ಮದೀನಾ ಮಹತ್ವ ಇತಿಹಾಸ,ಅಧ್ಯಾಯ 22

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 22*🍃
         💜💜💜💜💜💜💜

 ❤️ *ಸುಲ್ತಾನ್ ಖಾಇತುಬಾಯಿರವರ ಕಾಲದಲ್ಲಿ*
 ❤️ *ಅಬ್ದುಲ್ ಮಜೀದಿಲ್ ಉಸ್ಮಾನಿ* 
 ❤️ *ಆಲು ಸಊದರ ಆಡಳಿತದಲ್ಲಿ . . .*
🌹🌹🌹🌹🌹🌹🌹🌹🌹🌹🌹
          ಅಬ್ಬಾಸೀ ಖಿಲಾಫತಿನ ಅಂತ್ಯದ ನಂತರ ಮದೀನಾ ಮುನವ್ವರದ ಜವಾಬ್ದಾರಿ ಈಜಿಪ್ತ್ ಗೆ ವರ್ಗಾವಣೆಯಾಯಿತು. ಅಲ್ಲಿನ ರಾಜರು ಮಸೀದಿಯನ್ನು ಉತ್ತಮಗೊಳಿಸುವುದರಲ್ಲಿ ಬಹಳ ಉತ್ಸುಕರಾಗಿದ್ದರು. ಇವರಲ್ಲಿ ಪ್ರಮುಖರಾಗಿದ್ದಾರೆ ಸುಲ್ತಾನ್‌ ಖಾಇತುಬಾಯಿ. ಹಿಜ್ರಾ 886ರಲ್ಲಿ ಮದೀನಾ ಮಸೀದಿಯಲ್ಲಿ ಎರಡನೇ ಬಾರಿ ಅಗ್ನಿ ದುರಂತ ಉಂಟಾಯಿತು ಮಸೀದಿ ಮಿನಾರಕ್ಕೆ ಸಿಡಿಲು ಬಡಿದದ್ದೇ ಈ ಅಗ್ನಿ ದುರಂತಕ್ಕೆ ಕಾರಣ. ಮಸೀದಿಯ ಮೇಲ್ಚಾವಣಿಗೆ ಬೆಂಕಿ ತಗುಲಿ ವ್ಯಾಪಕವಾದಾಗ ಜನರಿಗೆ ನಂದಿಸಲು ಸಾಧ್ಯವಾಗಲಿಲ್ಲ. ಮಸೀದಿ ಪೂರ್ಣವಾಗಿ ವ್ಯಾಪಿಸಿದ ಈ ಬೆಂಕಿಯಿಂದಾಗಿ ಬಹುತೇಕ ನಾಶವಾಯಿತು. ಈ ವಿಷಯ ತಿಳಿದು ಸುಲ್ತಾನ್ ಖಾಇತುಬಾಯಿಗೆ ಸಹಿಸಲಾಗದ ದುಃಖ ಉಂಟಾಯಿತು. ಈ ಮಸೀದಿಯ ನಿರ್ಮಾಣಕ್ಕೆ ಬೇಕಾಗಿ ಸಕಲ ಸಿದ್ಧತೆ ಮಾಡಿದ ಅವರು ನಿರ್ಮಾಣ ಪ್ರಕ್ರಿಯೆಯಲ್ಲಿ ಪಳಗಿದವರನ್ನು ಮದೀನಾಗೆ ಕಳುಹಿಸಿಕೊಟ್ಟರು. ಹಿಂದಿಗಿಂತಲೂ ಉತ್ತಮ ವಿನ್ಯಾಸವಿರುವ ಮಸೀದಿ ನಿರ್ಮಿಸಿದರು. 

*ಅಬ್ದುಲ್ ಮಜೀದಿಲ್ ಉಸ್ಮಾನಿ* 
...........................................................
           ಸುಲ್ತಾನ್ ಖಾಇತುಬಾಯಿಯ ನಂತರ ಮಸ್ಜಿದುನ್ನಬವಿಯ ನಿರ್ಮಾಣ ಪ್ರಕ್ರಿಯೆ ನಡೆದದ್ದು ಹಿಜ್ರಾ 1265ರಲ್ಲಾಗಿದೆ . ಸುಮಾರು 400 ವರ್ಷಗಳ ಕಾಲ ಯಾವುದೇ ವಿಕಸನವಿಲ್ಲದೆ ಹಾಗೆ ಮಸೀದಿಯ ಗೋಡೆಗಳು ಬಿರುಕುಬಿಟ್ಟಿದ್ದವು. ಜನರ ನಮಾಜ್‌ಗೆ ತೊಂದರೆ ಯಾಗದಂತೆ ಮಸೀದಿಯ ಒಂದೊಂದು ಭಾಗವನ್ನು ಕೆಡವಿ ನಿರ್ಮಿಸುತ್ತಿದ್ದರು. ಒಂದು ಭಾಗ ಮುಗಿದ ನಂತರ ಮುಂದಿನ ಭಾಗದ ನಿರ್ಮಾಣದಲ್ಲಿ ತೊಡಗುತ್ತಿದ್ದರು.ಈಜಿಪ್ತ್ ನ ಆಡಳಿತ ಕೊನೆಗೊಂಡ ನಂತರ ಮದೀನಾ ಮುನವ್ವರದ ಮೇಲ್ನೋಟ ಉಸ್ಮಾನಿಯ ಖಿಲಾಫತಿನ ಅಧೀನಕ್ಕೆ ಬಂತು . ಉಸ್ಮಾನಿಯ ಖಿಲಾಫತಿನಲ್ಲಿ ಪ್ರಮುಖರಾದ ಅಬ್ದುಲ್ ಮಜೀದ್ ಎಂಬವರು ಈ ಮಸೀದಿಯ ಪುನರ್ ನಿರ್ಮಾಣ ಪಕ್ರಿಯೆಯನ್ನು ಹಿಜ್ರಾ 1265ರಲ್ಲಿ ಆರಂಭಿಸಿ ಹಿಜ್ರಾ 1277ರಲ್ಲಿ ಕೊನೆಗೊಳಿಸಿದರು. 

*ಆಲು ಸಊದರ ಆಡಳಿತದಲ್ಲಿ . . .*
...........................................................
            ಮದೀನಾದ ಆಡಳಿತ  ಸಊದ್ ರಾಜ್ಯವಂಶಕ್ಕೆ ಸಿಕ್ಕಿದ ನಂತರ ಮದೀನಾದ ಚಿತ್ರಣ ಸಂಪೂರ್ಣವಾಗಿ ಬದಲಾಯಿತು. ನಂತರದ ಕಾಲ ವಿಕಸನದ ಸ್ವರ್ಣಯುಗ ಮದೀನಾ ಮುನವ್ವರದ ಅಭಿವೃದ್ಧಿಯಲ್ಲಿ ಸಕ್ರಿಯರಾದ ಪ್ರಮುಖ ನಾಲ್ಕು ರಾಜರುಗಳಾಗಿದ್ದಾರೆ.
1 .ಅಬ್ದುಲ್ ಅಝೀಝ್ ಬಿನ್ ಅಬ್ದುರಹ್ಮಾನ್ 
2 . ಫೈಸ್ವಲ್ ಬಿನ್ ಅಬ್ದುಲ್ ಅಝೀಝ್ 
3 . ಖಾಲಿದ್ ಬಿನ್ ಅಬ್ದುಲ್ ಅಝೀಝ್ 
4 . ಫಹ್‌ದ್ ಬಿನ್ ಅಬ್ದುಲ್ ಅಝೀಝ್ 
       ಉವರಲ್ಲಿ ಫಹ್‌ದ್ ಬಿನ್ ಅಬ್ದುಲ್ ಅಝೀಝ್ ಕಾಲದಲ್ಲಾಗಿದೆ ಇಂದು ಕಾಣವ ಎಲ್ಲಾ ಬದಲಾವಣೆಗಳು ಉಂಟಾಗಿದ್ದು. ಇವರನ್ನು ಕರೆಯುವುದೇ ಖಾದಿಮುಲ್ ಹರಮೈನಿಶ್ಶರೀಫೈನಿ ಎಂದು. ಅಂದರೆ ಪವಿತ್ರ ಎರಡು ಹರಮ್‌ಗಳ ಸೇವಕ , ಇತಿಹಾಸದಲ್ಲಿ ಎಂದೂ ಕಾಣದ ಅಭಿವೃದ್ಧಿ ಇಂದು ಮಕ್ಕಾ  ಮದೀನಾದಲ್ಲಿ ಇವರಿಂದ ಉಂಟಾಗಿದೆ . ಅತ್ಯಾಧುನಿಕ ಸೌಕರ್ಯಗಳು ಏನೆಲ್ಲ ಇವೆ ಅವುಗಳು ಮಕ್ಕಾ - ಮದೀನಾದಲ್ಲಿ ಇಂದು ಲಭ್ಯವಿದೆ . ವರ್ಷ ದಿಂದ ವರ್ಷಕ್ಕೆ ಹೆಚ್ಚಳವಾಗುವ ಹಜ್ ಯಾತ್ರಿಕರ ಸಂಖ್ಯೆಗೆ ಅನುಗುಣವಾಗಿ ಸೌಕರ್ಯವನ್ನು ಹೆಚ್ಚಿಸುವಲ್ಲಿ ಈ ಆಡಳಿತ ಯಶಸ್ಸು ಕಂಡಿದೆ.

     *ಮುಂದುವರಿಯುವುದು*