ಸಂಗ್ರಹ: ಯಾಸೀನ್ ನಾವೂರ್ 🍃ಅಧ್ಯಾಯ 10

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 10*🍃
         💜💜💜💜💜💜💜

 ❤️ *ಯಸ್ರಿಬ್ ನಲ್ಲಿ ಯಹೂದಿಗಳು*
 ❤️ *ಪ್ರವಾದಿವರ್ಯರ ಬಗ್ಗೆ ತಿಳಿದಿದ್ದರು . . . !*
🌹🌹🌹🌹🌹🌹🌹🌹🌹🌹🌹
             ಮದೀನಾಗೆ ವಲಸೆ ಬಂದವರಲ್ಲಿ ಯಹೂದಿಗಳು ಎರಡನೇಯವರು. ಮೂಸಾ ನಬಿ(ಅ) ರವರ ಅನುಯಾಯಿಗಳಾದ ಇವರು ಕೈಸ್ತರ ಪಾಲಿಗೆ ದೇವರ ಶತ್ರುಗಳು. ಯಾಕೆಂದರೆ ಕ್ರೈಸ್ತರು ವಿಶ್ವಾಸವಿರುವ ಏಸುವನ್ನು ಶಿಲುಬೆಗೇರಿಸಿದವರು ಯಹೂದಿಗಳಾಗಿದ್ದಾರೆ ಎಂಬು ವುದು ಇವರ ವಿಶ್ವಾಸ. ವಾಸ್ತವದಲ್ಲಿ ಈಸಾ ನಬಿ(ಅ) ರವರು ಶಿಲುಬೆಗೇರಿಸಲ್ಪಡಲಿಲ್ಲ. ಎಂಬು ವುದು ಬೇರೆ ವಿಷಯ. ಹೀಗೆ ಹಲವಾರು ಕಾರಣಗಳಿಂದ ನಿರಂತರ ಪೀಡಿಸಲ್ಪಡುತ್ತಿದ್ದ ಯಹೂದಿಗಳು ಅಲ್ಲಿಂದ ಪಲಾಯನಗೈದ ಚರಿತ್ರೆ ಬಲು ವಿಶಾಲ. ಕೆಲವೊಂದನ್ನು ಇಲ್ಲಿ ವಿವರಿಸಲಾಗಿದೆ. ಹಿಜಾಝನ ಕೆಲವು ಯಹೂದಿ ವಿದ್ವಾಂಸರಿಂದ ವರದಿ; ರೋಮಿನಲ್ಲಿ ಜೀವಿಸುತ್ತಿದ್ದ ಯಹೂದಿಗಳು ಮದೀನಾಗೆ ವಲಸೆ ಬರಲು ಪ್ರಮುಖ ಕಾರಣವೆಂದರೆ ಕ್ರೈಸ್ತನಾದ ರೋಮಿನ ರಾಜ ಯಹೂದಿಗಳಲ್ಲಿನ ಅಪ್ರತಿಮ ಸುಂದರಿಯೊಂದಿಗೆ ಮದುವೆ ಪ್ರಸ್ತಾಪ ಮಾಡಿದ. ಆದರೆ ಕ್ರೈಸ್ತರೊಂದಿಗೆ ವಿವಾಹ ಸಂಬಂಧ ಸಲ್ಲದು ಎಂದಾಗಿತ್ತು ಯಹೂದಿ ಧಾರ್ಮಿಕ ನಿಯಮ. ಈ ವೈವಾಹಿಕ ಸಂಬಂಧಕ್ಕೆ ಸಹಕರಿಸದಿದ್ದರೆ ಖಂಡಿತಾ ಇವರ ಮೇಲೆ ಆಕ್ರಮಣ ನಡೆಯುತ್ತದೆ ಎಂಬ ಖಚಿತತೆ ಇತ್ತು. ಮಾತ್ರವಲ್ಲ ನಿರಂತರ ಪೀಡನೆಯಿಂದ ಯಹೂದಿಗಳು ಈಗಾಗಲೇ ಬಸವಳಿದಿದ್ದರು. ಆದರೂ ಕೂಡಾ ಅವರೊಂದು ದೃಢ ನಿಶ್ಚಯ ತಾಳಿ ಬಿಟ್ಟರು. “ಏನೇ ಆದರೂ ಧಾರ್ಮಿಕ ನಿಯಮದ ವಿರುದ್ಧ ನಡೆಯಲಾರೆವು” ಇದಕ್ಕೆ ಬೇಕಾಗಿ ವಂಚನೆಯ ಮೂಲಕ ರಾಜನನ್ನು ಮುಗಿಸುವ ಸಂಚು ಹೂಡಿದರು. ಅದರಂತೆ ರಾಜನನ್ನು ಅವರಿರುವಲ್ಲಿಗೆ ಬರುವಂತೆ ಆಮಂತ್ರಣ ನೀಡಿದರು. ನಿರಾಯುಧದಾರಿಯಾಗಿ ಬಂದ ರಾಜ ಮತ್ತು ಸಂಗಡಿಗರನ್ನು ಕೊಂದು ಬಿಟ್ಟರು. ಜೊತೆಗೆ ಅಲ್ಲಿಂದ ಪಲಾಯನ ಮಾಡುವ ತಿರ್ಮಾನ ಕೂಡಾ ಕೈಗೊಂಡರು. ಅಲ್ಲಿಂದ ಬಂದ ಯಹೂದಿಗಳು ಮದೀನಾ ಪರಿಸರದಲ್ಲಿ ಜೀವಿಸತೊಡಗಿದರು. ಯಹೂದಿಗಳು ಮದೀನಾಗೆ ವಲಸೆ ಬರಲು ಇನ್ನೊಂದು ಕಾರಣ ಕೂಡಾ ಇದೆ. ಅದೇನೆಂದರೆ . . ಯಹೂದಿಗಳು ಇತಿಹಾಸ ಪುಟಗಳಲ್ಲಿ ಕರಾಳ ಅಧ್ಯಾಯವನ್ನು ಸೃಷ್ಟಿಸಿದವರಾಗಿದ್ದಾರೆ. ಭೂಮಿಯಲ್ಲಿ ಕ್ಷೇೂಭೆಯನ್ನುಂಟು ಮಾಡುವುದನ್ನು ನಿರಂತರವಾಗಿ ಮುಂದುವರಿಸಿದ ಇವರು ಅನ್ಯಾಯ, ಅಕ್ರಮ, ಅನಾಚಾರಗಳನ್ನು ನಿತ್ಯ ಕಾಯಕವನ್ನಾಗಿ ಮಾಡಿದವರು. ಇವರಿಗೆ ಅಲ್ಲಾಹನ ಶಿಕ್ಷೆ ಬಂದೆರಗಿತು. ದುಷ್ಟ ರಾಜ ಬುಕ್ತನಶ್ವರ್‌ನ ನೇತೃತ್ವದ ಸೇನೆ ಯಹೂದಿಗಳ ಮೇಲೆ ದಾಳಿ ಮಾಡಿತು. ಊರು ಸಂಪೂರ್ಣ ಕೊಳ್ಳೆ ಹೊಡೆದು ಬೈತುಲ್ ಮುಖದ್ದಸ್ ಸಹಿತ ಎಲ್ಲಾ ಕಟ್ಟಡಗಳನ್ನು ಧ್ವಂಸ ಮಾಡಿದರು. ದುಷ್ಟ ಬುಕ್ತನಸ್ರ್‌ನಿಂದ ಸರ್ವವನ್ನು ಕಳಕೊಂಡ ಯಹೂದಿಗಳು ಮದೀನಾದತ್ತ ವಲಸೆ ಬಂದರು. ಈ ಬಗ್ಗೆ ಇನ್ನು ಹಲವಾರು ಅಭಿಪ್ರಾಯಗಳನ್ನು ಕೂಡಾ ಗ್ರಂಥಗಳಲ್ಲಿ ಕಾಣಲು ಸಾಧ್ಯವಾಗುತ್ತದೆ. ಯಹೂದಿಗಳ ಸಂಪೂರ್ಣ ಆಗುಹೋಗುಗಳ ಕುರಿತು ನಾನು ಈ ಮೊದಲು ಬರೆದ 'ಇಸ್ರೇಲ್ ' ಎಂಬ ಪುಸ್ತಕದಲ್ಲಿ ವಿಸೃತ ವಿವರಣೆ ನೀಡಿದ್ದೇನೆ.

 *ಪ್ರವಾದಿವರ್ಯರ ಬಗ್ಗೆ ತಿಳಿದಿದ್ದರು . . . !*
..........................................................
             ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರ ಜನನವಾಗುವುದರ ಮೊದಲೇ ಯಹೂದಿಗಳಿಗೆ ಆ ಬಗ್ಗೆ ಮಾಹಿತಿ ಇತ್ತು. ಅವರ ಗ್ರಂಥವಾದ ತೌರಾತಿನಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಹಾಗೂ ಅವರ ಆಗಮನ ಕಾಲದ ಬಗ್ಗೆ ವಿವರಿಸಿತ್ತು. ಆಸ್ವಿಮ್ ಬಿನ್ ಉಮರ್(ರ) ರವರಿಂದ ವರದಿ : “ನಾವು ಪವಿತ್ರ ಇಸ್ಲಾಂ ಸ್ವೀಕರಿಸುವು ದಕ್ಕಿಂತ ಮುಂಚೆ ನಾವು ವಿಗ್ರಹ ಆರಾಧಕರಾಗಿದ್ದೆವು. ಯಹೂದಿಗಳು ವೇದಗಳ ಜನರಾಗಿದ್ದರು. ನಮ್ಮ ಮತ್ತು ಅವರ ನಡುವೆ ಯಾವಾಗಲೂ ಸಂಘರ್ಷಗಳು ಉಂಟಾಗುತ್ತಿತ್ತು. ಆಗ ಅವರು ಹೇಳುತ್ತಿದ್ದರು. ಪ್ರವಾದಿಯೋರ್ವರ ಆಗಮನದ ಕಾಲ ಸಮೀಪವಾಗಿದೆ. ಅವರು ಬಂದಾಗ ಆದ್ ಮತ್ತು ಇರಮ್ ಸಮುದಾಯಗಳನ್ನು ನಾಶ ಮಾಡಿದ ಹಾಗೆ ನಿಮ್ಮನ್ನೂ ಕೂಡಾ ನಾವು ನಾಶ ಮಾಡುವೆವು. ಪ್ರವಾದಿವರ್ಯರನ್ನು ನಿಯೋಗಿಸಲ್ಪಟ್ಟಾಗ ನಾವು ಪ್ರವಾದಿಯವರಲ್ಲಿ ವಿಶ್ವಾಸ ತಾಳಿದೆವು. ಆದರೆ ಅವರು ಅವಿಶ್ವಾಸಿಗಳಾದರು. ಇದನ್ನು ಖುರ್ ಆನ್ ವಿವರಿಸಿದ್ದು ಹೀಗೆ; “ಅವರ ಕೈ ವಶವಿದ್ದ ವೇದ ಗ್ರಂಥಗಳನ್ನು ದೃಢೀಕರಿಸುವ ಒಂದು ಗ್ರಂಥ(ಖರ್‌ಆನ್) ಅಲ್ಲಾಹನ ಕಡೆಯಿಂದ ಅವರಿಗೆ ಬಂದಾಗ (ಅವರದನ್ನು ತಳ್ಳಿ ಹಾಕಿದರು). ಆದರೆ ಇದಕ್ಕೂ ಮುನ್ನ ಅವರು ಸತ್ಯ ನಿಷೇಧಿಗಳ ವಿರುದ್ಧ ಜಯಕ್ಕಾಗಿ ಪ್ರಾರ್ಥಿಸುತ್ತಿದ್ದರು. ಆದರೆ ಅವರಿಗೆ ಮೊದಲೇ ಗೊತ್ತಿದ್ದ ವೇದ ಗ್ರಂಥ ಬಂದಾಗ ನಿಷೇಧಿಸಿಬಿಟ್ಟರು. ಸತ್ಯನಿಷೇಧಿಗಳಿಗೆ ಅಲ್ಲಾಹನ ಶಾಪವಿದೆ. (ಅಲ್ ಬಕರ - 69)
“ನಾವು ಯಾರಿಗೆ ಗ್ರಂಥವನ್ನು ನೀಡಿದ್ದೇವೆಯೋ ಅವರು ತಮ್ಮ ಮಕ್ಕಳನ್ನು ಅರಿಯುವಂತೆ ಪ್ರವಾದಿಯವರನ್ನು ಅರಿತಿದ್ದಾರೆ. ಆದರೆ ಸ್ವಯಂ ನಷ್ಟ ಮಾಡಿಕೊಂಡವರು ಯಾವತ್ತೂ ವಿಶ್ವಾಸ ತಾಳಲಾರರು.( ಅನ್‌ಆಮ್ ~20 )

     *ಮುಂದುವರಿಯುವುದು*

Follow this link to join my WhatsApp group: https://chat.whatsapp.com/DjCbCGNiyBW7StPEIOqUnO

ಇನ್ನು ಮುಂದೆ *"ಮದೀನಾ ಮಹತ್ವ ಇತಿಹಾಸ"* ಲೇಖನಗಳು ಈ ಗ್ರೂಪಿನಲ್ಲಿ..

💞صَلَّى اللَّهُ عَلٰى مُحَمَّدْ صَلَّى اللَّهُ عَلَيهِ وَسَلَّم🌹