ಸಂಗ್ರಹ: ಯಾಸೀನ್ ನಾವೂರ್ 🍃 ಅಧ್ಯಾಯ 12

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 12*🍃
         💜💜💜💜💜💜💜

 ❤️ *ತುಬ್ಬಅ್ ರಾಜ ಮದೀನಾದಲ್ಲಿ . . . .* 
🌹🌹🌹🌹🌹🌹🌹🌹🌹🌹🌹
         ಮದೀನಾ ಇತಿಹಾಸದ ಕುರಿತು ಅಧ್ಯಯನ ಮಾಡುವಾಗ ತುಬ್ಬಅ್ ರಾಜನನ್ನು ಮರೆ ಯಲು ಸಾಧ್ಯವಿಲ್ಲ. ಯಾಕೆಂದರೆ “ಪ್ರವಾದಿವರ್ಯರನ್ನು ಜೀವನದಲ್ಲಿ ಕಾಣಲು ಭಾಗ್ಯ ಸಿಕ್ಕಿ ದರೆ ಅವರ ಮಂತ್ರಿಯಾಗಿ ಸೇವೆ ಸಲ್ಲಿಸುತ್ತೇನೆ” ಎಂದಿದ್ದ ಈತನ ಚರಿತ್ರೆ ಬಲುದೊಡ್ಡದು. ಅದರತ್ತ ಒಂದು ಕಿರುನೋಟ ಇಲ್ಲಿದೆ. ತುಬ್ಬಅ್ ರಾಜನ ಮಗನನ್ನು ಮದೀನಾ ನಿವಾಸಿಗಳಲ್ಲಿ ಕೆಲವರು ಕೊಂದುಬಿಟ್ಟರು. ಇದರ ಸೇಡು ತೀರಿಸಿಯೇ ಸಿದ್ದ ಎಂದು ಮದೀನಾವನ್ನು ಸರ್ವನಾಶ ಮಾಡಲು ತನ್ನ ಸೈನ್ಯ ಸಮೇತ ಬಂದ. ಸಕಲ ಆಯುಧಗಳೊಂದಿಗೆ ಬಂದ ಈತ ಮದೀನಾವನ್ನು ಒಂದೇ ಬಾರಿ ನಾಶ ಮಾಡುವ ತವಕದಲ್ಲಿದ್ದ. ರಾಜನ ದೃಢ ನಿಲುವನ್ನು ಮನದಟ್ಟು ಮಾಡಿದ ಕೆಲವೊಂದು ಯಹೂದಿ ಪುರೋಹಿತರು ಈತನ ಬಳಿ ಬಂದು ಹೇಳಿದರು “ಓ ರಾಜ . . . ಈ ಊರು ಸಂರಕ್ಷಿತ ಊರು. ವೇದಗಳಲ್ಲಿ ಇದರ ಹೆಸರು ತ್ವೈಬಾ ಎಂದು ದಾಖಲಿಸಲ್ಪಟ್ಟಿದೆ. ಇಸ್ಮಾಯಿಲ್ ನಬಿ(ಅ) ರವರ ಸಂತತಿಗಳಲ್ಲಿ ಓರ್ವ ಪ್ರವಾದಿ ಮಕ್ಕಾ ಹರಮಿನಿಂದ ಇಲ್ಲಿಗೆ ಹಿಜ್ರ ಬರುತ್ತಾರೆ. ಇದು ಆ ಪ್ರವಾದಿಯ ವಾಸ ಸ್ಥಳ, ಆದ್ದರಿಂದ ಈ ಯೋಜನೆಯನ್ನು ಕೈ ಬಿಡಬೇಕು. ಇವರ ಮಾತನ್ನು ಆಲಿಸಿದಾಗ ತುಬ್ಬಅ್ ರಾಜ ಆಶ್ಚರ್ಯಚಕಿತನಾದ. ಯಾಕೆಂದರೆ ಆತ ಇಬ್ರಾಹೀಂ ನಬಿ(ಅ) ರವರ ಧರ್ಮಾನುಯಾಯಿಯಾಗಿದ್ದ. ಆತನ ದೃಢ ನಿಲುವನ್ನು ಬದಲಾವಣೆ ಮಾಡಿ ಸೌಹಾರ್ದಯುತ ಜೀವನಕ್ಕೆ ಮದೀನಾ ನಿವಾಸಿಗಳಲ್ಲಿ ಬೈಅತ್ ಮಾಡಿದ. ಹಾಗೆ ತುಬ್ಬಅ್ ರಾಜ ಯಮನಿಗೆ ಹೊರಟು ಹೋದಾಗ ಮದೀನಾ ಸರ್ವನಾಶ ವನ್ನು ತಡೆದ ಯಹೂದಿ ಪುರೋಹಿತರಲ್ಲಿ ಕೆಲವರು ಈತನ ಜೊತೆಗೆ ಹೋಗುತ್ತಾರೆ. ದಾರಿಮಧ್ಯೆ ಪ್ರವಾದಿವರ್ಯರ ಬಗ್ಗೆ ವಿವರವಾಗಿ ಅವರು ವಿವರಿಸಿದ್ದರಿಂದ ರಾಜನಿಗೆ ಯಮನ್ ತಲುಪಿದ್ದು ಗೊತ್ತಾಗಿರಲಿಲ್ಲ. ಮತ್ತೊಂದು ವರದಿಯಲ್ಲಿ ಈ ರೀತಿಯಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮದೀನಾಗೆ ಹಿಜ್ರಾ ಬಂದಾಗ ಅಬೂ ಅಯೂಬುಲ್ ಅನ್ಸಾರಿ (ರ) ರವರ ಮನೆಯಲ್ಲಾಗಿದೆ ಜೀವಿಸಿದ್ದು. ಇದು ತುಬ್ಬಅ್ ರಾಜ ಪ್ರವಾದಿವರ್ಯರಿಗೆ ಬೇಕಾಗಿ ನಿರ್ಮಿಸಿದ ಮನೆಯಾಗಿತ್ತು. ಇದಕ್ಕೆ ಒಂದು ಕಾರಣ ಕೂಡಾ ಇದೆ. ಒಂದು ದಿನ ತುಬ್ಬಅ್ ರಾಜ ಯಾತ್ರೆ ಹೋಗಲು ತೀರ್ಮಾನಿಸಿದ. ಆಗ ಆತನ ಜೊತೆ 400 ವಿದ್ವಾಂಸರಿದ್ದರು. ಮದೀನಾ ಹಾದಿಯಾಗಿ ರಾಜ ಯಾತ್ರೆ ಮುಂದುವರೆಸಿದಾಗ ಜೊತೆಗಿದ್ದ ವಿದ್ವಾಂಸರು ಅಲ್ಲಿನ ಮಹತ್ವ ಮನದಟ್ಟು ಮಾಡಿದರು. ಅವರು ಅಲ್ಲಿಂದ ಯಾತ್ರೆ ಮುಂದುವರಿ ಸುವುದಿಲ್ಲ ಎಂದು ತಮ್ಮ ತೀರ್ಮಾನವನ್ನು ರಾಜನಿಗೆ ತಿಳಿಸಿದರು. ಇದರ ಹಿಂದಿರುವ ರಹಸ್ಯದ ಕುರಿತು ರಾಜ ಅವರಲ್ಲಿ ಕೇಳಿದಾಗ ವಿದ್ವಾಂಸರು ಹೇಳಿದರು “ನಾವು ವೇದಗಳಲ್ಲಿ ಕಂಡ ಹಾಗೆ ಈ ಊರಿಗೆ 'ಮುಹಮ್ಮದ್' ಎಂಬ ಪ್ರವಾದಿ ಹಿಜ್ರಾ ಬರುತ್ತಾರೆ. ಆದ್ದರಿಂದ ನಾವು ಇಲ್ಲೇ ಜೀವಿಸುತ್ತೇವೆ. ಕೆಲವೊಮ್ಮೆ ನಮಗೆ ಆ ಪ್ರವಾದಿಯನ್ನು ಕಾಣಲು ಸಾಧ್ಯವಾಗಬಹುದು” ವಿದ್ವಾಂಸರ ಮಾತನ್ನು ಆಲಿಸಿದ ತುಬ್ಬಅ್ ರಾಜ ಅಲ್ಲಿ ಜೀವಿಸುವವರಿಗೆ ಬೇಕಾದ ವ್ಯವಸ್ಥೆ ಮಾಡಿಕೊಟ್ಟ. ಅಲ್ಲಿ 400 ವಿದ್ವಾಂಸರಿಗೆ ಮನೆಯನ್ನು ನಿರ್ಮಿಸಿದ. ಹಲವಾರು ದಾಸಿಯರನ್ನು ಕರೆಸಿ ಅವರಿಗೆ ಮದುವೆ ಮಾಡಿ ಅಗತ್ಯವಿದ್ದಷ್ಟು ಸಂಪತ್ತು ನೀಡಿದ. ಒಂದು ಪತ್ರವನ್ನು ತೆಗೆದು ಅದರಲ್ಲಿ ಹೀಗೆ ಬರೆದ. “ಅಹ್ಮದ್ ನಬಿಯವರು ಅಲ್ಲಾಹನ ಪ್ರವಾದಿ ಎಂದು ನಾನು ಸಾಕ್ಷ್ಯ ವಹಿಸುತ್ತೇನೆ. ಆ ಪ್ರವಾದಿ ಬರುವ ತನಕ ನನ್ನ ಆಯುಷ್ಯ ಬಾಕಿಯಿದ್ದರೆ ರಾಜನಾದ ನಾನು ಅವರ ಮಂತ್ರಿಯಾಗಿ ಸೇವೆ ಸಲ್ಲಿಸುತ್ತೇನೆ.” ಈ ಪತ್ರವನ್ನು ಅವರಲ್ಲಿ ಹಿರಿಯರ ಕೈಗೆ ನೀಡಿ ಹೇಳಿದ “ ನಿಮ್ಮಲ್ಲಿ ಯಾರಾದರೂ ಆ ಪ್ರವಾದಿಯನ್ನು ಕಂಡರೆ ಈ ಪತ್ರವನ್ನು ನೀಡಿರಿ. ಇಲ್ಲದಿದ್ದರೆ ನಿಮ್ಮ ಸಂತಾನ ಪರಂಪರೆಯಲ್ಲಿ ಯಾರಾದರೂ ಕಂಡರೆ ಅವರು ನೀಡಲಿ. ಮಾತ್ರವಲ್ಲ ಪ್ರವಾದಿವರ್ಯರು ಮದೀನಾಗೆ ಬಂದರೆ ವಾಸಿಸಲು ಒಂದು ಮನೆಯನ್ನು ಕೂಡಾ ನಿರ್ಮಿಸಿದರು. ಕಾಲಕ್ರಮೇಣ ಈ ಮನೆ ಅಬೂ ಅಯೂಬ್ ಅನ್ಸಾರಿ(ರ) ರವರ ಕೈಗೆ ತಲುಪಿತ್ತು. ಇವರು ಈ ವಿದ್ವಾಂಸರ ಸಂತಾನ ಪರಂಪರೆಯಲ್ಲಿ ಓರ್ವರಾಗಿದ್ದಾರೆ. ಪ್ರವಾದಿವರ್ಯರು ಮದೀನಾಗೆ ಬಂದಾಗ ಈ ಪತ್ರವನ್ನು ಅಬೂ ಅಯೂಬ್ ಅನ್ಸಾರಿ(ರ) ರವರು ನೀಡಿದರು ಎಂಬ ಅಭಿಪ್ರಾಯ ಕೂಡಾ ಇದೆ . 

*ಅನ್ಸಾರಿಗಳ ಖಬೀಲಗಳು*   

*_ಖಝ್ರಜಿನ ಉಪಗೋತ್ರಗಳು_*

=ಬನೂ ನಜ್ಜಾರ್ 
=ಬನೂ ಸಾಯಿದ 
=ಬನುಲ್ ಹಾರಿಸ್ ಬಿನ್ =ಖಝ್ರಜ್ 
=ಬನೂ ಸಲ್ಲಾ 
=ಬನೂ ಹರಾಮ್ 
=ಬನೂ ಸಾಲಿಮ್ 
=ಬನೂ ಝರೀಮ್ 
=ಬನೂ ಬಯಾಳ

_*ಔಸಿನ ಉಪಗೋತ್ರಗಳು*_ 

=ಬನೂ ಅಬ್ದುಲ್ ಅಶ್ಹಲ್ 
=ಬನೂ ಳಫ್‌ರ್
=ಬನೂ ಅಮ್ರ್ ಬಿನ್ ಔಫ್ =ಬನೂ ಹಾರಿಸ್ 
=ಬನೂ ಮುಆವಿಯಃ 

ಇವುಗಳಲ್ಲಿ ಬನೂ ನಜ್ಜಾರ್ ಗೋತ್ರದವರೊಂದಿಗೆ ಪ್ರವಾದಿವರ್ಯರಿಗೆ ಕೌಟುಂಬಿಕ ಸಂಬಂಧವಿದೆ. ಪ್ರವಾದಿವರ್ಯರ ಅಜ್ಜ ಹಾಶಿಮ್ ಎಂಬವರು ಈ ಗೋತ್ರದ ಸಲ್ಮಾ ಬಿಂತ್ ಅಮ್ರ ರೊಂದಿಗೆ ವಿವಾಹ ನಡೆಯಿತು . ಈ ದಂಪತಿಗಳಿಗೆ ಜನಿಸಿದವರಾಗಿದ್ದಾರೆ ಅಬ್ದುಲ್ ಮುತ್ತಲಿಬ್. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮದೀನಾಗೆ ಬಂದಾಗ ತಂಗಿದ್ದ ಅಬೂ ಅಯೂಬ್ ಅನ್ಸಾರಿ (ರ) ರವರು ಈ ಗೋತ್ರದವರು. ಪ್ರವಾದಿವರ್ಯರ ಹಾಡುಗಾರ ಹಸ್ಸಾನ್ ಬಿನ್ ಸಾಬಿತ್(ರ) ರವರು ಮತ್ತು ಮದೀನಾದ ದಫನ ಸ್ಥಳವಾದ ಬಕೀಅ್‌ನಲ್ಲಿ ಮೊಟ್ಟ ಮೊದಲು ದಫನು ಮಾಡಲ್ಪಟ್ಟ ಅಸ್ಅದ್ ಬಿನ್ ಝುರಾರಃ (ರ) ಹಾಗೂ ಪ್ರವಾದಿವರ್ಯರ ಸೇವಕ ಅನಸ್ ಬಿನ್ ಮಾಲಿಕ್ (ರ) ರವರು ಈ ಗೋತ್ರಕ್ಕೆ ಸೇರಿದವಾಗಿದ್ದಾರೆ. ಪ್ರವಾದಿವರ್ಯರ ಪುತ್ರ ಇಬಾಹೀಂ (ರ) ರವರಿಗೆ ಮೊಲೆಹಾಲು ನೀಡಿದವರು ಈ ಗೋತ್ರದ ಉಮ್ಮು ಬರ್‌ದಾ ಎಂಬ ಮಹಿಳೆಯಾಗಿದ್ದಾರೆ . ಇವರ ಮಡಿಲಲ್ಲಾಗಿದೆ ಇಬ್ರಾಹೀಂ (ರ) ರವರು ಮರಣ ಹೊಂದಿದ್ದು .

     *ಮುಂದುವರಿಯುವುದು*
Follow this link to join my WhatsApp group: https://chat.whatsapp.com/DjCbCGNiyBW7StPEIOqUnO

ಇನ್ನು ಮುಂದೆ *"ಮದೀನಾ ಮಹತ್ವ ಇತಿಹಾಸ"* ಲೇಖನಗಳು ಈ ಗ್ರೂಪಿನಲ್ಲಿ..

💞صَلَّى اللَّهُ عَلٰى مُحَمَّدْ صَلَّى اللَّهُ عَلَيهِ وَسَلَّم🌹