಹತ್ವ ಜನರು ತಿಳಿದಿದ್ದರೆ ಚೀಟಿ ಎತ್ತ ಬೇಕಾಗುತಿತ್ತು ” 

*ಹುಜ್ರತುಶ್ಶರೀಫಃ*
..............................................................
               ಪ್ರವಾದಿವರ್ಯರ ಪಾವನ ಶರೀರವನ್ನು ದಫನು ಮಾಡಲ್ಪಟ್ಟ ಸ್ಥಳವಾಗಿದೆ ಹುಜ್ರತುಶ್ಶರೀಫ್ , ವಾಸ್ತವದಲ್ಲಿ ಇದು ಆಯಿಷಾ ( ರ ) ರವರ ಮನೆ . ಪ್ರವಾದಿವರ್ಯರನ್ನು ಅಲ್ಲಿ ಮರಣ ಹೊಂದಿದ ಕಾರಣ ಅಲ್ಲೇ ಧಪನು ಮಾಡಲಾಯಿತು . ಪ್ರವಾದಿವರ್ಯರಿಗೆ ಮರಣ ಹೊಂದುವುದಕ್ಕಿಂತ ಮುಂಚೆ ತೀವ್ರ ತರದ ಜ್ವರ ಬಂದಿತ್ತು . ಇತರ ಪತ್ನಿಯರ ಸಮ್ಮತಿಯಂತೆ ಪ್ರವಾದಿವರ್ಯರು ಆಯಿಷಾ ( ರ ) ರವರ ಮನೆಯಲ್ಲಿ ವಾಸಿಸತೊಡಗಿದರು . ನಂತರ ಆಯಿಷಾ ( ರ ) ರವರ ಮಡಿಲಲ್ಲಿ ತಲೆಯಿಟ್ಟ ಪ್ರವಾದಿವರ್ಯರು ಮರಣ ಹೊಂದಿದರು . “ ಪ್ರವಾದಿವರ್ಯರು ಮರಣ ನನ್ನ ಮನೆಯಲ್ಲಾಗಿರುವುದು ಅಲ್ಲಾಹನು ನೀಡಿದ ಅತ್ಯಂತ ದೊಡ್ಡ ಅನುಗ್ರಹ ” ಎಂದು ಆಯಿಷಾ ( ರ ) ರವರು ಹೇಳಿದ್ದಾರೆ . ಪ್ರವಾದಿವರ್ಯರ ಪಾವನ ಶರೀರ ಎಲ್ಲಿ ದಫನು ಮಾಡಬೇಕೆಂಬುವುದರ ಬಗ್ಗೆ ಹಲವಾರು ಅಭಿಪ್ರಾಯಗಳು ಸ್ವಹಾಬಿಗಳ ನಡುವೆ ಬಂದಾಗ ಅಬೂಬಕರ್ ಸಿದ್ದೀಖ್ ( ರ ) ರವರು ಸೂಕ್ತ ಪರಿಹಾರ ಒದಗಿಸಿದರು . ಇದನ್ನು ಈ ಮುಂಚೆ ವಿವರಿಸಲಾಗಿದೆ . ಹೀಗೆ ಅಬೂಬಕರ್ ಸಿದ್ದೀಖ್ ( ರ ) ರವರ ಅಂತಿಮ ತೀರ್ಮಾನದಂತೆ ಮರಣ ಹೊಂದಿದ ಸ್ಥಳದಲ್ಲಿ ಅಂದರೆ ಆಯಿಷಾ ( ರ ) ರವರ ಮನೆಯಲ್ಲಿ ದಫನು ಮಾಡಲಾಯಿತು . ಪ್ರವಾದಿವರ್ಯರ ಪಾವನ ಶರೀರವನ್ನು ಸ್ಪರ್ಶಗೊಂಡಿರುವ ಪರಿಸರದ ಮಣ್ಣು ಜಗತ್ತಿನಲ್ಲಿ ಅತ್ಯಂತ ಮಹತ್ವವಿರುವ ಮಣ್ಣು . ಜಗತ್ತಿನಲ್ಲಿ ಅತ್ಯಂತ ಮಹತ್ವವಿರುವ ಸ್ಥಳ ಕೂಡಾ ಇದುವೆ .ಆ ಮಣ್ಣನ್ನು ತುಟಿಗಳಿಂದ ಚುಂಬಿಸುವ ಭಾಗ್ಯ ಲಭಿಸಿದವರಂತೆ ಅದೃಷ್ಟವಂತರು ಯಾರಿ ದ್ದಾರೆ ? ಪ್ರವಾದಿವರ್ಯರ ಕೀರ್ತನೆಗಳನ್ನು ಕವಿತೆಗಳ ಮೂಲಕ ಜಗತ್ತಿಗೆ ಪ್ರಸರಿಸಿದ ಕಾವ್ಯ ಸಾಮ್ರಾಜ್ಯದ ಸಾಮ್ರಾಟ ಇಮಾಂ ಬುಸೂರಿ ( ರ ) ರವರು ತನ್ನ ' ಖಸ್ವೀದತುಲ್ ಬುರ್ದಾ ' ಎಂಬ ಕಾವ್ಯ ಸಮಾಹಾರದಲ್ಲಿ ಹೇಳುವುದನ್ನು ನೋಡಿ “ ಅವರ ಶರೀರದೊಂದಿಗೆ ಸೇರಿದ ಮಣ್ಣಿಗಿಂತ ಶ್ರೇಷ್ಟವಾದ ಪರಿಮಳ ವಸ್ತುವಿಲ್ಲ . ಆ ಮಣ್ಣನ್ನು ಮುದ್ದಿಸಲು ಮತ್ತು ಆಸ್ವಾದಿಸಲು ಅವಕಾಶ ದೊರೆತವನು ಭಾಗ್ಯಶಾಲಿ ”

     *ಮುಂದುವರಿಯುವುದು*