ಸಂಗ್ರಹ: ಯಾಸೀನ್ ನಾವೂರ್ 🍃 ಅಧ್ಯಾಯ 11

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 11*🍃
         💜💜💜💜💜💜💜

 ❤️ *ಇಸ್ಲಾಮಿನ ಆರಂಭದಲ್ಲಿ ಯಹೂದಿಗಳು*
 ❤️ *ಮದೀನಾದಲ್ಲಿ ಯುದ್ದಗಳು . . .*
🌹🌹🌹🌹🌹🌹🌹🌹🌹🌹🌹
                ಪ್ರವಾದಿವರ್ಯರು ಮದೀನಾಗೆ ಹಿಜ್ರ ಬಂದಾಗ ಅಲ್ಲಿದ್ದ ಯಹೂದಿಗಳಲ್ಲಿ ಪ್ರಮುಖ ವಾಗಿ ಮೂರು ಗೋತ್ರಗಳಿತ್ತು. ಅವುಗಳೆಂದರೆ ಬನೂ ಖೈನುಖಾಅ್, ಬನೂ ನಳೀರ್ ಹಾಗೂ ಬನೂ ಖುರೈಳಾ. ಬನೂ ಖೈನುಖಾಅ್ ಗೋತ್ರದ ಯಹೂದಿಗಳು ಯಸ್‌ರಿಬಿನಲ್ಲಿ ವಾಸ ಮಾಡುತ್ತಿದ್ದರು. ಅವರ ಮುಖ್ಯ ವೃತ್ತಿ ಯುದ್ಧಾಯುಧಗಳ ನಿರ್ಮಾಣವಾಗಿತ್ತು. ಯಸ್ರಿಬಿನ ಗಡಿ ಭಾಗಗಳಲ್ಲಿ ಬನೂ ಖುರೈಳಾ ಮತ್ತು ಬನೂ ನಳೀರ್ ಗೋತ್ರಗಳು ವಾಸವಾಗಿದ್ದವು. ಅವರು ವ್ಯಾಪಾರ ಮತ್ತು ತೋಟಗಾರಿಕೆಯಲ್ಲಿ ಪಳಗಿದವರಾಗಿದ್ದರು. ಅದೇ ರೀತಿ ಖೈಬರ್ ಮತ್ತು ಪರಿಸರದಲ್ಲಿ ಯಹೂದಿಗಳ ಒಂದು ದೊಡ್ಡ ಸಮೂಹವೇ ಜೀವಿಸುತಿತ್ತು. ಅವರ ಮುಖ್ಯವೃತ್ತಿ ಕೃಷಿ ಮತ್ತು ತೋಟಗಾರಿಕೆಯಾಗಿತ್ತು. ಪ್ರವಾದಿವರ್ಯರು ಇವರೊಂದಿಗೆ ಪರಸ್ಪರ ಗಲಾಟೆ, ಯುದ್ಧ ಹಾಗೂ ಕಲಹಗಳಿಲ್ಲದೆ ಉತ್ತಮ ರೀತಿಯ ಜೀವನ ನಡೆಸಲು ಒಪ್ಪಂದ ಮಾಡಿದ್ದರು. ಆದರೆ ಅವರು ಒಳಿತಿಗೆ ಬದಲು ಕೆಡುಕನ್ನು ಬಯಸಿದರು. ಹಲವಾರು ಒಪ್ಪಂದಗಳನ್ನು ಮುರಿದು ಸಮಾಜದಲ್ಲಿ ಅಶಾಂತಿಯ ಕಿಡಿ ಹಚ್ಚಿದರು. ಸತ್ಯಗೊತ್ತಿದ್ದೂ ಪ್ರವಾದಿವರ್ಯರ ಪ್ರವಾದಿತ್ವ ನಿಷೇಧಿಸಿದ ಇವರು ಇಸ್ಲಾಮಿನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರು. ಜನರನ್ನು ಇಸ್ಲಾಮಿನಿಂದ ದೂರೀಕರಿಸುವ ಸಕಲ ಪ್ರಯತ್ನಗಳಲ್ಲಿ ಇವರು ಭಾಗಿಯಾಗಿದ್ದರು.ಇಸ್ಲಾಮಿನ ಆಶಯ - ಆದರ್ಶಗಳ ಬಗ್ಗೆ ಮುಗ್ಧ ಅನ್ಸಾರಿಗಳ ಮನಸ್ಸಿನಲ್ಲಿ ಸಂಶಯದ ವಿಷ ಬೀಜ ಬಿತ್ತುತ್ತಿದ್ದರು. ಅವರಿಗೆ ಇಸ್ಲಾಮಿನ ಬಗ್ಗೆ ಎಷ್ಟೊಂದು ಕೋಪವಿತ್ತೆಂದರೆ ಇಸ್ಲಾಮಿ ಗಿಂತ ವಿಗ್ರಹಾರಧನೆ ಮೇಲು ಎಂದು ಮಕ್ಕಾ ಮುಶ್ರಿಕರಲ್ಲಿ ಹೇಳಿ ಇಸ್ಲಾಮಿನ ವಿರುದ್ಧ ಶತ್ರುತ್ವಕ್ಕೆ ಹುರಿದುಂಬಿಸುತ್ತಿದ್ದರು. ಇಸ್ಲಾಮಿನ ವಿರುದ್ಧ ಏನೆಲ್ಲ ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಿದ ವಂಚಕರಾಗಿದ್ದಾರೆ ಈ ಯಹೂದಿಗಳ. ಇಂತಹ ಅನಿವಾರ್ಯ ಪರಿಸ್ಥಿತಿಯಲ್ಲಿ ಯಹೂದಿಗಳೊಂದಿಗೆ ಕೆಲವೊಂದು ಯುದ್ಧಗಳು ನಡೆಯಿತು.

*ಮದೀನಾದಲ್ಲಿ ಯುದ್ದಗಳು . . .*
............................................................
                     ಮದೀನಾದಲ್ಲಿ ಯಹೂದಿಗಳೊಂದಿಗೆ ಪ್ರಮುಖವಾಗಿ ನಾಲ್ಕು ಯುದ್ಧಗಳು ನಡೆದಿದೆ. ಸ್ವಸ್ಥ ಸಮಾಜ ಹಾಗೂ ಸಹಬಾಳ್ವೆಗೆ ಮಾರಕವಾಗಿರುವ ಇವರೊಂದಿಗೆ ಯುದ್ಧ ಅನಿವಾ ರ್ಯವಾಗಿತ್ತು. ಈ ಯುದ್ದಗಳಿಂದಾಗಿ ಯಹೂದಿಗಳು ಮದೀನಾದಿಂದ ಸಂಪೂರ್ಣವಾಗಿ ನಿರ್ಮೂಲನೆಗೊಂಡರು. ಯಹೂದಿಗಳಲ್ಲಿ ಮದೀನಾದಲ್ಲಿ ವಾಸಿಸುವ ಗೋತ್ರ ಬನೂ ಖೈನುಖಾಅ್. ಮುಸ್ಲಿಮರ ನಡುವೆ ಇದ್ದ ಹಲವಾರು ಒಪ್ಪಂದಗಳನ್ನು ಮುರಿದು ಸಮಾಜದಲ್ಲಿ ಅಶಾಂತಿಯ ಕಿಡಿ ಹಚ್ಚಿದ್ದರಿಂದ ಯುದ್ಧವು ಅನಿವಾರ್ಯವಾಯಿತು. ಅಂತೆಯೇ ಹಿಜ್ರ ಎರಡನೇ ವರ್ಷ ಶವ್ವಾಲಿನಲ್ಲಿ ಬನೂ ಖೈನುಖಾಅ್ ಯುದ್ಧ ನಡೆಯಿತು. ಇದರಿಂದ ಮದೀನಾ ತೊರೆದು ಶಾಮಿನತ್ತ ಪಯಣ ಬೆಳೆಸಿದರು. ಮತ್ತೊಂದು ಯುದ್ಧ ನಡೆಯಿತು. ಅದುವೇ ಬನೂ ನಳೀ‌ರ್. ಮದೀನಾದ ಗಡಿಭಾಗಗಳಲ್ಲಿ ಜೀವಿಸುತ್ತಿರುವ ಇವರು ಬನೂ ಖೈನುಖಾಅ್ ಗೋತ್ರದವರಿಗಿಂತ ದುಷ್ಟರು. ಯಾಕೆಂದರೆ ಹಲವಾರು ಒಪ್ಪಂದಗಳು ಮುರಿದರಲ್ಲದೆ ಪ್ರವಾದಿವರ್ಯರನ್ನು ಕೊಲ್ಲಲು ಸಂಚು ಹೂಡಿದ್ದರು. ಹಿಜ್ರಾ 4ನೇ ವರ್ಷ ರಬೀವುಲ್ ಅವ್ವಲ್ ತಿಂಗಳಲ್ಲಿ ಯುದ್ಧ ನಡೆಯಿತು. ಇವರಲ್ಲಿ ಕೆಲವರು ಸೈಬರ್‌ನತ್ತ ಹೋದರೆ ಇನ್ನು ಕೆಲವರು ಶಾಮಿನತ್ತ ಪಯಣ ಬೆಳೆಸಿದರು. ಮದೀನಾದ ಗಡಿ ಪ್ರದೇಶಗಳಲ್ಲಿ ಜೀವಿಸುತ್ತಿರುವ ಬನೂ ಖುರೈಳಾ ಗೋತ್ರದವರೊಂದಿಗೆ ಕೂಡಾ ಯುದ್ಧ ಅನಿವಾರ್ಯವಾಗಿತ್ತು. ಯಾಕೆಂದರೆ ಹಲವಾರು ಒಪ್ಪಂದಗಳನ್ನು ಮುರಿದ ಇವರು ಮುಸ್ಲಿಮರ ವಿರುದ್ಧ ಸೈನ್ಯ ಕಟ್ಟುವುದರಲ್ಲಿ ಮುಂಚೂಣಿಯಲ್ಲಿದ್ದರು. ಇವರೊಂದಿಗೆ ಹಿಜ್ರ 5ನೇ ವರ್ಷ ದ್ವುಲ್ ಖಅದಿನಲ್ಲಿ ಯುದ್ಧ ನಡೆಯಿತು. ಈ ಯುದ್ಧದಿಂದ ಮದೀನಾ ದುಷ್ಟ ಯಹೂದಿಗಳಿಂದ ಶುಚಿಗೊಂಡಿತು. ಮುಸ್ಲಿಮರ ವಿರುದ್ಧ ಯುದ್ದಕ್ಕೆ ನಿರಂತರ ಪಿತೂರಿ ನಡೆಯುವ ಖೈಬರ್ ಪ್ರದೇಶಗಳಲ್ಲಿ ವಾಸಿಸುವ ಯಹೂದಿಗಳು ಹಲವಾರು ಕರಾರುಗಳನ್ನು ಉಲ್ಲಂಘನೆ ಮಾಡಿದ್ದಾರೆ. ಇದರಿಂದ ಪ್ರವಾದಿವರ್ಯರು ಹಿಜ್ರಾ 7ನೇ ವರ್ಷ ಮುಹರೂಮಿನಲ್ಲಿ ಖೈಬರಿಗೆ ತೆರಳಿ ಯುದ್ಧ ಮಾಡಿ ದರು. ಇದರಿಂದ ಖೈಬರ್ ಕೂಡಾ ಮುಸ್ಲಿಮರ ವಶವಾಯಿತು. ಜೊತೆ ಧಾರಾಳ ಸಮರಾರ್ಜಿತ ಸೊತ್ತುಗಳನ್ನು ಪಡೆದುಕೊಂಡರು. ಮದೀನಾದಲ್ಲಿ ಔಸ್ ಮತ್ತು ಖಝ್ರಜ್ ಮದೀನಾ ನಿವಾಸಿಗಳಲ್ಲಿ ಸಿಂಹಪಾಲು ಯಹೂದಿಗಳು ಮಾತ್ರವಾಗಿದ್ದರು. ಇವರ ನಂತರ ಅಲ್ಲಿಗೆ ವಲಸೆ ಬಂದವರಾಗಿದ್ದಾರೆ ಔಸ್ ಮತ್ತು ಖಝ್ರಜ್ ಗೋತ್ರದವರು. ಇವರು ಯಮನ್ ಮೂಲದವರು. ಇವರ ಚರಿತ್ರೆ ಇತಿಹಾಸ ಪುಟಗಳಲ್ಲಿ ಹೀಗಿದೆ. ಯಮನಿನ ಸಬಲ್ ನಿವಾಸಿಗಳು ತಮ್ಮ ಊರಿನಲ್ಲಿ ಯಾವುದೇ ಭೀತಿಯಿಲ್ಲದೆ ಜೀವಿಸು ತ್ತಿದ್ದರು. 
“ಪರಿಶುದ್ಧವಾದ ಊರು” ಎಂದು ಪವಿತ್ರ ಖುರ್‌ಆನ್ ಇವರ ಊರನ್ನು ಬಣ್ಣಿಸಿದೆ. ಹಾವು,ಚೇಳು ಮುಂತಾದ ವಿಷ ಜಂತುಗಳು ಅವರ ಊರಲ್ಲಿ ಇರಲಿಲ್ಲ. ಉತ್ತಮ ಗುಣ ಮಟ್ಟದ ಜೀವನ ನಡೆಸುತ್ತಿರುವ ಇವರಿಗೆ ಅಲ್ಲಾಹನು 13 ಪ್ರವಾದಿಗಳನ್ನು ಕಳುಹಿಸಿದ್ದಾನೆ. ಆದರೆ ಇವರು ಅಹಂಕಾರ ಪ್ರದರ್ಶಿಸಿದರು ಪ್ರವಾದಿಗಳ ಬೋಧನೆಗೆ ಕಿವಿಗೊಡಲಿಲ್ಲ. ಪ್ರವಾದಿಗಳನ್ನು ಅವರು ಕಡೆಗಣಿಸಿದಾಗ ಅವರ ಮೇಲೆ ಅಣೆಕಟ್ಟು ಒಡೆದು ಜಲ ಸಂಗ್ರಹವು ಹರಿದು ಹೋಯಿತು. ಅವರ ತೋಟಗಳೂ, ಮನೆಗಳೂ ಮುಳುಗಿ ನಾಶವಾದವು. ಇಡೀ ಊರೇ ಜಲಾವೃತವಾಯಿತು. ಇದನ್ನು ಖುರ್‌ಆನ್ “ಸೈಲುಲ್ ಅರಮ್” ಎಂದು ಕರೆದಿದೆ.ಇದನ್ನು ಖರ್‌ಆನಿನಲ್ಲಿ ಈ ರೀತಿ ವಿವರಿಸಿದೆ “ಸಬಲ್ ಗೋತ್ರದವರಿಗೆ ಅವರ ವಾಸಸ್ಥಾನದ ಹತ್ತಿರದಲ್ಲೇ ಒಂದು ದೊಡ್ಡ ನಿದರ್ಶನವಿತ್ತು. ಅಂದರೆ ಬಲಭಾಗದಲ್ಲೂ ಎಡ ಭಾಗದಲ್ಲೂ ಇರುವ ಎರಡು ತೋಟಗಳು.(ನಾವು ಅವರಲ್ಲಿ ಹೇಳಿದೆವು)ನಿಮ್ಮ ಪ್ರಭು ಕೊಟ್ಟ ಆಹಾರ ಉಣ್ಣಿರಿ. ಅವನಿಗೆ ಕೃತಜ್ಞತೆ ಸಲ್ಲಿಸಿರಿ. ಪರಿಶುದ್ಧವಾದ ನಾಡು ! ಅತ್ಯುತ್ತಮ ಕ್ಷಮಶೀಲನಾದ ಪ್ರಭುವೂ ! ” “ ಆಮೇಲೆ ಅವರು ವಿಮುಖರಾದರು. ತನ್ನಿಮಿತ್ತ ನಾವು ಅವರ ಮೇಲೆ ಅಣೆಕಟ್ಟು ಮುರಿದು ಜಲ ಪ್ರವಾಹವನ್ನು ಕಳುಹಿಸಿದೆವು ”( ಸಬಅ್ 15 , 16) ಇವರಲ್ಲಿ ಬಾಕಿ ಉಳಿದವರು ವಿವಿಧ ಪ್ರದೇಶಗಳಲ್ಲಿ ಹರಿಹಂಚಾಗಿ ಹೋದರು. ಬನೂ ಖೈಲ ಗೋತ್ರದ ಕೆಲವರು ಅಂದಿನ ಯಸ್ರಿಬ್‌ಗೆ ವಲಸೆ ಬಂದರು. ಇವರಾಗಿದ್ದಾರೆ ಔಸ್ ಮತ್ತು ಖಝ್ರಜ್ ಗೋತ್ರದವರು. ಅಂದರೆ ಇಂದಿನ ಅನ್ಸಾರಿಗಳು, ಸ್ವಂತ ಅಣ್ಣ ತಮ್ಮಂದಿರ ಮಕ್ಕಳು , ಮದೀನಾದಲ್ಲಿ ಯಹೂದಿಗಳೊಂದಿಗೆ ಜೀವಿಸಿದ ಇವರು ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದ್ದರು. ಆದರೆ ಯಹೂದಿಗಳು ತಮ್ಮ ಚಾಳಿ ಎಂಬಂತೆ ಹಲವಾರು ಒಪ್ಪಂದಗಳನ್ನು ಮುರಿದಿದ್ದರು. ಇವುಗಳು ಯಹೂದಿಗಳ ಹಾಗೂ ಇವರ ನಡುವೆ ಯುದ್ದಕ್ಕೆ ನಾಂದಿಯಾಯಿತು. ಯಹೂದಿಗಳು ಈ ಎರಡು ಗೋತ್ರಗಳ ನಡುವೆ ಅಂತರವನ್ನು ಸೃಷ್ಟಿಸಿದರು. ದ್ವೇಷದ ವಿಷ ಬೀಜ ಬಿತ್ತಿದ್ದರು. ಪರಿಣಾಮವಾಗಿ ಇವರ ನಡುವೆ ಅಂತರ್ ಕಲಹಗಳು ಉಂಟಾಯಿತು . ಯುದ್ಧಗಳು ನಡೆಯಿತು . 120 ವರ್ಷಗಳ ದೀರ್ಘಯುದ್ದ ಈ ಎರಡು ಗೋತ್ರಗಳ ನಡುವೆ ನಡೆದದ್ದು ಇತಿಹಾಸದ ಪುಟಗಳಲ್ಲಿ ಕಾಣಲು ಸಾಧ್ಯವಾಗುತ್ತದೆ . 

     *ಮುಂದುವರಿಯುವುದು*

Follow this link to join my WhatsApp group: https://chat.whatsapp.com/DjCbCGNiyBW7StPEIOqUnO

ಇನ್ನು ಮುಂದೆ *"ಮದೀನಾ ಮಹತ್ವ ಇತಿಹಾಸ"* ಲೇಖನಗಳು ಈ ಗ್ರೂಪಿನಲ್ಲಿ..

💞صَلَّى اللَّهُ عَلٰى مُحَمَّدْ صَلَّى اللَّهُ عَلَيهِ وَسَلَّم🌹