ಮದೀನಾ ಮಹತ್ವ ಇತಿಹಾಸ ಅಧ್ಯಾಯ 23

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 23*🍃
         💜💜💜💜💜💜💜

 ❤️ *ಮಸ್ಜಿದುನ್ನಬವಿಯ ಬಾಗಿಲುಗಳು*
 
🌹🌹🌹🌹🌹🌹🌹🌹🌹🌹🌹
                ಮಸ್ಜಿದುನ್ನಬವಿಗೆ ಹಲವಾರು ಬಾಗಿಲುಗಳಿದ್ದರೂ ಕೆಲವೊಂದಕ್ಕೆ ವಿಶೇಷವಾದ ಮಹತ್ವವಿದೆ. ಈ ವಿಶೇಷತೆಗಿರುವ ಕಾರಣ ಮಹಾತ್ಮರೊಂದಿಗಿನ ಭಾಂಧವ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಹಾಗೂ ಸ್ವಹಾಬಿಗಳ ಕಾಲದಲ್ಲಿ ನಿರ್ಮಾಣಗೊಂಡತಹ ಬಾಗಿಲುಗಳಿಗೆ ಹಲವಾರು ವಿಶೇಷತೆಗಳಿವೆ. ಮದುನ್ನಬವಿಯ ಅಂತಹ ಬಾಗಿಲುಗಳಲ್ಲಿ ಕೆಲವೊಂದನ್ನು ನೋಡೋಣ .
1=ಬಾಬು ಜಿಬ್ರೀಲ್: 
     ಇದು ಮಸ್ಜಿದುನ್ನಬವಿಯ ಪೂರ್ವ ಭಾಗದಲ್ಲಿದೆ. ಇದಕ್ಕೆ ಬಾಬು ಜಿಬ್ರೀಲ್ ಎಂಬ ಹೆಸರು ಬರಲು ಕಾರಣ ಜಿಬೀಲ್(ಅ) ರವರು ಕುದುರೆಯ ಮೇಲೆ ಬಂದು ಈ ಬಾಗಿಲಿನ ಹತ್ತಿರ ನಿಂತರು. ನಂತರ ಪ್ರವಾದಿವರ್ಯರೊಂದಿಗೆ ಖೈಬರಿಗೆ ಯುದ್ಧ ಮಾಡಲು ಸೂಚಿಸಿದ್ದರು. ಇದಕ್ಕೆ ಬಾಬುನ್ನಬಿಯ್ಯ್ ಎಂಬ ಹೆಸರು ಕೂಡಾ ಇದೆ . ಕಾರಣ ಪ್ರವಾದಿವರ್ಯರು ಈ ಬಾಗಿಲಿನ ಮೂಲಕ ಮಸೀದಿಯ ಒಳಗೆ ಬರುತ್ತಿದ್ದರು . ಪ್ರವಾದಿವರ್ಯರ ಕಾಲದಲ್ಲಿ ಮುಸ್ಜಿದುನ್ನಬವಿಯ ಪೂರ್ವಭಾಗದಲ್ಲಿ ಈ ಬಾಗಿಲಲ್ಲದೆ ಬೇರೆ ಇರಲಿಲ್ಲ.

2= ಬಾಬುರ್ರಹ್ಮ - 
       ಇದು ಮಸ್ಜಿದುನ್ನಬವಿಯ ಪಶ್ಚಿಮ ಭಾಗದಲ್ಲಿದೆ. ಇದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮಸೀದಿ ನಿರ್ಮಿಸುವಾಗ ತೆರೆದ ಬಾಗಿಲುಗಳಲ್ಲಿ ಒಂದಾಗಿದೆ. ಇದಕ್ಕೆ ಬಾಬುರ್ರಹ್ಮ(ಕರುಣೆಯ ಬಾಗಿಲು) ಎಂಬ ಹೆಸರು ಬರಲು ಕಾರಣ ಮದೀನಾದಲ್ಲಿ ಕ್ಷಾಮ ಉಂಟಾಯಿತು. ಪ್ರವಾದಿವರ್ಯರು ಖುತುಬಾ ಓದುತ್ತಿದಾಗ ಸ್ವಹಾಬಿಯೊಬ್ಬರು ಮಳೆಗಾಗಿ ಪ್ರಾರ್ಥಿಸಲು ಪ್ರವಾದಿವರ್ಯರಲ್ಲಿ ಹೇಳಲು ಬಂದದ್ದು ಈ ಬಾಗಿಲಿನ ಮೂಲಕವಾಗಿದೆ. ಹಾಗೆ ಅವರಿಗೆ ಕರುಣೆಯ ಬಾಗಿಲು ತೆರೆಯಲ್ಪಟ್ಟಿತು. ಪ್ರವಾದಿವರ್ಯರ ಪ್ರಾರ್ಥನೆಯ ಫಲವಾಗಿ ಮದೀನಾದಲ್ಲಿ ಧಾರಾಳ ಮಳೆಯಾಯಿತು. ಮಳೆ ಅಲ್ಲಾಹನ ರಹ್ಮತ್ತಾಗಿದೆ. ರಹ್ಮತ್ತಾದ ಮಳೆಯನ್ನು ಬೇಡಲು ಬಂದದ್ದು ಈ ಬಾಗಿಲಿನ ಮೂಲಕ . ಈ ಬಾಗಿಲಿಗೆ ' ಬಾಬು ಆತಿಕ ' ಎಂಬ ಹೆಸರು ಕೂಡಾ ಇದೆ. ಕಾರಣ ಈ ಬಾಗಿಲು ಸ್ವಹಾಬಿ ವನಿತೆಯಾದ ಆತಿಕ ಬಿಂತ್ ಅಬ್ದುಲಾಹಿರಯವರ ಮನೆಯ ಮುಂದೆ ಇದೆ. 

3=ಬಾಬುನ್ನಿಸಾಅ್ : 
       ಇದು ಮಸ್ಜಿದುನ್ನಬವಿಯ ಪಶ್ಚಿಮ ಭಾಗದಲ್ಲಿದೆ . ಹಿಜ್ರಾ 17ನೇ ವರ್ಷ ಮಸ್ಜಿದುನ್ನಬವಿಯ ಪುನರ್‌ನಿರ್ಮಾಣ ಮಾಡುವಾಗ ಉಮರ್(ರ) ರವರು ಈ ಬಾಗಿಲನ್ನು ತೆರೆದರು. ನಂತರ ಇದಕ್ಕೆ ಬಾಬುನ್ನಿಸಾಅ್' ಮಹಿಳೆಯರ ಬಾಗಿಲು' ಎಂದು ನಾಮಕರಣ ಮಾಡಿದರು. “ ಈ ಬಾಗಿಲು ಮಹಿಳೆಯರಿಗಾಗಿ” ಎಂದು ಉಮರ್(ರ) ರವರು ಹೇಳಿದಾಗ ಇಬ್ನ್ ಉಮರ್ (ರ) ರವರು ನಂತರ ಮರಣ ತನಕ ಆ ಬಾಗಿಲಿನ ಮೂಲಕ ಮಸೀದಿಯ ಒಳಗೆ ಹೋಗಲಿಲ್ಲ. 

4 =ಬಾಬು ಅಬೂಬಕರ್ ಸಿದ್ದೀಕ್     
      ಮಸ್ಜಿದುನ್ನಬವಿಯಲ್ಲಿರುವ ಇದೊಂದು ಸಣ್ಣ ಬಾಗಿಲು. ಇಂತಹ ಸಣ್ಣ ಬಾಗಿಲುಗಳು ಹಲವರಿಗಿತ್ತು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅಬೂಬಕರ್ ಸಿದ್ದೀಖ್(ರ) ರ ಬಾಗಿಲು ಬಿಟ್ಟು ಬೇರೆ ಎಲ್ಲವನ್ನು ಮುಚ್ಚಲು ಆಜ್ಞಾಪಿಸಿದರು. ಪ್ರವಾದಿವರ್ಯರು ಮರಣ ಶಯ್ಯೆಯಲ್ಲಿರುವಾಗ ಅಬೂಬಕರ್ ಸಿದ್ದೀಖ್(ರ) ರವರೊಂದಿಗೆ ನಮಾಝ್‌ಗೆ ನೇತೃತ್ವ ನೀಡಲು ಹೇಳಿದರು. ಇದಕ್ಕಾಗಿ ಅವರ ಬಾಗಿಲನ್ನು ಹಾಗೆ ಇಡಲಾಗಿದೆ. ಇದು ಪ್ರವಾದಿವರ್ಯ ರ ವಫಾತಿನ ನಂತರ ಖಿಲಾಫತನ್ನು ವಹಿಸಿಕೊಳ್ಳುವುದರ ಬಗ್ಗೆ ಸೂಚನೆಯಾಗಿತ್ತು. ಮಸ್ಜಿದುನ್ನಬವಿಯ ಪಶ್ಚಿಮ ಭಾಗದಲ್ಲಿರುವ ಈ ಬಾಗಿಲು ಬಾಬು ಸಲಾಮಿಗೆ 20 ಅಡಿ ಹತ್ತಿರದಲ್ಲಿದೆ .

5=ಬಾಬುಸ್ಸಲಾಂ 
     ಇದು ಮಸ್ಜಿದುನ್ನಬವಿಯ ಪಶ್ಚಿಮ ಭಾಗದಲ್ಲಿದೆ. ಉಮರ್ (ರ) ರವರು ಮಸ್ಜಿದುನ್ನಬವಿ ಯ ಪುನರ್ ನಿರ್ಮಾಣದ ಸಮಯದಲ್ಲಿ ಈ ಬಾಗಿಲನ್ನು ತೆರೆದರು. ಪ್ರವಾದಿವರ್ಯರಿಗೆ ಸಲಾಂ ಹೇಳಲು ಹೋಗುವುದು ಈ ಬಾಗಿಲ ಮೂಲಕವಾಗಿದೆ. ಆದರಿಂದ ಇದಕ್ಕೆ ಬಾಬು ಸಲಾಂ ಎಂದು ನಾಮಕರಣ ಮಾಡಲಾಗಿದೆ. 

6=ಬಾಬು ಉಮರ್ ಬಿನ್ ಖತ್ತಾಬ್
        ಇದು ಮಸ್ಜಿದುನ್ನಬವಿಯ ಉತ್ತರ ಭಾಗದಲ್ಲಿದೆ. ಇದು ಬಾಬುರಹ್ಮ ಹಾಗೂ ಬಾಬುಸ್ಸಲಾಮ ಮಧ್ಯೆಯಿದೆ. 
 
     *ಮುಂದುವರಿಯುವುದು*